AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Organic Dhoop: ದೇವರ ಪೂಜೆಗೆ ಬಳಸಿದ ಹೂವನ್ನು ಎಸೆಯಬೇಡಿ, ಅದರಿಂದ ತಯಾರಿಸಿ ಕೆಮಿಕಲ್‌ ಫ್ರೀ ಧೂಪ

ಸಾಮಾನ್ಯವಾಗಿ ದೇವರಿಗಿಟ್ಟ ಹಾಗೂ ಪೂಜೆಗೆ ಬಳಸಿದ ಹೂವನ್ನು ಮರುದಿನ ಎಸೆದುಬಿಡುತ್ತೇವೆ. ಅದರಲ್ಲೂ ವರಮಹಾಲಕ್ಷ್ಮಿ ಇತ್ಯಾದಿ ಹಬ್ಬದ ಸಮಯದಲ್ಲಿ ಪೂಜೆಗೆ ಜಾಸ್ತಿಯೇ ಹೂವನ್ನು ಬಳಸುತ್ತೇವೆ. ದೇವರ ಪೂಜೆಗೆ ಬಳಸಿದ ಈ ಹೂವುಗಳನ್ನು ಎಸೆಯುವ ಬದಲು ಅದರಿಂದ ರಾಸಾಯನಿಕ ಮುಕ್ತ ಧೂಪವನ್ನು ತಯಾರಿಸಬಹುದು. ಮನೆಯಲ್ಲಿಯೇ ಧೂಪವನ್ನು ತಯಾರಿಸುವುದು ಹೇಗೆ ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ.

Organic Dhoop: ದೇವರ ಪೂಜೆಗೆ ಬಳಸಿದ ಹೂವನ್ನು ಎಸೆಯಬೇಡಿ, ಅದರಿಂದ ತಯಾರಿಸಿ ಕೆಮಿಕಲ್‌ ಫ್ರೀ ಧೂಪ
ಹೋಮ್‌ಮೇಡ್‌ ಧೂಪImage Credit source: vecteezy
ಮಾಲಾಶ್ರೀ ಅಂಚನ್​
|

Updated on: Aug 22, 2026 | 6:05 PM

Share

ಮನೆಯಲ್ಲಿ ದೈನಂದಿನ ಪೂಜೆಯ ಸಮಯದಲ್ಲಿ ಹೂವುಗಳನ್ನು (flower)  ದೇವರಿಗೆ ಅರ್ಪಿಸಲಾಗುತ್ತದೆ. ಅದರಲ್ಲೂ ವರಮಹಾಲಕ್ಷ್ಮಿ ಹಬ್ಬ ಸೇರಿದಂತೆ ಪ್ರತಿಯೊಂದು ಹಬ್ಬದಲ್ಲೂ ಚೆಂಡು ಹೂವು, ಸೇವಂತಿಗೆ, ಮಲ್ಲಿಗೆ, ಗುಲಾಬಿ ಹೂವುಗಳನ್ನು ಹೆಚ್ಚಾಗಿ ಬಳಸುತ್ತೇವೆ. ಸಂಪೂರ್ಣ ದೇವರ ಮನೆಯನ್ನು ಬಗೆಬಗೆಯ ಹೂವುಗಳಿಂದ ಅಲಂಕಾರ ಮಾಡುತ್ತೇವೆ. ಪೂಜೆ ಮುಗಿದ ಬಳಿಕ ಮರುದಿನ ದೇವರಿಗೆ ಬಳಸಿದ ಆ ಹೂವುಗಳನ್ನು ಎಸೆದು ಬಿಡುತ್ತೇವೆ. ಹೆಚ್ಚಿನವರು ಈ ಹೂವುಗಳಿಂದ ಯಾವುದೇ ಪ್ರಯೋಜನಗಳಿಲ್ಲ ಎಂದು ಎಸೆದು ಬಿಡುತ್ತಾರೆ. ಆದ್ರೆ ಏನು ಗೊತ್ತಾ, ದೇವರಿಗೆ ಬಳಸಿದ ಹೂವನ್ನು ಸಹ ಮರುಬಳಕೆ ಮಾಡಬಹುದು. ಹೌದು ಈ ಹೂವುಗಳಿಂದ ಸುಲಭವಾಗಿ ಮನೆಯಲ್ಲಿಯೇ ಕೆಮಿಕಲ್‌ ಫ್ರೀ ಧೂಪವನ್ನು ತಯಾರಿಸಬಹುದು. ಅದು ಹೇಗೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ದೇವರಿಗೆ ಬಳಸಿದ ಹೂವುಗಳಿಂದ ಧೂಪ ತಯಾರಿಸುವುದು ಹೇಗೆ?

ಮೊದಲು ಪೂಜಾ ಹೂವುಗಳನ್ನು ಚೆನ್ನಾಗಿ ಒಣಗಿಸಿ:

ಹಬ್ಬ ಅಥವಾ ಪೂಜೆಯ ಸಮಯದಲ್ಲಿ ಬಳಸಿದ ದಾಸವಾಳ, ಸೇವಂತಿಗೆ, ಚೆಂಡೆಹೂವು ಇತ್ಯಾದಿ ಹೂವುಗಳ ದಳವನ್ನು ತೆಗೆದುಕೊಂಡು, ಸ್ವಚ್ಛವಾದ ಬಟ್ಟೆ ಅಥವಾ ಒಂದು ತಟ್ಟೆಯಲ್ಲಿ ಹರಡಿ 2 ರಿಂದ 3 ದಿನಗಳವರೆಗೆ ಉತ್ತಮ ಗಾಳಿ ಮತ್ತು ಸೂರ್ಯನ ಬೆಳಕು ಬೀಳುವ ಸ್ಥಳದಲ್ಲಿ ಇರಿಸಿ.ಚೆನ್ನಾಗಿ ಒಣಗಿಸಿಕೊಳ್ಳಿ. ಹೂವುಗಳು ಸಂಪೂರ್ಣವಾಗಿ ತೇವಮುಕ್ತವಾಗಿರಬೇಕು. ನಿಮ್ಮ ಬಳಿ ಸಾಕಷ್ಟು ಸಮಯವಿಲ್ಲದಿದ್ದರೆ ನೀವು ಹೂವುಗಳ ದಳವನ್ನು ಡ್ರೈ ರೋಸ್ಟ್‌ ಮಾಡಿಕೊಳ್ಳಬಹುದು.

ಒಣಗಿದ ಬಳಿಕ ಹೂವಿನ ದಳವನ್ನು ಪುಡಿ ಮಾಡಿ:

ಹೂವಿನ ದಳಗಳು ಸಂಪೂರ್ಣವಾಗಿ ಒಣಗಿದ ಬಳಿಕ ಅವುಗಳನ್ನು ಮಿಕ್ಸಿಗೆ ಹಾಕಿ ಚೆನ್ನಾಗಿ ಪುಡಿ ಮಾಡಿಕೊಳ್ಳಿ. ಇದಾಗ ಬಳಿಕ ಆ ಹೂವಿನ ಪುಡಿಗೆ ತೆಂಗಿನ ನಾರು, ಹವನ ಸಾಮಾಗ್ರಿ, ಗಗ್ಗುಳ, ಸುಗಂಧಕ್ಕೆ ಶ್ರೀಗಂಧ, ಸಾಂಬ್ರಾಣಿ ಅಥವಾ ಕರ್ಪೂರದಂತಹ ನೈಸರ್ಗಿಕ ಸುಗಂಧ ದ್ರವ್ಯಗಳನ್ನು ಬಳಸಿ ಎಲ್ಲವನ್ನೂ ಚೆನ್ನಾಗಿ ಪುಡಿ ಮಾಡಿಕೊಳ್ಳಿ. ನಂತರ ಪುಡಿಯನ್ನು ಜರಡಿ ಮೂಲಕ ಶೋಧಿಸಿ ಇಟ್ಟುಕೊಳ್ಳಿ. ನೀವು ಬೇಕಿದ್ದರೆ ಈ ಮಿಶ್ರಣಕ್ಕೆ ಪಲಾವ್‌ ಎಲೆ, ದಾಲ್ಚಿನ್ನಿ, ಹಸುವಿನ ಒಣ ಸಗಣಿಯನ್ನು ಸಹ ಸೇರಿಸಬಹುದು. ಇವುಗಳನ್ನು ಸೇರಿಸುವುದರಿಂದ ಸೊಳ್ಳೆ ಕೀಟಗಳು ಮನೆಯೊಳಗೆ ಪ್ರವೇಶಿಸುವುದನ್ನು ತಡೆಯಬಹುದು.

ಇದನ್ನೂ ಓದಿ: ಮನೆಯಲ್ಲಿರುವ ಒಂದು ವಸ್ತುವಿನಿಂದ ಜಿಡ್ಡುಗಟ್ಟಿದ ಗ್ಯಾಸ್‌ ಸ್ಟೌವ್‌ಕ್ಷಣದಲ್ಲೇ ಕ್ಲೀನ್‌ ಮಾಡ್ಬೋದು

ಮಿಶ್ರಣವನ್ನು ಬೆರೆಸಿ ಆಕಾರ ಮಾಡಿ:

ಮೊದಲೇ ತಯಾರಿಸಿಟ್ಟ ಹೂವಿನ ದಳದ ಪುಡಿಯನ್ನು ಒಂದು ಬಟ್ಟಲಿಗೆ ಹಾಕಿ ಅದಕ್ಕೆ ಸ್ವಲ್ಪ ತುಪ್ಪವನ್ನು ಸೇರಿಸಿ ಮೃದುವಾದ ಉಂಡೆಯನ್ನು ತಯಾರಿಸಿಕೊಳ್ಳಿ. ನಂತರ ಒಂದೊಂದೇ ಸಣ್ಣ ಉಂಡೆಗಳನ್ನು ತೆಗೆದುಕೊಂಡು ಕೋನ್‌ ಆಕಾರದಲ್ಲಿ ಧೂಪವನ್ನು ತಯಾರಿಸಿಕೊಳ್ಳಿ.

ಧೂಪವನ್ನು ನೆರಳಿನಲ್ಲಿ ಚೆನ್ನಾಗಿ ಒಣಗಿಸಿ:

ತಯಾರಾದ ಧೂಪಗಳನ್ನು ಸ್ವಚ್ಛವಾದ ತಟ್ಟೆ ಅಥವಾ ಬಟ್ಟೆಯ ಮೇಲೆ ಇರಿಸಿ. ನೆರಳಿರುವ ಹಾಗೂ ಚೆನ್ನಾಗಿ ಗಾಳಿ ಬೀಸುವ ಪ್ರದೇಶದಲ್ಲಿ ಇಟ್ಟು 1 ರಿಂದ 2 ದಿನಗಳವರೆಗೆ ಒಣಗಲು ಬಿಡಿ. ಧೂಪವನ್ನು ನೇರ ಸೂರ್ಯನ ಬೆಳಕಿನಲ್ಲಿ ಒಣಗಿಸಬಾರದು , ಏಕೆಂದರೆ ಇದು ಸುವಾಸನೆಯನ್ನು ಕಡಿಮೆ ಮಾಡುತ್ತದೆ. ಧೂಪ ತುಂಡುಗಳು ಸಂಪೂರ್ಣವಾಗಿ ಒಣಗಿದ ನಂತರ, ಅವುಗಳನ್ನು ಪೂಜೆಯ ಸಮಯದಲ್ಲಿ ಬಳಸಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅವೈಜ್ಞಾನಿಕ ಪಾರ್ಕಿಂಗ್‌ಗೆ 3 ದಿನಗಳಲ್ಲಿ ಮೂರು ಬಲಿ
ಅವೈಜ್ಞಾನಿಕ ಪಾರ್ಕಿಂಗ್‌ಗೆ 3 ದಿನಗಳಲ್ಲಿ ಮೂರು ಬಲಿ
ಸಕ್ಕರೆ ಬೆಲೆ ಏರಿಕೆ ಕಡಿವಾಣಕ್ಕೆ ಸರ್ಕಾರ ಪ್ಲಾನ್; ಸೆ. 1ರಿಂದ ಹೊಸ ನಿಯಮ
ಸಕ್ಕರೆ ಬೆಲೆ ಏರಿಕೆ ಕಡಿವಾಣಕ್ಕೆ ಸರ್ಕಾರ ಪ್ಲಾನ್; ಸೆ. 1ರಿಂದ ಹೊಸ ನಿಯಮ
ಮೈಸೂರಿನಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋ.. ಸ್ಪೆಷಾಲಿಟಿ ಏನ್ಗೊತ್ತಾ?
ಮೈಸೂರಿನಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋ.. ಸ್ಪೆಷಾಲಿಟಿ ಏನ್ಗೊತ್ತಾ?
TV9 ರಿಯಲ್ ಎಸ್ಟೇಟ್ ಎಕ್ಸ್​ಪೋ ಬಗ್ಗೆ ಅರುಣ್ ಯೋಗಿರಾಜ್ ಹೇಳಿದ್ದಿಷ್ಟು!
TV9 ರಿಯಲ್ ಎಸ್ಟೇಟ್ ಎಕ್ಸ್​ಪೋ ಬಗ್ಗೆ ಅರುಣ್ ಯೋಗಿರಾಜ್ ಹೇಳಿದ್ದಿಷ್ಟು!
ಕಲಬೆರಕೆ ತುಪ್ಪದ ದಂಧೆ: ಬಳ್ಳಾರಿಯಿಂದ ಚಿಕ್ಕಮಗಳೂರುವರೆಗೆ ಮಾರಾಟ ಜಾಲ ಪತ್ತೆ
ಕಲಬೆರಕೆ ತುಪ್ಪದ ದಂಧೆ: ಬಳ್ಳಾರಿಯಿಂದ ಚಿಕ್ಕಮಗಳೂರುವರೆಗೆ ಮಾರಾಟ ಜಾಲ ಪತ್ತೆ
TV9 ರಿಯಲ್ ಎಸ್ಟೇಟ್ ಎಕ್ಸ್​ಪೋಗೆ DIG ಬೋರಲಿಂಗಯ್ಯ, ಅರುಣ್ ಯೋಗಿರಾಜ್
TV9 ರಿಯಲ್ ಎಸ್ಟೇಟ್ ಎಕ್ಸ್​ಪೋಗೆ DIG ಬೋರಲಿಂಗಯ್ಯ, ಅರುಣ್ ಯೋಗಿರಾಜ್
ಹುಬ್ಬಳ್ಳಿ ಪುಷ್ಕರಣಿ ವಿವಾದ: ಪ್ರದೀಪ್ ಶೆಟ್ಟರ್ ಅನೇಕ ನಾಯಕರಿಂದ ಪ್ರತಿಭಟನೆ
ಹುಬ್ಬಳ್ಳಿ ಪುಷ್ಕರಣಿ ವಿವಾದ: ಪ್ರದೀಪ್ ಶೆಟ್ಟರ್ ಅನೇಕ ನಾಯಕರಿಂದ ಪ್ರತಿಭಟನೆ
ಬಾಂಗ್ಲಾ ಅಕ್ರಮ ವಲಸಿಗರ ಕಾಟ; ಅರೆಸ್ಟ್ ಆದವ್ರ ಹಿನ್ನೆಲೆ ಏನು?
ಬಾಂಗ್ಲಾ ಅಕ್ರಮ ವಲಸಿಗರ ಕಾಟ; ಅರೆಸ್ಟ್ ಆದವ್ರ ಹಿನ್ನೆಲೆ ಏನು?
ಪೋಷಕರು ಸೇರಿ ಹಲವರೊಂದಿಗೆ ಜೈಲಿನಿಂದಲೇ ಸಂಪರ್ಕ ಹೊಂದಿದ್ದ ಪ್ರಜ್ವಲ್ ರೇವಣ್ಣ
ಪೋಷಕರು ಸೇರಿ ಹಲವರೊಂದಿಗೆ ಜೈಲಿನಿಂದಲೇ ಸಂಪರ್ಕ ಹೊಂದಿದ್ದ ಪ್ರಜ್ವಲ್ ರೇವಣ್ಣ
ಅಂಗಾಂಗ ದಾನ ನೋಂದಣಿಯಲ್ಲಿ ಧಾರವಾಡ ಫಸ್ಟ್!
ಅಂಗಾಂಗ ದಾನ ನೋಂದಣಿಯಲ್ಲಿ ಧಾರವಾಡ ಫಸ್ಟ್!