ಬ್ಯಾಚೂಲರ್ಗಳಿಗೆ ಸುಲಭವಾದ ಸ್ಪೆಷಲ್ ಫಿಶ್ ಫ್ರೈ; ಮಾಡುವ ವಿಧಾನ ಹೀಗಿದೆ
ಹೋಟೆಲ್ಗೆ ಹೋಗಬೇಕು ಅಂದರೆ ವಾರಕ್ಕೆ ಸಾಕಾಗುವ ಹಣ ಒಂದೇ ದಿನಕ್ಕೆ ಖರ್ಚಾಗುತ್ತದೆ. ಅದೂ ಕೂಡಾ ತೃಪ್ತಿಯಾಗಲ್ಲ. ಹೊರಗಡೆ ಊಟ ತಿಂದು ಸ್ವಲ್ಪ ಹೊತ್ತಿಗೆ ಸುಸ್ತಾಗುತ್ತದೆ. ಇವೆಲ್ಲದರ ಮಧ್ಯೆ ಬ್ಯಾಚೂಲರ್ಸ್ ಊಟನೇ ಬೇಡ ಅಂತ ಮಲಗಿ ಬಿಡ್ತಾರೆ.
ಭಾನುವಾರ (Sunday) ಅಂದರೆ ವಾರದ ಕೊನೆ ದಿನ. ಎಲ್ಲರೂ ರೆಸ್ಟ್ ಮಾಡುವ ದಿನ. ಜೊತೆಗೆ ಮಾಂಸ (Meat) ಪ್ರಿಯರು ಗಮ್ಮತ್ ಮಾಡುವ ಡೇ. ಯಾಕೆಂದರೆ ವಾರ ಪೂರ್ತಿ ಆಫೀಸ್ನಲ್ಲಿ ಕೆಲಸ ಮಾಡಿ ಸಾಕಾಗಿರುತ್ತದೆ. ನಾಲಿಗೆ ರುಚಿರುಚಿಯಾದ ಬಾಡೂಣ ಕೇಳುತ್ತೆ. ಫ್ಯಾಮಿಲಿ ಇದ್ದವರಿಗೆ ನೋ ಟೆನ್ಷನ್. ಆದರೆ, ಬ್ಯಾಚೂಲರ್ಸ್? ಬ್ಯಾಚೂಲರ್ಗಳಿಗೆ ಅಮ್ಮನ ಅಡುಗೆ ಕಾಡುವ ದಿನ ಅಂದರೆ ಅದು ಭಾನುವಾರ. ಆದರೆ ಆ ಚಿಂತೆ ಈಗ ಬೇಡ. ಬ್ಯಾಚೂಲರ್ಸ್ ಚಿಂತೆ ಬಿಟ್ಟಾಕಿ, ನಾವು ಹೇಳಿದ ಈ ರೆಸಿಪಿಯನ್ನು ನೀವೂ ಮಾಡಿ.
ಹೋಟೆಲ್ಗೆ ಹೋಗಬೇಕು ಅಂದರೆ ವಾರಕ್ಕೆ ಸಾಕಾಗುವ ಹಣ ಒಂದೇ ದಿನಕ್ಕೆ ಖರ್ಚಾಗುತ್ತದೆ. ಅದೂ ಕೂಡಾ ತೃಪ್ತಿಯಾಗಲ್ಲ. ಹೊರಗಡೆ ಊಟ ತಿಂದು ಸ್ವಲ್ಪ ಹೊತ್ತಿಗೆ ಸುಸ್ತಾಗುತ್ತದೆ. ಇವೆಲ್ಲದರ ಮಧ್ಯೆ ಬ್ಯಾಚೂಲರ್ಸ್ ಊಟನೇ ಬೇಡ ಅಂತ ಮಲಗಿ ಬಿಡ್ತಾರೆ. ಹೀಗೆ ಮಾಡುವ ಬದಲು ನಿಮಗೆ ಇಷ್ಟವಾಗುವ ಫಿಶ್ ಫ್ರೈನ ನೀವೇ ಮಾಡಿ ಸವಿಯಿರಿ.
ಸ್ಪೆಷಲ್ ಫಿಶ್ ಫ್ರೈ ಮಾಡಲು ಬೇಕಾಗುವ ಸಾಮಾಗ್ರಿಗಳು: ಬಂಗಡೆ ಮೀನು- ನಾಲ್ಕು ಮೀನು (ಮಧ್ಯಮ ಗಾತ್ರ) ಖಾರದ ಪುಡಿ ನಿಂಬೆ ರಸ ಉಪ್ಪು ಅರಿಶಿನ ಪುಡಿ ಮೊಟ್ಟೆ ಎರಡು ಚಮಚ ಅಕ್ಕಿ ಹಿಟ್ಟು
ಸ್ಪೆಷಲ್ ಫಿಶ್ ಫ್ರೈ ಮಾಡುವ ವಿಧಾನ: ಮೊದಲು 5ರಿಂದ ಆರು ಟೀ ಸ್ಫೂನ್ ಖಾರದ ಪುಡಿಯನ್ನು ಒಂದು ಬೌಲ್ಗೆ ಹಾಕಿ. ಅದಕ್ಕೆ ಕಾಲು ಚಮಚ ಅರಿಶಿನ ಪುಡಿ ಸೇರಿಸಿ. ಅರ್ಧಭಾಗದಷ್ಟು ನಿಂಬೆ ರಸ, ರುಚಿಗೆ ತಕ್ಕಷ್ಟು ಉಪ್ಪು, ಎರಡು ಚಮಚ ಅಕ್ಕಿ ಹಿಟ್ಟು, ಒಂದು ಮೊಟ್ಟೆ ಜೊತೆಗೆ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಹುಳಿ, ಉಪ್ಪು, ಖಾರ ಹದವಾಗಿದೆ ಅಂತ ಅನಿಸಿದಾಗ ಚೆನ್ನಾಗಿ ತೊಳೆದುಕೊಂಡ ಮೀನಿಗೆ ಹಚ್ಚಿ. ಖಾರದ ಲೇಪನ ಸ್ವಲ್ಪ ದಪ್ಪವಾಗಿರಲಿ. ಒಂದು ಗಂಟೆ ಹಾಗೇ ಬಿಡಿ. ನಂತರ ತವದಲ್ಲಿ ಸಣ್ಣ ಉರಿ ಬೆಂಕಿಯೊಂದಿಗೆ ಫ್ರೈ ಮಾಡಿ. ರುಚಿ ರುಚಿಯಾದ ಫಿಶ್ ಫ್ರೈ ಸವಿಯಿರಿ.
ಇದನ್ನೂ ಓದಿ
ತರಬೇತಿ ವೇಳೆ ಹೃದಯಾಘಾತದಿಂದ ಕೊನೆಯುಸಿರೆಳೆದ ಐಆರ್ಬಿ ಪೊಲೀಸ್; ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
ಪತಿ ರಾಮು ನಿಧನದ ಬಳಿಕ ಮತ್ತೆ ನಟನೆ ಆರಂಭಿಸಿದ ಮಾಲಾಶ್ರೀ; ಹೊಸ ಸಿನಿಮಾದಲ್ಲಿ ಡಾಕ್ಟರ್ ಪಾತ್ರ