International Yoga Day 2023: ಯೋಗಾಸನ ಮಾಡುವ ಮೊದಲು ಈ ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಿ

ಯೋಗಾಸನವನ್ನು ಮುಂಜಾನೆ ಅಭ್ಯಾಸ ಮಾಡುವುದು ತುಂಬಾ ಒಳ್ಳೆಯದು. ಜೊತೆಗೆ ಖಾಲಿ ಹೊಟ್ಟೆಯಲ್ಲಿರಬೇಕು. ಆದ್ದರಿಂದ ನೀವು ಯೋಗಾಸನ ಮಾಡುವ ಮೊದಲು ತಿಳಿದುಕೊಳ್ಳಬೇಕಾದ ಪ್ರಮುಖ ಅಂಶಗಳು ಇಲ್ಲಿವೆ.

International Yoga Day 2023: ಯೋಗಾಸನ ಮಾಡುವ ಮೊದಲು ಈ ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಿ
ಡಾ ರವಿಕಿರಣ ಪಟವರ್ಧನ (ಆಯುರ್ವೇದ ವೈದ್ಯರು, ಶಿರಸಿ.)
Follow us
ಅಕ್ಷತಾ ವರ್ಕಾಡಿ
|

Updated on:Jun 20, 2023 | 12:27 PM

ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ವೃದ್ಧಿಸುವಲ್ಲಿ ಯೋಗಾಸನ ತುಂಬಾ ಸಹಕಾರಿ. ಆದರೆ ಈ ಯೋಗಾಸನವನ್ನು ಕ್ರಮಬದ್ಧವಾಗಿ ಮಾಡಬೇಕು. ಯೋಗ ಅಂದರೆ ಅಷ್ಟಾಂಗ ಯೋಗ. ಪ್ರಸ್ತುತ ಎಲ್ಲರೂ ಅನುಸರಿಸುತ್ತಿರುವುದು ಯೋಗಾಸನ ಮಾತ್ರ. ಯೋಗಾಸನವನ್ನು ಮುಂಜಾನೆ ಅಭ್ಯಾಸ ಮಾಡುವುದು ತುಂಬಾ ಒಳ್ಳೆಯದು. ಖಾಲಿ ಹೊಟ್ಟೆಯಲ್ಲಿ ಯೋಗಾಭ್ಯಾಸ ಮಾಡಬೇಕು. ಆದ್ದರಿಂದ ನೀವು ಯೋಗಾಸನ ಮಾಡುವ ಮೊದಲು ತಿಳಿದುಕೊಳ್ಳಬೇಕಾದ ಪ್ರಮುಖ ಅಂಶಗಳು ಇಲ್ಲಿವೆ.

ಯೋಗಾಸನ ಮಾಡುವ ಮೊದಲು ತಿಳಿದುಕೊಳ್ಳಬೇಕಾದ ಪ್ರಮುಖ ಅಂಶಗಳು:

  • ಯೋಗಸನ ಮಾಡಿದ ತಕ್ಷಣ ಸ್ನಾನ ಬೇಡ.
  • ಯೋಗಾಸನದ ನಿಶ್ಚಿತವಾದ ಅಂತಹ ಭಂಗಿಗಳಿಗೆ ಬಲಪ್ರಯೋಗದ ಮೂಲಕ ಅವಸ್ತೆಯನ್ನು ತಲುಪುವುದು ಬೇಡ.
  • ನಿಯಮಿತವಾದಂತಹ ರೂಢಿಯ ಮೂಲಕ ನಿಶ್ಚಿತವಾದಂತಹ ಯೋಗಾಸನದ ಅವಸ್ಥೆ ತಲುಪುವುದು ಸೂಕ್ತ.
  • ಯೋಗಾಸನವನ್ನು ಸಮತಟ್ಟಾದ ನೆಲದ ಮೇಲೆ ಮಾಡಬೇಕು. ಯೋಗಾಸನ ಮಾಡುವ ಕೊಠಡಿ ಯಲ್ಲಿ ಗಾಳಿ ಬೆಳಕು ಆಡುವಂತೆ ಇರಬೇಕು.
  • ಯೋಗಾಭ್ಯಾಸವನ್ನು ಶಾಂತ ಮನಸ್ಸಿನಿಂದ ಮಾಡಬೇಕು. ದೇಹವನ್ನು ದಂಡಿಸಬಾರದು.
  • ಯೋಗ ಮಾಡುವಾಗ ಸುಸ್ತಾದರೆ ಮುಂದುವರೆಸದೆ ವಿಶ್ರಾಂತಿ ತಗೊಂಡು ಯೋಗಾಭ್ಯಾಸ ಮುಂದುವರೆಸಬೇಕು. ಯೋಗಸನ ಮಾಡಲು ನಿಯಮಿತ ಸಮಯವನ್ನು ಪಾಲಿಸುವುದು ಒಳ್ಳೆಯದು.
  • ಯೋಗಾಸನ ಮಾಡುವಾಗ ಬೇಡದ ವಿಚಾರಗಳು ಮತ್ತು ನಕಾರಾತ್ಮಕ ವಿಚಾರಗಳಿಂದ ದೂರ ಇರಬೇಕು . ಅಲ್ಲದೆ ಕೆಮ್ಮು, ಸೀನು ಬಂದಾಗ ತಡೆಹಿಡಿಯಬಾರದು.
  • ಯೋಗಾಸನ ಮಾಡಿದ ಬಳಿಕ ಧ್ಯಾನ ಮತ್ತು ಪ್ರಾಣಯಾಮ ಮಾಡಬೇಕು.
  • ಯೋಗಾಸನ ಮಾಡಿದ ಬಳಿಕ ಶವಾಸನ ಮಾಡಬೇಕು .
  • ಮಹಿಳೆಯರು ಮುಟ್ಟಿನ ಸಮಯದಲ್ಲಿ ಎಲ್ಲಾ ಬಗೆಯ ಯೋಗಾಸನ ಮಾಡುವಂತಿಲ್ಲ.
  • ಗರ್ಭಾವಸ್ಥೆಯಲ್ಲಿ ಸೂಕ್ತ ವೈದ್ಯರ ಮತ್ತು ಅನುಭವಿ ಯೋಗಾಸನ ತರಬೇತುದಾರರ ಮಾರ್ಗದರ್ಶನ ಪಡೆಯಿರಿ.
  • ಯೋಗಾಸನ ಮಾಡುವಾಗ ಹೊಟ್ಟೆ ಖಾಲಿ ಇರಬೇಕು. ಊಟವಾದ ಬಳಿಕ ಯೋಗಾಸನ ಮಾಡಲು ಕನಿಷ್ಠ 3 ಗಂಟೆಯ ಅಂತರವಿರಬೇಕು. ಅನಾರೋಗ್ಯದ ಸಮಯದಲ್ಲಿ ಯೋಗಸನ ಮಾಡಬೇಡಿ.
  • ಯೋಗಾಸನ ಮಾಡಿದ ಬಳಿಕ ವ್ಯಾಯಾಮ ಮಾಡಬೇಡಿ. ವ್ಯಾಯಾಮ ಮಾಡಿದ ಬಳಿಕ ಯೋಗಾಸನ ಮಾಡಬಹುದು.

ಲೇಖನ: ಡಾ ರವಿಕಿರಣ ಪಟವರ್ಧನ (ಆಯುರ್ವೇದ ವೈದ್ಯರು, ಶಿರಸಿ.)

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 12:25 pm, Tue, 20 June 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ