Rage-Applying: ನೀವು ಕೆಲಸ ಮಾಡುವ ಸ್ಧಳದಲ್ಲಿ ನಿಮಗೆ ಅಸಮಾಧಾನವೇ?

ಸಾಕಷ್ಟು ಜನರು ತಾವು ಕೆಲಸ ಮಾಡುವ ಜಾಗದಲ್ಲಿ ಅಸಮಧಾನವನ್ನು ಹೊಂದಿರುತ್ತಾರೆ. ಇದರೊಂದಿಗೆ ಕೆಲಸವನ್ನು ತೊರೆಯುವ ಯೋಚನೆಯಲ್ಲಿರುತ್ತಾರೆ.

Rage-Applying: ನೀವು ಕೆಲಸ ಮಾಡುವ ಸ್ಧಳದಲ್ಲಿ ನಿಮಗೆ ಅಸಮಾಧಾನವೇ?
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅಕ್ಷತಾ ವರ್ಕಾಡಿ

Updated on:Jan 19, 2023 | 2:05 PM

ಸಾಕಷ್ಟು ಜನರು ತಾವು ಕೆಲಸ ಮಾಡುವ ಜಾಗದಲ್ಲಿ ಅಸಮಧಾನವನ್ನು ಹೊಂದಿರುತ್ತಾರೆ. ಇದರೊಂದಿಗೆ ಕೆಲಸವನ್ನು ತೊರೆಯುವ ಯೋಚನೆಯಲ್ಲಿರುತ್ತಾರೆ. ಆದರೆ ನಿಮ್ಮ ಕೆಲವೊಂದು ನಿರ್ಧಾರಗಳು ನಿಮ್ಮ ಮೇಲೆಯೇ ಕೆಟ್ಟ ಪರಿಣಾಮವನ್ನು ಬೀರಬಹುದು. ಆದ್ದರಿಂದ ಆದಷ್ಟು ನಿಮ್ಮ ವೃತ್ತಿ ಬದುಕಿನಲ್ಲಿ ಯಾವತ್ತೂ ದುಡುಕಿ ನಿರ್ಧಾರ ತೆಗೆದುಕೊಳ್ಳದಿರಿ. ವಿಶೇಷವಾಗಿ ಉದ್ಯೋಗವನ್ನು ಬದಲಾಯಿಸುವಾಗ ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಳ್ಳಿ. ನೀವು ಈಗಾಗಲೇ ಇರುವ ಕೆಲಸವನ್ನು ಏಕೆ ಬಿಡಲು ಬಯಸುತ್ತೀರಿ ಹಾಗೆಯೇ ಹೊಸ ವೃತ್ತಿ ಕ್ಷೇತ್ರದಲ್ಲಿ ನೀವು ಏನ್ನನ್ನು ಬಯಸುತ್ತೀರಿ ಎಂಬುದನ್ನು ಅರ್ಥ ಮಾಡಿಕೊಳ್ಳಿ.

ಕೆಲಸದ ಸ್ಥಳದಲ್ಲಿ ಕೂಗಾಟ ಅಥವಾ ಬೇಗ ಕೋಪಗೊಳ್ಳುವ ಮನಸ್ಥಿತಿಗಳು ಸಾಮಾನ್ಯವಾಗಿ ನೀವು ಕೆಲಸಮಾಡುವ ಸ್ಥಳದಲ್ಲಿ ಅಸಮಾಧಾನಗಳು ಉಂಟಾದಾಗ ಸಂಭವಿಸುತ್ತದೆ. ಈ ಅಸಮಾಧಾನಕ್ಕೆ ಪ್ರಮುಖ ಕಾರಣಗಳು ನಿಮ್ಮ ಸಹೋದ್ಯೋಗಿ ಅಥವಾ ನಿಮ್ಮಿಂದ ಮೇಲ್ದರ್ಜೆಯಲ್ಲಿರುವ ವ್ಯಕ್ತಿಗಳ ಜೊತೆ ಉತ್ತಮ ಒಡನಾಟ ಇಲ್ಲದಿರುವುದು ಅಥವಾ ಭಿನ್ನಾಭಿಪ್ರಾಯಗಳು. ಬಾಸ್​​ನೊಂದಿಗೆ ಕೋಪ ಮತ್ತು ಹತಾಶೆಗಳು ಈ ರೀತಿಯ ಪರಿಸ್ಥಿತಿಯನ್ನುಂಟು ಮಾಡುತ್ತದೆ. ನೀವು ಪ್ರಸ್ತುತ ಇರುವ ಕೆಲಸದ ಬಗ್ಗೆ ತುಂಬಾ ಅತೃಪ್ತರಾಗಿರುವಾಗ ಮತ್ತು ಈ ಕೆಲಸದ ಸ್ಥಳದಿಂದ ಹೊರಬರಲು ಮಾರ್ಗಗಳನ್ನು ಹುಡುಕುತ್ತಿರುವಾಗ ಈ ರೀತಿಯ ಘಟನೆಗಳು ಸಂಭವಿಸುತ್ತದೆ.

ನಿಮ್ಮ ಈಗ ಇರುವ ಕೆಲಸವನ್ನು ಪ್ರಯತ್ನಿಸುತ್ತಿರುವಾಗ ಮತ್ತು ಹೊಸ ಉದ್ಯೋಗವನ್ನು ಪಡೆಯುವ ಪ್ರಯತ್ನದಲ್ಲಿ ನೇಮಕಾತಿಗಾಗಿ ಸ್ವವಿವರಗಳನ್ನು ಅಥವಾ ರೆಸ್ಯೂಮ್​​ಗಳನ್ನು ಕಳುಹಿಸಿದ್ದರೆ, ಅಂತಹ ಸಮಯದಲ್ಲಿ ಪ್ರಸ್ತುತ ಇರುವ ಕೆಲಸದ ಜಾಗದಲ್ಲಿ ಬೇಗ ಕೋಪಗೊಳ್ಳುವುದು, ಕೂಗಾಡುವುದು ಇಂತಹ ಸಂದರ್ಭಗಳು ಸೃಷ್ಟಿಯಾಗುತ್ತವೆ.

ಇದನ್ನೂ ಓದಿ: ಏನಿದು ಸೈಕೋಮೆಟ್ರಿಕ್ ಪರೀಕ್ಷೆ? ಉದ್ಯೋಗ ಕ್ಷೇತ್ರದಲ್ಲಿ ಯಾಕೆ ಮುಖ್ಯ?

ಪ್ರಸ್ತುತ ಇರುವ ಕಂಪೆನಿ ಅಥವಾ ಕೆಲಸದ ಸ್ಥಳದಲ್ಲಿ ಹೆಚ್ಚಿನ ಕೋಪ ಅಥವಾ ಕೂಗಾಟದ ಮನಸ್ಥಿಗೆ ಇನ್ನೊಂದು ಪ್ರಮುಖ ಕಾರಣ ನಿರೀಕ್ಷಿತ ವೇತನ ಸಿಗದಿರುವುದು. ಜೊತೆಗೆ ಪ್ರತಿಯೊಬ್ಬ ಉದ್ಯೋಗಿಯೂ ತನ್ನ ಕೆಲಸಕ್ಕೆ ಕೃತಜ್ಞತೆ, ಪ್ರೋತ್ಸಾಹಗಳು ಸಿಗಬೇಕು ಎಂದು ಬಯಸುವುದು ಸಹಜ. ಆದರೆ ಮೇಲ್ದರ್ಜೆಯಿಂದ ಯಾವುದೇ ಕೃತಜ್ಞತೆ, ಪ್ರೋತ್ಸಾಹಗಳು ಸಿಗದ್ದಿದ್ದಾಗ ಅಸಮಾಧಾನ ಹೊಂದಲು ಕಾರಣವಾಗುತ್ತದೆ. ಜೊತೆಗೆ ನಿರೀಕ್ಷಿತ ವೇತನವೂ ಕೂಡ ಆತ ಒಂದು ಕಂಪೆನಿಯಿಂದ ಇನ್ನೊಂದು ಕಂಪೆನಿಯ ಕಡೆ ಒಲವು ತೋರಿಸಲು ಪ್ರಮುಖ ಕಾರಣವಾಗಿದೆ.

ಇತ್ತೀಚೆಗೆ ಜನರು ತಮ್ಮ ಕೆಲಸದ ಸ್ಥಳದಲ್ಲಿ ಕ್ರೋಧಗೊಳ್ಳುವ ಬಗ್ಗೆ ಸಾಕಷ್ಟು ಪೋಸ್ಟ್ಗಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತವೆ. ಟಿಕ್‌ಟಾಕ್ ಬಳಕೆದಾರರಾದ ರೆಡ್‌ವೀಜ್ ತಮ್ಮ ಸ್ವಂತ ಅನುಭವವನ್ನು ಹಂಚಿಕೊಂಡಿದ್ದಾರೆ. ನಾನು ಕೆಲಸ ಮಾಡುವ ಸ್ಥಳದಲ್ಲಿ ಅಸಮಾಧಾನವನ್ನು ಹೊಂದಿದ್ದೆ, ಇದರಿಂದಾಗಿ ಸಾಕಷ್ಟು ಕ್ರೋಧಗೊಳ್ಳುತ್ತಿದೆ. ಆದರೆ ಕೆಲಸವನ್ನು ತೊರೆದ ನಂತರ 25,000 ರೂ ಹೆಚ್ಚಿನ ಕೆಲಸ ಸಿಕ್ಕಿತು ಮತ್ತು ಇದು ಕೆಲಸ ಮಾಡಲು ಉತ್ತಮ ಸ್ಥಳವಾಗಿದೆ ಎಂದು ಹೇಳಿಕೊಂಡಿದ್ದಾರೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

Published On - 2:05 pm, Thu, 19 January 23