ಮನೆಯಲ್ಲೇ ಜೇನುತುಪ್ಪದ ಫೇಸ್​ ಸ್ಕ್ರಬ್ ತಯಾರಿಸುವುದು ಹೇಗೆ?

|

Updated on: Oct 20, 2023 | 6:08 PM

Honey Facepack: ಜೇನುತುಪ್ಪದ ಫೇಸ್​ಪ್ಯಾಕ್​ನಿಂದ ಮುಖದ ಬಣ್ಣ ತಿಳಿಯಾಗುತ್ತದೆ. ಜೇನುತುಪ್ಪ ಮುಖದ ಮೇಲಿನ ರಂಧ್ರಗಳನ್ನು ಸ್ವಚ್ಛಗೊಳಿಸುತ್ತದೆ ಮತ್ತು ಹೆಚ್ಚುವರಿ ಎಣ್ಣೆಯನ್ನು ತೆಗೆದುಹಾಕುತ್ತದೆ. ಬ್ಲಾಕ್​ಹೆಡ್​ ಮತ್ತು ವೈಟ್​ಹೆಡ್​ಗಳನ್ನು ನಿವಾರಿಸುತ್ತದೆ.

ಮನೆಯಲ್ಲೇ ಜೇನುತುಪ್ಪದ ಫೇಸ್​ ಸ್ಕ್ರಬ್ ತಯಾರಿಸುವುದು ಹೇಗೆ?
ಜೇನುತುಪ್ಪದ ಫೇಸ್​ಪ್ಯಾಕ್
Image Credit source: iStock
Follow us on

ಮನೆಯಲ್ಲೇ ಇರುವ ಕೆಲವು ಪದಾರ್ಥಗಳನ್ನು ಬಳಸಿ ವಾರಕ್ಕೊಮ್ಮೆಯೋ, 2 ಬಾರಿಯೋ ಫೇಸ್​ಪ್ಯಾಕ್ ಮಾಡಿಕೊಳ್ಳುತ್ತಿದ್ದರೆ ನಿಮ್ಮ ಮುಖದ ಕಾಂತಿ ಹೆಚ್ಚುತ್ತದೆ ಹಾಗೂ ಚರ್ಮವೂ ಆರೋಗ್ಯಯುತವಾಗಿರುತ್ತದೆ. ನಿಮ್ಮ ಚರ್ಮಕ್ಕೆ ಅತ್ಯುತ್ತಮ ಹೊಳಪು ನೀಡುವ ವಸ್ತುಗಳಲ್ಲಿ ಜೇನುತುಪ್ಪ ಕೂಡ ಒಂದು. ಜೇನುತುಪ್ಪವು ಚರ್ಮವನ್ನು ಆಳವಾಗಿ ತೇವಗೊಳಿಸುತ್ತದೆ. ನಿಮ್ಮ ಡೇ ಕ್ರೀಮ್‌ಗಳಲ್ಲಿ ಜೇನುತುಪ್ಪದ ಅಂಶವಿದ್ದರೆ ಅದು ನಿಮ್ಮ ಚರ್ಮವನ್ನು ಹೈಡ್ರೇಟ್ ಮಾಡುತ್ತದೆ ಮತ್ತು ಮೃದುಗೊಳಿಸುತ್ತದೆ.

ಜೇನುತುಪ್ಪ ಮುಖದ ಮೇಲಿನ ಕಲೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮುಖದಲ್ಲಿನ ಕಪ್ಪು ಕಲೆಗಳು, ಪಿಗ್ಮೆಂಟೇಶನ್ ಅಥವಾ ಮೊಡವೆಯನ್ನು ಜೇನುತುಪ್ಪ ಹಚ್ಚುವ ಮೂಲಕ ನಿಯಂತ್ರಣ ಮಾಡಬಹುದು. ಜೇನುತುಪ್ಪದ ಫೇಸ್​ಪ್ಯಾಕ್​ನಿಂದ ಮುಖದ ಬಣ್ಣ ತಿಳಿಯಾಗುತ್ತದೆ. ಜೇನುತುಪ್ಪ ಮುಖದ ಮೇಲಿನ ರಂಧ್ರಗಳನ್ನು ಸ್ವಚ್ಛಗೊಳಿಸುತ್ತದೆ ಮತ್ತು ಹೆಚ್ಚುವರಿ ಎಣ್ಣೆಯನ್ನು ತೆಗೆದುಹಾಕುತ್ತದೆ. ಬ್ಲಾಕ್​ಹೆಡ್​ ಮತ್ತು ವೈಟ್​ಹೆಡ್​ಗಳನ್ನು ನಿವಾರಿಸುತ್ತದೆ.

ಇದನ್ನೂ ಓದಿ: Beauty Tips: ಮುಖದ ಮೊಡವೆಯ ಕಲೆ ಹೋಗಲಾಡಿಸಲು ಇಲ್ಲಿದೆ ಸುಲಭ ಉಪಾಯ

ಜೇನುತುಪ್ಪದ ಫೇಸ್​ ಸ್ಕ್ರಬ್ ಮಾಡುವುದು ಹೇಗೆ?:

– ಒಂದು ಚಮಚ ಜೇನುತುಪ್ಪವನ್ನು ತೆಗೆದುಕೊಂಡು ಅದನ್ನು ಒಂದು ಬಟ್ಟಲಿಗೆ ಹಾಕಿಕೊಳ್ಳಿ.

– ಆ ಬಟ್ಟಲಿಗೆ ಅರ್ಧ ಚಮಚ ಸಕ್ಕರೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

– ಇದನ್ನು ನಿಮ್ಮ ಮುಖಕ್ಕೆ ಸಮವಾಗಿ ಹಚ್ಚಿಕೊಳ್ಳಿ. ಕೆಲವು ನಿಮಿಷಗಳ ಕಾಲ ವೃತ್ತಾಕಾರವಾಗಿ ನಿಮ್ಮ ಮುಖದ ಮೇಲೆ ಮಸಾಜ್ ಮಾಡಿ.

– ಇದಾದ 2-3 ನಿಮಿಷಗಳ ಬಳಿಕ ತಣ್ಣೀರಿನಿಂದ ಮುಖ ತೊಳೆದುಕೊಳ್ಳಿ.

– ಇದರಿಂದ ಮೃದುವಾದ ಮತ್ತು ಹೊಳಪಿನ ಚರ್ಮವನ್ನು ಪಡೆಯಲು ಸಹಾಯಕವಾಗುತ್ತದೆ.

– ಉತ್ತಮ ಫಲಿತಾಂಶಗಳನ್ನು ಪಡೆಯಲು ನೀವು ಜೇನುತುಪ್ಪದ ಸ್ಕ್ರಬ್‌ಗೆ ಕೆಲವು ಹನಿ ನಿಂಬೆ ರಸವನ್ನು ಕೂಡ ಸೇರಿಸಬಹುದು.

ಇದನ್ನೂ ಓದಿ: ಮೊಸರು ಬಳಸಿ ಹೇಗೆಲ್ಲ ಫೇಸ್​ಪ್ಯಾಕ್ ಮಾಡಿಕೊಳ್ಳಬಹುದು ಗೊತ್ತಾ?

ಜೇನುತುಪ್ಪದ ಫೇಸ್​ಪ್ಯಾಕ್ ಮಾಡಿಕೊಳ್ಳುವುದು ಹೇಗೆ?:

– ಸ್ವಲ್ಪ ಹಾಲನ್ನು ಬಿಸಿ ಮಾಡಿ, ಅದು ಉಗುರು ಬೆಚ್ಚಗಾದ ಬಳಿಕ ಜೇನುತುಪ್ಪದೊಂದಿಗೆ ಮಿಶ್ರಣ ಮಾಡಿ.

– ಹೊಳೆಯುವ ಚರ್ಮಕ್ಕಾಗಿ ಹತ್ತಿ ಉಂಡೆಯನ್ನು ಹಾಲಿನ ಮಿಶ್ರಣ ಬೆಚ್ಚಗಿರುವಾಗಲೇ ಅದ್ದಿ, ಮುಖಕ್ಕೆ ಹಚ್ಚಿಕೊಳ್ಳಿ.

– ಇದು ಕನಿಷ್ಠ 10 ನಿಮಿಷಗಳ ಕಾಲ ನಿಮ್ಮ ಮುಖದಲ್ಲಿಯೇ ಇರಲು ಬಿಡಿ. ನಂತರ ಸುಮಾರು 20 ನಿಮಿಷಗಳ ಕಾಲ ಹಾಗೆಯೇ ಬಿಡಿ.

– ಮೊದಲು ಉಗುರುಬೆಚ್ಚಗಿನ ನೀರಿನಿಂದ ಮತ್ತು ನಂತರ ತಣ್ಣೀರಿನಿಂದ ಮುಖ ತೊಳೆಯಿರಿ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ