Summer Makeup: ಬೇಸಿಗೆಯಲ್ಲಿ ಮೇಕಪ್ ಹಾಳಾಗದಿರಲು ಹೀಗೆ ಮಾಡಿ!

ಈ ಋತುವಿನಲ್ಲಿ, ಹಗಲಿನಲ್ಲಿ ಯಾವುದೇ ಕಾರ್ಯಕ್ರಮ ಅಥವಾ ಪಾರ್ಟಿಗೆ ಹೋಗಬೇಕಾದರೆ, ನಿಮ್ಮ ಮೇಕಪ್ ಬಗ್ಗೆ ನೀವು ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಮೇಕಪ್ ಅನ್ನು ಸ್ಥಿರವಾಗಿಡಲು ನೀರು ಮತ್ತು ಕೆಲವು ಪುಡಿ ಆಧಾರಿತ ಸೌಂದರ್ಯ ಉತ್ಪನ್ನಗಳು ಸಹಾಯ ಮಾಡುತ್ತದೆ. ಜೊತೆಗೆ ಮೇಕಪ್ ಅನ್ನು ದೀರ್ಘಕಾಲ ಉಳಿಸಿಕೊಳ್ಳಲು ಕೆಲವು ಉತ್ತಮ ಸಲಹೆಗಳು ಇಲ್ಲಿವೆ.

Summer Makeup: ಬೇಸಿಗೆಯಲ್ಲಿ ಮೇಕಪ್ ಹಾಳಾಗದಿರಲು ಹೀಗೆ ಮಾಡಿ!
Summer makeup Tips
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on:Apr 15, 2024 | 3:45 PM

ಬೇಸಿಗೆಯಲ್ಲಿ ಮೇಕಪ್ ಮಾಡಿಕೊಳ್ಳುವುದು ಕಷ್ಟದ ಕೆಲಸಗಳಲ್ಲಿ ಒಂದಾಗಿದೆ. ಈ ಋತುವಿನಲ್ಲಿ ಮೇಕಪ್ ಹಾಳಾಗದಂತೆ ಕಾಪಾಡಿಕೊಳ್ಳುವುದು ಅತ್ಯಂತ ಸವಾಲಿನ ಕೆಲಸ ಎಂದರೆ ತಪ್ಪಾಗಲಾರದು. ಬೇಸಿಗೆಯಲ್ಲಿ ಬೆವರಿನ ಸಮಸ್ಯೆಯಿಂದ ಮುಕ್ತಿ ಸಿಗುವುದಿಲ್ಲ. ಇದು ನಿಮ್ಮ ಸುಂದರವಾದ ಮೇಕಪ್ ಅನ್ನು ಕೂಡ ಹಾಳುಮಾಡುತ್ತದೆ. ಈ ಋತುವಿನಲ್ಲಿ, ಹಗಲಿನಲ್ಲಿ ಯಾವುದೇ ಕಾರ್ಯಕ್ರಮ ಅಥವಾ ಪಾರ್ಟಿಗೆ ಹಾಜರಾಗಬೇಕಾದರೆ, ನಿಮ್ಮ ಮೇಕಪ್ ಬಗ್ಗೆ ನೀವು ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಮೇಕಪ್ ಅನ್ನು ಸ್ಥಿರವಾಗಿಡಲು ನೀರು ಮತ್ತು ಕೆಲವು ಪುಡಿ ಆಧಾರಿತ ಸೌಂದರ್ಯ ಉತ್ಪನ್ನಗಳು ಸಹಾಯ ಮಾಡುತ್ತದೆ. ಜೊತೆಗೆ ಮೇಕಪ್ ಅನ್ನು ದೀರ್ಘಕಾಲ ಉಳಿಸಿಕೊಳ್ಳಲು ಕೆಲವು ಉತ್ತಮ ಸಲಹೆಗಳು ಇಲ್ಲಿವೆ.

ಮಾಯಿಶ್ಚರೈಸರ್ ಹಚ್ಚಿ:

ಚರ್ಮವು ಎಣ್ಣೆಯುಕ್ತವಾಗುವುದನ್ನು ತಡೆಯಲು, ಹೆಚ್ಚಿನ ಜನರು ಬೇಸಿಗೆಯಲ್ಲಿ ಮಾಯಿಶ್ಚರೈಸರ್ ಹಚ್ಚುವುದನ್ನು ನಿಲ್ಲಿಸುತ್ತಾರೆ. ಆದರೆ ನಿಮ್ಮ ಮುಖವನ್ನು ತೇವಗೊಳಿಸದಿದ್ದಾಗಲೇ ಹೆಚ್ಚು ಬೆವರುತ್ತೀರಿ. ಹಾಗಾಗಿ ನೀರು ಮತ್ತು ಜೆಲ್ ಆಧಾರಿತ ಮಾಯಿಶ್ಚರೈಸರ್ ಅನ್ನು ಬಳಸಬಹುದು.

ಸನ್ ಸ್ಕ್ರೀನ್ ಬಳಸಿ:

ಸೂರ್ಯನ ಬೆಳಕಿನಿಂದ ಚರ್ಮವನ್ನು ರಕ್ಷಿಸಲು ಮತ್ತು ಚರ್ಮವನ್ನು ಹೈಡ್ರೇಟ್ ಆಗಿಡಲು ಸನ್ ಸ್ಕ್ರೀನ್ ಹಚ್ಚಿ. ಮೇಕಪ್ ಹಚ್ಚುವ ಮೊದಲು ಇದನ್ನು ಬಳಸುವುದನ್ನು ಮರೆಯಬೇಡಿ. ಇತ್ತೀಚಿನ ದಿನಗಳಲ್ಲಿ, ಸನ್ ಸ್ಕ್ರೀನ್ ಆಧಾರಿತ ಮೇಕಪ್ ಕೂಡ ಮಾರುಕಟ್ಟೆಗೆ ಬಂದಿದೆ. ಇದನ್ನು ಬಳಸುವುದರಿಂದ, ಚರ್ಮವನ್ನು ಸೂರ್ಯನ ಕಿರಣಗಳಿಂದ ರಕ್ಷಿಸಿಕೊಳ್ಳಬಹುದು ಜೊತೆಗೆ ನಿಮ್ಮ ಮೇಕಪ್ ಕೂಡ ಹಾಳಾಗುವುದಿಲ್ಲ.

ಪ್ರೈಮರ್ ಹಚ್ಚಿಕೊಳ್ಳುವುದನ್ನು ಮರೆಯಬೇಡಿ:

ಮೇಕಪ್ ಪ್ಯಾಚ್ ಗಳನ್ನು ತಪ್ಪಿಸಲು ಬಯಸಿದರೆ, ಬೇಸಿಗೆಯಲ್ಲಿ ಪ್ರೈಮರ್ ಹಚ್ಚುವುದು ಬಹಳ ಮುಖ್ಯ. ಪ್ರೈಮರ್ ಮೇಕಪ್ನ ಅತ್ಯಗತ್ಯ ಹಂತ. ಆದರೆ ಪ್ರೈಮರ್ ನ ಆಯ್ಕೆ ಚೆನ್ನಾಗಿರಲಿ. ಇದನ್ನು ಹಂತ ಹಂತವಾಗಿ ಮುಖದ ಮೇಲೆಲ್ಲಾ ಹಚ್ಚಿರಿ. ಮೂಗು, ಕಣ್ಣುಗಳ ಕೆಳಗೆ, ಕೆನ್ನೆಗೆ ಅನ್ವಯಿಸಿ. 10 ನಿಮಿಷ ಬಿಡಿ. ಹೀಗೆ ಮಾಡುವುದರಿಂದ ಮೇಕಪ್ ಬೇಗನೆ ಹಾಳಾಗುವುದಿಲ್ಲ.

ಇದನ್ನೂ ಓದಿ: ಸಣ್ಣ ವಯಸ್ಸಿನಲ್ಲಿ ನಿಮ್ಮ ಸೌಂದರ್ಯ ಮಾಸುತ್ತಿದೆಯೇ? ಹಾಗಿದ್ರೆ ಅಭ್ಯಾಸಗಳಿಂದ ದೂರವಿರಿ

ಕಲೆಗಳನ್ನು ಮರೆ ಮಾಡಲು ಈ ಟ್ರಿಕ್ ಮಾಡಿ ನೋಡಿ:

ಮುಖದ ಮೇಲೆ ಗೋಚರಿಸುವ ಕಲೆಗಳನ್ನು ಮರೆ ಮಾಡಲು ಹಲವು ಬಾರಿ ಹೆಚ್ಚು ಕಲರ್ ಗಳನ್ನು ಹಚ್ಚಲಾಗುತ್ತದೆ. ಆಗ ಫೌಂಡೇಶನ್ ಮುಖದ ಮೇಲೆ ಹೆಚ್ಚು ಕಾಣಿಸುತ್ತದೆ. ಹಾಗಾಗಿ ಮುಖದ ಮೇಲೆ ತೆಳುವಾದ ಮೇಕಪ್ ಅನ್ವಯಿಸಿ. ನಂತರ ಸ್ವಲ್ಪ ಫೌಂಡೇಶನ್ ಅನ್ವಯಿಸಿ. ಲಾಂಗ್ ವೇ ಐ ಲೈನರ್ ಮತ್ತು ಲಿಪ್ ಕಲರ್ ಬಳಸಿ.

ಮೇಕಪ್ ಸೆಟ್ಟಿಂಗ್ ಸ್ಪ್ರೆ ಬಳಸಿ:

ಯಾವಾಗಲೂ ನಿಮ್ಮ ಚರ್ಮದ ಟೋನ್ ಗೆ ಹೊಂದಿಕೊಳ್ಳುವಂತಹ ಉತ್ಪನ್ನಗಳನ್ನು ಆಯ್ಕೆ ಮಾಡಿ. ಇದು ತುಂಬಾ ಸುಂದರವಾಗಿ ಕಾಣುವಂತೆ ಮಾಡುತ್ತದೆ. ದೀರ್ಘಕಾಲ ಮೇಕಪ್ ಇರಿಸಲು ಮೇಕಪ್ ಸೆಟ್ಟಿಂಗ್ ಸ್ಪ್ರೆ ಬಳಸಿ. ಇದು ಸ್ವಯಂಚಾಲಿತವಾಗಿ ಚರ್ಮವನ್ನು ಸ್ಮಡ್ಜ್ ಮಾಡುತ್ತದೆ. ಎಣ್ಣೆಯುಕ್ತ ಚರ್ಮದವರು ಮ್ಯಾಟಿಫೈಯಿಂಗ್ ಸ್ಪ್ರೇ ಅನ್ವಯಿಸಿ. ಒಣ ಚರ್ಮದವರು ಸ್ಪ್ರೇ ಬಳಕೆ ತಪ್ಪಿಸಿ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:47 pm, Sun, 14 April 24

ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ