ಮನೆಯಲ್ಲಿ ಈರುಳ್ಳಿ ದೀಪವನ್ನು ಬೆಳಗಿಸಿ, ಸೊಳ್ಳೆಗಳ ಕಾಟದಿಂದ ಮುಕ್ತಿ ಪಡೆಯಿರಿ
ಮಳೆಗಾಲದಂತೆ ಚಳಿಗಾಲದಲ್ಲಿಯೂ ಸೊಳ್ಳೆಗಳ ಕಾಟ ಹೆಚ್ಚಿರುತ್ತದೆ. ಈ ಸೊಳ್ಳೆಗಳು ನಿದ್ರೆಗೆ ಭಂಗ ತರುವುದಲ್ಲದೆ, ಡೆಂಗ್ಯೂ, ಮಲೇರಿಯಾ ಮತ್ತು ಚಿಕೂನ್‌ಗುನ್ಯಾದಂತಹ ಗಂಭೀರ ಕಾಯಿಲೆಗಳಿಗೂ ಕಾರಣವಾಗುತ್ತವೆ. ಆದ್ದರಿಂದ ಸೊಳ್ಳೆಗಳನ್ನು ಪರಿಣಾಮಕಾರಿಯಾಗಿ ಓಡಿಸಲು ಸ್ಪ್ರೇ ಕಾಯಿಲ್‌ನಂತಹ ರಾಸಾಯನಿಕಯುಕ್ತ ಉತ್ಪನ್ನಗಳನ್ನು ಬಳಸುವ ಬದಲು ಈರುಳ್ಳಿ ದೀಪವನ್ನು ಬೆಳಗಿಸಿ. ಸೊಳ್ಳೆಗಳನ್ನು ಓಡಿಸಲು ಅಗ್ಗದ ಮತ್ತು ಪರಿಣಾಮಕಾರಿ ಮನೆಮದ್ದಾಗಿರುವ ಈರುಳ್ಳಿ ದೀಪವನ್ನು ತಯಾರಿಸುವುದು ಹೇಗೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಸೊಳ್ಳೆಗಳ (mosquitoes) ಕಾಟ ಪ್ರತಿ ಋತುವಿನಲ್ಲೂ ಸಹ ಇದ್ದಿದ್ದೆ. ಇವುಗಳು ನಿದ್ರೆಗೆ ಭಂಗ ತರುವುದಲ್ಲದೆ, ಡೆಂಗ್ಯೂ, ಮಲೇರಿಯಾ ಮತ್ತು ಚಿಕೂನ್‌ಗುನ್ಯಾದಂತಹ ಗಂಭೀರ ಕಾಯಿಲೆಗಳಿಗೂ ಕಾರಣವಾಗುತ್ತವೆ. ಆದ್ದರಿಂದ ಇವುಗಳನ್ನು ಓಡಿಸಲು ಜನ ಹಲವಾರು ಸರ್ಕಸ್‌ಗಳನ್ನು ಮಾಡುತ್ತಿರುತ್ತಾರೆ. ಹೆಚ್ಚಿನವರು ಮಾರುಕಟ್ಟೆಯಲ್ಲಿ ಸಿಗುವಂತಹ ಸೊಳ್ಳೆ ಕಾಯಿಲ್ ಮತ್ತು ಸ್ಪ್ರೇಗಳನ್ನೇ ಹೆಚ್ಚಾಗಿ ಬಳಸುತ್ತಾರೆ. ಆದರೆ ಈ ರಾಸಾಯನಿಕಯುಕ್ತ ಉತ್ಪನ್ನಗಳು ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುವ ಸಾಧ್ಯತೆ ಇರುತ್ತದೆ. ಆದ್ದರಿಂದ ಇವುಗಳ ಬದಲಿಗೆ ಸೊಳ್ಳೆಗಳನ್ನು ಓಡಿಸಲು ಈರುಳ್ಳಿ ದೀಪವನ್ನು ಬೆಳಗಿಸಿ. ಈರುಳ್ಳಿಯು ಸೊಳ್ಳೆಗಳನ್ನು ಪರಿಣಾಮಕಾರಿಯಾಗಿ ಹಿಮ್ಮೆಟ್ಟಿಸುವ ಕಟುವಾದ ಸಲ್ಫರ್ ಸಂಯುಕ್ತವನ್ನು ಹೊಂದಿದೆ. ಈ ಈರುಳ್ಳಿ ದೀಪವನ್ನು ತಯಾರಿಸುವುದು ಹೇಗೆ ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿಯಿರಿ.
ಸೊಳ್ಳೆಗಳನ್ನು ಓಡಿಸಲು ಪರಿಣಾಮಕಾರಿ ಈ ಈರುಳ್ಳಿ ದೀಪ:
ಸೊಳ್ಳೆಗಳ ಕಾಟದಿಂದ ತೊಂದರೆಗೊಳಗಾಗಿದ್ದರೆ, ಸೊಳ್ಳೆಗಳು ನಿದ್ರೆಗೆ ಭಂಗ ಮಾಡಿದರೆ ನೀವು ಈರುಳ್ಳಿ ದೀಪವನ್ನು ಮನೆಯಲ್ಲಿ ಬೆಳಗಿಸಿ. ಈರುಳ್ಳಿಯಿಂದ ಮಾಡಿದ ಈ ದೀಪವು ಕೆಲವೇ ನಿಮಿಷಗಳಲ್ಲಿ ಸೊಳ್ಳೆಗಳನ್ನು ಓಡಿಸುವುದು ಮಾತ್ರವಲ್ಲದೆ ಇದು ಸುರಕ್ಷಿತ ಪರಿಹಾರವಾಗಿದೆ. ಅಲ್ಲದೆ ಈ ದೀಪ ಕೀಟಗಳನ್ನು ಓಡಿಸಲು ಪರಿಣಾಮಕಾರಿ. ಈ ದೀಪವನ್ನು ತಯಾರಿಸಲು ಬೇಕಾಗಿರುವ ಸಾಮಾಗ್ರಿಗಳೆಂದರೆ, ಒಂದು ಈರುಳ್ಳಿ, ಎರಡು ಅಥವಾ ಮೂರು ಕರ್ಪೂರ, ಸಾಸಿವೆ ಎಣ್ಣೆ, ಸ್ವಲ್ಪ ಲವಂಗ ಮತ್ತು ಒಂದು ಬತ್ತಿ.
ಈ ಈರುಳ್ಳಿ ದೀಪವನ್ನು ತಯಾರಿಸುವ ವಿಧಾನವನ್ನು ಕವಿತಾ (kavitasplate) ಎಂಬವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ವಿಡಿಯೋ ಇಲ್ಲಿದೆ ನೋಡಿ:
View this post on Instagram
ಇದನ್ನೂ ಓದಿ: ಸೊಳ್ಳೆ, ಕೀಟಗಳನ್ನು ಓಡಿಸಲು ಪರಿಣಾಮಕಾರಿ ಈ ಬೆಳ್ಳುಳ್ಳಿ ಸ್ಪ್ರೇ
ಈರುಳ್ಳಿ ದೀಪ ತಯಾರಿಸುವುದು ಹೇಗೆ?
ಮೊದಲು, ಚಾಕುವಿನಿಂದ ಈರುಳ್ಳಿಯ ಮೇಲ್ಭಾಗವನ್ನು ಕತ್ತರಿಸಿ. ಒಳಗಿನ ಒಂದಷ್ಟು ಪದರವನ್ನು ತೆಗೆದುಹಾಕಿ. ಈಗ ಅದಕ್ಕೆ ಸಾಸಿವೆ ಎಣ್ಣೆಯನ್ನು ಹಾಕಿ, ಬತ್ತಿ ಇಟ್ಟು, ಅದಕ್ಕೆ ಕರ್ಪೂರ ಮತ್ತು ಲವಂಗವನ್ನು ಸೇರಿಸಿ, ದೀಪವನ್ನು ಬೆಳಗಿ, ಇದನ್ನು ಸೊಳ್ಳೆಗಳು ಓಡಾಡುವ ಜಾಗದಲ್ಲಿ ಇರಿಸಿ. ಈ ಈರುಳ್ಳಿ ದೀಪದ ಕಟುವಾದ ವಾಸನೆಗೆ ಸೊಳ್ಳೆಗಳು ಕ್ಷಣ ಮಾತ್ರದಲ್ಲಿ ಓಡಿ ಹೋಗುತ್ತವೆ. ಈ ಸರಳ ಪರಿಹಾರವನ್ನು ಮನೆಯಲ್ಲಿ ನೀವು ಸಹ ಟ್ರೈ ಮಾಡಿ ನೋಡಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:09 pm, Sat, 15 November 25




