AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫ್ರಿಡ್ಜ್‌ನಲ್ಲಿಟ್ಟ ತರಕಾರಿ ವಾರಗಟ್ಟಲೆ ಫ್ರೆಶ್‌ ಆಗಿರಬೇಕೆಂದರೆ ಈ ಟಿಪ್ಸ್‌ ಅನುಸರಿಸಿ

ಎಲ್ಲಾ ವಸ್ತುಗಳು ತಾಜಾವಾಗಿರುತ್ತದೆ ಎಂಬ ಕಾರಣಕ್ಕೆ ಹಾಲು, ಹಣ್ಣು ತರಕಾರಿ, ಮೀನು ಮಾಂಸ ಎಲ್ಲವನ್ನು ಫ್ರಿಡ್ಜ್‌ನಲ್ಲಿ ಸ್ಟೋರ್‌ ಮಾಡಿಡುತ್ತೇವೆ. ಹೀಗೆ ಫ್ರಿಡ್ಜ್‌ನಲ್ಲಿ ಇಟ್ಟರೂ ಸಹ ಕೆಲವೊಂದು ಬಾರಿ ತರಕಾರಿಗಳು ಬಹು ಬೇಗನೆ ಕೊಳೆತು ಬಿಡುತ್ತವೆ ಇಲ್ಲವೇ ಒಣಗಿ ಬಿಡುತ್ತದೆ. ನೀವು ಕೂಡ ಇದೇ ಸಮಸ್ಯೆಯನ್ನು ಎದುರಿಸುತ್ತಿದ್ದೀರಾ? ಹಾಗಿದ್ರೆ ತರಕಾರಿ ವಾರಗಟ್ಟಲೆ ಫ್ರೆಶ್‌ ಆಗಿರಲು ಅವುಗಳನ್ನು ಯಾವ ರೀತಿ ಫ್ರಿಡ್ಜ್‌ನಲ್ಲಿ ಸ್ಟೋರ್‌ ಮಾಡಿಡಬೇಕು ಎಂಬುದನ್ನು ತಿಳಿದುಕೊಳ್ಳಿ.

ಫ್ರಿಡ್ಜ್‌ನಲ್ಲಿಟ್ಟ ತರಕಾರಿ ವಾರಗಟ್ಟಲೆ ಫ್ರೆಶ್‌ ಆಗಿರಬೇಕೆಂದರೆ ಈ ಟಿಪ್ಸ್‌ ಅನುಸರಿಸಿ
ಸಾಂದರ್ಭಿಕ ಚಿತ್ರ Image Credit source: Getty Images
ಮಾಲಾಶ್ರೀ ಅಂಚನ್​
|

Updated on: Sep 02, 2026 | 7:46 PM

Share

ಬಹುತೇಕ ಎಲ್ಲರ ಮನೆಗಳಲ್ಲೂ ಹಣ್ಣು ತರಕಾರಿಗಳನ್ನು (vegetables) ಫ್ರಿಡ್ಜ್‌ನಲ್ಲಿಯೇ ಸ್ಟೋರ್‌ ಮಾಡಿಡುತ್ತಾರೆ. ಹೌದು ತರಕಾರಿಗಳು ಅನೇಕ ದಿನಗಳ ವರೆಗೆ ತಾಜಾವಾಗಿರುತ್ತದೆ ಎಂಬ ಕಾರಣಕ್ಕೆ ಮಾರುಕಟ್ಟೆಯಿಂದ ತಂದ ತಕ್ಷಣವೇ ಅವುಗಳನ್ನು ಫ್ರಿಡ್ಜ್‌ನಲ್ಲಿ ತುಂಬಿಸಿಡುತ್ತಾರೆ. ಹೀಗೆ ಮಾಡಿದರೂ ಕೆಲವೊಂದು ಬಾರಿ ತರಕಾರಿಗಳು ಒಂದೆರಡು ದಿನಗಳಲ್ಲಿ ಮೃದುವಾಗಿ ಬಿಡುತ್ತದೆ, ಕೊಳೆಯುತ್ತವೆ ಇಲ್ಲವೇ ಒಣಗಿ ಬಿಡುತ್ತವೆ. ತರಕಾರಿಗಳನ್ನು ಸರಿಯಾದ ರೀತಿಯಲ್ಲಿ ಸ್ಟೋರ್‌ ಮಾಡದಿದ್ದರೆ ಇಂತಹ ಸಮಸ್ಯೆಗಳು ಉದ್ಭವಿಸುವುದು ಸಾಮಾನ್ಯ. ಹಾಗಾಗಿ ಅನೇಕ ದಿನಗಳವರೆಗೆ ತರಕಾರಿಗಳು ತಾಜಾವಾಗಿರಲು ಅವುಗಳನ್ನು ಯಾವ ರೀತಿ ಫ್ರಿಡ್ಜ್‌ನಲ್ಲಿ ಸ್ಟೋರ್‌ ಮಾಡಿಡಬೇಕು ಎಂಬುದನ್ನು ತಿಳಿಯುವುದು ಮುಖ್ಯ. ಈ ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ತರಕಾರಿಗಳನ್ನು ರೆಫ್ರಿಜರೇಟರ್‌ನಲ್ಲಿ ಇಡುವ ಮೊದಲು ತೊಳೆಯಬೇಡಿ:

ಸಾಮಾನ್ಯವಾಗಿ ಪ್ರತಿಯೊಬ್ಬರೂ ಮಾರುಕಟ್ಟೆಯಿಂದ ತಂದಂತಹ ತರಕಾರಿಗಳನ್ನು ತೊಳೆದೇ ಫ್ರಿಡ್ಜ್‌ನಲ್ಲಿ ಸಂಗ್ರಹಿಸಿಡುತ್ತಾರೆ. ಹೀಗೆ ತರಕಾರಿಗಳನ್ನು ಮನೆಗೆ ತಂದ ತಕ್ಷಣ ತೊಳೆದು ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸುವ ಅಭ್ಯಾಸವನ್ನು ತಪ್ಪಿಸಿ. ಏಕೆಂದರೆ ತೊಳೆದ ನಂತರ ಉಳಿಯುವ  ಯಾವುದೇ ತೇವಾಂಶವು ತರಕಾರಿಗಳು ಬೇಗನೆ ಹಾಳಾಗಲು ಕಾರಣವಾಗಬಹುದು. ಹಾಗಾಗಿ ತರಕಾರಿಗಳನ್ನು ಅಡುಗೆಗೆ ಬಳಸುವ ಮುನ್ನ ತೊಳೆಯುವುದು ಉತ್ತಮ. ನೀವೇನಾದರೂ ತರಕಾರಿಗಳನ್ನು ಚೆನ್ನಾಗಿ ತೊಳೆದ ನಂತರವೇ ಅವುಗಳನ್ನು ಫ್ರಿಡ್ಜ್‌ನಲ್ಲಿ ಸಂಗ್ರಹಿಸುತ್ತೀರಿ ಎಂದಾದ್ರೆ ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸುವ ಮೊದಲು ಅವುಗಳನ್ನು ಚೆನ್ನಾಗಿ ಒಣಗಿಸಿ.

ಪೇಪರ್ ಟವಲ್ ಹ್ಯಾಕ್ ಉಪಯೋಗಿಸಿ:

ತರಕಾರಿಗಳನ್ನು ಬಾಕ್ಸ್‌ಗಳಲ್ಲಿ ಹಾಕಿ ಸ್ಟೋರ್‌ ಮಾಡುತ್ತೇವೆ. ಹೀಗೆ ಬರೀ ಬಾಕ್ಸ್‌ನಲ್ಲಿ ಇಡುವ ಬದಲು ಬಾಕ್ಸ್‌ನ ಅಥವಾ ತರಕಾರಿ ಸ್ಟೋರ್‌  ಮಾಡುವ ಚೀಲದಲ್ಲಿ ಕಾಗದದ ಟವೆಲ್ ಅಥವಾ ಕ್ಲೀನ್ ಪೇಪರ್ ನ್ಯಾಪ್ಕಿನ್‌ಗಳನ್ನು ಇರಿಸಿ. ಇದು ಹೆಚ್ಚುವರಿ ತೇವಾಂಶವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಕಾಗದವು ಒದ್ದೆಯಾಗಿದ್ದರೆ, ಅದನ್ನು ಬದಲಾಯಿಸಿ. ಈ ವಿಧಾನವು ಹಸಿರು ಎಲೆಗಳ ತರಕಾರಿಗಳಿಗೆ ವಿಶೇಷವಾಗಿ ಉಪಯುಕ್ತವಾಗಿರುತ್ತದೆ.

ಕತ್ತರಿಸಿಟ್ಟ ತರಕಾರಿಗಳನ್ನು ಸಂಗ್ರಹಿಸಬೇಡಿ:

ಬಹುತೇಕ ಎಲ್ಲರೂ ಅರ್ಧ ತರಕಾರಿಯನ್ನು ಅಡುಗೆಗೆ ಬಳಸಿ ಇನ್ನರ್ಧವನ್ನು ಫ್ರಿಡ್ಜ್‌ನಲ್ಲಿ ಇಟ್ಟು ಬಿಡುತ್ತಾರೆ. ಹೀಗೆ ಕತ್ತರಿಸಿಟ್ಟ ತರಕಾರಿ, ಹಣ್ಣುಗಳನ್ನು ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸುವುದರಿಂದ ಅವು ಬೇಗನೆ ಹಾಳಾಗಬಹುದು. ಆದ್ದರಿಂದ, ಕತ್ತರಿಸಿಟ್ಟ ತರಕಾರಿಗಳನ್ನು ಫ್ರಿಡ್ಜ್‌ನಲ್ಲಿ ಇಡಬೇಡಿ. ಒಂದು ವೇಳೆ ಅವುಗಳನ್ನು ಇಡಲೇಬೇಕು ಎಂದಾರೆ ಅವುಗಳನ್ನು ಸ್ವಚ್ಛ, ಒಣ, ಗಾಳಿಯಾಡದ ಪಾತ್ರೆಯಲ್ಲಿ ಸಂಗ್ರಹಿಸಿ ಮತ್ತು ಅವುಗಳನ್ನು ಆದಷ್ಟು ಬೇಗ ಬಳಸಿ.

ಎಲ್ಲಾ ತರಕಾರಿಗಳನ್ನು ಒಟ್ಟಿಗೆ ತುಂಬಿಸಬೇಡಿ:

ಎಲ್ಲಾ ತರಕಾರಿಗಳನ್ನು ಒಟ್ಟಿಗೆ ರೆಫ್ರಿಜರೇಟರ್‌ನಲ್ಲಿ ತುಂಬಿಸುವುದರಿಂದ ಆರ್ದ್ರತೆ ಹೆಚ್ಚಾಗುತ್ತದೆ  ಮತ್ತು ಇದು ತರಕಾರಿಗಳು ಬೇಗನೆ ಹಾಳಾಗಲು ಕಾರಣವಾಗಬಹುದು. ಆದ್ದರಿಂದ ಮೆಂತ್ಯೆ, ಪಾಲಕ್‌ ಇತ್ಯಾದಿ ಸೊಪ್ಪು ತರಕಾರಿಗಳನ್ನು ಬೇರೆಯೇ ಸಂಗ್ರಹಿಸಿಡಿ.

ಇದನ್ನೂ ಓದಿ: ನೀವು ಅರ್ಧ ನಿಂಬೆಹಣ್ಣನ್ನು ಫ್ರಿಡ್ಜ್ ನಲ್ಲಿ ಇಡುತ್ತಿದ್ದೀರಾ?

ಹಾಳಾದ ತರಕಾರಿಗಳನ್ನು ತಕ್ಷಣ ತೆಗೆದುಹಾಕಿ:

ನಿಮ್ಮ ರೆಫ್ರಿಜರೇಟರ್‌ನಲ್ಲಿಟ್ಟ ತರಕಾರಿಗಳನ್ನು ಆಗಾಗ್ಗೆ ಪರಿಶೀಲಿಸಿ. ಯಾವುದೇ ಕೊಳೆತಿರುವುದು ಅಥವಾ ಹಾಆಳಗಿರುವುದು ಕಂಡುಬಂದರೆ, ಅದನ್ನು ತಕ್ಷಣ ಎಸೆಯಿರಿ. ಏಕೆಂದರೆ ಹಾಳಾದ ತರಕಾರಿ ಹತ್ತಿರದ ಇತರ ವಸ್ತುಗಳ ಮೇಲೂ ಪರಿಣಾಮ ಬೀರಬಹುದು ಮತ್ತು ಫ್ರಿಡ್ಜ್‌ ಕೆಟ್ಟ ವಾಸನೆ ಬರಲು ಕಾರಣವಾಗಬಹುದು.

ರೆಫ್ರಿಜರೇಟರ್ ತಾಪಮಾನವನ್ನು ಸರಿಯಾಗಿ ಇರಿಸಿ:

ಹಣ್ಣುಗಳು ಮತ್ತು ತರಕಾರಿಗಳನ್ನು ದೀರ್ಘಕಾಲದವರೆಗೆ ತಾಜಾವಾಗಿಡಲು ಸರಿಯಾದ ರೆಫ್ರಿಜರೇಟರ್ ತಾಪಮಾನವನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ. ಸಾಮಾನ್ಯವಾಗಿ, 1 ರಿಂದ 4 ಡಿಗ್ರಿ ಸೆಲ್ಸಿಯಸ್ ನಡುವಿನ ತಾಪಮಾನವನ್ನು ಹಣ್ಣುಗಳು ಮತ್ತು ತರಕಾರಿಗಳಿಗೆ ಸೂಕ್ತವೆಂದು ಪರಿಗಣಿಸಲಾಗುತ್ತದೆ. ತುಂಬಾ ಕಡಿಮೆ ತಾಪಮಾನವು ಕೆಲವು ನೀರಿನಂಶವಿರುವ ಆಹಾರಗಳು ಹೆಪ್ಪುಗಟ್ಟಲು ಕಾರಣವಾಗಬಹುದು, ಕೆಲವೊಮ್ಮೆ ಅವು ತರಕಾರಿಗಳು ಬೇಗನೆ ಹಾಳಾಗಲು ಕಾರಣವಾಗಬಹುದು.

ಈ ರೀತಿಯಾಗಿ, ಸ್ವಲ್ಪ ಕಾಳಜಿ ಮತ್ತು ಸರಿಯಾದ ಶೇಖರಣಾ ವಿಧಾನಗಳನ್ನು ಅನುಸರಿಸುವುದರಿಂದ, ತರಕಾರಿಗಳನ್ನು ದೀರ್ಘಕಾಲದವರೆಗೆ ತಾಜಾವಾಗಿಡಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅತಿಯಾಗಿ ಮಾತನಾಡುವ ಬಿಗ್ ಬಾಸ್ ಸ್ಪರ್ಧಿಗಳಿಗೆ ವಾರ್ನಿಂಗ್ ಕೊಟ್ಟ ಅವಿನಾಶ್
ಅತಿಯಾಗಿ ಮಾತನಾಡುವ ಬಿಗ್ ಬಾಸ್ ಸ್ಪರ್ಧಿಗಳಿಗೆ ವಾರ್ನಿಂಗ್ ಕೊಟ್ಟ ಅವಿನಾಶ್
ಚರ್ಚೆಗೆ ಗ್ರಾಸವಾಯ್ತು ಬಿಜೆಪಿ ಎಂಎಲ್​​ಗೆ ಸಚಿವ ಮಲ್ಲಿಕಾರ್ಜುನ್ ಬೈದ ಬೈಗುಳ
ಚರ್ಚೆಗೆ ಗ್ರಾಸವಾಯ್ತು ಬಿಜೆಪಿ ಎಂಎಲ್​​ಗೆ ಸಚಿವ ಮಲ್ಲಿಕಾರ್ಜುನ್ ಬೈದ ಬೈಗುಳ
ಒಂದೇ ಗೋರಿಗೆ ಹಿಂದೂ-ಮುಸ್ಲಿಂ ಪೂಜೆ: ಬೀದರ್​​ನಲ್ಲೊಂದು ಭಾವೈಕ್ಯತೆಯ ಜಾತ್ರೆ
ಒಂದೇ ಗೋರಿಗೆ ಹಿಂದೂ-ಮುಸ್ಲಿಂ ಪೂಜೆ: ಬೀದರ್​​ನಲ್ಲೊಂದು ಭಾವೈಕ್ಯತೆಯ ಜಾತ್ರೆ
ಚಾಮರಾಜನಗರದಲ್ಲಿ ಕಾಡುಗಳ್ಳರು ಮತ್ತೆ ಆ್ಯಕ್ಟಿವ್: ವಾರದಲ್ಲೇ ಎರಡು ಶಿಕಾರಿ
ಚಾಮರಾಜನಗರದಲ್ಲಿ ಕಾಡುಗಳ್ಳರು ಮತ್ತೆ ಆ್ಯಕ್ಟಿವ್: ವಾರದಲ್ಲೇ ಎರಡು ಶಿಕಾರಿ
ಸಿಎಂ ಡಿಕೆ ಶಿವಕುಮಾರ್​ ನಡೆಗೆ ಹೈಕೋರ್ಟ್‌ನಿಂದ ಪ್ರಶಂಸೆ
ಸಿಎಂ ಡಿಕೆ ಶಿವಕುಮಾರ್​ ನಡೆಗೆ ಹೈಕೋರ್ಟ್‌ನಿಂದ ಪ್ರಶಂಸೆ
ಸೌತ್ ರುಚೀಸ್ ಹೋಟೆಲ್ ಮೇಲೆ ಎಫ್​ಡಿಎ ದಾಳಿ
ಸೌತ್ ರುಚೀಸ್ ಹೋಟೆಲ್ ಮೇಲೆ ಎಫ್​ಡಿಎ ದಾಳಿ
ಇಡಿ ದಾಳಿ: ಬೆಂಗಳೂರಿನಲ್ಲಿ ಸತೀಶ್ ಜಾರಕಿಹೊಳಿ ಬೆಂಬಲಿಗರಿಂದ ಹೈಡ್ರಾಮಾ!
ಇಡಿ ದಾಳಿ: ಬೆಂಗಳೂರಿನಲ್ಲಿ ಸತೀಶ್ ಜಾರಕಿಹೊಳಿ ಬೆಂಬಲಿಗರಿಂದ ಹೈಡ್ರಾಮಾ!
ಕುಡುಕರ ಆಶ್ರಯತಾಣವಾಯ್ತು ಕೋಟೆನಾಡಿನ ಗುರುಭವನ
ಕುಡುಕರ ಆಶ್ರಯತಾಣವಾಯ್ತು ಕೋಟೆನಾಡಿನ ಗುರುಭವನ
ಕೆಪಿಎಸ್‌ಸಿ ಅಕ್ರಮ: ಕಲಬುರ್ಗಿಯ ಅಭ್ಯರ್ಥಿಗೆ ಶಾಕ್​​ ಕೊಟ್ಟ ಸಿಐಡಿ
ಕೆಪಿಎಸ್‌ಸಿ ಅಕ್ರಮ: ಕಲಬುರ್ಗಿಯ ಅಭ್ಯರ್ಥಿಗೆ ಶಾಕ್​​ ಕೊಟ್ಟ ಸಿಐಡಿ
ಸಿಡಬ್ಲ್ಯೂಆರ್‌ಸಿ ಆದೇಶ ಪ್ರಶ್ನಿಸಿ ಸುಪ್ರೀಂಗೆ ಹೋಗಲು ಸಿಎಂ ಸೂಚನೆ
ಸಿಡಬ್ಲ್ಯೂಆರ್‌ಸಿ ಆದೇಶ ಪ್ರಶ್ನಿಸಿ ಸುಪ್ರೀಂಗೆ ಹೋಗಲು ಸಿಎಂ ಸೂಚನೆ