Kannada News Lifestyle Makeup Tips : These makeup mistakes to avoid during winter Kannada News
Makeup Tips : ಚಳಿಗಾಲದಲ್ಲಿ ಮೇಕಪ್ ಮಾಡುವಾಗ ಈ ತಪ್ಪು ಮಾಡಿದ್ರೆ ಮೇಕಪ್ ಪರ್ಫೆಕ್ಟ್ ಆಗಿ ಬರಲ್ಲ
ಚಳಿಗಾಲ ಬಂತೆಂದರೆ ಸೌಂದರ್ಯವನ್ನು ಕಾಪಾಡಿಕೊಳ್ಳುವುದೇ ಹೆಚ್ಚು. ಈ ಸಮಯದಲ್ಲಿ ತ್ವಚೆಯೂ ಒಣಗುವುದರಿಂದ ಮೇಕಪ್ ಮಾಡಿಕೊಳ್ಳುವುದೇ ಕಷ್ಟದ ಕೆಲಸ. ಆದರೆ ಈ ಋತುವಿನಲ್ಲಿ ಮೇಕಪ್ ಮಾಡಿಕೊಳ್ಳುವಾಗ ಈ ತಪ್ಪುಗಳು ಮಾಡಬೇಡಿ. ಇದರಿಂದ ಮೇಕಪ್ ಪರ್ಫೆಕ್ಟ್ ಆಗಿ ಬರಲ್ಲ. ಅದಲ್ಲದೇ ತ್ವಚೆಯನ್ನು ಹಾಳು ಮಾಡಬಹುದು. ಆ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.
ಸಾಂದರ್ಭಿಕ ಚಿತ್ರ
Follow us on
ಹೆಂಗಳೆಯರಿಗೆ ಮೇಕಪ್ ಮಾಡಿಕೊಳ್ಳುವುದೆಂದರೆ ತುಂಬಾನೇ ಇಷ್ಟ. ಹಬ್ಬಹರಿದಿನಗಳು, ಶುಭ ಸಮಾರಂಭಗಳಲ್ಲಿ ಮೇಕಪ್ ಅಂತೂ ಮಿಸ್ ಮಾಡಿಕೊಳ್ಳುವುದೇ ಇಲ್ಲ. ಎಲ್ಲರಂತೆ ತಾನು ಕೂಡ ಸುಂದರವಾಗಿ ಕಾಣಬೇಕು ಎನ್ನುವ ಆಸೆಯಿಂದ ನಾನಾ ರೀತಿಯ ಮೇಕಪ್ ಟ್ರೈ ಮಾಡುತ್ತಾರೆ. ದುಬಾರಿ ಬೆಲೆಯ ಮೇಕಪ್ ಪ್ರಾಡಕ್ಟ್ ಗಳನ್ನು ಬಳಸುತ್ತಾರೆ. ಆದರೆ ಚಳಿಗಾಲದಲ್ಲಿ ಮೇಕಪ್ ಮಾಡಿಕೊಳ್ಳುತ್ತೀರಿ ಅಂತಾದ್ರೆ ಸ್ವಲ್ಪ ಬದಲಾವಣೆ ಮಾಡಿಕೊಳ್ಳುವುದು ಉತ್ತಮ. ಅದಲ್ಲದೇ ಈ ಕೆಲವು ತಪ್ಪುಗಳು ಮಾಡದಿರುವುದರಿಂದ ಮೇಕಪ್ ಪರ್ಫೆಕ್ಟ್ ಬರಲು ಸಾಧ್ಯ.
ಸನ್‌ಸ್ಕ್ರೀನ್ ಬಳಸದೇ ಇರುವುದು : ಚಳಿಗಾಲದಲ್ಲಿ ಕೆಲವರು ಸನ್‌ಸ್ಕ್ರೀನ್ ಬಳಸುವುದನ್ನು ಬಿಟ್ಟು ಬಿಡುತ್ತಾರೆ. ಆದರೆ ಕಡಿಮೆ ಉಷ್ಣತೆಯಿದ್ದರೂ ಸೂರ್ಯನು ಕಿರಣಗಳು ಅಷ್ಟೇ ಪ್ರಕಾರವಾಗಿರುತ್ತದೆ. ಹೀಗಾಗಿ ತ್ವಚೆಯ ರಕ್ಷಣೆಗಾಗಿ ಸನ್ ಸ್ಕ್ರೀನ್ ಬಳಸುವುದು ಉತ್ತಮ.
ಪ್ರೈಮರ್ ಬಳಸದೇ ಇರುವುದು : ಮೇಕಪ್ ಮಾಡಿಕೊಳ್ಳುವಾಗ ಮಾಯಿಶ್ಚರೈಸರ್ ಬಳಸುವುದು ಸರ್ವೇ ಸಾಮಾನ್ಯ. ಆದರೆ ಇದನ್ನು ಬಳಸಿದ ಕೂಡಲೇ ಮೇಕಪ್ ಮಾಡಿಕೊಳ್ಳುತ್ತಾರೆ. ಆದರೆ ಅಂತಹ ತಪ್ಪನ್ನು ಮಾಡಬೇಡಿ. ತ್ವಚೆಗೆ ಮಾಯಿಶ್ಚರೈಸರ್ ಅನ್ವಯಿಸಿದ ನಂತರ ಪ್ರೈಮರ್ ಬಳಸುವುದು ಅತ್ಯಗತ್ಯ. ಅನ್ವಯಿಸದೆ ಹೋದರೆ ಮೃದುವಾದ ಬೇಸ್ ಸಿಗುವುದಿಲ್ಲ ಹಾಗೂ ಮೇಕಪ್ ಪರ್ಫೆಕ್ಟ್ ಆಗಿ ಬರುವುದಿಲ್ಲ. ಹೀಗಾಗಿ ಹೈಡ್ರೇಟಿಂಗ್ ಪ್ರೈಮರ್ ಬಳಕೆ ಮಾಡುವುದು ಸೂಕ್ತ.
ಫೌಂಡೇಷನ್ ಅನ್ವಯಿಸುವಾಗ ಬ್ರಷ್ ಬಳಕೆ : ಕೆಲವರು ಬ್ರಷ್ ಗಳಿಂದ ಮುಖಕ್ಕೆ ಫೌಂಡೇಶನ್ ಅನ್ವಯಿಸುತ್ತಾರೆ. ಆದರೆ ಈ ಋತುವಿನಲ್ಲಿ ಸ್ಪಾಂಜ್ ಗಳ ಬಳಕೆಯಿರಲಿ. ಸ್ಪಾಂಜ್ ಗಳನ್ನು ಒದ್ದೆ ಮಾಡಿ ಫೌಂಡೇಶನ್ ಅದ್ದಿ ಮುಖಕ್ಕೆ ಅನ್ವಯಿಸಿ. ಇದರಿಂದ ಮೃದುವಾದ ಬೇಸ್ ಸಿಗುತ್ತದೆ, ಮೇಕಪ್ ಪರ್ಫೆಕ್ಟ್ ಆಗಿ ಬರುತ್ತದೆ.
ಲಿಪ್ ಬಾಮ್ ಬಳಕೆ ಮಾಡದಿರುವುದು : ಚಳಿಗಾಲದಲ್ಲಿ ತುಟಿಗಳು ಒಡೆಯುತ್ತವೆ. ಇಲ್ಲದಿದ್ದರೆ ಒಣಗುತ್ತವೆ. ಈ ಋತುವಿನಲ್ಲಿ ತುಟಿಗಳು ಅಂದವನ್ನು ಕಳೆದುಕೊಳ್ಳುತ್ತವೆ. ಅದರಲ್ಲಿ ಮೇಕಪ್ ಮಾಡಿದಾಗ ಲಿಪ್ ಬಾಮ್ ಬಳಸುವುದು ಉತ್ತಮ. ಇದು ತುಟಿಗಳು ತೇವಾಂಶಭರಿತ ಹಾಗೂ ಆಕರ್ಷಕವಾಗಿಡುವಂತೆ ಮಾಡುತ್ತದೆ. ಹೀಗಾಗಿ ಉತ್ತಮ ಗುಣ ಮಟ್ಟದ ಲಿಪ್ ಬಾಮ್ ಬಳಕೆ ಇರಲಿ.
ವಾಟರ್ ಪ್ರೂಫ್ ಮೇಕಪ್ ಮಾಡದಿರುವುದು : ಚಳಿಗಾಲದಲ್ಲಿ ಬೆವರುವುದು ಕಡಿಮೆ. ಹೀಗಾಗಿ ಕೆಲವರು ವಾಟರ್ ಪ್ರೂಫ್ ಉತ್ಪನ್ನಗಳ ಬದಲಿಗೆ ಸಾಮಾನ್ಯ ಮೇಕಪ್ ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ ಈ ಋತುವಿನಲ್ಲಿಯೂ ವಾಟರ್ ಪ್ರೂಫ್ ಮಸ್ಕರಾ ಮತ್ತು ಲೈನರ್ ಸೇರಿದಂತೆ ಮೇಕಪ್ ಉತ್ಪನ್ನಗಳನ್ನು ಬಳಸುವತ್ತ ಹೆಚ್ಚು ಗಮನ ಕೊಡಿ.