AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೋಷಕರು ತಮ್ಮ ಮಕ್ಕಳ ಮುಂದೆ ಈ ವಿಷಯಗಳನ್ನು ಎಂದಿಗೂ ಚರ್ಚಿಸಬಾರದು

ಮಕ್ಕಳ ಭಾವನಾತ್ಮಕ ಮತ್ತು ಮಾನಸಿಕ ಬೆಳವಣಿಗೆಯು ಅವರ ಸುತ್ತಲಿನ ಪ್ರಪಂಚದಿಂದ ಹೆಚ್ಚು ಪ್ರಭಾವಿತವಾಗಿರುತ್ತದೆ. ವಿಶೇಷವಾಗಿ ಪೋಷಕರ ಮಾತುಗಳು, ನಡವಳಿಕೆಗಳು ಮಕ್ಕಳ ಮನಸ್ಸಿನ ಮೇಲೆ ಆಳವಾದ ಪರಿಣಾಮ ಬೀರುತ್ತವೆ. ಆದ್ದರಿಂದ ಪೋಷಕರು ಮಕ್ಕಳ ಮುಂದೆ ಯಾವಾಗಲೂ ಸಕಾರಾತ್ಮಕ ವಿಚಾರಗಳ ಬಗ್ಗೆಯೇ ಮಾತನಾಡಬೇಕು. ಜೊತೆಗೆ ಈ ಕೆಲವೊಂದು ವಿಚಾರಗಳ ಬಗ್ಗೆ ತಪ್ಪಿಯೂ ಮಾತನಾಡಬಾರದು. ಇದು ಮಕ್ಕಳ ಮನಸ್ಸಿನ ಮೇಲೆ ಆಳವಾದ ಪರಿಣಾಮ ಬೀರುತ್ತದೆ.

ಪೋಷಕರು ತಮ್ಮ ಮಕ್ಕಳ ಮುಂದೆ ಈ ವಿಷಯಗಳನ್ನು ಎಂದಿಗೂ ಚರ್ಚಿಸಬಾರದು
ಸಾಂದರ್ಭಿಕ ಚಿತ್ರ Image Credit source: Getty Images
ಮಾಲಾಶ್ರೀ ಅಂಚನ್​
|

Updated on: May 13, 2026 | 6:05 PM

Share

ಮಕ್ಕಳ ಪಾಲನೆ ಎಂದರೆ ಮಕ್ಕಳನ್ನು (children) ಬೆಳೆಸುವ ಪ್ರಕ್ರಿಯೆ ಮಾತ್ರವಲ್ಲ, ಅದು ಮಕ್ಕಳ ವ್ಯಕ್ತಿತ್ವವನ್ನು ರೂಪಿಸುವ ಕಲೆಯೂ ಹೌದು. ಚಿಕ್ಕ ಮಕ್ಕಳ ಮನಸ್ಸು ಬಹಳ ಮೃದು ಹಾಗಾಗಿ  ಮಕ್ಕಳು ತಮ್ಮ ಸುತ್ತಮುತ್ತಲಿನ ಹಾಗುಹೋಗುಗಳ ಮೂಲಕ ಮತ್ತು ವಿಶೇಷವಾಗಿ ಪೋಷಕರ ನಡುವಿನ ಸಂವಹನ, ನಡವಳಿಕೆಯ ಮೂಲಕ ಜಗತ್ತನ್ನು ಅರ್ಥೈಸಿಕೊಳ್ಳುತ್ತಾರೆ. ಇದು ಅವರ ಮಾನಸಿಕ ಮತ್ತು ಭಾವನಾತ್ಮಕ ಬೆಳವಣಿಗೆಯ ಮೇಲೆ ನೇರ ಪರಿಣಾಮ ಬೀರುತ್ತವೆ. ಹಾಗಾಗಿ ಪೋಷಕರು ಯಾವಾಗಲೂ ಮಕ್ಕಳ ಮುಂದೆ ಸಕಾರಾತ್ಮ ರೀತಿಯಲ್ಲಿ ವರ್ತಿಸಬೇಕು. ಪೋಷಕರು ತಮ್ಮ ಮಕ್ಕಳೊಂದಿಗೆ ಬಲವಾದ ಸಂಬಂಧವನ್ನು ಕಾಪಾಡಿಕೊಳ್ಳಲು ಮತ್ತು ಅವರಲ್ಲಿ ಆತ್ಮವಿಶ್ವಾಸ, ಸಕಾರಾತ್ಮಕತೆಯನ್ನು ತುಂಬಲು ತಮ್ಮ ಮಾತನ್ನು ನಿಯಂತ್ರಿಸುವುದು ಬಹಳ ಮುಖ್ಯ. ಅದರಲ್ಲೂ  ಕೆಲವೊಂದು ವಿಚಾರಗಳ ಬಗ್ಗೆ ಮಕ್ಕಳ ಮುಂದೆ ಮಾತನಾಡಲೇಬಾರದಂತೆ. ಆ ಮಾತುಗಳು ಯಾವುವು ಎಂಬ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಪೋಷಕರು ಮಕ್ಕಳ ಮುಂದೆ ಈ ವಿಚಾರಗಳ ಬಗ್ಗೆ ಮಾತನಾಡಬಾರದು:

ಸಂಗಾತಿ ಅಥವಾ ಕುಟುಂಬದಲ್ಲಿನ ಹಿರಿಯರ ಬಗ್ಗೆ ನಕಾರಾತ್ಮಕ ಮಾತು:

ನಿಮ್ಮ ಮಕ್ಕಳ ಮುಂದೆ ವೈವಾಹಿಕ ಜೀವನದ ನ್ಯೂನತೆಗಳು, ಸಂಗಾತಿಯ ಬಗ್ಗೆ ಕೆಟ್ಟ ಮಾತುಗಳನ್ನು ಮಕ್ಕಳ ಮುಂದೆ ಚರ್ಚಿಸಬಾರದು. ಹೀಗೆ ಪೋಷಕರು ಕೆಟ್ಟದಾಗಿ ಮಾತನಾಡಿದಾಗ, ಮಗುವಿನ ಮನಸ್ಸಿನಲ್ಲಿ ಭಯ ಮತ್ತು ಗೊಂದಲ ಉಂಟಾಗುತ್ತದೆ. ಇನ್ನೂ ಹಿರಿಯರ ಬಗ್ಗೆ ಮಕ್ಕಳ ಮುಂದೆ ನಕಾರಾತ್ಮಕ ಮಾತುಗಳನ್ನಾಡಿದಾಗ, ಮಕ್ಕಳು ಸಹ ಇದನ್ನೇ ಕಲಿಯುತ್ತಾರೆ. ಈ ಅಭ್ಯಾಸವು ಮಕ್ಕಳನ್ನು ಭಾವನಾತ್ಮಕವಾಗಿ ಪೋಷಕರಿಂದ ದೂರವಿಡಬಹುದು ಮತ್ತು ಭವಿಷ್ಯದಲ್ಲಿ ಅವರ ಸ್ವಂತ ಸಂಬಂಧಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು.

ಸಂಬಂಧಿಕರು ಮತ್ತು ಸ್ನೇಹಿತರ ಬಗ್ಗೆ ಚಾಡಿ ಹೇಳುವುದು:  ನಾವು ನಮ್ಮ ಮಕ್ಕಳ ಮುಂದೆ, ಫೋನ್‌ನಲ್ಲಿ ಅಥವಾ ಅವರ ಮುಂದೆ ಕುಳಿತಿರುವಾಗ  ಸಂಬಂಧಿಕರು ಅಥವಾ ಸ್ನೇಹಿತರ ಬಗ್ಗೆ ನಕಾರಾತ್ಮಕ ಮಾತುಗಳನ್ನಾಡಿದಾಗ, ತಮ್ಮ ಪೋಷಕರು ಜನರ ಮುಂದೆ ಚೆನ್ನಾಗಿ ವರ್ತಿಸುವುದನ್ನು ಮತ್ತು ಬೆನ್ನ ಹಿಂದೆ ಕೆಟ್ಟದಾಗಿ ಮಾತನಾಡುವುದನ್ನು ನೋಡಿದಾಗ,  ಮಕ್ಕಳು ಸಹ  ಇದನ್ನೇ ಕಲಿಯುತ್ತಾರೆ. ಅಲ್ಲದೆ ನಂಬಿಕೆಯನ್ನು ನಾಶ ಪಡಿಸುತ್ತದೆ. ಮುಖ್ಯವಾಗಿ ಇದರಿಂದಾಗಿ ಮಕ್ಕಳು ಸಂಬಂಧಗಳ ಮೇಲೆ ನಂಬಿಕೆ ಇಡುವುದನ್ನೇ ಬಿಡು ಬಿಡುತ್ತಾರೆ.

ಆರ್ಥಿಕ ಸಮಸ್ಯೆಗಳ ಬಗ್ಗೆ ಚರ್ಚಿಸಬೇಡಿ:  ಮಕ್ಕಳ ಮುಂದೆ ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಎಂದಿಗೂ ಚರ್ಚಿಸಬೇಡಿ, ಮಕ್ಕಳ ಮುಂದೆ ಆರ್ಥಿಕ ಸಮಸ್ಯೆಗಳನ್ನು ಚರ್ಚಿಸುವುದರಿಂದ ಇದು ಋಣಾತ್ಮಕ ಪರಿಣಾಮಬೀರುತ್ತದೆ. ಮತ್ತು ಇದು  ಅವರನ್ನು ಆರ್ಥಿಕವಾಗಿ ಅಸುರಕ್ಷಿತರನ್ನಾಗಿ ಮಾಡಬಹುದು. ಅಲ್ಲದೆ ಇದು ಅವರ ಮಾನಸಿಕ ಬೆಳವಣಿಗೆಗೂ ಅಡ್ಡಿಯಾಗುತ್ತದೆ.

ಇದನ್ನೂ ಓದಿ: ಐದು ಗುಣಗಳಿರುವ ಹೆಣ್ಣಿನ ಮನೆ ಸ್ವರ್ಗದಂತಿರುತ್ತದೆ ಎಂದಿದ್ದಾರೆ ಚಾಣಕ್ಯ

ಮಕ್ಕಳ ನ್ಯೂನತೆಗಳನ್ನು ಇತರರ ಮುಂದೆ ಟೀಕಿಸುವುದು: ಅನೇಕ ಪೋಷಕರು ತಮ್ಮ ಮಕ್ಕಳು ಕಲಿಯುವುದಿಲ್ಲ, ಶೈಕ್ಷಣಿಕೇತರ ಚಟುವಟಿಕೆಯಲ್ಲೂ ಉತ್ತಮ ಪ್ರದರ್ಶನ ನೀಡುವುದಿಲ್ಲ ಎಂದು ಇತರರ ಮುಂದೆ ತಮ್ಮ ಮಕ್ಕಳ ಬಗ್ಗೆ ಹೇಳಿಕೊಳ್ಳುತ್ತಾರೆ. ಇದು ಮಕ್ಕಳ ಮೇಲೆ ಗಾಢವಾದ ಪರಿಣಾಮವನ್ನು ಉಂಟು ಮಾಡುತ್ತವೆ.  ಮತ್ತು ಇದು ಮಕ್ಕಳ ಆತ್ಮವಿಶ್ವಾಸವನ್ನು ಕುಗ್ಗಿಸಬಹುದು.

ಭವಿಷ್ಯದ ಬಗ್ಗೆ ಭಯವನ್ನು ಹುಟ್ಟಿಸುವುದು: ಜಗತ್ತು ತುಂಬಾ ಕೆಟ್ಟದಾಗಿದೆ,  ಯಾರನ್ನೂ ನಂಬಬೇಡಿ ಹೀಗೆ ಸಮಾಜ ಹಾಗೂ ಭವಿಷ್ಯದ ಬಗ್ಗೆ ನಕಾರಾತ್ಮಕ ಮಾತುಗಳನ್ನಾಡುವುದನ್ನು ತಪ್ಪಿಸಿ. ಏಕೆಂದರೆ ಇದರಿಂದ  ಮಕ್ಕಳು ಪ್ರಪಂಚದ ಬಗ್ಗೆ ನಕಾರಾತ್ಮಕ ದೃಷ್ಟಿಕೋನವನ್ನು ಬೆಳೆಸಿಕೊಳ್ಳುತ್ತಾರೆ. ಮತ್ತು ಭವಿಷ್ಯದಲ್ಲಿ ಅವರು ಹೊಸ ಅವಕಾಶಗಳನ್ನು ಪಡೆಯಲು ಹೆದರುತ್ತಾರೆ ಮತ್ತು ಜನರನ್ನು ಅನುಮಾನದಿಂದ ನೋಡಲು ಪ್ರಾರಂಭಿಸುತ್ತಾರೆ. ಅದೇ ಪೋಷಕರಾದ  ನಾವು ಮಕ್ಕಳಲ್ಲಿ ಭಯವನ್ನು ಬಿತ್ತಿದರೆ, ಅವರು ಎಂದಿಗೂ ಸ್ವತಂತ್ರ ಮತ್ತು ಸಂತೋಷದ ಜೀವನವನ್ನು ನಡೆಸಲು ಸಾಧ್ಯವಾಗುವುದಿಲ್ಲ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಮೈದಾನದಲ್ಲೇ ಕುಸಿದು ಬಿದ್ದು ಪಟ್ಟಣ ಪಂಚಾಯತ್‌ ಸದಸ್ಯ ಸಾವು
ಮೈದಾನದಲ್ಲೇ ಕುಸಿದು ಬಿದ್ದು ಪಟ್ಟಣ ಪಂಚಾಯತ್‌ ಸದಸ್ಯ ಸಾವು
ಇಂಧನ ಉಳಿಸಲು ಕಡಿಮೆ ಬೆಂಗಾವಲು ಪಡೆಯೊಂದಿಗೆ ಹೊರಟ ಪ್ರಧಾನಿ ಮೋದಿ
ಇಂಧನ ಉಳಿಸಲು ಕಡಿಮೆ ಬೆಂಗಾವಲು ಪಡೆಯೊಂದಿಗೆ ಹೊರಟ ಪ್ರಧಾನಿ ಮೋದಿ
ಬಹುಭಾಷೆಯಲ್ಲಿ ರೈತನ ಅಹವಾಲು ಕೇಳಿ ಶಾಸಕರಿಗೇ ಅಚ್ಚರಿ!
ಬಹುಭಾಷೆಯಲ್ಲಿ ರೈತನ ಅಹವಾಲು ಕೇಳಿ ಶಾಸಕರಿಗೇ ಅಚ್ಚರಿ!
ಮಂತ್ರಾಲಯದಲ್ಲಿ ಬಿಸಿಲಿನ ತಾಪಕ್ಕೆ ಸಿಲಿಂಡರ್ ಸ್ಫೋಟ
ಮಂತ್ರಾಲಯದಲ್ಲಿ ಬಿಸಿಲಿನ ತಾಪಕ್ಕೆ ಸಿಲಿಂಡರ್ ಸ್ಫೋಟ
‘ದಿಲೀಪ್ ರಾಜ್ ನಿಧನದ ಸುದ್ದಿ ಬಂದಾಗ ನಾನು ನಂಬಲಿಲ್ಲ’: ಎಸ್. ನಾರಾಯಣ್
‘ದಿಲೀಪ್ ರಾಜ್ ನಿಧನದ ಸುದ್ದಿ ಬಂದಾಗ ನಾನು ನಂಬಲಿಲ್ಲ’: ಎಸ್. ನಾರಾಯಣ್
ದಿಲೀಪ್ ರಾಜ್ ಅಂತ್ಯಕ್ರಿಯೆ ಬಗ್ಗೆ ಮಾಹಿತಿ ನೀಡಿದ ಅಣ್ಣ: ವಿಡಿಯೋ
ದಿಲೀಪ್ ರಾಜ್ ಅಂತ್ಯಕ್ರಿಯೆ ಬಗ್ಗೆ ಮಾಹಿತಿ ನೀಡಿದ ಅಣ್ಣ: ವಿಡಿಯೋ
ವಯನಾಡು 'ಕೈ' ಕಚೇರಿ ಬಳಿಯೇ ರಾಹುಲ್​​, ಪ್ರಿಯಾಂಕಾ ವಿರುದ್ಧ ಪೋಸ್ಟರ್​​!
ವಯನಾಡು 'ಕೈ' ಕಚೇರಿ ಬಳಿಯೇ ರಾಹುಲ್​​, ಪ್ರಿಯಾಂಕಾ ವಿರುದ್ಧ ಪೋಸ್ಟರ್​​!
ಕಾಫಿ ತೋಟದತ್ತ ಹೆಜ್ಜೆಹಾಕಿದ 25ಕ್ಕೂ ಹೆಚ್ಚು ಆನೆಗಳ ದಿಂಡು!
ಕಾಫಿ ತೋಟದತ್ತ ಹೆಜ್ಜೆಹಾಕಿದ 25ಕ್ಕೂ ಹೆಚ್ಚು ಆನೆಗಳ ದಿಂಡು!
ರಾಮನಗರದ ತೋಟದಲ್ಲಿ ನಡೆಯಲಿದೆ ದಿಲೀಪ್ ರಾಜ್ ಅಂತ್ಯಕ್ರಿಯೆ; ಸಕಲ ಸಿದ್ಧತೆ
ರಾಮನಗರದ ತೋಟದಲ್ಲಿ ನಡೆಯಲಿದೆ ದಿಲೀಪ್ ರಾಜ್ ಅಂತ್ಯಕ್ರಿಯೆ; ಸಕಲ ಸಿದ್ಧತೆ
ಅರ್ಧ ಗಂಟೆ ಸಿಕ್ಕಿದ್ರೂ ಜಿಮ್​​ಗೆ ಹೋಗ್ತಾ ಇದ್ದ,ಯಾವುದೇ ದುರಭ್ಯಾಸ ಇರಲಿಲ್ಲ
ಅರ್ಧ ಗಂಟೆ ಸಿಕ್ಕಿದ್ರೂ ಜಿಮ್​​ಗೆ ಹೋಗ್ತಾ ಇದ್ದ,ಯಾವುದೇ ದುರಭ್ಯಾಸ ಇರಲಿಲ್ಲ