Makar Sankranti 2024: ಕಡಲೆಕಾಯಿ ಬರ್ಫಿ ಮನೆಯಲ್ಲೇ ಮಾಡಬೇಕಾ? ಇಲ್ಲಿದೆ ಸಿಂಪಲ್ ರೆಸಿಪಿ
ಕಡಲೆಕಾಯಿ ಈ ಸಮಯದಲ್ಲಿ ನಿಮಗೆ ಎಲ್ಲೆಡೆ ದೊರೆಯುವುದರಿಂದ ಅದರಿಂದ ಅನೇಕ ರೀತಿಯ ಭಕ್ಷಗಳನ್ನು ತಯಾರಿಸಿ ಹಬ್ಬವನ್ನು ಇನ್ನಷ್ಟು ಸುಂದರವಾಗಿಸಬಹುದು. ಅದರಲ್ಲಿ ತುಂಬಾ ಪ್ರಸಿದ್ದಿ ಪಡೆದಿರುವ ಆಹಾರಗಳಲ್ಲಿ ಬರ್ಫಿ ಮೊದಲ ಸ್ಥಾನದಲ್ಲಿರುತ್ತದೆ. ರುಚಿ ರುಚಿಯಾದ ಬರ್ಫಿಯನ್ನು ತಯಾರಿಸಲು ನಿಮಗೆ ಕಡಲೆಕಾಯಿ, ಗೋಡಂಬಿ, ಬೆಲ್ಲ, ಹಾಲು ಮತ್ತು ತುಪ್ಪಈ 5 ಪದಾರ್ಥಗಳು ಬೇಕಾಗುತ್ತವೆ. ಈ ಪಾಕವಿಧಾನವನ್ನು ಕೇವಲ 30 ನಿಮಿಷಗಳಲ್ಲಿ ತಯಾರಿಸಬಹುದು ಅದು ಅಲ್ಲದೆ ಇದು ಹಬ್ಬದ ಔತಣಕ್ಕೆ ಮೆರಗು ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ.
ಸಂಕ್ರಾಂತಿ ವರ್ಷದ ಮೊದಲ ಹಬ್ಬ ಅದರಲ್ಲಿಯೂ ಈ ಸಮಯ ಚಳಿಗಾಲವಾದ್ದರಿಂದ ಕೆಲವು ವಿಶೇಷ ಸಿಹಿ ತಿಂಡಿಗಳನ್ನು ಸವಿಯಲು ಮನಸ್ಸು ಹಂಬಲಿಸುವುದು ಸಹಜ. ಇನ್ನು, ಕಡಲೆಕಾಯಿ ಈ ಸಮಯದಲ್ಲಿ ನಿಮಗೆ ಎಲ್ಲೆಡೆ ದೊರೆಯುವುದರಿಂದ ಅದರಿಂದ ಅನೇಕ ರೀತಿಯ ಭಕ್ಷಗಳನ್ನು ತಯಾರಿಸಿ ಹಬ್ಬವನ್ನು ಇನ್ನಷ್ಟು ಸುಂದರವಾಗಿಸಬಹುದು. ಅದರಲ್ಲಿ ತುಂಬಾ ಪ್ರಸಿದ್ದಿ ಪಡೆದಿರುವ ಆಹಾರಗಳಲ್ಲಿ ಬರ್ಫಿ ಮೊದಲ ಸ್ಥಾನದಲ್ಲಿರುತ್ತದೆ. ರುಚಿ ರುಚಿಯಾದ ಬರ್ಫಿ ತಯಾರಿಸಲು ನಿಮಗೆ ಕಡಲೆಕಾಯಿ, ಗೋಡಂಬಿ, ಬೆಲ್ಲ, ಹಾಲು ಮತ್ತು ತುಪ್ಪಈ 5 ಪದಾರ್ಥಗಳು ಬೇಕಾಗುತ್ತವೆ. ಈ ಪಾಕವಿಧಾನವನ್ನು ಕೇವಲ 30 ನಿಮಿಷಗಳಲ್ಲಿ ತಯಾರಿಸಬಹುದು ಅದು ಅಲ್ಲದೆ ಇದು ಹಬ್ಬದ ಔತಣಕ್ಕೆ ಮೆರಗು ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ.
ಇನ್ನು ನೀವು ಈ ಬರ್ಫಿ ಮಿಶ್ರಣಕ್ಕೆ ಬಾದಾಮಿ, ವಾಲ್ನಟ್, ಒಣ ದ್ರಾಕ್ಷಿ ಮತ್ತು ಎಳ್ಳಿನ ಬೀಜಗಳನ್ನು ಸೇರಿಸುವ ಮೂಲಕ ಇದಕ್ಕೆ ಸ್ವಲ್ಪ ವಿಶಿಷ್ಟ ರುಚಿಯನ್ನು ನೀಡಬಹುದು. ಮಕ್ಕಳಿಗಾಗಲಿ ಅಥವಾ ವಯಸ್ಕರಾಗಿರಲಿ, ಪ್ರತಿಯೊಬ್ಬರೂ ಈ ಕಡಲೆಕಾಯಿ ಬರ್ಫಿಯನ್ನು ಖಂಡಿತವಾಗಿಯೂ ಆನಂದಿಸುತ್ತಾರೆ. ನೀವು ಇದನ್ನು ನಿಮಗೆ ಬೇಕಾದಷ್ಟು ಪ್ರಮಾಣದಲ್ಲಿ ತಯಾರಿಸಬಹುದು ಮತ್ತು ಅವುಗಳನ್ನು ಹೆಚ್ಚು ಕಾಲ ಇಟ್ಟುಕೊಳ್ಳಲು ಗಾಳಿಯಾಡದ ಪಾತ್ರೆಯಲ್ಲಿ ಸಂಗ್ರಹಿಸಬಹುದು. ಸಕ್ಕರೆಯ ಬದಲು ಬರ್ಫಿಗಳನ್ನು ಸಿಹಿಗೊಳಿಸಲು ನೀವು ಬೆಲ್ಲವನ್ನು ಕೂಡ ಬಳಸಬಹುದು ಏಕೆಂದರೆ ಬೆಲ್ಲ ಸಕ್ಕರೆಗಿಂತಲೂ ಬರ್ಫಿಗಳಿಗೆ ವಿಶಿಷ್ಟ ಪರಿಮಳವನ್ನು ನೀಡುತ್ತದೆ. ಈ ರುಚಿಕರವಾದ ಬರ್ಫಿಯ ಪಾಕವಿಧಾನವನ್ನು ನೀವು ಪ್ರಯತ್ನಿಸಿ.
ಕಡಲೆಕಾಯಿ ಬರ್ಫಿ ಮಾಡಲು ಬೇಕಾಗುವ ಪದಾರ್ಥಗಳು:
- 1 ಕಪ್ ಹಸಿ ಕಡಲೆಕಾಯಿ
- 1 ಕಪ್ ಬೆಲ್ಲ ಅಥವಾ ಸಕ್ಕರೆ
- 2 ಟೇಬಲ್ ಚಮಚ ತುಪ್ಪ
- 1/2 ಕಪ್ ಗೋಡಂಬಿ
- 2 ದೊಡ್ಡ ಚಮಚ ಹಾಲು
ಇದನ್ನೂ ಓದಿ: ನೈವೇದ್ಯಕ್ಕೆ ಶ್ರೇಷ್ಠವಾಗಿರುವ ತೆಂಗಿನಕಾಯಿ ಲಡ್ಡಿನ ರೆಸಿಪಿ ಇಲ್ಲಿದೆ
ಕಡಲೆಕಾಯಿ ಬರ್ಫಿ ತಯಾರಿಸುವುದು ಹೇಗೆ?
- ಕಡಲೆಕಾಯಿಯನ್ನು ಒಂದು ಬಾಣಲೆಗೆ ಹಾಕಿ ಅದು ಚಿನ್ನದ ಕಂದು ಬಣ್ಣಕ್ಕೆ ತಿರುಗುವವರೆಗೆ ಚೆನ್ನಾಗಿ ಹುರಿಯಿರಿ. ಬಳಿಕ ಅದನ್ನು ಒಂದು ಬಟ್ಟಲಿಗೆ ಹಾಕಿಕೊಂಡು ಉಜ್ಜಿ ಉಜ್ಜಿ ಸಿಪ್ಪೆ ತೆಗೆಯಿರಿ. ಬಳಿಕ ಕಡಲೆಕಾಯಿಯನ್ನು ತಣ್ಣಗಾಗಲು ಬಿಡಿ.
- ಹುರಿದ ಕಡಲೆಕಾಯಿಯನ್ನು ಗೋಡಂಬಿಯೊಂದಿಗೆ ಬ್ಲೆಂಡರ್ ಗೆ ಸೇರಿಸಿ ಒರಟು ಪುಡಿ ಮಾಡಿಕೊಳ್ಳಿ. ಅಂದರೆ ನುಣ್ಣಗೆ ಮಾಡದೆ ತರಿತರಿಯಾಗಿ ರುಬ್ಬಿಕೊಳ್ಳಿ.
- ಒಂದು ಪಾತ್ರೆಯಲ್ಲಿ 1/4 ಕಪ್ ನೀರಿನೊಂದಿಗೆ ಬೆಲ್ಲ ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ ಮಧ್ಯಮ ಉರಿಯಲ್ಲಿ ಬೆಲ್ಲ ಕರಗುವವರೆಗೆ ಮತ್ತು ಮಿಶ್ರಣವು ಸ್ವಲ್ಪ ದಪ್ಪವಾಗುವವರೆಗೆ ಹಾಗೆಯೇ ಚೆನ್ನಾಗಿ ಕಾಯಿಸಿರಿ. ಇದು ಒಂದು ಸಿರಪ್ ಅಂದರೆ ಸರಿಯಾದ ಪಾಕ ತಯಾರಾಗುವವರೆಗೆ ಈ ಪ್ರಕ್ರಿಯೆ ಸಾಗುತ್ತಿರಲಿ.
- ಈಗ ಬೆಲ್ಲದ ಪಾಕಕ್ಕೆ ಕಡಲೆಕಾಯಿ- ಗೋಡಂಬಿ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಕಲಸಿರಿ. ಬಳಿಕ ಹಾಲು, ತುಪ್ಪ ಸೇರಿಸಿ ಮಿಶ್ರಣ ಮಾಡಿ. ಬೆಂಕಿಯನ್ನು ಮಧ್ಯಮ ಉರಿಯಲ್ಲಿ ಇಟ್ಟುಕೊಂಡು ಮಿಶ್ರಣವನ್ನು ಚೆನ್ನಾಗಿ ಬೇಯಿಸಿಕೊಳ್ಳಿ. ಮಿಶ್ರಣವು ದಪ್ಪವಾಗುವವರೆಗೆ ಬಿಡದೆ ಕಲಕುತ್ತಲೇ ಇರಿ. ಈ ಮಿಶ್ರಣ ತಿಳಿ ಕಂದು ಬಣ್ಣ ಬಂದ ಮೇಲೆ ಗ್ಯಾಸ್ ಆಫ್ ಮಾಡಿ.
- ಬಳಿಕ ಮಿಶ್ರಣವನ್ನು ಬರ್ಫಿ ಕಟ್ ಮಾಡಲು ಬಳಸುವ ಪೇಪರ್ ಬಳಸಿಕೊಂಡು ಒಂದು ಟ್ರೇಗೆ ಸುರಿದು ಮಿಶ್ರಣ ತಣ್ಣಗಾಗಲು ಬಿಡಿ. ಬಳಿಕ ನಿಮಗೆ ಬೇಕಾದ ಆಕಾರದಲ್ಲಿ ಬರ್ಫಿಗಳನ್ನು ಕತ್ತರಿಸಿಕೊಳ್ಳಿ. ಇಷ್ಟು ಮಾಡಿದಾಗ ನಿಮಗೆ ರುಚಿ ರುಚಿಯಾದ ಬರ್ಫಿಗಳು ಬಡಿಸಲು ಸಿದ್ಧವಾಗಿರುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: