Krishna Janmashtami 2022: ಕೃಷ್ಣ ಜನ್ಮಾಷ್ಟಮಿಗೆ ನೀವು ಉಪವಾಸ ಮಾಡುತ್ತೀರಾ?; ಈ ವಿಷಯಗಳನ್ನು ಮರೆಯಬೇಡಿ
ಕೃಷ್ಣ ಜನ್ಮಾಷ್ಟಮಿ ಉಪವಾಸವನ್ನು ಆಚರಿಸುವವರು ಯಾವಾಗಲೂ ಸಮೃದ್ಧಿ ಮತ್ತು ಸಂಪತ್ತನ್ನು ಅನುಭವಿಸುತ್ತಾರೆ ಎಂದು ನಂಬಲಾಗಿದೆ. ಕೃಷ್ಣ ಜನ್ಮಾಷ್ಟಮಿಯಂದು ಉಪವಾಸ ಮಾಡುವಾಗ ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ನಿಯಮಗಳಿವೆ
ಬೆಂಗಳೂರು: ಶ್ರೀಕೃಷ್ಣನ ಜನ್ಮದಿನವನ್ನು ಕೃಷ್ಣ ಜನ್ಮಾಷ್ಟಮಿ (Krishna Janmashtami) ಎಂದು ಜಗತ್ತಿನಾದ್ಯಂತ ಆಚರಿಸಲಾಗುತ್ತದೆ. ವಿಶ್ವದೆಲ್ಲೆಡೆ ಇರುವ ಕೃಷ್ಣನ ಭಕ್ತರು ಅತ್ಯಂತ ಭಕ್ತಿ ಮತ್ತು ಉತ್ಸಾಹದಿಂದ ಆಚರಿಸಲಾಗುವ ಹಬ್ಬ ಇದಾಗಿದೆ. ಈ ದಿನದಂದು ಉಪವಾಸ ಮಾಡಿದರೆ ಅದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ, ಕೃಷ್ಣ ಜನ್ಮಾಷ್ಟಮಿಯ ದಿನ ಭಕ್ತರು 24 ಗಂಟೆಗಳ ಕಾಲ ಉಪವಾಸ ಮಾಡುತ್ತಾರೆ. ಶ್ರೀ ಕೃಷ್ಣನಿಗೆ ತಯಾರಿಸಿದ ನೈವೇದ್ಯವನ್ನು ಸೇವಿಸುವ ಮೂಲಕ ಭಕ್ತರು ದಿನದ ಅಂತ್ಯದಲ್ಲಿ ತಮ್ಮ ಉಪವಾಸವನ್ನು ಕೊನೆಗೊಳಿಸುತ್ತಾರೆ. ಶ್ರೀ ಕೃಷ್ಣನು ಮಧ್ಯರಾತ್ರಿಯ ಸಮಯದಲ್ಲಿ ಜನಿಸಿದನೆಂಬ ನಂಬಿಕೆಯಿಂದ ಮಧ್ಯರಾತ್ರಿಯಲ್ಲಿ ಉಪವಾಸವನ್ನು ಕೊನೆಗೊಳಿಸಲಾಗುತ್ತದೆ.
ಕೃಷ್ಣ ಜನ್ಮಾಷ್ಟಮಿ ಉಪವಾಸವನ್ನು ಆಚರಿಸುವ ಪ್ರತಿಯೊಬ್ಬರೂ ಆಧ್ಯಾತ್ಮಿಕವಾಗಿ ಮತ್ತು ದೈಹಿಕವಾಗಿ ಅದರಿಂದ ಪ್ರಯೋಜನ ಪಡೆಯುತ್ತಾರೆ. ಕೃಷ್ಣ ಜನ್ಮಾಷ್ಟಮಿ ಉಪವಾಸವನ್ನು ಆಚರಿಸುವವರು ಯಾವಾಗಲೂ ಸಮೃದ್ಧಿ ಮತ್ತು ಸಂಪತ್ತನ್ನು ಅನುಭವಿಸುತ್ತಾರೆ ಎಂದು ನಂಬಲಾಗಿದೆ. ಉಪವಾಸವು ಆಳವಾದ ಅರ್ಥವನ್ನು ಹೊಂದಿದೆ. ಉಪವಾಸ ಆತ್ಮವನ್ನು ಪರಮಾತ್ಮನ ಹತ್ತಿರ ಸೆಳೆಯುತ್ತದೆ. ಹೀಗಾಗಿ, ಕೃಷ್ಣ ಜನ್ಮಾಷ್ಟಮಿ ಉಪವಾಸವು ಮೋಕ್ಷವನ್ನು ಸಾಧಿಸಲು ಸಂಬಂಧಿಸಿದ್ದೆಂಬ ನಂಬಿಕೆಯಿದೆ. ಇದನ್ನು ನಿರ್ವಾಣ ಎಂದೂ ಕರೆಯುತ್ತಾರೆ.
ಕೃಷ್ಣ ಜನ್ಮಾಷ್ಟಮಿಯಂದು ಉಪವಾಸ ಮಾಡುವಾಗ ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ನಿಯಮಗಳಿವೆ.
1. ಬೇಗ ಎದ್ದೇಳಿ: ಕೃಷ್ಣ ಜನ್ಮಾಷ್ಟಮಿಯಂದು ಆರೋಗ್ಯವನ್ನು ಸುಧಾರಿಸಲು ಮತ್ತು ಮಾನಸಿಕ, ದೈಹಿಕ ಯೋಗಕ್ಷೇಮವನ್ನು ಸುಧಾರಿಸಲು ಬೇಗ ಏಳುವ ಸಂಕಲ್ಪ ಮಾಡಿ. ಇದರಿಂದ ದಿನವನ್ನು ಸರಿಯಾಗಿ ಪ್ರಾರಂಭಿಸಲು ನಮಗೆ ಸಹಾಯ ಮಾಡುತ್ತದೆ. ಕೃಷ್ಣ ಜನ್ಮಾಷ್ಟಮಿಯ ಮುಹೂರ್ತಕ್ಕೆ ಸರಿಯಾಗಿ ಪೂಜೆ ಮತ್ತು ಆಚರಣೆಗಳನ್ನು ಮಾಡಲು ಇದರಿಂದ ಅನುಕೂಲವಾಗುತ್ತದೆ.
ಇದನ್ನೂ ಓದಿ: Krishna Janmashtami 2022: ಕೃಷ್ಣ ಜನ್ಮಾಷ್ಟಮಿಯ ದಿನಾಂಕ, ಸಮಯ, ಇತಿಹಾಸ, ಮಹತ್ವ, ಆಚರಣೆ, ಇಲ್ಲಿದೆ ನೋಡಿ
2. ಆಹಾರ ಮತ್ತು ಬಟ್ಟೆಗಳನ್ನು ದಾನ ಮಾಡಿ: ಅನ್ನದಾನ, ವಸ್ತ್ರದಾನ ಮಾಡುವುದು ಉದಾತ್ತ ಕಾರ್ಯ. ಇದು ಸಕಾರಾತ್ಮಕತೆ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ. ಭಗವಾನ್ ಕೃಷ್ಣನು ವಿಷ್ಣುವಿನ 8ನೇ ಅವತಾರ ಎಂದು ನಂಬಲಾಗಿದೆ. ಕೃಷ್ಣನ ಬಾಲ್ಯದ ಕಥೆಗಳ ಆಧಾರದ ಮೇಲೆ ಹೇಳುವುದಾದರೆ, ಕೃಷ್ಣ ಎಂದಿಗೂ ಸಾಮಾಜಿಕ ಪೂರ್ವಾಗ್ರಹದ ಆಧಾರದ ಮೇಲೆ ತಾರತಮ್ಯ ಮಾಡಲಿಲ್ಲ. ಕೃಷ್ಣ ಯಾವಾಗಲೂ ಜನರಿಗೆ ಸಹಾಯ ಮಾಡುತ್ತಿದ್ದ ಎಂದು ನಂಬಲಾಗಿದೆ. ಆದ್ದರಿಂದ, ಜನ್ಮಾಷ್ಟಮಿ ಸಂದರ್ಭದಲ್ಲಿ ಭಕ್ತರು ಅಗತ್ಯವಿರುವವರಿಗೆ ದಾನ ಮಾಡಬೇಕು.
3. ಸಾತ್ವಿಕ ಭೋಜನ ಸೇವಿಸಿ: ಆಯುರ್ವೇದ ನಮ್ಮ ದೇಹ ಮತ್ತು ಉತ್ತಮ ಮನಸ್ಸಿಗೆ ಸಾತ್ವಿಕ ಆಹಾರದ ಅಗತ್ಯವನ್ನು ಎತ್ತಿ ತೋರಿಸುತ್ತವೆ. ಜನ್ಮಾಷ್ಟಮಿಯಂದು ಸಾತ್ವಿಕ ಭೋಜನವನ್ನು ಮಾತ್ರ ಸೇವಿಸಬೇಕು ಎಂದು ನಂಬಲಾಗಿದೆ. ಈ ದಿನದಂದು ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ಆಹಾರದಲ್ಲಿ ಬಳಸಬಾರದು. ಏಕೆಂದರೆ ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ತಾಮಸಿಕ ವರ್ಗದಲ್ಲಿ ಇರಿಸಲಾಗುತ್ತದೆ. ಅಲ್ಲದೆ, ಈ ದಿನ ಮಾಂಸ ಮತ್ತು ಮದ್ಯವನ್ನು ಸೇವಿಸಬಾರದು.
4. ಪ್ರಾಣಿಗಳನ್ನು ನೋಯಿಸಬೇಡಿ: ಶ್ರೀ ಕೃಷ್ಣನು ಪ್ರಾಣಿಗಳನ್ನು ಪ್ರೀತಿಸುತ್ತಿದ್ದ. ಕೊಳಲನ್ನು ಊದಿ ಹಸುಗಳನ್ನು ಮಂತ್ರಮುಗ್ಧಗೊಳಿಸುತ್ತಿದ್ದ. ಕೃಷ್ಣ ವಿಶೇಷವಾಗಿ ಹಸುಗಳನ್ನು ತುಂಬಾ ಇಷ್ಟಪಡುತ್ತಿದ್ದರು. ಬಾಲ್ಯದಲ್ಲಿ ದನ ಕಾಯುವವನ ಜೊತೆ ಹಸು ಮೇಯಿಸಲು ಹೋಗುತ್ತಿದ್ದ. ಆದ್ದರಿಂದ, ಪ್ರಾಣಿಗಳನ್ನು ನೋಯಿಸಬೇಡಿ ಮತ್ತು ಎಲ್ಲಾ ಜೀವಿಗಳನ್ನು ಗೌರವದಿಂದ ಕಾಣಿರಿ. ಮನುಷ್ಯರಿಗೂ ಗೌರವ ನೀಡಿ. ಜನ್ಮಾಷ್ಟಮಿಯ ದಿನದಂದು ಪ್ರಾಣಿಗಳಿಗೆ ಆಹಾರ ನೀಡಿ ಮತ್ತು ಪಕ್ಷಿಗಳಿಗೆ ನೀರು ಇಡಿ.
ಇದನ್ನೂ ಓದಿ: Krishna Janmashtami 2022: ಕೃಷ್ಣನ ಹೆಜ್ಜೆ ಗುರುತು ಮೂಡಿರುವ ಈ ಸ್ಥಳಗಳಿಗೆ ಕೃಷ್ಣ ಜನ್ಮಾಷ್ಟಮಿಯಂದು ಭೇಟಿ ನೀಡಲೇಬೇಕು
5. ಚಹಾ ಅಥವಾ ಕಾಫಿ ಕುಡಿಯುವುದನ್ನು ತಪ್ಪಿಸಿ: ಉಪವಾಸದ ಸಮಯದಲ್ಲಿ ದೇಹವನ್ನು ಸಕ್ರಿಯವಾಗಿಡಲು ಅನೇಕ ಜನರು ಚಹಾ ಅಥವಾ ಕಾಫಿ ಸೇವಿಸುತ್ತಾರೆ. ತಜ್ಞರ ಪ್ರಕಾರ, ಈ ಎರಡೂ ಪಾನೀಯಗಳನ್ನು ಸೇವಿಸುವುದನ್ನು ತಪ್ಪಿಸಬೇಕು. ಏಕೆಂದರೆ ಅವು ಆಮ್ಲೀಯತೆಗೆ ಕಾರಣವಾಗುತ್ತವೆ. ಇದರಿಂದ ಉಪವಾಸದ ಸಮಯದಲ್ಲಿ ಅಸ್ವಸ್ಥತೆ, ತಲೆನೋವು ಉಂಟಾಗಬಹುದು. ನಿಮ್ಮ ಆಹಾರದಲ್ಲಿ ತಾಜಾ ಜ್ಯೂಸ್ ಅಥವಾ ಎಳನೀರನ್ನು ಸೇವಿಸಲು ಆದ್ಯತೆ ನೀಡಿ.
6. ಮಾಂಸಾಹಾರಿ ಆಹಾರವನ್ನು ತಪ್ಪಿಸಿ: ಹೆಚ್ಚಿನ ಹಿಂದೂ ಹಬ್ಬಗಳು ಹಣ್ಣುಗಳು ಮತ್ತು ಸಸ್ಯಾಹಾರಿ ಹಬ್ಬಗಳ ಸೇವನೆಯಿಂದ ಗುರುತಿಸಲ್ಪಡುತ್ತವೆ. ಉಪವಾಸದ ಸಮಯದಲ್ಲಿ, ಮಾಂಸ ಅಥವಾ ಇತರ ಮಾಂಸಾಹಾರಿ ಆಹಾರವನ್ನು ತಿನ್ನುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
7. ಹಾಲು ಮತ್ತು ಮೊಸರು ಸೇವಿಸಿ: ಜನ್ಮಾಷ್ಟಮಿ ಆಚರಣೆಗೆ ಹಾಲು ಮತ್ತು ಮೊಸರು ಸೇವನೆ ಅತ್ಯಗತ್ಯ. ಅದಿಲ್ಲದೇ ಹಬ್ಬ ಅಪೂರ್ಣ. ಉಪವಾಸದ ಸಮಯದಲ್ಲಿ ನೀವು ತಾಜಾ ಹಣ್ಣಿನ ಶೇಕ್‌ಗಳನ್ನು ಸೇವಿಸಬಹುದು. ಅಥವಾ ಸಿಹಿಯಾದ ಲಸ್ಸಿ, ಮಜ್ಜಿಗೆ ಸೇವಿಸಬಹುದು.
ಜೀವನಶೈಲಿಯ ಕುರಿತ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ