Kitchen Tips: ಅಡುಗೆ ಕೋಣೆಯ ದುರ್ನಾತ ದೂರವಾಗಿಸಲು ಈ ಟಿಪ್ಸ್ ಪಾಲಿಸಿ

ಅಡುಗೆ ಮನೆಯೆನ್ನುವುದು ಕೇವಲ ಕೋಣೆಯಲ್ಲ. ಹೆಂಗಳೆಯರ ಪುಟ್ಟ ಪ್ರಪಂಚ. ಮನೆ ಮಂದಿಯ ಹೊಟ್ಟೆ ತುಂಬಿಸುವ ಈ ಅಡುಗೆಮನೆಯಲ್ಲೇ ಗೃಹಿಣಿಯರು ತಮ್ಮ ಹೆಚ್ಚಿನ ಸಮಯವನ್ನು ಕಳೆಯುವುದು ಇಲ್ಲೇ. ಹೀಗಾಗಿ ಎಲ್ಲಾ ರೀತಿಯ ಅಗತ್ಯತೆಗಳನ್ನು ಪೂರೈಸುವ ಈ ಅಡುಗೆ ಮನೆಯು ಸ್ವಚ್ಛವಾಗಿದ್ದರೇನೇ ಚಂದ. ಆದರೆ ಕೆಲವೊಮ್ಮೆ ಕೆಟ್ಟ ವಾಸನೆಯಿಂದ ಅಡುಗೆ ಮನೆಗೆ ಹೋಗುವುದಕ್ಕೆ ಇಷ್ಟವಾಗುವುದಿಲ್ಲ. ನಿಮ್ಮ ಮನೆಯಲ್ಲಿ ಇದೇ ಸಮಸ್ಯೆಯಾಗಿದ್ದರೆ ಈ ಟಿಪ್ಸ್ ಗಳನ್ನು ಪಾಲಿಸಿ ಅಡುಗೆ ಕೋಣೆಯಲ್ಲಿ ಕಾಡುವ ದುರ್ನಾತವನ್ನು ದೂರವಾಗಿಸಿಕೊಳ್ಳಬಹುದು.

Kitchen Tips: ಅಡುಗೆ ಕೋಣೆಯ ದುರ್ನಾತ ದೂರವಾಗಿಸಲು ಈ ಟಿಪ್ಸ್ ಪಾಲಿಸಿ
Kitchen Tips
Follow us
ಸಾಯಿನಂದಾ
| Updated By: ಅಕ್ಷತಾ ವರ್ಕಾಡಿ

Updated on:Mar 23, 2024 | 6:18 PM

ಮಹಿಳೆಯರ ಪುಟ್ಟ ಪ್ರಪಂಚವಾಗಿರುವ ಅಡುಗೆ ಮನೆಯು ಸ್ವಚ್ಛವಾಗಿಟ್ಟುಕೊಳ್ಳುವುದು ಬಹಳ ಮುಖ್ಯ. ಆದರೆ ಇತ್ತೀಚೆಗಿನ ದಿನಗಳಲ್ಲಿ ಮನೆ ಸಂಸಾರ ಹಾಗೂ ಉದ್ಯೋಗ ಹೀಗೆ ಎಲ್ಲಾ ನಿಭಾಯಿಸುವುದರಲ್ಲೇ ಬ್ಯುಸಿಯಾಗಿರುವ ಮಹಿಳೆಯರು ಸ್ವಚ್ಛತೆ ಕಡೆಗೆ ಗಮನ ಕೊಡಲು ಸ್ವಲ್ಪ ಕಷ್ಟವಾಗುತ್ತದೆ. ಒಂದು ವೇಳೆ ಅಡುಗೆ ಮನೆಯಲ್ಲಿ ಸ್ವಚ್ಛವಾಗಿಟ್ಟುಕೊಳ್ಳದೇ ಹೋದರೆ ಮನೆ ತುಂಬಾ ಕೆಟ್ಟ ವಾಸನೆ ಬರಲು ಶುರುವಾಗುತ್ತದೆ. ಹೀಗೇನಾದರೆ ತಯಾರಿಸಿದ ಆಹಾರವನ್ನು ತಿನ್ನುವುದಕ್ಕೂ ಮನಸ್ಸಾಗುವುದಿಲ್ಲ. ಹೀಗಾಗಿ ಉದ್ಯೋಗದಲ್ಲಿರುವ ಮಹಿಳೆಯರು ರಜಾದಿನಗಳಲ್ಲಿ ಮನೆಯ ಸ್ವಚ್ಛತೆಯ ಕಡೆಗೆ ಗಮನ ಹರಿಸಬೇಕು.

ಅಡುಗೆ ಮನೆಯ ತುಂಬಾ ಕೆಟ್ಟ ವಾಸನೆ ಬರುತ್ತಿದ್ದರೆ ಈ ಕೆಲಸವನ್ನು ಮೊದಲು ಮಾಡಿ:

  1. ಕಿಟಕಿ ಬಾಗಿಲನ್ನು ಮೊದಲು ತೆರೆದಿಡಿ:

    ಅಡುಗೆ ಮನೆಯಲ್ಲಿ ಕೆಟ್ಟ ವಾಸನೆ ಬರುತ್ತಿದೆ ಎಂದಾದರೆ ಕಿಟಕಿ ಬಾಗಿಲನ್ನು ತೆರೆದಿಡುವ ಕೆಲಸವನ್ನು ಮೊದಲು ಮಾಡಬೇಕು. ಗಾಳಿಯಲ್ಲಿ ಕೆಟ್ಟ ವಾಸನೆಯು ಹೊರಗೆ ಹೋಗುವುದರಿಂದ ಒಂದೆರಡು ಗಂಟೆಗಳ ಕಾಲ ಎಲ್ಲವೂ ಸರಿಯಾಗುತ್ತದೆ.

  2. ಕರ್ಪೂರ ಹೊತ್ತಿಸಿ ಇಡಿ:

    ಕರ್ಪೂರದಲ್ಲಿ ಘಮ ಘಮಿಸುವ ಸುವಾಸನೆ ಇರುವ ಕಾರಣ ಅಡುಗೆ ಮನೆಯಲ್ಲಿ ಕೆಟ್ಟ ವಾಸನೆಯು ಬರುತ್ತಿದ್ದರೆ ಮೊದಲಿಗೆ ಈ ಕೋಣೆಯ ಮೂಲೆ ಮೂಲೆಗಳಲ್ಲಿ ಕರ್ಪೂರವನ್ನು ಹೊತ್ತಿಸಿ ಇಡಿ. ಹೀಗೆ ಮಾಡಿದ್ದಲ್ಲಿ ದುರ್ನಾತವು ದೂರವಾಗಿ ಅಡುಗೆ ಮನೆಯ ತುಂಬಾ ಕರ್ಪೂರದ ಘಮವು ಹರಡುತ್ತದೆ.

  3. ವಿನೆಗರ್ ಬಳಸಿ :

    ವಿನೆಗರ್‌ ಅನ್ನು ಒಂದು ಪಾತ್ರೆಯಲ್ಲಿ ಹಾಕಿ ನೀರು ಸೇರಿಸಿ ಚೆನ್ನಾಗಿ ಕುದಿಸಿಕೊಳ್ಳಿ. ಈ ವಿನೆಗರ್ ಕುದಿಯುವುದರಿಂದ ಹೊರ ಹೊಮ್ಮುವ ಘಮವು ಕೆಟ್ಟ ವಾಸನೆಯನ್ನು ದೂರ ಮಾಡುತ್ತದೆ.

  4. ಅಡುಗೆ ಸೋಡಾ :

    ಅಡುಗೆ ಮನೆಗೆ ಹೋಗಲು ಆಗುತ್ತಿಲ್ಲ ಎನ್ನುವವರು ಒಂದು ಲೀಟರ್ ನೀರಿನಲ್ಲಿ ಒಂದೆರಡು ಚಮಚ ಅಡುಗೆ ಸೋಡಾ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಇದನ್ನು ಅಡುಗೆ ಮನೆಯ ತುಂಬೆಲ್ಲಾ ಸ್ಪ್ರೇ ಮಾಡುವುದರಿಂದ ದುರ್ವಾಸನೆಯು ಹೋಗುತ್ತದೆ.

  5. ನಿಂಬೆ ಸಿಪ್ಪೆ ಅಥವಾ ಕಿತ್ತಳೆ ಸಿಪ್ಪೆಯನ್ನು ಬಳಸಿ :

    ಅಡುಗೆ ಮನೆಯ ಕೆಟ್ಟ ವಾಸನೆಯನ್ನು ಹೋಗಿಸಲು ನಿಂಬೆ ಸಿಪ್ಪೆ ಅಥವಾ ಕಿತ್ತಳೆ ಸಿಪ್ಪೆಗಳನ್ನು ನೀರಿನಲ್ಲಿ ಹಾಕಿ ಕುದಿಸಬೇಕು. ಈ ನೀರು ಕುದಿಯುತ್ತಿದ್ದಂತೆ ದಾಲ್ಚಿನ್ನಿ ಪುಡಿಯನ್ನು ಸೇರಿಸಿಕೊಂಡರೆ ಉತ್ತಮ. ದಾಲ್ಚಿನ್ನಿಯ ನೀರನ್ನು ಅಡುಗೆ ಮನೆಯ ತುಂಬೆಲ್ಲಾ ಸ್ಪ್ರೇ ಮಾಡುತ್ತಿದ್ದರೆ ಘಮ ಹೆಚ್ಚಾಗುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:16 pm, Sat, 23 March 24

ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ