Relationship Tips : ಈ ಗುಣಗಳಿರುವ ಮಹಿಳೆಯರಿಗೆ ಪುರುಷರ ಅಗತ್ಯವೇ ಇರಲ್ವಂತೆ

ಹೆಣ್ಣು ತನ್ನ ಬಾಲ್ಯದಲ್ಲಿ ತಂದೆಯ ಕಾಳಜಿಯಲ್ಲಿ, ಯೌವನದಲ್ಲಿ ಗಂಡನ ನೆರಳಿನಲ್ಲಿ, ಮುಪ್ಪಿನಲ್ಲಿ ಗಂಡು ಮಕ್ಕಳ ಆಶ್ರಯದಲ್ಲಿ ಇರಬೇಕು ಎಂದು ಹೇಳುವುದನ್ನು ಕೇಳಿರಬಹುದು. ಆದರೆ ಇಂದು ಹೆಣ್ಣು ಯಾರ ಹಂಗಿನಲ್ಲಿಯೂ ಬದುಕಲು ಇಷ್ಟ ಪಟ್ಟದೇ, ತನ್ನ ಸ್ವಂತ ದುಡಿಮೆಯಲ್ಲಿ ಜೀವನ ನಡೆಸುವ ಮಟ್ಟಕ್ಕೆ ಬೆಳೆದು ನಿಂತಿದ್ದಾಳೆ. ಈ ರೀತಿ ಬದುಕುವುದಕ್ಕೆ ಗಟ್ಟಿ ಮನಸ್ಸು ಇದ್ದರೆ ಸಾಲಲ್ಲ, ಈ ಕೆಲವು ಗುಣಗಳು ಇರಲೇಬೇಕಂತೆ. ಹಾಗಾದ್ರೆ ಆ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

Relationship Tips : ಈ ಗುಣಗಳಿರುವ ಮಹಿಳೆಯರಿಗೆ ಪುರುಷರ ಅಗತ್ಯವೇ ಇರಲ್ವಂತೆ
Relationship Tips
Follow us
| Updated By: ಅಕ್ಷತಾ ವರ್ಕಾಡಿ

Updated on: Nov 05, 2024 | 4:25 PM

ಅಡುಗೆ ಮನೆಗೆ ಸೀಮಿತವಾಗಿದ್ದ ಹೆಣ್ಣೊಬ್ಬಳು ಇಂದು ಎಲ್ಲಾ ಕ್ಷೇತ್ರದಲ್ಲಿಯೂ ಕೈಯಾಡಿಸುತ್ತಿದ್ದಾಳೆ. ಪುರುಷ ಪ್ರಧಾನ ವ್ಯವಸ್ಥೆಯ ಕಟ್ಟುಪಾಡುಗಳನ್ನು ಮೀರಿ ಬದುಕನ್ನು ಕಟ್ಟಿಕೊಂಡಿದ್ದಾಳೆ. ಅದಲ್ಲದೇ,ಮನಸ್ಸು ಒಪ್ಪದ ವ್ಯಕ್ತಿಯೊಂದಿಗೆ ಇರಲು ಇಷ್ಟಪಡದೇ, ಆ ಸಂಬಂಧದಿಂದ ದೂರಾಗಿ ಒಂಟಿ ಜೀವನ ನಡೆಸುವ ಮಹಿಳೆಯರನ್ನು ನೋಡಿರಬಹುದು. ಸಣ್ಣ ವಯಸ್ಸಿನಲ್ಲಿ ಪತಿಯನ್ನು ಕಳೆದುಕೊಂಡು ಯಾವ ಪುರುಷನ ನೆರಳಿಲ್ಲದೇ ಕುಟುಂಬದ ಜವಾಬ್ದಾರಿಯನ್ನು ನಿಭಾಯಿಸುವವರು ಹೆಣ್ಣು ಮಕ್ಕಳು ಇದ್ದಾರೆ. ಆದರೆ ಈ ರೀತಿಯ ಗುಣವಿರುವ ಹೆಣ್ಣು ಮಕ್ಕಳು ಮಾತ್ರ ಒಂಟಿಯಾಗಿ ಈ ಸಮಾಜದಲ್ಲಿ ಜೀವನ ಕಟ್ಟಿಕೊಳ್ಳಲು ಸಾಧ್ಯ.

ಸಾಹಸಮಯ ಹಾಗೂ ಧೈರ್ಯವಂತ ವ್ಯಕ್ತಿತ್ವ :

ಒಂಟಿಯಾಗಿ ಬದುಕುವ ಹೆಚ್ಚಿನ ಮಹಿಳೆಯರು ಸ್ವತಂತ್ರ ಜೀವನವನ್ನು ನಡೆಸಲು ಮುಖ್ಯ ಕಾರಣವೇ ಅವರಲ್ಲಿರುವ ಧೈರ್ಯವಂತ ವ್ಯಕ್ತಿತ್ವ. ಜೀವನದಲ್ಲಿ ಏನೇ ಎದುರಾದರೂ ಸಾಹಸಮಯಿ ಗುಣದ ಮೂಲಕ ಎಲ್ಲವನ್ನು ನಿಭಾಯಿಸಿಕೊಂಡು ಹೋಗುತ್ತಾರೆ. ಹೀಗಾಗಿ ಈ ಗುಣವಿರುವ ಮಹಿಳೆಯರು ಪುರುಷರಿಲ್ಲದೇ ಜೀವನವನ್ನು ಮುನ್ನಡೆಸಿಕೊಂಡು ಹೋಗಲು ಸಾಧ್ಯ.

ಸ್ವಯಂ ಜವಾಬ್ದಾರಿ ತೆಗೆದುಕೊಳ್ಳುವುದು :

ಯಾವ ಮಹಿಳೆಯೂ ತನ್ನ ಕುಟುಂಬ ಹಾಗೂ ಮಕ್ಕಳ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾಳೆಯೋ ಆಕೆಯೂ ಯಾವುದೇ ಪುರುಷನ ಮೇಲೆ ಅವಲಂಬಿತವಾಗಿರುವುದಿಲ್ಲ. ಒಂಟಿಯಾಗಿಯೇ ಎಲ್ಲಾ ಜವಾಬ್ದಾರಿ ಹಾಗೂ ಹೊಣೆಗಾರಿಕೆಗಳನ್ನು ನಿಭಾಯಿಸುತ್ತಾಳೆ. ಏನೇ ಸಮಸ್ಯೆಗಳಿದ್ದರೂ ಅದನ್ನು ಸುಲಭವಾಗಿ ಪರಿಹರಿಸಿಕೊಂಡು ಹೋಗುತ್ತಾಳೆ.

ಸದಾ ಸಂತೋಷದಿಂದಿರುವುದು :

ಒಂಟಿಯಾಗಿರಲಿ ಅಥವಾ ಕುಟುಂಬದ ಸದಸ್ಯರೊಂದಿಗಿರಲಿ ಸದಾ ಸಂತೋಷವಾಗಿರುವ ಮಹಿಳೆಗೆ ಪುರುಷನ ಅಗತ್ಯವೇ ಇರುವುದಿಲ್ಲ. ತಮ್ಮಲ್ಲಿ ತಾವು ಸಂತೋಷವನ್ನು ಕಾಣುವ ಮೂಲಕ ಕುಟುಂಬ, ಮನೆ ಮಕ್ಕಳನ್ನು ನಿಭಾಯಿಸುತ್ತಾಳೆ. ಯಾರಾದರೂ ಸಹಾಯ ಮಾಡಿದರೆ ಈ ಮಹಿಳೆಯರಲ್ಲಿ ಕೃತಜ್ಞತೆ ಭಾವವೊಂದು ಇರುತ್ತದೆ.

ಸ್ವತಂತ್ರ ಮನೋಭಾವ :

ಸ್ವತಂತ್ರ ಮನೋಭಾವವನ್ನು ಹೊಂದಿರುವ ಮಹಿಳೆಯರೂ ಯಾರ ಮೇಲು ಅವಲಂಬಿತರಾಗಿರುವುದಿಲ್ಲ. ಸ್ವತಂತ್ರ ನಿರ್ಧಾರದೊಂದಿಗೆ ತಮ್ಮ ಇಷ್ಟದಂತೆ ಬದುಕುತ್ತಾರೆ. ಸದಾ ಆರಾಮದಾಯಕವಾಗಿದ್ದು ಕೊಂಡೆ ತಾವು ಅಂದುಕೊಂಡಂತೆ ಜೀವನ ನಡೆಸುತ್ತಾರೆ. ಜೀವನದ ಪ್ರತಿ ಕ್ಷಣವನ್ನು ಆಸ್ವಾದಿಸುತ್ತಾರೆ. ಹೀಗಾಗಿ ಈ ಗುಣವಿರುವ ಹೆಣ್ಣು ಮಕ್ಕಳಿಗೆ ಗಂಡಸರ ಅವಶ್ಯಕತೆಯೇ ಇರಲ್ಲ.

ಧನಾತ್ಮಕ ದೃಷ್ಟಿಕೋನ :

ಪುರುಷನ ಅಗತ್ಯವಿಲ್ಲದ ಮಹಿಳೆಯರಲ್ಲಿ ಸಕಾರಾತ್ಮಕ ದೃಷ್ಟಿಕೋನವು ಸಾಮಾನ್ಯವಾಗಿರುತ್ತದೆ. ಜೀವನದಲ್ಲಿ ಏನೇ ಏರಿಳಿತಗಳಾದರೂ ಅದನ್ನು ಪಾಸಿಟಿವ್ ಆಗಿಯೇ ಸ್ವೀಕರಿಸುತ್ತಾರೆ. ಈ ವೇಳೆಯಲ್ಲಿ ಸಮಸ್ಯೆಗಳನ್ನು ನಿರ್ಲಕ್ಷಿಸುವುದಿಲ್ಲ, ಬದಲಾಗಿ ಆ ಸಮಸ್ಯೆಗಳನ್ನು ಒಪ್ಪಿಕೊಂಡು ಅದರೊಂದಿಗೆ ವ್ಯವಹರಿಸುವ ಗುಣವಿರುತ್ತದೆ.

ಇದನ್ನೂ ಓದಿ: Chanakya Niti : ಇಂತಹ ಜಾಗದಲ್ಲಿ ತಾಳ್ಮೆ ವಹಿಸಿದರೆ ನಿಮಗೆ ನೆಮ್ಮದಿ ಸಿಗುವುದು ಖಂಡಿತ

ಸಮತೋಲನ ಕಾಯ್ದುಕೊಳ್ಳುವುದು :

ಜೀವನದಲ್ಲಿ ಸಮತೋಲನವನ್ನು ಕಾಯ್ದುಕೊಳ್ಳುವ ವ್ಯಕ್ತಿತ್ವವು ಎಲ್ಲರಲ್ಲಿಯೂ ಇರುವುದಿಲ್ಲ. ತಮ್ಮ ಸ್ವಂತ ನಿರ್ಧಾರದಲ್ಲಿ ನಿಖರತೆ ಹಾಗೂ ದೃಢತೆ ಇರುವ ಮಹಿಳೆಯರ ಪುರುಸಷರ ಮೇಲೆ ಅವಲಂಬಿತರಾಗುವುದು ಕಡಿಮೆಯೇ. ಈ ಹೆಂಗಳೆಯರು ಜೀವನದಲ್ಲಿ ಪ್ರತಿಯೊಂದು ಅಂಶದಲ್ಲಿಯೂ ಸಮತೋಲನವನ್ನು ಕಾಯ್ದುಕೊಳ್ಳುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜಿಲ್ಲೆಯ ಬಗ್ಗೆ ಪ್ರೀತಿಯಿದ್ದರೆ ಶಿವಕುಮಾರ್ ಉಸ್ತುವಾರಿ ಆಗಬೇಕಿತ್ತು: ಅಶೋಕ
ಜಿಲ್ಲೆಯ ಬಗ್ಗೆ ಪ್ರೀತಿಯಿದ್ದರೆ ಶಿವಕುಮಾರ್ ಉಸ್ತುವಾರಿ ಆಗಬೇಕಿತ್ತು: ಅಶೋಕ
ಮಂತ್ರಿಗಳು ವರ್ಗಾವಣೆಯನ್ನು ದಂಧೆ ಮಾಡಿಕೊಂಡಿರುವಂತಿದೆ: ಪ್ರಲ್ಹಾದ್ ಜೋಶಿ
ಮಂತ್ರಿಗಳು ವರ್ಗಾವಣೆಯನ್ನು ದಂಧೆ ಮಾಡಿಕೊಂಡಿರುವಂತಿದೆ: ಪ್ರಲ್ಹಾದ್ ಜೋಶಿ
ನಿಖಿಲ್ ವಿರುದ್ಧ ಯಾಕೆ ಎಫ್ಐಆರ್ ಅಂತ ಇನ್ನೂ ಅರ್ಥವಾಗಿಲ್ಲ: ಕುಮಾರಸ್ವಾಮಿ
ನಿಖಿಲ್ ವಿರುದ್ಧ ಯಾಕೆ ಎಫ್ಐಆರ್ ಅಂತ ಇನ್ನೂ ಅರ್ಥವಾಗಿಲ್ಲ: ಕುಮಾರಸ್ವಾಮಿ
ವಿರಾಟ್ ಕೊಹ್ಲಿ ಹುಟ್ಟುಹಬ್ಬ, ಕೋಲಾರದಲ್ಲಿ ಅಭಿಮಾನಿಗಳಿಂದ ಸಂಭ್ರಮ
ವಿರಾಟ್ ಕೊಹ್ಲಿ ಹುಟ್ಟುಹಬ್ಬ, ಕೋಲಾರದಲ್ಲಿ ಅಭಿಮಾನಿಗಳಿಂದ ಸಂಭ್ರಮ
ಅಭಿಮಾನಿ ಮತ್ತು ಕಾರ್ಯಕರ್ತರು ತಂದ ಕೇಕನ್ನು ಕಟ್ ಮಾಡಿದ ಬಿವೈ ವಿಜಯೇಂದ್ರ
ಅಭಿಮಾನಿ ಮತ್ತು ಕಾರ್ಯಕರ್ತರು ತಂದ ಕೇಕನ್ನು ಕಟ್ ಮಾಡಿದ ಬಿವೈ ವಿಜಯೇಂದ್ರ
ಪ್ರಬಲ ಸುದ್ದಿಸಂಸ್ಥೆಯಾಗಿರುವ ಟಿವಿ9 ನೀಡುವ ಪ್ರಚಾರವೇ ನನಗೆ ಸಾಕು: ದೇವೇಗೌಡ
ಪ್ರಬಲ ಸುದ್ದಿಸಂಸ್ಥೆಯಾಗಿರುವ ಟಿವಿ9 ನೀಡುವ ಪ್ರಚಾರವೇ ನನಗೆ ಸಾಕು: ದೇವೇಗೌಡ
ಎಲ್ಲ ತನಿಖಾ ಸಂಸ್ಥೆಗಳು ಸರ್ಕಾರಗಳ ಅಧೀನದಲ್ಲಿರುತ್ತವೆ: ಸ್ನೇಹಮಯಿ ಕೃಷ್ಣ
ಎಲ್ಲ ತನಿಖಾ ಸಂಸ್ಥೆಗಳು ಸರ್ಕಾರಗಳ ಅಧೀನದಲ್ಲಿರುತ್ತವೆ: ಸ್ನೇಹಮಯಿ ಕೃಷ್ಣ
ಕಾಂಗ್ರೆಸ್​ಗೆ ಮತನೀಡಿ ಅಧಿಕಾರಕ್ಕೆ ತಂದ ಹಿಂದೂಗಳು ಸೈತಾನರೇ? ಕರಂದ್ಲಾಜೆ
ಕಾಂಗ್ರೆಸ್​ಗೆ ಮತನೀಡಿ ಅಧಿಕಾರಕ್ಕೆ ತಂದ ಹಿಂದೂಗಳು ಸೈತಾನರೇ? ಕರಂದ್ಲಾಜೆ
‘ನಿಮ್ಮ ನಿಯತ್ತು ನೋಡಬೇಕಿತ್ತು’; ಹನುಮಂತ ವಿರುದ್ಧ ಸಿಡಿದೆದ್ದ ಚೈತ್ರಾ
‘ನಿಮ್ಮ ನಿಯತ್ತು ನೋಡಬೇಕಿತ್ತು’; ಹನುಮಂತ ವಿರುದ್ಧ ಸಿಡಿದೆದ್ದ ಚೈತ್ರಾ
ವಿಜಯಪುರ ಅಹೋರಾತ್ರಿ ಧರಣಿ; ಟೆಂಟ್​ನಲ್ಲೇ ರಾತ್ರಿ ಕಳೆದ ಯತ್ನಾಳ್, ಶೋಭಾ
ವಿಜಯಪುರ ಅಹೋರಾತ್ರಿ ಧರಣಿ; ಟೆಂಟ್​ನಲ್ಲೇ ರಾತ್ರಿ ಕಳೆದ ಯತ್ನಾಳ್, ಶೋಭಾ