Personality Test: ನೀವು ನೇರ ಸ್ವಭಾವದವರೇ, ನಿಮ್ಮ ವ್ಯಕ್ತಿತ್ವ ಎಂತಹದ್ದೆಂದು ಪರಿಚಯಿಸುತ್ತೆ ಈ ಚಿತ್ರ

ವ್ಯಕ್ತಿತ್ವ ಪರೀಕ್ಷೆಯ ಆಟದ ಚಿತ್ರಗಳು ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ವೈರಲ್‌ ಆಗುತ್ತಿರುತ್ತವೆ. ಕಣ್ಣಿಗೆ ವಿಚಿತ್ರವಾಗಿ ಕಾಣಿಸುವ ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ನಮ್ಮ ವ್ಯಕ್ತಿತ್ವ, ಗುಣ ಸ್ವಭಾವವನ್ನು ಪರಿಚಯಿಸುತ್ತದೆ. ಇಲ್ಲೊಂದು ಅಂತಹದ್ದೇ ಪರ್ಸನಾಲಿಟಿ ಟೆಸ್ಟ್‌ ಫೋಟೋವೊಂದು ಹರಿದಾಡುತ್ತಿದ್ದು, ಮನುಷ್ಯನ ಮುಖ ಅಥವಾ ಶಾರ್ಕ್‌ ಆ ಚಿತ್ರದಲ್ಲಿ ಮೊದಲು ನಿಮಗೆ ಕಾಣಿಸಿದ್ದು ಏನು ಎಂಬ ಆಧಾರದ ಮೇಲೆ ನೀವು ನೇರ ಸ್ವಭಾವದವರೇ ಅಥವಾ ದಯಾಳು ವ್ಯಕ್ತಿಯೇ ಎಂಬುದನ್ನು ತಿಳಿದುಕೊಳ್ಳಿ.

Personality Test: ನೀವು ನೇರ ಸ್ವಭಾವದವರೇ, ನಿಮ್ಮ ವ್ಯಕ್ತಿತ್ವ ಎಂತಹದ್ದೆಂದು ಪರಿಚಯಿಸುತ್ತೆ ಈ ಚಿತ್ರ
ವೈರಲ್​​​ ಪೋಸ್ಟ್​
Updated By: ಅಕ್ಷಯ್​ ಪಲ್ಲಮಜಲು​​

Updated on: Apr 04, 2025 | 2:42 PM

ಸಾಮಾನ್ಯವಾಗಿ ನಮ್ಮ ಗುಣ ನಡತೆ, ಬೇರೆಯವರ ಜೊತೆ ನಾವು ಯಾವ ರೀತಿ ವರ್ತಿಸುತ್ತೇವೆ ಎಂಬುದರ ಆಧಾರದ ಮೇಲೆ ಜನ ನಮ್ಮ ವ್ಯಕ್ತಿತ್ವವನ್ನು (Personality) ಅಳೆಯುತ್ತಾರೆ. ಇದು ಮಾತ್ರವಲ್ಲದೆ ಈಗೀಗ ಸೋಷಿಯಲ್‌ ಮೀಡಿಯಾಗಳಲ್ಲಿ ಆಪ್ಟಿಕಲ್‌ ಇಲ್ಯೂಷನ್‌ (Optical Illusion) ಚಿತ್ರಗಳ (Photo) ಮೂಲಕವೂ ನಮ್ಮ ವ್ಯಕ್ತಿತ್ವ ಪರೀಕ್ಷೆಯ ಆಟಗಳು ಮುನ್ನೆಲೆಗೆ ಬಂದಿದೆ. ತುಂಬಾನೇ ಇಂಟರೆಸ್ಟಿಂಗ್‌ ಆಗಿರುವ ಈ ಕಣ್ಣಿಗೆ ಭ್ರಮೆಯನ್ನುಂಟುಮಾಡುವ ಇಂತಹ ಆಟಗಳನ್ನು ಸ್ವೀಕರಿಸುವ ಮೂಲಕ ಸಾಕಷ್ಟು ಜನ ತಮ್ಮ ವ್ಯಕ್ತಿತ್ವ ಹೇಗಿದೆ ಎಂಬುದನ್ನು ಪರೀಕ್ಷಿಸುತ್ತಾರೆ. ಇದೀಗ ಇಲ್ಲೊಂದು ಇಂತಹದ್ದೇ ವ್ಯಕ್ತಿತ್ವ ಪರೀಕ್ಷೆಯ ಚಿತ್ರ ಹರಿದಾಡುತ್ತಿದ್ದು, ಶಾರ್ಕ್‌ (Shark) ಅಥವಾ ಮನುಷ್ಯನ (human) ಮುಖ? ಆ ಚಿತ್ರದಲ್ಲಿ ನಿಮಗೆ ಮೊದಲು ಕಂಡಿದ್ದೇನು ಎಂಬ ಆಧಾರದ ಮೇಲೆ ನೀವು ನೇರ ಸ್ವಭಾವದವರೇ ಅಥವಾ ದಯಾಳು ಮನಸ್ಸಿನ ವ್ಯಕ್ತಿಯೇ ಎಂಬುದನ್ನು ಪರೀಕ್ಷಿಸಿ.

ಚಿತ್ರದಲ್ಲಿ ಏನಿದೆ?

ಇದು ಶಾರ್ಕ್‌ ಮತ್ತು ಮನುಷ್ಯನ ಮುಖವನ್ನು ಒಳಗೊಂಡಿರುವ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವಾಗಿದೆ. ಈ ವೈರಲ್‌ ಫೋಟೋದಲ್ಲಿ ಮೊದಲ ನೋಟದಲ್ಲೇ ಕೆಲವರಿಗೆ ಶಾರ್ಕ್‌ ಕಂಡರೆ, ಕೆಲವರು ಈ ಚಿತ್ರದಲ್ಲಿ ಮನುಷ್ಯನ ಮುಖವನ್ನು ನೋಡುತ್ತಾರೆ. ನೀವು ಈ ಎರಡರಲ್ಲಿ ಏನನ್ನು ನೋಡಿದ್ದೀರಿ ಎಂಬುದರ ಮೇಲೆ ನೀವು ನೇರ ನುಡಿಯ ವ್ಯಕ್ತಿಯೇ ಅಥವಾ ದಯಾಳು ಮನಸ್ಸಿನ ವ್ಯಕ್ತಿಯೇ ಏನೆಂಬುದನ್ನು ತಿಳಿದುಕೊಳ್ಳಿ.

ನೀವು ಮೊದಲು ಶಾರ್ಕ್‌ ನೋಡಿದರೆ;

ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ನಿಮಗೇನಾದರೂ ಮೊದಲು ಶಾರ್ಕ್‌ ಕಣ್ಣಿಗೆ ಕಾಣಿಸಿತೆಂದಾದರೆ ನೀವು ಆತ್ಮ ವಿಶ್ವಾಸವನ್ನು ಹೊಂದಿರುವ ಹಾಗೂ ನೇರ ನುಡಿಯ ವ್ಯಕ್ತಿ ಎಂದು ಅರ್ಥ. ಆದರೆ ಈ ನಿಮ್ಮ ನೇರ ನುಡಿಯ ವ್ಯಕ್ತಿತ್ವವನ್ನು ಅನೇಕ ಜನರು ಇಷ್ಟಪಡದಿರಬಹುದು. ವಿಶೇಷವಾಗಿ ವಾದ ವಿವಾದದ ಸಮಯದಲ್ಲಿ. ಕೆಲವೊಂದು ಬಾರಿ ನಿಮ್ಮ ಮಾತುಗಳು ಕಠಿಣವಾಗಿರಬಹುದು. ಆದ್ದರಿಂದ ನೀವು ಮಾತನಾಡುವ ಮೊದಲು ಸ್ವಲ್ಪ ಯೋಚಿಸಿ ಮಾತನಾಡಿ.

ಇದನ್ನೂ ಓದಿ
ಹೊಸ ವರ್ಷ ಆಚರಿಸಿ ಫೂಲ್ ಆದ ದೇಶ ಯಾವುದು?
ದೇಹ ಆಕಾರವೇ ನಿಮ್ಮ ವ್ಯಕ್ತಿತ್ವ ಬಹಿರಂಗ ಪಡಿಸುತ್ತೆ
ಬೇಸಿಗೆಯ ದಾಹ ನೀಗಿಸಲು ಎಳನೀರು ಕುಲುಕ್ಕಿ ಶರ್ಬತ್‌ ಒಮ್ಮೆ ಟ್ರೈ ಮಾಡಿ…
ಭಾರತದ ಹೊರತುಪಡಿಸಿ ವಿದೇಶದಲ್ಲಿರುವ ಪ್ರಮುಖ ಶಿವ ದೇವಾಲಯಗಳಿವು

ಇದನ್ನೂ ಓದಿ: ಅಂತಾರಾಷ್ಟ್ರೀಯ ಗಣಿ ಜಾಗೃತಿ ದಿನವನ್ನು ಏಕಾಗಿ ಆಚರಿಸಲಾಗುತ್ತದೆ? ಈ ದಿನದ ಇತಿಹಾಸ ಮತ್ತು ಮಹತ್ವ

ನೀವು ಮೊದಲು ಮನುಷ್ಯನ ಮುಖವನ್ನು ನೋಡಿದರೆ;

ನಿಮಗೆ ಈ ಚಿತ್ರದಲ್ಲಿ ಮೊದಲು ಮನುಷ್ಯನ ಮುಖ ಏನಾದ್ರೂ ಕಾಣಿಸಿದ್ರೆ ನೀವು ದಯಾಳು ಮನಸ್ಸಿನ ಹಾಗೂ ಸೂಕ್ಷ್ಮ ಮನಸ್ಸಿನ ವ್ಯಕ್ತಿ ಎಂದು ಅರ್ಥ. ನಿಮ್ಮ ಈ ಗುಣದಿಂದಲೇ ನೀವು ಇತರರನ್ನು ಅತಿ ಬೇಗನೇ ಕ್ಷಮಿಸುತ್ತೀರಿ. ಅಷ್ಟೇ ಅಲ್ಲದೆ ಈ ಗುಣದಿಂದಲೇ ನಿಮ್ಮನ್ನು ಅನೇಕ ಜನರು ಇಷ್ಟಪಡುತ್ತಾರೆ. ಜೊತೆಗೆ ಅವರು ನಿಮ್ಮೊಂದಿಗಿರಲು ಬಯಸುತ್ತಾರೆ. ನೀವು ತುಂಬಾ ಸೂಕ್ಷ್ಮ ಮನಸ್ಸಿನವರಾಗಿರುವುದರಿಂದ ಹೊಸ ವಿಷಯಗಳನ್ನು ಪ್ರಯತ್ನಿಸುವ ಮೊದಲು ನೀವು ಸಾಕಷ್ಟು ಯೋಚಿಸುತ್ತೀರಿ. ಒಟ್ಟಾರೆಯಾಗಿ ಈ ನಿಮ್ಮ ಸೂಕ್ಷ್ಮ ಸ್ವಭಾವ ಹೆಚ್ಚಿನವರಿಗೆ ಇಷ್ಟವಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ