Mother’s Day 2022: ಭಾರತದಲ್ಲಿ ತಾಯಂದಿರ ದಿನ ಆಚರಣೆ, ಇತಿಹಾಸದ ಬಗ್ಗೆ ಮಾಹಿತಿ
ತಾಯಿ (Mother)ಎಂದ ಕೂಡಲೇ ಮನಸ್ಸಿನಲ್ಲಿ ಮೂಡುವುದು ಪ್ರೀತಿ, ವಾತ್ಸಲ್ಯ, ಕರುಣೆ ಹೀಗೆ ತಾಯಿಯ ಹತ್ತು ಹಲವು ಗುಣಗಳು. ವಿಶ್ವಾದ್ಯಂತ ತಾಯಂದಿರ ದಿನ( Mother's Day)ವನ್ನು ಆಚರಿಸಲಾಗುತ್ತದೆ. ತಾಯಿಗೆ ಪ್ರೀತಿ ತೋರಿಸಲು ದಿನದ ಹಂಗಿಲ್ಲ, ಆದರೂ ಅವಳಿಗಾಗಿ ಒಂದು ದಿನವಿರುವಾಗ ಅಂದು ಆಕೆಯ ದಿನವನ್ನು ಸ್ಪೆಷಲ್ ಆಗಿ ಮಾಡಿ. ಆಕೆಯ ಜತೆ ಹೆಚ್ಚು ಸಮಯ ಕಳೆಯಿರಿ.
ತಾಯಿ (Mother)ಎಂದ ಕೂಡಲೇ ಮನಸ್ಸಿನಲ್ಲಿ ಮೂಡುವುದು ಪ್ರೀತಿ, ವಾತ್ಸಲ್ಯ, ಕರುಣೆ ಹೀಗೆ ತಾಯಿಯ ಹತ್ತು ಹಲವು ಗುಣಗಳು. ವಿಶ್ವಾದ್ಯಂತ ತಾಯಂದಿರ ದಿನ( Mother’s Day)ವನ್ನು ಆಚರಿಸಲಾಗುತ್ತದೆ. ತಾಯಿಗೆ ಪ್ರೀತಿ ತೋರಿಸಲು ದಿನದ ಹಂಗಿಲ್ಲ, ಆದರೂ ಅವಳಿಗಾಗಿ ಒಂದು ದಿನವಿರುವಾಗ ಅಂದು ಆಕೆಯ ದಿನವನ್ನು ಸ್ಪೆಷಲ್ ಆಗಿ ಮಾಡಿ. ಆಕೆಯ ಜತೆ ಹೆಚ್ಚು ಸಮಯ ಕಳೆಯಿರಿ.
2ನೇ ಭಾನುವಾರ ತಾಯಂದಿರ ದಿನ ಆಚರಣೆ ಏಕೆ? ಮೇ 9, 1914ರಂದು ಅಮೆರಿಕದ ರಾಷ್ಟ್ರಪತಿ ಆಗಿದ್ದ ವುಡ್ರೋ ವಿಲ್ಸನ್ ಪ್ರತಿ ವರ್ಷ ಮೇ 2ನೇ ಭಾನುವಾರದಂದು ತಾಯಂದಿರ ದಿನ ಎಂದು ಆಚರಿಸಲಾಗುತ್ತದೆ ಎಂದು ಕಾನೂನನ್ನು ಜಾರಿಗೊಳಿಸಿದರು. ಈ ಕಾನೂನು ಜಾರಿ ಮಾಡಿದ ನಂತರ ಅಮೆರಿಕ, ಭಾರತ ಹಾಗೂ ಹಲವು ದೇಶಗಳಲ್ಲಿ ಮೇ ತಿಂಗಳ 2ನೇ ಭಾನುವಾರದಂದು ತಾಯಂದಿರ ದಿನವನ್ನಾಗಿ ಆಚರಿಸಲಾಗುತ್ತದೆ.
ತಾಯಂದಿರ ದಿನ ಶುರುವಾಗಿದ್ದು ಹೇಗೆ? ತಾಯಂದಿರ ದಿನ 1908ರಲ್ಲಿ ಅಮೆರಿಕದಲ್ಲಿ ಶುರುವಾಗಿತ್ತು. ಅಮೆರಿಕದ ಶಾಂತಿ ಕಾರ್ಯಕರ್ತೆ ಆಗಿದ್ದ ಅನಾ ಜಾರ್ವಿಸ್ ತನ್ನ ತಾಯಿಯನ್ನು ತುಂಬಾ ಪ್ರೀತಿಸುತ್ತಿದ್ದರು. ಅನಾ ಜಾರ್ವಿಸ್ ಮದುವೆ ಆಗಿರಲಿಲ್ಲ. 1905ರಲ್ಲಿ ಅನಾ ತಾಯಿ ಮರಣ ಹೊಂದಿದ್ದರು. ತನ್ನ ತಾಯಿಯ ಮೇಲಿದ್ದ ಪ್ರೀತಿಯನ್ನು ವ್ಯಕ್ತಪಡಿಸಲು ಅನಾ ಈ ದಿನ ಆಯ್ಕೆ ಮಾಡಿಕೊಂಡಿದ್ದರು. ಬಳಿಕ ಈ ದಿನವನ್ನು ತಾಯಂದಿರ ದಿನವಾಗಿ ಆಚರಿಸಲು ಶುರು ಮಾಡಿದ್ದರು.
ತಾಯಂದಿರ ದಿನದ ಪ್ರಾಮುಖ್ಯತೆ : ತಾಯಿಯ ಮಹತ್ವವನ್ನು ಜನರಿಗೆ ತಿಳಿಸಲು ಈ ದಿನವನ್ನು ಆಚರಿಸಲಾಗುತ್ತದೆ. ತಾಯಂದಿರ ದಿನದ ಮಹತ್ವವನ್ನು ಅರಿತ ಜನರು, ತಮ್ಮದೇ ಆದ ರೀತಿಯಲ್ಲಿ ತಾಯಂದಿರ ದಿನವನ್ನು ಆಚರಿಸುತ್ತಾರೆ. ವಿಶೇಷವಾಗಿ ಭಾರತದಲ್ಲಿ, ಮಕ್ಕಳು ತಮ್ಮ ತಾಯಿಗೆ ವಿಶೇಷ ಭಾವನೆ ಮೂಡಿಸಲು ಏನಾದರೂ ವಿಶೇಷವಾದ ಯೋಜನೆ ರೂಪಿಸುತ್ತಾರೆ. ತಾಯಿಯನ್ನು ಗೌರವಿಸುವವರು ಆ ದಿನ ವಿಶೇಷ ಊಟ, ಉಡುಗೊರೆ ವ್ಯವಸ್ಥೆ ಮಾಡ್ತಾರೆ. ಮತ್ತೆ ಕೆಲವರಿಗೆ ತಾಯಿ ಮಾಡಿದ ಕೆಲಸ ಮರೆತು ಹೋಗಿರುತ್ತದೆ. ತಾಯಂದಿರ ದಿನಕ್ಕೆ ಶುಭ ಕೋರದೆ,ಉಡುಗೊರೆ ನೀಡದೆ ಆಕೆಯನ್ನು ಹೊರ ಹಾಕಿದ ಉದಾಹರಣೆಗಳು ಸಾಕಷ್ಟಿವೆ.
ತಾಯಂದಿರ ದಿನ ಏಕೆ ಆಚರಿಸುತ್ತಾರೆ? ತಾಯಿಗಾಗಿ ಪ್ರೀತಿ ಹಾಗೂ ಉಡುಗೊರೆ ನೀಡಲು ಯಾವುದೇ ವಿಶೇಷ ದಿನದ ಅಗತ್ಯ ಇಲ್ಲ. ಆದರೂ ಸಹ ತಾಯಂದಿರ ದಿನದಂದು ತಾಯಿಗೆ ಮತ್ತಷ್ಟು ಗೌರವ ನೀಡಲಾಗುತ್ತದೆ. ಈ ದಿನದಂದು ತಾಯಿಗೆ ಸಿಹಿ ಜೊತೆ ಉಡುಗೊರೆ ನೀಡಲಾಗುತ್ತದೆ.
ಲಂಡನ್‍ನಲ್ಲಿ ತಾಯಂದಿರ ದಿನವನ್ನು ಮಾರ್ಚ್ ತಿಂಗಳ ನಾಲ್ಕನೇ ಭಾನುವಾರದಂದು ಆಚರಿಸಲಾಗುತ್ತದೆ. ಗ್ರೀಸ್ ದೇಶದಲ್ಲಿ ಫೆಬ್ರವರಿ 2ರಂದು ಆಚರಿಸಲಾಗುತ್ತದೆ. ಭಾರತ ಸೇರಿ ಹಲವಾರು ದೇಶಗಳಲ್ಲಿ ಪ್ರತಿ ವರ್ಷ ಮೇ ತಿಂಗಳ 2ನೇ ಭಾನುವಾರದಂದು ತಾಯಂದಿರ ದಿನ ಆಚರಿಸಲಾಗುತ್ತದೆ. ಈ ವರ್ಷ ಮೇ 12ರಂದು ತಾಯಂದಿರ ದಿನ ಆಚರಿಸಲಾಗುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ