
ನಮ್ಮ ಬುದ್ಧಿವಂತಿಕೆಗೆ ಸವಾಲೊಡ್ಡುವ ಆಪ್ಟಿಕಲ್ ಇಲ್ಯೂಷನ್ (Optical Illusion) ಚಿತ್ರಗಳ ಸವಾಲನ್ನು ಪೂರೈಸಲು ಒಂದು ರೀತಿಯ ಮಜಾ ಇರುತ್ತದೆ. ಕೇವಲ ತೀಕ್ಷ್ಣ ಬುದ್ಧಿ ಇರುವವರು ಇಂತಹ ಸವಾಲುಗಳನ್ನು ಸರಳವಾಗಿ ಭೇದಿಸುತ್ತಾರೆ. ಈ ಒಗಟಿನ ಆಟಗಳು ಕಣ್ಣಿಗೆ ಭ್ರಮೆಯನ್ನು ಉಂಟು ಮಾಡುವುದರ ಜೊತೆಗೆ ಮೆದುಳಿಗೆ ವ್ಯಾಯಾಮವನ್ನು ನೀಡುತ್ತವೆ. ಇಂತಹ ಸಾಕಷ್ಟು ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಇಲ್ಲೊಂದು ಅಂತಹದ್ದೇ ಚಿತ್ರ ಹರಿದಾಡುತ್ತಿದ್ದು, ಈ ಚಿತ್ರದಲ್ಲಿ ಪುಟ್ಟ ಕಲ್ಲುಗಳ ನಡುವೆ ಅಡಗಿ ಕುಳಿತಿರುವ ಕಪ್ಪೆಯನ್ನು ಹುಡುಕಲು ಸವಾಲನ್ನು ನೀಡಲಾಗಿದೆ. ನೀವು ಈ ಸವಾಲನ್ನು ಸ್ವೀಕರಿಸಲು ನೀವು ಸಿದ್ಧರಿದ್ದೀರಲ್ವಾ.
ಈ ನಿರ್ದಿಷ್ಟ ಆಪ್ಟಿಕಲ್ ಇಲ್ಯೂಷನ್ ಚಿತ್ರವನ್ನು ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ರೆಡ್ಡಿಟ್‌ನಲ್ಲಿ ಶೇರ್ ಮಾಡಲಾಗಿದೆ. ಈ ಚಿತ್ರದಲ್ಲಿ ಒಂದಷ್ಟು ಕಲ್ಲುಗಳಿವೆ. ಆ ಕಲ್ಲುಗಳು ನಡುವೆ ಯಾರಿಗೂ ಕಾಣದಂತೆ ಕಪ್ಪೆಯೊಂದು ಅಡಗಿ ಕುಳಿತಿದೆ. ಬರೀ 7 ಸೆಕೆಂಡುಗಳಲ್ಲಿ ಆ ಕಪ್ಪೆಯನ್ನು ಹುಡುಕಲು ನಿಮಗೆ ಸವಾಲನ್ನು ನೀಡಲಾಗಿದೆ.
ಈ ರೀತಿಯ ಒಗಟಿನ ಆಟಗಳು ಕೇವಲ ಮೋಜಿನ ಸಂಗತಿಯಲ್ಲ. ಇದು ನಮ್ಮ ಬುದ್ಧಿವಂತಿಕೆ ಮತ್ತು ದೃಷ್ಟಿ ಕೌಶಲ್ಯ ಹೇಗಿದೆ ಎಂಬುದನ್ನು ತಿಳಿಯುವ ಒಂದು ಬಗೆಯ ಪರೀಕ್ಷೆಯಾಗಿದೆ. ನೀವು ಈ ಮೇಲಿನ ಚಿತ್ರದಲ್ಲಿ ನೋಡಿದಾಗ ಮೇಲ್ನೋಟಕ್ಕೆ ಬರಿ ಕಲ್ಲುಗಳೇ ಕಾಣಿಸುತ್ತವೆ. ಆದರೆ ಸೂಕ್ಷ್ಮವಾಗಿ ಗಮನಿಸಿದಾಗ ಅಲ್ಲೊಂದು ನಿಮಗೆ ಕಪ್ಪೆ ಕಾಣಿಸುತ್ತದೆ. ಹದ್ದಿನಂತೆ ಸೂಕ್ಷ್ಮ ಕಣ್ಣು ನಿಮ್ಮದಾಗಿದ್ದರೆ ಬರೀ 7 ಸೆಕೆಂಡುಗಳ ಒಳಗಾಗಿ ಈ ಕಪ್ಪೆಯನ್ನು ನೀವು ಕಂಡುಹಿಡಿಯಬೇಕು.
ಇದನ್ನೂ ಓದಿ: ಈ ಚಿತ್ರದಲ್ಲಿ ಅಡಗಿರುವ ಮೊಲವನ್ನು ನೀವು 10 ಸೆಕೆಂಡುಗಳಲ್ಲಿ ಹುಡುಕಬಲ್ಲಿರಾ?
ಎಷ್ಟೇ ಹುಡುಕಿದರೂ ಕಲ್ಲುಗಳ ನಡುವೆ ಅಡಗಿರುವ ಕಪ್ಪೆ ಕಾಣಿಸುತ್ತಿಲ್ಲ ಎಂದು ಚಿಂತಿತರಾಗಿದ್ದೀರಾ? ಈ ಚಿತ್ರದಲ್ಲಿ ನಿಮಗೆ ಮೇಲ್ನೋಟಕ್ಕೆ ನೆಲದ ಮೇಲೆ ಬರಿ ಕಲ್ಲು ಮಾತ್ರ ಕಾಣಿಸಬಹುದು. ಆದರೆ ನೀವು ಕಣ್ಣು ಹಾಯಿಸಿ ಸೂಕ್ಷ್ಮವಾಗಿ ಗಮನಿಸಿ ನೋಡಿದಾಗ ಅಲ್ಲೇ ಎಡ ಭಾಗದಲ್ಲಿ ಪೈಪ್ ಪಕ್ಕ ಕಪ್ಪೆ ಕುಳಿತಿರುವುದನ್ನು ಕಾಣಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:35 pm, Sat, 26 July 25