AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Indian Army Day 2024: ಭಾರತೀಯ ಸೇನಾ ದಿನದ ಆಚರಣೆಯ ಹಿಂದಿನ ಇತಿಹಾಸ ಮತ್ತು ಮಹತ್ವವನ್ನು ತಿಳಿಯಿರಿ

ಸ್ವತಂತ್ರ ಭಾರತದ ಘನತೆ ಗೌರವ ಹಾಗೂ ಸುರಕ್ಷತೆಗಾಗಿ, ದೇಶ ಸೇವೆಗಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡಿರುವ ಭಾರತೀಯ ಯೋಧರನ್ನು ಗೌರವಿಸುವ ಜೊತೆಯಲ್ಲಿ ದೇಶಕ್ಕಾಗಿ ಹುತಾತ್ಮರಾದ ಯೋಧರನ್ನು ಸ್ಮರಿಸುವ ಉದ್ದೇಶದಿಂದ ಪ್ರತಿವರ್ಷ ಜನವರಿ 15 ರಂದು ಭಾರತೀಯ ಸೇನಾ ದಿನಾಚರಣೆಯನ್ನು (Indian Army Day) ಆಚರಿಸಲಾಗುತ್ತದೆ. ಈ ವಿಶೇಷ ದಿನದ ಇತಿಹಾಸ ಮತ್ತು ಮಹತ್ವದ ಬಗ್ಗೆ ತಿಳಿಯೋಣ.

Indian Army Day  2024: ಭಾರತೀಯ ಸೇನಾ ದಿನದ ಆಚರಣೆಯ ಹಿಂದಿನ  ಇತಿಹಾಸ ಮತ್ತು ಮಹತ್ವವನ್ನು ತಿಳಿಯಿರಿ
Indian Army Day 2024
ಮಾಲಾಶ್ರೀ ಅಂಚನ್​
| Edited By: |

Updated on: Jan 14, 2024 | 10:57 AM

Share

ಭಾರತೀಯ ಸೇನಾ ದಿನವನ್ನು ಪ್ರತಿ ವರ್ಷ ಜನವರಿ 15 ರಂದು ಆಚರಿಸಲಾಗುತ್ತದೆ. ಗ್ಲೋಬಲ್ ಪವರ್ ಇಂಡೆಕ್ಸ್ 2023 ರ ಪ್ರಕಾರ ಭಾರತೀಯ ಸೇನೆಯು ವಿಶ್ವದ ನಾಲ್ಕನೇ ಬಲಿಷ್ಠ ಸೇನೆಯಾಗಿದೆ. ಪ್ರಪಂಚದ ನಾಲ್ಕನೇ ಬಲಿಷ್ಠ ಸೇನೆಯಾಗಿರುವ ಭಾರತೀಯ ಸೇನೆ ದೇಶದ ಭದ್ರತೆಗೆ ಸದಾ ಬದ್ಧವಾಗಿದೆ. ಶತ್ರು ರಾಷ್ಟ್ರಗಳೊಂದಿಗಿನ ಯುದ್ಧ, ತುರ್ತು ಪರಿಸ್ಥಿತಿಗಳ ಸಂದರ್ಭದಲ್ಲಿ ಅಗತ್ಯವಿರುವ ಜನರ ರಕ್ಷಣೆ ಸೇರಿದಂತೆ ಭಾರತೀಯ ಯೋಧರು ಭಾರತಾಂಬೆಯ ರಕ್ಷಣೆಗಾಗಿ ತಮ್ಮ ಜೀವವನ್ನೇ ಸಮರ್ಪಿಸಿಕೊಂಡಿದ್ದಾರೆ. ಇಂತಹ ಮಹಾನ್ ವೀರರನ್ನು ಗೌರವಿಸಲು ಹಾಗೂ ಹುತಾತ್ಮರಾದ ಯೋಧರನ್ನು ಸ್ಮರಿಸಲು ಭಾರತೀಯ ಸೇನಾ ದಿನವನ್ನು (Indian Army Day) ಆಚರಿಸಲಾಗುತ್ತದೆ. ಈ ಬಾರಿ 76 ನೇ ಸೇನಾ ದಿನವನ್ನು ಲಕ್ನೋದಲ್ಲಿ ಆಚರಿಸಲಾಗುತ್ತಿದೆ. ಈ ಒಂದು ವಿಶೇಷ ದಿನದಂದು ಪರೇಡ್, ಫ್ಲೈ ಪಾಸ್ಟ್, ಸೇರಿದಂತೆ ವಿವಿಧ ಸಾಹಿಸಿ ಚಟುವಟಿಕೆಗಳ ಪ್ರದರ್ಶನವನ್ನು ಆಯೋಜಿಸಲಾಗುತ್ತದೆ. ಅಷ್ಟಕ್ಕೂ ಈ ವಿಶೇಷ ದಿನವನ್ನು ಜನವರಿ 15 ರಂದೇ ಏಕೆ ಆಚರಿಸಲಾಗುತ್ತದೆ ಗೊತ್ತಾ? ಈ ಕುರಿತು ಮಾಹಿತಿ ಇಲ್ಲಿದೆ.

ಭಾರತೀಯ ಸೇನಾ ದಿನವನ್ನು ಜನವರಿ 15 ರಂದೇ ಏಕೆ ಆಚರಿಸಲಾಗುತ್ತದೆ?

ಬ್ರಿಟೀಷ್ ಆಳ್ವಿಕೆಯ ಕಾಲದಲ್ಲಿ 1895 ಏಪ್ರಿಲ್ 01 ರಂದು ಭಾರತೀಯ ಸೇನೆಯನ್ನು ಸ್ಥಾಪಿಸಲಾಯಿತು. ಆ ಸಮಯದಲ್ಲಿ ಈ ಸೇನೆಯನ್ನು ಬ್ರಿಟೀಷ್ ಭಾರತೀಯ ಸೇನೆ ಎಂದು ಕರೆಯಲಾಗುತ್ತಿತ್ತು. ಆ ಸಮಯದಲ್ಲಿ ಸೇನಾ ಕಮಾಂಡರ್ಗಳು ಬ್ರಿಟೀಷರೇ ಆಗಿದ್ದರು. ಬಳಿಕ ಭಾರತ ಸ್ವಾತಂತ್ರ್ಯ ಪಡೆದ ಎರಡು ವರ್ಷಗಳ ನಂತರ ಜನವರಿ 15, 1949 ರಲ್ಲಿ ಬ್ರಿಟೀಷ್ ಕಮಾಂಡರ್ ಇನ್ ಚೀಫ್, ಜನರಲ್ ಫ್ರಾನ್ಸಿಸ್ ಬುಚರ್ ಅವರು ಕೆ.ಎಂ ಕಾರ್ಯಪ್ಪ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಈ ಮೂಲಕ ಲೆಫ್ಟಿನೆಂಟ್ ಜನರಲ್ ಕೆ.ಎಂ ಕಾರ್ಯಪ್ಪ ಸ್ವತಂತ್ರ ಭಾರತದ ಮೊದಲ ಕಮಾಂಡರ್ ಇನ್ ಚೀಫ್ ಆಗಿ ಅಧಿಕಾರ ವಹಿಸಿಕೊಂಡರು. ಈ ವಿಶೇಷ ದಿನದ ನೆನಪಿಗಾಗಿ ಹಾಗೂ ಭಾರತೀಯ ಸೇನೆಯ ಸೈನಿಕರ ಗೌರವಾರ್ಥವಾಗಿ ಪ್ರತಿವರ್ಷ ಜನವರಿ 15 ರಂದು ಭಾರತೀಯ ಸೇನಾ ದಿನವನ್ನು ಆಚರಿಸಲಾಗುತ್ತದೆ.

ಇದನ್ನೂ ಓದಿ: ಅಯೋಧ್ಯೆಯಲ್ಲಿ ಪ್ರಸಾದ ತಯಾರಿಸುವ ಈ ಬಾಣಸಿಗನಿಂದ 12 ವಿಶ್ವ ದಾಖಲೆ

ಭಾರತೀಯ ಸೇನಾ ದಿನದ ಪ್ರಾಮುಖ್ಯತೆ:

ಸ್ವತಂತ್ರ ಭಾರತದ ಘನತೆ ಗೌರವ ಹಾಗೂ ಸರಕ್ಷತೆಗಾಗಿ ತಮ್ಮನ್ನು ತಾವು ದೇಶ ಸೇವೆಗಾಗಿ ಸಮರ್ಪಿಸಿಕೊಂಡಿರುವ ಭಾರತೀಯ ಯೋಧರನ್ನು ಗೌರವಿಸುವ ಜೊತೆಯಲ್ಲಿ ದೇಶಕ್ಕಾಗಿ ಹುತಾತ್ಮರಾದ ಯೋಧರನ್ನು ಸ್ಮರಿಸಲು ಉದ್ದೇಶದಿಂದ ಪ್ರತಿವರ್ಷ ಜನವರಿ 15 ರಂದು ಕಮಾಂಡ್ ಹೆಡ್ಕ್ವಾರ್ಟರ್ಗಳು ಮತ್ತು ನವ ದೆಹಲಿಯ ಪ್ರಧಾನ ಸೇನಾ ಕಛೇರಿಯಲ್ಲಿ ಭಾರತೀಯ ಸೇನಾ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಮತ್ತು ಸೇನಾ ಕಛೇರಿಗಳಲ್ಲಿ ಪರೇಡ್, ಫ್ಲೈ ಪಾಸ್ಟ್, ಸೇರಿದಂತೆ ವಿವಿಧ ಸಾಹಿಸಿ ಚಟುವಟಿಕೆಗಳ ಪ್ರದರ್ಶನವನ್ನು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಮುಖ್ಯವಾಗಿ ಈ ದಿನ ಕೆಚ್ಚೆದೆಯ ಸೈನಿಕರಿಗೆ ಪ್ರಶಸ್ತಿ ಪ್ರದಾನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ಭಾರತೀಯ ಸೇನಾ ದಿನ 2024 ರ ಥೀಮ್:

2024 ರ ಭಾರತೀಯ ಸೇನಾ ದಿನದ ಥೀಮ್ “ರಾಷ್ಟ್ರದ ಸೇವೆಯಲ್ಲಿ” (In Service Of The Nation)

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: