International Widow’s Day 2021: ಸಾಮಾಜಿಕ ಕಳಂಕವನ್ನು ಹೊಡೆದೋಡಿಸುವ ಸಮಯವಿದು; ಇಂದು ಅಂತಾರಾಷ್ಟ್ರೀಯ ವಿಧವೆಯರ ದಿನ

ಅಂತಾರಾಷ್ಟ್ರಿಯ ವಿಧವೆಯರ ದಿನ 2021: ಅಂತಾರಾಷ್ಟ್ರಿಯ ವಿಧವೆಯರ ದಿನದಂದು, ವಿಧವೆಯರು ಹಕ್ಕುಗಳನ್ನು ಕಾಪಾಡಿಕೊಳ್ಳಲು ಮತ್ತು ಜೀವನದಲ್ಲಿ ಪ್ರೋತ್ಸಾಹ ಹೊಂದಲು ಕರಾಳ ದಿನವನ್ನು ಮರೆತು ಹೋರಾಡಬೇಕಿದೆ. ವಿಧವೆಯರಿಗೆ ಶೈಕ್ಷಣಿಕ ಅವಕಾಶ, ಆನುವಂಶಿಕವಾಗಿ ಪಡೆಯುವ ನ್ಯಾಯಯುತ ಪಾಲು ಮತ್ತು ಸಾಮಾಜಿಕ ಕಳಕಳಿಯಿಂದ ಸ್ವಾತಂತ್ರ್ಯವನ್ನು ಪಡೆಯಬೇಕಿದೆ.

International Widows Day 2021: ಸಾಮಾಜಿಕ ಕಳಂಕವನ್ನು ಹೊಡೆದೋಡಿಸುವ ಸಮಯವಿದು; ಇಂದು ಅಂತಾರಾಷ್ಟ್ರೀಯ ವಿಧವೆಯರ ದಿನ
ಸಾಂದರ್ಭಿಕ ಚಿತ್ರ
Edited By:

Updated on: Jun 23, 2021 | 9:24 AM

ಜೀವನದಲ್ಲಿ ಪ್ರತಿಯೊಂದು ಹೆಣ್ಣು ಸಹ ತನಗೊಬ್ಬ ಸಂಗಾತಿ ಬೇಕೆಂಬ ಆಸೆಯನ್ನು ಹೊಂದಿರುತ್ತಾಳೆ. ಜತೆಗೆ ಅವನೊಡನೆ ಸೇರಿ ಸಾಧನೆಯ ಮೆಟ್ಟಿಲೇರಲು ಅದೆಷ್ಟೋ ಕನಸುಗಳನ್ನು ಹೊತ್ತು ನಿಂತಿರುತ್ತಾಳೆ. ಊಹಿಸಲೂ ಆಗದಂತೆ ಸಂಗಾತಿಯನ್ನು ಕಳೆದುಕೊಂಡ ದಿನ ಆಕೆಗೆ ಕರಾಳ ದಿನ. ಹಾಗಿರುವಾಗ ವಿಧವೆಯಾದ ಮಹಿಳೆ ತನ್ನ ಹಕ್ಕುಗಳಿಗಾಗಿ, ಭಾವನಾತ್ಮಕವಾಗಿ ಮತ್ತು ಆರ್ಥಿಕವಾಗಿ ಜೀವನದುದ್ದಕ್ಕೂ ಹೋರಾಡಬೇಕು. ಅವಳಿಗಾಗಿಯೇ ಜೂನ್​ 23ರ ದಿನವನ್ನು ಮೀಸಲಿಡಲಾಗಿದೆ.

ವಿಶ್ವಸಂಸ್ಥೆಯ ಪ್ರಕಾರ ವಿಶ್ವದಾದ್ಯಂತ 258 ಮುಲಿಯನ್​ಗೂ ಹೆಚ್ಚು ವಿಧವೆಯರಿದ್ದಾರೆ. ಈ ವಿಧವೆಯರನ್ನು ಗುರುತಿಸಿ, ಅವರಿಗೆ ಧೈರ್ಯ ತುಂಬಲು ಇಂದು ವಿಶ್ವ ವಿಧವೆಯರ ದಿನವನ್ನು ಆಚರಿಸಲಾಗುತ್ತದೆ.

ಕೊವಿಡ್​-19 ಸಾಂಕ್ರಾಮಿಕ ರೋಗ ವ್ಯಾಪಕವಾಗಿ ಹರಡುತ್ತಿದ್ದಂತೆಯೇ ಅದೆಷ್ಟೋ ಜೀವಗಳನ್ನೇ ಕಿತ್ತುಕೊಂಡಿದೆ. ಇದರಿಂದಾಗಿ ಅದೆಷ್ಟೋ ಮಹಿಳೆಯರು ಕರಾಳ ದಿನವನ್ನು ಎದುರಿಸಬೇಕಾಯಿತು. ಅಂತಹ ವಿಧವೆಯಾದ ಮಹಿಳೆಯರಿಗೆ ಸಮಾಜದಲ್ಲಿ ಅವರದೇ ಆದ ಹಕ್ಕುಗಳಿವೆ. ಅವುಗಳನ್ನು ಪಡೆಯುವತ್ತ ಮಹಿಳೆಯರು ಹೋರಾಡಬೇಕಿದೆ. ಅದೆಷ್ಟೋ ಹಳ್ಳಿಗಳಲ್ಲಿ ವಿಧವೆಯರನ್ನು ಕಾಣುವ ರೀತಿಯೇ ಬೇರೆ. ವಿಧವೆ ಎಂಬ ಕಳಂಕ ಹೊತ್ತ ಮಹಿಳೆ ಸಮಾಜದಲ್ಲಿ ತಲೆ ಎತ್ತಿ ನಡೆಯುವಂತೆ ಸಿದ್ಧಳಾಗಬೇಕಿದೆ.

ಅಂತಾರಾಷ್ಟ್ರಿಯ ವಿಧವೆಯರ ದಿನದಂದು, ವಿಧವೆಯರು ಹಕ್ಕುಗಳನ್ನು ಕಾಪಾಡಿಕೊಳ್ಳಲು ಮತ್ತು ಜೀವನದಲ್ಲಿ ಪ್ರೋತ್ಸಾಹ ಹೊಂದಲು ಕರಾಳ ದಿನವನ್ನು ಮರೆತು ಹೋರಾಡಬೇಕಿದೆ. ವಿಧವೆಯರಿಗೆ ಶೈಕ್ಷಣಿಕ ಅವಕಾಶ, ಆನುವಂಶಿಕವಾಗಿ ಪಡೆಯುವ ನ್ಯಾಯಯುತ ಪಾಲು ಮತ್ತು ಸಾಮಾಜಿಕ ಕಳಕಳಿಯಿಂದ ಸ್ವಾತಂತ್ರ್ಯವನ್ನು ಪಡೆಯಬೇಕಿದೆ. ಮಹಿಳೆಯರ ಮೇಲಿನ ತಾರತಮ್ಯವನ್ನು ದೂರ ಮಾಡಿ ಸಾಮಾನ್ಯ ಜನರಿಗೆ ಈ ಕುರಿತಂತೆ ಅರಿವು ಮೂಡಿಸಬೇಕಿದೆ.

ಇದನ್ನೂ ಓದಿ:

ಮಂಗಾಟ: ವೃದ್ಧ ವಿಧವೆಯ 25 ಸಾವಿರ ಹಣ, ಒಡವೆ ಹೊತ್ತೊಯ್ದ ಕಪಿ ಸೈನ್ಯ!

Covid Diary : ಕವಲಕ್ಕಿ ಮೇಲ್ ; ಕ್ಷಮಿಸಿ, ತರುಣ ಭಾರತದ ಕಥೆಯಲ್ಲಿ ‘…….‘ ಪದ ಬಹಳಸಲ ಪ್ರಯೋಗಿಸಿದೆ