
ಸಮುದ್ರ ಯಾನವು (Sea way) ಅಂತರಾಷ್ಟ್ರೀಯ (international) ವ್ಯಾಪಾರದಲ್ಲಿ (Trade) ಪ್ರಮುಖ ಪಾತ್ರವನ್ನು ವಹಿಸುತ್ತದೆ. ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಅಗತ್ಯ ಸರಕುಗಳನ್ನು ಆಮದು (Import) ಮಾಡಿಕೊಳ್ಳವುದು ಹಾಗೂ ಸರಕುಗಳನ್ನು (goods) ರಫ್ತು (Export) ಮಾಡಿಕೊಳ್ಳವುದು ಮುಂತಾದ ವಾಣಿಜ್ಯ ಚಟುವಟಿಕೆಗಳಿಗೆ ಹೆಚ್ಚಿನ ರಾಷ್ಟ್ರಗಳು ಸಮುದ್ರ ಯಾನವನ್ನೇ ಅವಲಂಬಿಸಿದೆ. ಹೆಚ್ಚಾಗಿ ಶಿಪ್ಪಿಂಗ್ (Shipping), ಲಾಜಿಸ್ಟಿಕ್ (logistics) ಮೂಲಕ ಸರಕುಗಳನ್ನು ಆಮದು ರಫ್ತು ಮಾಡಲಾಗುತ್ತದೆ. ಇದೊಂದು ಸುರಕ್ಷಿತ, ಪರಿಸರ ಸ್ನೇಹಿ, ಮಿತವ್ಯಯ ಹಾಗೂ ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ. ಇದಲ್ಲದೆ ಸಮುದ್ರಯಾನವು ದೇಶದ ಆರ್ಥಿಕತೆಯಲ್ಲಿ ಬಹು ದೊಡ್ಡ ಪಾತ್ರವನ್ನು ವಹಿಸುತ್ತದೆ. ಅದರಲ್ಲೂ ಭಾರತದ (India) ಕಡಲ ವ್ಯಾಪಾರ ವ್ಯವಹಾರವು ಶ್ರೀಮಂತ ಇತಿಹಾಸವನ್ನು ಹೊಂದಿದೆ. ಹಿಂದಿನಿಂದಲೂ ಇಲ್ಲಿನ ಮಸಾಲೆ ಪದಾರ್ಥಗಳು ಸೇರಿದಂತೆ ಇನ್ನಿತರೆ ವಸ್ತುಗಳನ್ನು ಪೂರ್ವ ಏಷ್ಯಾ ಮತ್ತು ಪಶ್ಚಿಮದ ಅರಬ್ ರಾಷ್ಟ್ರಹಾಗೂ ಯುರೋಪ್ ರಾಷ್ಟ್ರಗಳಿಗೆ ಹಡಗು ಸಂಪರ್ಕಗಳ ಮೂಲವೇ ಸಾಗಿಸಲಾಗುತ್ತಿತ್ತು. ಇಂದು ಭಾರತವು ಬಂದರು ಮತ್ತು ಸಮುದ್ರಯಾನದಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸಿದ್ದು, ದೇಶದ ಆರ್ಥಿಕತೆಗೆ (economy) ಈ ನೌಕಾಯಾನದ ಕೊಡುಗೆ ಹಾಗೂ ಈ ಕಡಲ ವ್ಯಾಪಾರದ ಮಹತ್ವವನ್ನು ಜನರಿಗೆ ತಿಳಿಸುವ ಸಲುವಾಗಿ ಪ್ರತಿವರ್ಷ ಏಪ್ರಿಲ್ 04 ರಂದು ರಾಷ್ಟ್ರೀಯ ಕಡಲ ದಿನವನ್ನು (National Maritime Day) ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯಿರಿ.
ಭಾರತದಲ್ಲಿ ಏಪ್ರಿಲ್ 05 ರಂದು ರಾಷ್ಟ್ರೀಯ ಕಡಲ ದಿನವನ್ನು ಆಚರಿಸಲಾಗುತ್ತದೆ. ಮೊದಲ ಅತೀ ದೊಡ್ಡ ಹಡಗು ಕಂಪೆನಿಯಾದ ಸಿಂಧಿಯಾ ಸ್ಟೀಮ್ ನ್ಯಾವಿಗೇಶನ್ ಲಿಮಿಟೆಡ್ ನ ಮೊದಲ ಹಡಗು ಮುಂಬೈನಿಂದ ಲಂಡನ್‌ಗೆ ಪ್ರಯಾಣಿಸಿದ ದಿನದ ನೆನಪಿಗಾಗಿ ಈ ದಿನವನ್ನು ಆಚರಿಸಲಾಗುತ್ತದೆ. 1964 ರಂದು ಮೊದಲ ಬಾರಿಗೆ ಈ ದಿನವನ್ನು ಆಚರಿಸಲಾಯಿತು ಅಂದಿನಿಂದ ಪ್ರತಿವರ್ಷ ರಾಷ್ಟ್ರವ್ಯಾಪಿಯಾಗಿ ಏಪ್ರಿಲ್ 05 ರಂದು ಈ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.
ತಿಂಗಳುಗಟ್ಟಲೆ ಸಮುದ್ರದಲ್ಲಿ ಪ್ರಯಾಣಿಸುತ್ತಾ ಸರಕುಗಳ ಆಮದು ರಫ್ತು ಮಾಡುತ್ತಾ ಭಾರತದ ಜಾಗತಿಕ ವ್ಯಾಪಾರ ಮತ್ತು ವಾಣಿಜ್ಯಕ್ಕೆ ಮಹತ್ವದ ಕೊಡುಗೆಗಳನ್ನು ನೀಡುವ ಧೈರ್ಯಶಾಲಿ ವ್ಯಕ್ತಿಗಳನ್ನು ಗೌರವಿಸಲು ಹಾಗೂ ಕಡಲ ವ್ಯಾಪಾರದ ಮಹತ್ವವನ್ನು, ಭಾರತದ ಆರ್ಥಿಕ ಅಭಿವೃದ್ಧಿಗೆ ಕಡಲ ವಲಯದ ವ್ಯಾಪಾರದ ಕೊಡುಗೆಯ ಬಗ್ಗೆ ತಿಳಿಸಲು ಈ ದಿನವನ್ನು ಆಚರಿಸಲಾಗುತ್ತದೆ. ರಾಷ್ಟ್ರೀಯ ಕಡಲ ದಿನದಂದು ಭಾರತದ ಅನೇಕ ಸ್ಥಳಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಇದಲ್ಲದೆ, ಭಾರತೀಯ ಕಡಲ ವಲಯದ ಉದ್ಯಮಕ್ಕೆ ಅತ್ಯುತ್ತಮ ಕೊಡುಗೆ ನೀಡಿದ ಉದ್ಯಮ ನಾಯಕರು ಹಾಗೂ ನಾವಿಕರಿಗೆ ‘ವರುಣ್’ ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ. ಅಷ್ಟೇ ಅಲ್ಲದೆ ರಾಷ್ಟ್ರೀಯ ಕಡಲ ದಿನವು ಭಾರತದ ಕಡಲ ಉದ್ಯಮ, ವ್ಯಾಪಾರ, ಭದ್ರತೆ ಮತ್ತು ಪರಿಸರ ಸಂರಕ್ಷಣೆಯ ಮಹತ್ವವನ್ನು ಎತ್ತಿ ತೋರಿಸುತ್ತದೆ.
ಇದನ್ನೂ ಓದಿ: ಈ ತಿಂಗಳಿನಲ್ಲಿ ಯಾವುದೇ ಕಾರಣಕ್ಕೂ ಮದುವೆಯಾಗಬೇಡಿ, ಹಿಂದೂ ಶಾಸ್ತ್ರ ಹೇಳೋದೇನು?
• ಸಿಂಧಿಯಾ ಸ್ಟೀಮ್ ನ್ಯಾವಿಗೇಶನ್ ಲಿಮಿಟೆಡ್ ಭಾರತೀಯ ಒಡೆತನದ ಮೊದಲ ಹಡಗು ಆಗಿದ್ದು, ಇದು ಏಪ್ರಿಲ್ 5, 1919 ರಂದು ಮುಂಬೈನಿಂದ ಲಂಡನ್‌ಗೆ ಪ್ರಯಾಣ ಬೆಳೆಸಿತು.
• ಭಾರತವು 7,500 ಕಿ.ಮೀ ಉದ್ದದ ಕರಾವಳಿಯನ್ನು ಮತ್ತು 12 ಪ್ರಮುಖ ಬಂದರುಗಳು ಸೇರಿದಂತೆ 200 ಕ್ಕೂ ಹೆಚ್ಚು ಬಂದರುಗಳನ್ನು ಹೊಂದಿದೆ.
• ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ (SCI) ದೇಶದ ಪ್ರಮುಖ ಹಡಗು ಕಂಪನಿಯಾಗಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ