Kiss Day 2026: ಚುಂಬನದಲ್ಲಿ ಎಷ್ಟು ಪ್ರಕಾರಗಳಿವೆ, ಅವುಗಳ ಅರ್ಥವೇನು ಗೊತ್ತಾ?

Valentine’s Week 2026: ಫೆಬ್ರವರಿ 13 ರಂದು ಕಿಸ್ ಡೇ ಆಚರಿಸಲಾಗುತ್ತದೆ. ಇದು ದಂಪತಿಗಳು ಮತ್ತು ಪ್ರೇಮಿಗಳಿಗೆ ಬಹಳ ವಿಶೇಷವಾದ ದಿನ ಏಕೆಂದರೆ ಈ ದಿನದಂದು ಸಂಗಾತಿಗಳು ಪರಸ್ಪರ ಪ್ರೀತಿಯಿಂದ ಚುಂಬಿಸುವ ಮೂಲಕ ತಮ್ಮ ಭಾವನೆ, ಪ್ರೀತಿ, ಕಾಳಜಿಯನ್ನು ವ್ಯಕ್ತಪಡಿಸುತ್ತಾರೆ. ಕಿಸ್‌ ಡೇ ಯ ಈ ಸಂದರ್ಭದಲ್ಲಿ ಫ್ರೆಂಚ್‌ ಕಿಸ್‌ನಿಂದ ಹಿಡಿದು ನೆಕ್‌ ಕಿಸ್‌ ವರೆಗೆ ಎಷ್ಟು ಪ್ರಕಾರದ ಚುಂಬನಗಳಿವೆ, ಆ ಚುಂಬನದ ಅರ್ಥಗಳೇನು ಎಂಬುದನ್ನು ತಿಳಿಯೋಣ ಬನ್ನಿ.

Kiss Day 2026: ಚುಂಬನದಲ್ಲಿ ಎಷ್ಟು ಪ್ರಕಾರಗಳಿವೆ, ಅವುಗಳ ಅರ್ಥವೇನು ಗೊತ್ತಾ?
ಸಾಂದರ್ಭಿಕ ಚಿತ್ರ
Image Credit source: Unsplash

Updated on: Feb 12, 2026 | 6:16 PM

ಸಂಬಂಧವನ್ನು ಬಲಪಡಿಸಲು, ಪರಸ್ಪರ ಪ್ರೀತಿ, ವಿಶ್ವಾಸವನ್ನು ವ್ಯಕ್ತಪಡಿಸಲು ವ್ಯಾಲೆಂಟೈನ್‌ ವೀಕ್‌ನ ಏಳನೇ ದಿನ ಅಂದ್ರೆ ಪ್ರೇಮಿಗಳ ದಿನದ ಮುನ್ನಾ ದಿನ ಕಿಸ್ ಡೇಯನ್ನು (Kiss Day) ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು ಜನರು ತಮ್ಮ ಸಂಗಾತಿಯನ್ನು ಚುಂಬಿಸುವ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ. ಕೆಲವರು ತಮ್ಮ ಸಂಗಾತಿಯ ಕೈಗೆ ಸಿಹಿ ಮುತ್ತನ್ನು ನೀಡಿದರೆ, ಇನ್ನೂ ಕೆಲವು ಹಣೆಗೆ ಮುತ್ತನಿಟ್ಟು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಈ ರೀತಿ ನೀಡುವ ಪ್ರತಿಯೊಂದು ಚುಂಬನಕ್ಕೂ ಅದರದ್ದೇ ಆದ ಅರ್ಥವಿದ್ದು, ಯಾವ ಚುಂಬನವನ್ನು ಯಾವ ರೀತಿಯ ಭಾವನೆಯನ್ನು ವ್ಯಕ್ತಪಡಿಸಲು ನೀಡಲಾಗುತ್ತದೆ ಎಂಬುದನ್ನು ತಿಳಿಯಿರಿ.

ಚುಂಬನದ ವಿಧಗಳು ಮತ್ತು ಅವುಗಳ ಅರ್ಥ:

ಹಣೆಯ ಮೇಲೆ ನೀಡುವ ಚುಂಬನ: ಇದು ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಲಿರುವ ತುಂಬಾ ಪ್ರಾಮಾಣಿಕವಾದ ಮಾರ್ಗವಾಗಿದೆ.  ಮೆಚ್ಚುಗೆಯ ಭಾವನೆ ಮತ್ತು ಸದಾ ನಿನ್ನೊಂದಿಗೆ ಇರುತ್ತೇನೆ ಎಂದು ಭರವಸೆ ನೀಡುವ ಚುಂಬನವೇ ಹಣೆಯ ಮೇಲಿನ ಚುಂಬನ. ಅಲ್ಲದೆ ಈ ಚುಂಬನ ಆ ವ್ಯಕ್ತಿಯು ನಿಮ್ಮೊಂದಿಗೆ ಸುರಕ್ಷಿತವಾಗಿದ್ದಾರೆ ಎಂದು ಹೇಳುವ ಒಂದು ಮಾರ್ಗವಾಗಿದೆ.

ಕೆನ್ನೆಯ ಮುತ್ತು: ಇದು ಸಂಗಾತಿಗಳಿಬ್ಬರ ನಡುವಿನ ಪ್ರೀತಿಯ ಅತ್ಯಂತ ಸಾಮಾನ್ಯ ಅಭಿವ್ಯಕ್ತಿಯಾಗಿದೆ. ಒಟ್ಟಾರೆಯಾಗಿ ಪರಿಚಯ ಮತ್ತು ಪ್ರೀತಿಯನ್ನು ಈ ಚುಂಬನ ತಿಳಿಸುತ್ತದೆ. ಕೆನ್ನೆಯ ಚುಂಬನವನ್ನು ಸಂಗಾತಿಗಳಿಗೆ ಮಾತ್ರವಲ್ಲದೆ ಇತರ ಆಪ್ತರಿಗೂ ನೀಡಬಹುದು.

ಕೈಗೆ ಮುತ್ತು: ಕೈಗಳಿಗೆ ಮುತ್ತಿಡುವುದನ್ನು ಗೌರವದ ಸಂಕೇತವೆಂದು ಪರಿಗಣಿಸಲಾಗುತ್ತದೆ. ನೀವು ಯಾರನ್ನಾದರೂ ಕಾಳಜಿ ವಹಿಸುತ್ತಿದ್ದರೆ ಅಥವಾ ಸಂಬಂಧವನ್ನು ಪ್ರಾರಂಭಿಸಲು ಬಯಸಿದರೆ, ಅವರ ಕೈಗಳಿಗೆ ಮುತ್ತಿಡುವ ಮೂಲಕ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಬಹುದು. ಈ ರೀತಿಯ ಮುತ್ತು ಸಂಬಂಧದಲ್ಲಿ ಭದ್ರತೆ ಮತ್ತು ಮೆಚ್ಚುಗೆಯನ್ನು ಪ್ರತಿಬಿಂಬಿಸುತ್ತದೆ.

ಫ್ರೆಂಚ್‌ ಕಿಸ್:‌ ಇದು ತುಂಬಾ ಆತ್ಮೀಯವಾದ ಚುಂಬನವಾಗಿದ್ದು, ಸಾಮಾನ್ಯವಾಗಿ ಉತ್ಸಾಹ ಮತ್ತು ಆಳವಾದ ಪ್ರೀತಿಯನ್ನು ಸಂಕೇತಿಸುತ್ತದೆ. ಸಂಗಾತಿಯೊಂದಿಗೆ ಹೆಚ್ಚು ಆರಾಮದಾಯಕವಾದಾಗ ಮತ್ತು ಸಂಬಂಧದಲ್ಲಿ ಅಂತರವು ಕಡಿಮೆಯಾಗಲು ಪ್ರಾರಂಭಿಸಿದಾಗ ಫ್ರೆಂಚ್‌ ಕಿಸ್‌ ನೀಡಿ ಭಾವನೆಗಳನ್ನು ವ್ಯಕ್ತಪಡಿಸಬಹುದು.

ಮೂಗಿನ ಮೇಲೆ ಚುಂಬನ: ಮೂಗಿನ ಮೇಲೆ ಚುಂಬಿಸುವುದು ಶುದ್ಧ ಭಾವನೆಗಳನ್ನು ವ್ಯಕ್ತಪಡಿಸುವ ಒಂದು ಮಾರ್ಗವಾಗಿದೆ. ಇದು ಸಂಗಾತಿಯನ್ನು ಆಳವಾಗಿ ಪ್ರೀತಿಸುವುದನ್ನು ತೋರ್ಪಡಿಸುತ್ತದೆ ಮತ್ತು ಈ ಸಿಹಿ ಚುಂಬನ ಪ್ರೀತಿ, ಕಾಳಜಿಯನ್ನು ತೋರಿಸುತ್ತದೆ.

ಕುತ್ತಿಗೆ  ಚುಂಬನ: ಕುತ್ತಿಗೆಗೆ ಚುಂಬನ ನೀಡುವುದರಿಂದ ನಿಮ್ಮಲ್ಲಿರುವ ಉತ್ಸಾಹಭರಿತ ಭಾವನೆಗಳು ಬಹಿರಂಗಗೊಳ್ಳುತ್ತವೆ. ಈ ರೀತಿಯ ಚುಂಬನವು ತುಂಬಾ ರೊಮ್ಯಾಂಟಿಕ್‌ ಆಗಿದ್ದು, ಇದು ಆಳವಾದ ಭಾವನೆಗಳನ್ನು ವ್ಯಕ್ತಪಡಿಸುತ್ತದೆ. ರೊಮ್ಯಾಂಟಿಕ್‌ ಫೀಲ್‌ ಹುಟ್ಟುಹಾಕುವ ಈ ಚುಂಬನವು ಸಂಗಾತಿಗಳನ್ನು ಇನ್ನಷ್ಟು ಹತ್ತಿರ ಮಾಡುತ್ತದೆ.

ಇದನ್ನೂ ಓದಿ: ವ್ಯಾಲೆಂಟೈನ್‌ ವೀಕ್‌ನಲ್ಲಿ ಕಿಸ್‌ ಡೇ ಆಚರಿಸುವುದೇಕೆ? ದಿನದ ಹಿನ್ನೆಲೆಯನ್ನು ತಿಳಿಯಿರಿ

ಬಟರ್‌ಫ್ಲೈ ಕಿಸ್:‌ ಬಟರ್‌ ಫ್ಲೈ ಕಿಸ್‌  ಅತ್ಯಂತ ಸಿಹಿ ಮುತ್ತು. ಅದು ಸಂಗಾತಿಗಳಿಬ್ಬರ ನಡುವಿನ ಪ್ರೀತಿ ಮತ್ತು ವಾತ್ಸಲ್ಯವನ್ನು ವ್ಯಕ್ತಪಡಿಸುತ್ತದೆ.

ಕಿವಿಗೆ ನೀಡುವ ಚುಂಬನ: ಇಯರ್‌ಲೋಬ್ ಕಿಸ್ ಪ್ರೀತಿಯ ಆಳವಾದ ಭಾವನೆಯನ್ನು ಸಂಕೇತಿಸುತ್ತದೆ. ಕಿವಿಗಳನ್ನು ಚುಂಬಿಸುವುದು ಸಂಗಾತಿಗಳಿಬ್ಬರ ನಡುವಿನ ಕಾಮ ಭಾವನೆಯನ್ನು ಪ್ರಚೋದಿಸುವ ಕ್ರಿಯೆಯಾಗಿದೆ. ಪ್ರೇಮಿಗಳು ತಮ್ಮ ಸಂಗಾತಿಗೆ ರೋಮ್ಯಾಂಟಿಕ್ ಭಾವನೆ ಮೂಡಿಸಲು ಈ ರೀತಿ ಕಿಸ್‌ ಮಾಡುತ್ತಾರೆ.

ಫ್ಲೈಯಿಂಗ್ ಕಿಸ್: ಯಾರಾದರೂ ನಿಮ್ಮನ್ನು ಮುಟ್ಟದೆ ದೂರದಿಂದ ಚುಂಬಿಸಿದರೆ, ಅದನ್ನು ಫ್ಲೈಯಿಂಗ್ ಕಿಸ್ ಎಂದು ಕರೆಯಲಾಗುತ್ತದೆ. ಅದರರ್ಥ ಅವರು ನಿಮ್ಮನ್ನು ಅಪಾರವಾಗಿ ಪ್ರೀತಿಸುತ್ತಾರೆ ಮತ್ತು ನಿಮ್ಮಿಂದ ದೂರವಿರಲು ಬಯಸುವುದಿಲ್ಲ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us