ಸಾಂದರ್ಭಿಕ ಚಿತ್ರ
ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದ ತಿರುವಿನ ಘಟ್ಟ. ಒಂದು ವೇಳೆ ಯೋಗ್ಯವಾದ ಸಂಗಾತಿಯನ್ನು ಆಯ್ಕೆ ಮಾಡಿಕೊಂಡರೆ ಜೀವನವು ಸಂತೋಷದಿಂದ ಕೂಡಿರಲು ಸಾಧ್ಯ. ಪ್ರೀತಿ ವಿಶ್ವಾಸದೊಂದಿಗೆ ಒಬ್ಬರೊಬ್ಬರನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯ. ಈಗಿನ ಕಾಲದಲ್ಲಿ ಹುಡುಗ ಹುಡುಗಿಗೆ ಮುಕ್ತವಾಗಿ ಮಾತನಾಡಲು ಅವಕಾಶವಿದೆ. ಹೀಗಾಗಿ ಯಾವುದೇ ಒಂದು ಜೋಡಿ ಮದುವೆಯಾಗಲು ಸಿದ್ಧರಾಗಿದ್ದಾರೆ ಎಂದರೆ, ಆ ಜೋಡಿ ಮದುವೆಗೆ ಮೊದಲು ಹಲವು ಪ್ರಶ್ನೆಗಳನ್ನು ಕೇಳಿಕೊಳ್ಳಲು ಮೂಲಕ ತಮ್ಮ ಗೊಂದಲವನ್ನು ನಿವಾರಿಸಿಕೊಳ್ಳಬಹುದು.
- ಹಣಕಾಸಿನ ಬಗ್ಗೆ ಚರ್ಚಿಸಿ : ಮದುವೆಯಾಗುವ ಜೋಡಿಯು ತಮ್ಮ ಹಣಕಾಸಿನ ಗುರಿಯ ಬಗ್ಗೆ ಚರ್ಚಿಸುವುದು ಉತ್ತಮ. ಯಾವ ರೀತಿ ಉಳಿತಾಯ ಮಾಡಬೇಕು ಹಾಗೂ ಭವಿಷ್ಯದಲ್ಲಿ ಆರ್ಥಿಕವಾಗಿ ಸದೃಢರಾಗಲು ಯೋಚಿಸಿದ್ದೀರಿ ಎನ್ನುವ ಬಗ್ಗೆ ಚರ್ಚೆ ನಡೆಯುವುದು. ಇದು ಇಬ್ಬರೂ ಆರ್ಥಿಕವಾಗಿ ಹೊಂದಾಣಿಕೆಯಾಗುತ್ತೀರಿಯೇ ಎಂದು ತಿಳಿಯಲು ಸಾಧ್ಯವಾಗುತ್ತದೆ.
- ಕುಟುಂಬ ಯೋಜನೆಯ ಬಗ್ಗೆ ಮಾತನಾಡಿ : ನಮಗೆ ಮಕ್ಕಳು ಬೇಕೇ, ಅದಕ್ಕಾಗಿ ನಾವು ಹೇಗೆ ತಯಾರಿ ಮಾಡಿಕೊಳ್ಳಬೇಕು ಎನ್ನುವುದು ಕೂಡ ದಾಂಪತ್ಯ ಜೀವನದಲ್ಲಿ ಬಹಳ ಮುಖ್ಯವಾಗುತ್ತದೆ. ಹೀಗಾಗಿ ಕುಟುಂಬ ಯೋಜನೆ ಸೇರಿದಂತೆ ವೈಯುಕ್ತಿಕ ವಿಚಾರಗಳನ್ನು ಬಗ್ಗೆ ಒಮ್ಮೆ ಮಾತನಾಡಿಕೊಳ್ಳಿ.
- ಸಂವಹನ ಎಷ್ಟು ಮುಖ್ಯ ಎಂದು ತಿಳಿಸಿ : ದೈಹಿಕ ಅನ್ಯೋನ್ಯತೆ ಎಷ್ಟು ಮುಖ್ಯಯೋ, ಅದೇ ರೀತಿ ನಮ್ಮ ಅಗತ್ಯತೆಗಳ ಬಗ್ಗೆ ಪರಸ್ಪರ ಮಾತನಾಡುವದು ಅಷ್ಟೇ ಮುಖ್ಯ. ಹೀಗಾಗಿ ಇದರಿಂದ ಇಬ್ಬರೂ ಹೊಸ ಅನುಭವನ್ನು ಹೊಂದಬಹುದು. ಈ ವೇಳೆಯಲ್ಲಿ ವಾದಗಳಾದಾಗ ಅದನ್ನು ನಿಭಾಯಿಸುವುದು ಹೇಗೆ, ಜಗಳಕ್ಕೆ ಕಾರಣವಾಗುವ ಕೆಲವು ಸಂಗತಿಗಳನ್ನು ಚರ್ಚಿಸುವುದು ಉತ್ತಮ.
- ವೃತ್ತಿ ಗುರಿಗಳ ಬಗ್ಗೆ ಚರ್ಚಿಸಿ : ಇಬ್ಬರೂ ಕೂಡ ಉದ್ಯೋಗದಲ್ಲಿದ್ದರೆ ವೃತ್ತಿ ಗುರಿಗಳ ಕುರಿತು ಚರ್ಚಿಸುವುದು ಅಗತ್ಯ. ಅದರಲ್ಲಿಯು ಹೆಣ್ಣಿಗೆ ಮದುವೆಯಾದ ಬಳಿಕ ಮನೆ ಹಾಗೂ ಉದ್ಯೋಗವನ್ನು ನಿಭಾಯಿಸಲು ಕಷ್ಟವಾಗಬಹುದು. ಹೀಗಾಗಿ ಗಂಡನ ಮನೆಯಲ್ಲಿ ಕೆಲಸಕ್ಕೆ ಹೋಗಲು ಅನುಕೂಲಕರವಾದ ವಾತಾವರಣವಿದೆಯೇ ಎಂದು ಮಾತನಾಡಿಕೊಳ್ಳಬೇಕು.
- ಧರ್ಮ ಹಾಗೂ ಆಧ್ಯಾತ್ಮಿಕ ನಂಬಿಕೆಗಳ ಬಗ್ಗೆ ಮಾತನಾಡಿ : ಸತಿ ಪತಿಗಳಾಗುವ ವ್ಯಕ್ತಿಗಳಿಬ್ಬರಿಗೂ ಧರ್ಮ ಹಾಗೂ ಆಧ್ಯಾತ್ಮಿಕತೆಯ ಮೇಲೆ ಎಷ್ಟು ನಂಬಿಕೆಯಿದೆ ಎಂದು ತಿಳಿದುಕೊಳ್ಳಬಹುದು. ಇದರಿಂದ ಮುಂಬರುವ ದಿನಗಳಲ್ಲಿ ವೈಯುಕ್ತಿಕ ಭಾವನೆಗೆ ನೋವಾಗುವುದನ್ನು ತಪ್ಪಿಸಬಹುದು.
- ಜವಾಬ್ದಾರಿಗಳ ಹಂಚಿಕೆಯ ಕುರಿತು ಚರ್ಚಿಸಿ : ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಮನೆಯ ಜವಾಬ್ದಾರಿಗಳನ್ನು ಹೇಗೆ ಹಂಚಿಕೊಳ್ಳುವ ಬಗ್ಗೆ ಮಾತನಾಡುವುದು, ಇದರಿಂದ ಇಬ್ಬರೂ ಉದ್ಯೋಗಕ್ಕೆ ಹೋಗುವವರಾಗಿದ್ದರೆ ಜವಾಬ್ದಾರಿಗಳು ಹೊರೆಯಾಗುವುದಿಲ್ಲ. ಹಾಗೂ ಭವಿಷ್ಯದಲ್ಲಿ ಎದುರಾಗುವ ಸಂಘರ್ಷದಿಂದ ಮುಕ್ತರಾಗಬಹುದು.
- ಮದುವೆಯ ಬಗ್ಗೆ ಅಭಿಪ್ರಾಯ ತಿಳಿಯಿರಿ : ಸಂಗಾತಿಯಾಗುವ ವ್ಯಕ್ತಿಯು ಮದುವೆ ಎನ್ನುವುದನ್ನು ಹೇಗೆ ಅರ್ಥ ಮಾಡಿಕೊಂಡಿದ್ದಾರೆಯೇ ಎನ್ನುವುದನ್ನು ಅರಿಯುವುದು ಮುಖ್ಯ. ಕೆಲವರಿಗೆ ಇದು ಬದ್ಧತೆಯಾದರೆ, ಇನ್ನು ಕೆಲವರು ದೀರ್ಘ ಅವಧಿಯ ಸಂಬಂಧ ಎಂದುಕೊಳ್ಳುತ್ತಾರೆ. ಹೀಗಾಗಿ ಮದುವೆಯ ಬಗ್ಗೆ ಸಂಗಾತಿಯು ನೀಡುವ ವ್ಯಾಖ್ಯಾನದ ಬಗ್ಗೆ ತಿಳಿದುಕೊಳ್ಳಿ.
- ಸಮಯ ನಿರ್ವಹಣೆಯ ಬಗ್ಗೆ ಪ್ರಶ್ನೆ ಕೇಳಿಕೊಳ್ಳಿ : ವೈವಾಹಿಕ ಜೀವನದಲ್ಲಿ ಒಬ್ಬರಿಗೊಬ್ಬರು ಸಮಯ ಕೊಡುವುದರ ಜೊತೆಗೆ ಕುಟುಂಬ ಹಾಗೂ ಸ್ನೇಹಿತರಿಗೂ ಸಮಯ ನೀಡಬೇಕಾಗುತ್ತದೆ. ಕೆಲಸ ಹಾಗೂ ಫ್ಯಾಮಿಲಿಯನ್ನು ಹೇಗೆ ಸರಿದೂಗಿಸಿಕೊಂಡು ಹೋಗುವಿರಿ ಎನ್ನುವುದನ್ನು ಮಾತನಾಡಿಕೊಳ್ಳಿ.
- ವಾದಗಳಾದಾಗ ಸಂಬಂಧ ನಿರ್ವಹಣೆಯ ಹೇಗಿರುತ್ತದೆ : ಭಿನ್ನಾಭಿಪ್ರಾಯಗಳನ್ನು ಗೌರವಯುತವಾಗಿ ಚರ್ಚಿಸುವುದು ಹಾಗೂ ಪರಿಹರಿಸುವುದು ಬಹಳ ಮುಖ್ಯವಾಗುತ್ತದೆ. ಈ ಸಂದರ್ಭವು ಎದುರಾದರೆ ಇಬ್ಬರ ಆಲೋಚನೆಗಳು ಹೇಗಿರುತ್ತದೆ ಎನ್ನುವುದನ್ನು ಚರ್ಚಿಸಿಕೊಳ್ಳಿ.
- ಸಾಮರ್ಥ್ಯ ಮತ್ತು ದೌರ್ಬಲ್ಯಗಳ ಬಗ್ಗೆ ತಿಳಿದುಕೊಳ್ಳಿ : ದಂಪತಿಗಳಾಗಿ ಇಬ್ಬರೂ ಕೂಡ ತಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳೇನು ಎನ್ನುವುದನ್ನು ಅರಿತುಕೊಳ್ಳಬೇಕು. ಇದು ಸಂಗಾತಿಗಳಲ್ಲಿ ಹೊಂದಾಣಿಕೆಗೆ ನೆರವಾಗುತ್ತದೆ. ಹೀಗಾಗಿ ಮುಕ್ತವಾಗಿ ಸಾಮರ್ಥ್ಯ ಮತ್ತು ದೌರ್ಬಲ್ಯಗಳ ಬಗ್ಗೆ ಮುಕ್ತವಾಗಿ ಮಾತನಾಡಿಕೊಳ್ಳಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ