Relationship: ಈ 5 ತಪ್ಪುಗಳನ್ನು ಮಾಡಬೇಡಿ, ನಿಮ್ಮನ್ನು ಹುಚ್ಚರಂತೆ ಪ್ರೀತಿಸುವ ಸಂಗಾತಿ ನಿಮ್ಮಿಂದ ದೂರವಾಗಬಹುದು

ರಿಲೇಷನ್​ಶಿಪ್ ಬಿಲ್ಡ್​ ಮಾಡುವುದು ಸುಲಭ ಆದರೆ ಅದರ ನಿರ್ವಹಣೆ ಕಷ್ಟ. ಇಬ್ಬರೂ ಕೂಡ ಸಂಬಂಧವನ್ನು ಉಳಿಸಿಕೊಳ್ಳಲು ಒಂದೇ ರೀತಿಯ ಪ್ರಯತ್ನ ಮಾಡಬೇಕು.

Relationship: ಈ 5 ತಪ್ಪುಗಳನ್ನು ಮಾಡಬೇಡಿ, ನಿಮ್ಮನ್ನು ಹುಚ್ಚರಂತೆ  ಪ್ರೀತಿಸುವ ಸಂಗಾತಿ ನಿಮ್ಮಿಂದ ದೂರವಾಗಬಹುದು
Relationship
Follow us
| Updated By: ನಯನಾ ರಾಜೀವ್

Updated on:Jan 03, 2023 | 12:37 PM

ರಿಲೇಷನ್​ಶಿಪ್ ಬಿಲ್ಡ್​ ಮಾಡುವುದು ಸುಲಭ ಆದರೆ ಅದರ ನಿರ್ವಹಣೆ ಕಷ್ಟ. ಇಬ್ಬರೂ ಕೂಡ ಸಂಬಂಧವನ್ನು ಉಳಿಸಿಕೊಳ್ಳಲು ಒಂದೇ ರೀತಿಯ ಪ್ರಯತ್ನ ಮಾಡಬೇಕು. ಕೆಲವು ಭಿನ್ನಾಭಿಪ್ರಾಯಗಳಿಂದ ಅನೇಕ ಸಂಬಂಧಗಳು ಸಂದಿಗ್ಧತೆಯಲ್ಲಿ ಸಿಲುಕಿಕೊಳ್ಳುತ್ತದೆ. ಕೆಲವರು ರಾಜಿ ಮಾಡಿಕೊಳ್ಳಲು ಇಷ್ಟಪಡುವುದಿಲ್ಲ. ಕ್ಷಮೆ ಕೇಳುವುದಂತೂ ಇಲ್ಲವೇ ಇಲ್ಲ.

ಸಂಬಂಧಗಳು ಹಾಳಾಗಲು ಕಾರಣಗಳು ಇಲ್ಲಿವೆ

ಸಂಗಾತಿಯ ಫೋನ್ ಆಕ್ಸೆಸ್ ಬೇಕು ಶೇ.90 ರಷ್ಟು ಮಂದಿ ತಮ್ಮ ಸಂಗಾತಿಯನ್ನು ಎಷ್ಟೇ ಪ್ರೀತಿಸುತ್ತಿರಲಿ, ತಮ್ಮ ಮೊಬೈಲ್ ಅನ್ನು ಚೆಕ್​ ಮಾಡುವುದಾಗಲಿ, ಅಥವಾ ಮೊಬೈಲ್ ನೋಡುವುದಾಗಲಿ ಇಷ್ಟಪಡುವುದಿಲ್ಲ, ಅವರದ್ದೇ ಆದ ವೈಯಕ್ತಿಕ ಕೆಲವು ವಿಷಯಗಳನ್ನು ಯಾರೊಂದಿಗೂ ಹೇಳಿಕೊಳ್ಳಲು ಇಷ್ಟಪಡುವುದಿಲ್ಲ. ಈ ವಿಚಾರಕ್ಕೆ ಜಗಳಗಳಾಗುತ್ತವೆ.

ಮತ್ತಷ್ಟು ಓದಿ: Relationship Tips: ಯುವ ಪೀಳಿಗೆ ದೀರ್ಘಕಾಲ ಸಂಬಂಧದಲ್ಲಿ ಆಸಕ್ತಿ ಇಲ್ಲ, ತಜ್ಞರ ಅಭಿಪ್ರಾಯ ಇಲ್ಲಿದೆ

ನಿಮ್ಮ ಸಂಗಾತಿಯ ಆತ್ಮೀಯ ಸ್ನೇಹಿತರನ್ನು ಅವಮಾನಿಸುವುದು

ನೀವು ಸಂಗಾತಿಯಾಗುವ ಮುಂಚೆ ನಿಮ್ಮ ಸಂಗಾತಿಯ ಕಷ್ಟ ಸುಖದಲ್ಲಿ ಭಾಗಿಯಾಗಿದ್ದಂತಹ ಆತ್ಮೀಯ ಸ್ನೇಹಿತರನ್ನು ಅವಮಾನಿಸುವುದು ಅಸಮಾಧಾನ ಅಥವಾ ಮನಸ್ತಾಪಕ್ಕೆ ಕಾರಣವಾಗಬಹುದು. ನಿಮ್ಮ ಸಂಗಾತಿಯ ಆತ್ಮೀಯ ಸ್ನೇಹಿತನನ್ನು ನೀವು ಇಷ್ಟಪಡದಿದ್ದರೆ, ಅವನನ್ನು ನಿರ್ಲಕ್ಷಿಸಿ, ಆದರೆ ವೈಯಕ್ತಿಕವಾಗಿ ನಿಂದಿಸಬೇಡಿ. ಏಕೆಂದರೆ ಎಲ್ಲರಿಗೂ ಸ್ನೇಹಿತರೇ ಮುಖ್ಯ. ಅನೇಕ ಜನರು ಸಂಬಂಧಕ್ಕಿಂತ ಹೆಚ್ಚಾಗಿ ತಮ್ಮ ಸ್ನೇಹಿತರನ್ನು ಆದ್ಯತೆಯ ಮೇಲೆ ಇರಿಸುತ್ತಾರೆ. ನಿಮ್ಮ ಸಂಗಾತಿಗೆ ಸ್ನೇಹಿತರು ಮುಖ್ಯವಾಗಬಹುದು.

ರಹಸ್ಯಗಳನ್ನು ಬಚ್ಚಿಡುವುದು ತಮ್ಮ ಜೀವನದ ಬಗ್ಗೆ ಯಾವುದೇ ರಹಸ್ಯವಿದ್ದರೂ ಅದನ್ನು ಹಂಚಿಕೊಂಡು ಬಗೆಹರಿಸಿಕೊಳ್ಳಿ ಇಲ್ಲವಾದಲ್ಲಿ ಯಾವತ್ತೋ ಒಂದು ದಿನ ಆ ರಹಸ್ಯ ಹೊರಬಂದಾಗ ಅದು ನಿಮ್ಮ ಸಂಬಂಧವನ್ನು ಹಾಳುಮಾಡಬಹುದು. ಸತ್ಯವನ್ನು ಮರೆಮಾಚುವುದು ಯಾವುದೇ ಸಂಬಂಧಕ್ಕೆ ಒಳ್ಳೆಯದಲ್ಲ. ನಿಮ್ಮ ಸಂಗಾತಿ ನಿಮ್ಮ ಮೇಲೆ ಕೋಪಗೊಳ್ಳುತ್ತಾರೆ ಎಂದು ತಿಳಿದು ನೀವು ಏನನ್ನಾದರೂ ಮರೆಮಾಡಲು ಪ್ರಯತ್ನಿಸುತ್ತಿದ್ದರೆ, ನೀವು ದೊಡ್ಡ ತಪ್ಪು ಮಾಡುತ್ತಿದ್ದೀರಿ ಎಂದರ್ಥ. ಸಂಬಂಧದಲ್ಲಿ ಪಾರದರ್ಶಕತೆ ಇಲ್ಲದಿದ್ದರೆ ಅಥವಾ ಸತ್ಯವನ್ನು ಮರೆಮಾಚಲು ಪ್ರಯತ್ನಿಸಿದರೆ, ಆ ಸಂಬಂಧವು ತುಂಬಾ ದುರ್ಬಲವಾಗುತ್ತದೆ.

ನಿಮ್ಮ ಕೆಲಸಕ್ಕಾಗಿ ಪ್ರೀತಿಯನ್ನು ಸಾಧನವಾಗಿ ಬಳಸಬೇಡಿ ನಿಮ್ಮದು ಏನೋ ಕೆಲಸ ಆಗಬೇಕೆಂದಿದ್ದರೆ ಪ್ರೀತಿಯನ್ನು ಸಾಧನವನ್ನಾಗಿ ಬಳಸಬೇಡಿ. ಪ್ರೀತಿಯು ವ್ಯವಹಾರವಲ್ಲ, ನೀನು ಈ ಕೆಲಸ ಮಾಡಿದರೆ ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದು ಆಮಿಷವೊಡ್ಡುವುದನ್ನು ಮಾಡಬೇಡಿ.

ಮೋಸ ಈ ಕೃತ್ಯಕ್ಕೆ ಬಹುಶಃ ಯಾವುದೇ ವಿವರಣೆಯಿಲ್ಲ. ನೀವು ಮೋಸ ಮಾಡಿದರೆ ನಿಮ್ಮ ಸಂಗಾತಿಯನ್ನು ಕಳೆದುಕೊಳ್ಳುವುದು ಖಚಿತ. ಏಕೆಂದರೆ ಒಬ್ಬ ವ್ಯಕ್ತಿಯು ಜೀವನದಲ್ಲಿ ಮೋಸವನ್ನು ಎಂದಿಗೂ ಸಹಿಸುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಪ್ರೀತಿಸುವವರೂ ಬಲವಂತವಾಗಿ ಹೊರಹೋಗುತ್ತಾರೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:35 pm, Tue, 3 January 23

ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ