
ಗೂಗಲ್ (Google) ಒಂದು ಜನಪ್ರಿಯ ಸರ್ಚ್ ಎಂಜಿನ್ ಆಗಿದ್ದು, ಇದು ನಮಗೆ ಬೇಕಾದ ಪ್ರತಿಯೊಂದು ಮಾಹಿತಿಯನ್ನು ಕ್ಷಣ ಮಾತ್ರದಲ್ಲಿ ಒದಗಿಸಿ ಕೊಡುತ್ತದೆ. ಸಣ್ಣ ವಿಷಯಗಳಿಂದ ಹಿಡಿದು ಆಳವಾದ ಸಂಶೋಧನೆಯವರೆಗೆ ಪ್ರತಿಯೊಂದು ಮಾಹಿತಿಯನ್ನು ಗೂಗಲ್ ಒದಗಿಸಿಕೊಡುತ್ತಾರೆ. ಸಾಮಾನ್ಯವಾಗಿ ಎಲ್ಲರೂ ಗೂಗಲ್‌ನಲ್ಲಿ ಬೆಸ್ಟ್ ರೆಸ್ಟೋರೆಂಟ್, ರೆಸಿಪಿ, ಕಾನೂನು ಮಾಹಿತಿ ಸೇರಿದಂತೆ ಒಂದಷ್ಟು ವಿಷಯಗಳ ಬಗ್ಗೆ ಹುಡುಕಾಟ ನಡೆಸುತ್ತಾರೆ. ಆದರೆ ತಪ್ಪಿಯೂ ಗೂಗಲ್‌ನಲ್ಲಿ ಈ ಕೆಲವೊಂದು ವಿಷಯಗಳನ್ನು ಹುಡುಕಲೇಬಾರದಂತೆ. ಬೆರಳ ತುದಿಯಲ್ಲಿಯೇ ಮಾಹಿತಿ ಲಭ್ಯವಿದ್ದರೂ, ಈ ಒಂದಷ್ಟು ಮಾಹಿತಿಗಳ ಬಗ್ಗೆ ಗೂಗಲ್‌ನಲ್ಲಿ ಸರ್ಚ್ ಮಾಡಬಾರದು. ಇದರಿಂದ ನಾವು ಅಪಾಯಕ್ಕೆ ಸಿಲುಕಿಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಇಂಟರ್ನೆಟ್‌ನಲ್ಲಿ ಸುರಕ್ಷಿತವಾಗಿರಲು, ನೀವು ಈ ಕೆಲವು ಮಾಹಿತಿಗಳನ್ನು ಗೂಗಲ್‌ನಲ್ಲಿ ಸರ್ಚ್ ಮಾಡದಿರಿ.
ಕಾನೂನುಬಾಹಿರ ಮತ್ತು ಹಿಂಸಾತ್ಮಕ ಮಾಹಿತಿ: ಬಾಂಬ್‌ಗಳು, ಸ್ಫೋಟಕಗಳು, ಶಸ್ತ್ರಾಸ್ತ್ರಗಳ ತಯಾರಿಕಾ ವಿಧಾನಗಳು ಅಥವಾ ಅಕ್ರಮ ಔಷಧಿ ತಯಾರಿಕೆ ಬಗ್ಗೆ ಎಂದಿಗೂ ಹುಡುಕಬೇಡಿ. ಅಂತಹ ಹುಡುಕಾಟಗಳು ಭದ್ರತಾ ಸಂಸ್ಥೆಗಳ ಗಮನಕ್ಕೆ ಬರಬಹುದು ಮತ್ತು ಇದು ನಿಮ್ಮನ್ನು ಕಾನೂನು ತನಿಖೆಗೆ ಒಳಪಡಿಸಬಹುದು.
ಮಕ್ಕಳ ಶೋಷಣೆ ಅಥವಾ ದೌರ್ಜನ್ಯದ ವಿಷಯ: ಮಕ್ಕಳಿಗೆ ಸಂಬಂಧಿಸಿದ ಯಾವುದೇ ರೀತಿಯ ಆಕ್ಷೇಪಾರ್ಹ ಅಥವಾ ಅನೈತಿಕ ವಿಷಯಗಳನ್ನು ಹುಡುಕುವುದು ಬಹಳ ಗಂಭೀರ ಅಪರಾಧವಾಗಿದ್ದು, ಇದಕ್ಕಾಗಿ ಜೈಲು ಶಿಕ್ಷೆಯನ್ನು ಸಹ ವಿಧಿಸಬಹುದು. ಇದಲ್ಲದೆ ಗರ್ಭಪಾತದ ಬಗ್ಗೆಯೂ ಹುಡುಕಬಾರದು.
ಹ್ಯಾಕಿಂಗ್, ವಂಚನೆ ಅಥವಾ ಸೈಬರ್ ಅಪರಾಧ: ಫೋನ್‌ಗಳು, ವೈ-ಫೈ ಅಥವಾ ಬ್ಯಾಂಕ್ ಖಾತೆಗಳನ್ನು ಹ್ಯಾಕ್ ಮಾಡುವುದು ಹೇಗೆ, UPI ವಂಚನೆಗಳು, OTP ವಂಚನೆಗಳು, ಯಾರದ್ದೋ ಅಥವಾ ಯಾವುದೇ ಸಾಧನದ ಪಾಸ್‌ವರ್ಡ್‌ಗಳನ್ನು ಭೇದಿಸುವುದು ಹೇಗೆ ಎಂಬ ಈ ರೀತಿಯ ಹುಡುಕಾಟಗಳಿಂದ ದೂರವಿರಿ. ಅವು ನಿಮಗೆ ಸಾಮಾನ್ಯವಾಗಿ ಕಂಡರೂ ಭಾರತೀಯ ಸೈಬರ್ ತಂಡಕ್ಕೆ ಅವು ಕ್ರಿಮಿನಲ್ ಉದ್ದೇಶದಂತೆ ಕಾಣಿಸಬಹುದು. ಇದು ನಿಮ್ಮನ್ನು ಕಾನೂನು ತೊಂದರೆಗೆ ಸಿಲುಕಿಸಬಹುದು.
ಅಪ್ಲಿಕೇಶನ್‌ಗಳು ಅಥವಾ ಸಾಫ್ಟ್‌ವೇರ್: ನೀವು ಯಾವುದೇ ಮೊಬೈಲ್ ಅಪ್ಲಿಕೇಶನ್‌ಗಳು ಅಥವಾ ಸಾಫ್ಟ್‌ವೇರ್‌ಗಳನ್ನು ಗೂಗಲ್‌ನಲ್ಲಿ ಹುಡುಕಬಾರದು ಏಕೆಂದರೆ ಸೈಬರ್ ಅಪರಾಧಿಗಳು ಇದೇ ರೀತಿಯ ಅಪ್ಲಿಕೇಶನ್‌ಗಳು ಮತ್ತು ಸಾಫ್ಟ್‌ವೇರ್‌ಗಳನ್ನು ಗೂಗಲ್ ಹುಡುಕಾಟದಲ್ಲಿ ಹಾಕುತ್ತಾರೆ ಮತ್ತು ನೀವು ಅವುಗಳನ್ನು ಡೌನ್‌ಲೋಡ್ ಮಾಡಿದ ತಕ್ಷಣ, ನಿಮ್ಮ ಫೋನ್ ಮತ್ತು ಕಂಪ್ಯೂಟರ್‌ನಿಂದ ಪ್ರಮುಖ ಮಾಹಿತಿಯನ್ನು ಕದಿಯುವ ಸಾಧ್ಯತೆ ಇರುತ್ತದೆ.
ಇದನ್ನೂ ಓದಿ: ರೆಸ್ಟೋರೆಂಟ್‌ಗಳಲ್ಲಿ ಫುಡ್ ಆರ್ಡರ್ ಮಾಡುವ ಮುನ್ನ ಒಂದು ಗ್ಲಾಸ್ ನೀರು ನೀಡುವುದೇಕೆ?
ಹೂಡಿಕೆ ಯೋಜನೆಗಳು: ನಿಮ್ಮ ಹಣವನ್ನು ತ್ವರಿತವಾಗಿ ದ್ವಿಗುಣಗೊಳಿಸುವ ಅಥವಾ ಹೆಚ್ಚಿನ ಆದಾಯವನ್ನು ಖಾತರಿಪಡಿಸುವ ಇತ್ಯಾದಿ ಭರವಸೆಗಳನ್ನು ನೀಡುವ ಹೂಡಿಕೆ ಯೋಜನೆಗಳನ್ನು ಹುಡುಕುವುದನ್ನು ತಪ್ಪಿಸಿ. ಏಕೆಂದರೆ ಇವುಗಳಲ್ಲಿ ಕೆಲವೊಂದು ವೆಬ್‌ಸೈಟ್‌ಗಳು ಕ್ರಿಪ್ಟೋ ವಂಚನೆಗಳಾಗಿರಬಹುದು, ಇಂತಹ ವೆಬ್‌ಸೈಟ್‌ಗಳು ನಿಮ್ಮ ಹಣವನ್ನೆಲ್ಲಾ ದೋಚಬಹುದು. ಆದ್ದರಿಂದ ಯಾವಾಗಲೂ ಪ್ರತಿಷ್ಠಿತ ಸಂಸ್ಥೆಗಳಿಂದ ಹೂಡಿಕೆಗೆ ಸಂಬಂಧಿಸಿದ ಸಲಹೆಯನ್ನು ಕೇಳಿ.
ಗ್ರಾಹಕ ಸೇವೆ ಸಂಖ್ಯೆ: ಕಸ್ಟಮರ್ ಕೇರ್ ಸಂಖ್ಯೆಗಳನ್ನು ಗೂಗಲ್‌ನಲ್ಲಿ ಹುಡುಕಬಾರದು. ಇಲ್ಲಿ, ಸೈಬರ್ ಅಪರಾಧಿಗಳು ನಿಮಗೆ ತಪ್ಪು ಕಸ್ಟಮರ್ ಕೇರ್ ಸಂಖ್ಯೆಯನ್ನು ನೀಡುವ ಮೂಲಕ ನಿಮ್ಮ ಪ್ರಮುಖ ಮಾಹಿತಿಯನ್ನು ಕದಿಯಬಹುದು. ನಂತರ, ಈ ಮಾಹಿತಿಯ ಸಹಾಯದಿಂದ, ಅವರು ನಿಮ್ಮ ಹಣವನ್ನು ದೋಚಬಹುದು. ಹಾಗಾಗಿ ಗ್ರಾಹಕ ಸೇವಾ ಸಂಖ್ಯೆಯನ್ನು ನೇರವಾಗಿ ಗೂಗಲ್‌ನಲ್ಲಿ ಹುಡುಕುವ ಬದಲು ಆಯಾ ಅಧಿಕೃತ ವೆಬ್‌ಸೈಟ್‌ನಿಂದ ಪಡೆಯಿರಿ.
ರೋಗ ನಿರ್ಣಯ ವಿಷಯಗಳು: ನಿಮಗೆ ಆರೋಗ್ಯ ಸಮಸ್ಯೆ ಇದ್ದರೆ, ಅದಕ್ಕೆ ಯಾವ ಔಷಧಿ ಸೂಕ್ತ ಎಂಬ ವಿಷಯಗಳನ್ನು ಗೂಗಲ್‌ನಲ್ಲಿ ಹುಡುಕಬಾರದು. ಇದು ನಿಮ್ಮ ಪ್ರಾಣಕ್ಕೆ ಅಪಾಯ ತಂದೊಡ್ಡಬಹುದು. ಆದ್ದರಿಂದ ಔಷಧಿಗಳು ಮತ್ತು ಯಾವುದೇ ವೈದ್ಯಕೀಯ ಸಮಸ್ಯೆಗೆ ಅರ್ಹ ವೈದ್ಯರನ್ನು ಸಂಪರ್ಕಿಸುವುದು ಕಡ್ಡಾಯವಾಗಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ