AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರೆಗ್ನೆನ್ಸಿಯಲ್ಲಿ ಗ್ರೀನ್ ಟೀ ಕುಡಿಯುವವರು ಈ ಕೆಲವು ವಿಷಯಗಳನ್ನು ತಪ್ಪದೆ ತಿಳಿದುಕೊಳ್ಳಬೇಕು

ಗರ್ಭಾವಸ್ಥೆಯಲ್ಲಿ ಗ್ರೀನ್ ಟೀ ಕುಡಿಯುವವರ ಸಂಖ್ಯೆ ಇತ್ತೀಚಿಗೆ ಹೆಚ್ಚಾಗುತ್ತಿದೆ. ಇದನ್ನು ನಿಷೇಧ ಮಾಡಿಲ್ಲ ಆದರೆ ಮಿತವಾಗಿ ಸೇವಿಸುವುದು ಬಹಳ ಮುಖ್ಯ. ಅದರಲ್ಲಿಯೂ ಗರ್ಭಾವಸ್ಥೆಯಲ್ಲಿ ಚಹಾ ಬಿಟ್ಟು ಗ್ರೀನ್ ಟೀ ಕುಡಿಯಲು ಆರಂಭ ಮಾಡಿರುವವರು ಕೆಲವು ವಿಷಯಗಳನ್ನು ಚೆನ್ನಾಗಿ ತಿಳಿದುಕೊಂಡಿರಬೇಕಾಗುತ್ತದೆ. ಹಾಗಾಗಿ ಡಾ. ಮಾನಿನಿ ಪಟೇಲ್ ಅವರು ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಿದ್ದಾರೆ.

ಪ್ರೆಗ್ನೆನ್ಸಿಯಲ್ಲಿ ಗ್ರೀನ್ ಟೀ ಕುಡಿಯುವವರು ಈ ಕೆಲವು ವಿಷಯಗಳನ್ನು ತಪ್ಪದೆ ತಿಳಿದುಕೊಳ್ಳಬೇಕು
Green Tea During PregnancyImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Sep 22, 2026 | 6:55 PM

Share

ಗರ್ಭಾವಸ್ಥೆಯಲ್ಲಿ ಆಹಾರ ಮತ್ತು ಪಾನೀಯಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಸಹಜ. ಕೆಲವರು ಸಾಮಾನ್ಯ ಚಹಾ ಅಥವಾ ಕಾಫಿ ಬಿಟ್ಟು ಗ್ರೀನ್ ಟೀ ಕುಡಿಯಲು ಆರಂಭಿಸುತ್ತಾರೆ. ಗ್ರೀನ್ ಟೀ ಆರೋಗ್ಯಕರ ಎಂಬ ಭಾವನೆಯಿಂದ ಗರ್ಭಾವಸ್ಥೆಯಲ್ಲಿ ಇದನ್ನು ಹೆಚ್ಚು ಸೇವಿಸುತ್ತಾರೆ. ಆದರೆ ಇದರಲ್ಲಿಯೂ ಕೂಡ ಕ್ಯಾಫೀನ್ ಇರುತ್ತದೆ ಎಂಬುದನ್ನು ಮರೆಯುತ್ತಾರೆ. ಸೇವಿಸುವ ಸಮಯ ಮತ್ತು ಪ್ರಮಾಣ ಇಲ್ಲಿ ಬಹಳ ಮುಖ್ಯವಾಗುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಜೈಪುರ ಅಪೊಲೊ ಸ್ಪೆಕ್ಟ್ರಾ ಹಾಸ್ಪಿಟಲ್ ನಲ್ಲಿ ಸೀನಿಯರ್ ಕನ್ಸಲ್ಟೆಂಟ್, ಅಬ್ಸ್ಟೆಟ್ರಿಕ್ಸ್ ಮತ್ತು ಗೈನಕಾಲಜಿಸ್ಟ್ ಆಗಿರುವ ಡಾ. ಮಾನಿನಿ ಪಟೇಲ್ ನೀಡಿದ್ದು ಪ್ರೆಗ್ನೆನ್ಸಿಯಲ್ಲಿ ಎಷ್ಟು ಪ್ರಮಾಣದಲ್ಲಿ ಗ್ರೀನ್ ಟೀ ಕುಡಿಯಬಹುದು ಹೆಚ್ಚು ಕುಡಿದರೆ ಏನಾಗುತ್ತದೆ ಮತ್ತು ಇದು ಯಾವ ರೀತಿ ಉಪಯೋಗಕಾರಿಯಾಗಬಹುದು ಎಂಬುದನ್ನು ತಿಳಿಸಿದ್ದಾರೆ.

ಪ್ರೆಗ್ನೆನ್ಸಿಯಲ್ಲಿ ಎಷ್ಟು ಗ್ರೀನ್ ಟೀ ಕುಡಿಯಬಹುದು?

ಗರ್ಭಾವಸ್ಥೆಯಲ್ಲಿ ದಿನದ ಒಟ್ಟು ಕ್ಯಾಫೀನ್ ಸೇವನೆ 200 ಮಿ.ಗ್ರಾಂ ಮೀರದಂತೆ ನೋಡಿಕೊಳ್ಳಬೇಕು. ಒಂದು ಕಪ್ ಗ್ರೀನ್ ಟೀಯಲ್ಲಿರುವ ಕ್ಯಾಫೀನ್ ಪ್ರಮಾಣ ಬ್ರ್ಯಾಂಡ್, ಟೀ ಪ್ರಮಾಣ ಮತ್ತು ತಯಾರಿಸುವ ವಿಧಾನಕ್ಕೆ ಅನುಗುಣವಾಗಿ ಬದಲಾಗಬಹುದು. ಹೀಗಾಗಿ ಗ್ರೀನ್ ಟೀ ಮಾತ್ರವಲ್ಲದೆ ದಿನದಲ್ಲಿ ಕುಡಿಯುವ ಚಹಾ, ಕಾಫಿ, ಚಾಕೊಲೇಟ್ ಮತ್ತು ಕೆಲವು ಕ್ಯಾಫೀನ್ ಹೊಂದಿರುವ ಪಾನೀಯಗಳನ್ನೂ ಲೆಕ್ಕ ಹಾಕಿ ಕುಡಿಯಬೇಕು.

ಹೆಚ್ಚು ಗ್ರೀನ್ ಟೀ ಕುಡಿದರೆ ಏನಾಗಬಹುದು?

ಗರ್ಭಾವಸ್ಥೆಯಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಫೀನ್ ಸೇವನೆಯನ್ನು ತಪ್ಪಿಸುವುದು ಉತ್ತಮ. ಗ್ರೀನ್ ಟೀಯನ್ನು ಅತಿಯಾಗಿ ಕುಡಿಯುವುದರಿಂದ ಅಗತ್ಯಕ್ಕಿಂತ ಹೆಚ್ಚು ಕ್ಯಾಫೀನ್ ದೇಹಕ್ಕೆ ಸೇರುವ ಸಾಧ್ಯತೆಯಿದೆ. ಇದಲ್ಲದೆ, ಗ್ರೀನ್ ಟೀಯಲ್ಲಿರುವ ಕೆಲವು ಸಂಯುಕ್ತಗಳು ಆಹಾರದಿಂದ ಕಬ್ಬಿಣದ (Iron) ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡಬಹುದು. ಆದ್ದರಿಂದ ಊಟದ ತಕ್ಷಣ ಗ್ರೀನ್ ಟೀ ಕುಡಿಯುವುದನ್ನು ಅಥವಾ ಐರನ್ ಸಪ್ಲಿಮೆಂಟ್ ತೆಗೆದುಕೊಂಡ ತಕ್ಷಣ ಗ್ರೀನ್ ಟೀ ಸೇವಿಸುವುದನ್ನು ತಪ್ಪಿಸುವುದು ಸೂಕ್ತ.

ಇದನ್ನೂ ಓದಿ: ಹಸಿರು ಏಲಕ್ಕಿ ಮೌತ್ ಫ್ರೆಶ್ನರ್ ಆಗಿ ಮಾತ್ರವಲ್ಲ, ಊಹಿಸಲೂ ಸಾಧ್ಯವಾಗದ ಪ್ರಯೋಜನ ನೀಡುತ್ತೆ!

ಹಿಮೋಗ್ಲೋಬಿನ್ ಕಡಿಮೆ ಇದ್ದವರು ಎಚ್ಚರಿಕೆ ವಹಿಸಿ

ಗರ್ಭಾವಸ್ಥೆಯಲ್ಲಿ ಐರನ್ ಅಗತ್ಯ ಹೆಚ್ಚಾಗುತ್ತದೆ. ಈಗಾಗಲೇ ಐರನ್ ಕೊರತೆ ಅಥವಾ ಹಿಮೋಗ್ಲೋಬಿನ್ ಕಡಿಮೆ ಇರುವ ಮಹಿಳೆಯರು ಗ್ರೀನ್ ಟೀ ಸೇವಿಸುವ ಸಮಯದ ಬಗ್ಗೆ ವಿಶೇಷ ಗಮನ ಹರಿಸಬೇಕು. ವೈದ್ಯರು ಐರನ್ ಮಾತ್ರೆಗಳನ್ನು ಸೂಚಿಸಿದ್ದರೆ, ಅವುಗಳನ್ನು ಗ್ರೀನ್ ಟೀ ಜೊತೆ ತೆಗೆದುಕೊಳ್ಳದೆ ವೈದ್ಯರು ಸೂಚಿಸಿದ ರೀತಿಯಲ್ಲಿ ಸೇವಿಸುವುದು ಉತ್ತಮ.

ತೂಕ ಇಳಿಸಲು ಗ್ರೀನ್ ಟೀ ಹೆಚ್ಚಾಗಿ ಕುಡಿಯಬೇಡಿ

ಗರ್ಭಾವಸ್ಥೆಯಲ್ಲಿ ತೂಕ ಇಳಿಸಿಕೊಳ್ಳಲು ಅಥವಾ ಡಿಟಾಕ್ಸ್ ಮಾಡಲು ಗ್ರೀನ್ ಟೀಯನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದು ಸೂಕ್ತವಲ್ಲ. ಈ ಸಮಯದಲ್ಲಿ ತಾಯಿ ಮತ್ತು ಮಗುವಿನ ಅಗತ್ಯಗಳಿಗೆ ಅನುಗುಣವಾದ ಸಮತೋಲಿತ ಆಹಾರ, ಸಾಕಷ್ಟು ನೀರು ಮತ್ತು ವೈದ್ಯರ ಸಲಹೆ ಹೆಚ್ಚು ಮುಖ್ಯವಾಗುತ್ತದೆ.

ವೈದ್ಯರ ಸಲಹೆ ಏಕೆ ಮುಖ್ಯ?

ಪ್ರತಿ ಗರ್ಭಾವಸ್ಥೆಯೂ ವಿಭಿನ್ನವಾಗಿರುತ್ತದೆ. ಐರನ್ ಕೊರತೆ, ರಕ್ತಹೀನತೆ, ಇತರ ಆರೋಗ್ಯ ಸಮಸ್ಯೆಗಳು ಇದ್ದರೆ ಅಥವಾ ವೈದ್ಯರು ಕ್ಯಾಫೀನ್ ಕಡಿಮೆ ಮಾಡಲು ಸೂಚಿಸಿದ್ದರೆ ಗ್ರೀನ್ ಟೀ ಸೇವಿಸುವ ಮೊದಲು ನಿಮ್ಮ ಗೈನಕಾಲಜಿಸ್ಟ್‌ರನ್ನು ಸಂಪರ್ಕಿಸಿ. ಒಟ್ಟಿನಲ್ಲಿ, ಗರ್ಭಾವಸ್ಥೆಯಲ್ಲಿ ಗ್ರೀನ್ ಟೀ ಸಂಪೂರ್ಣವಾಗಿ ನಿಷೇಧಿತವಲ್ಲ. ಆದರೆ ಪ್ರಮಾಣ, ಒಟ್ಟು ಕ್ಯಾಫೀನ್ ಸೇವನೆ ಮತ್ತು ಐರನ್ ಅಬ್ಸಾರ್ಪ್ಶನ್ ಬಗ್ಗೆ ಗಮನವಿರಬೇಕು. ಗ್ರೀನ್ ಟೀಯನ್ನು ನೀರು ಅಥವಾ ಪೌಷ್ಟಿಕ ಆಹಾರಕ್ಕೆ ಪರ್ಯಾಯವಾಗಿ ಪರಿಗಣಿಸಬಾರದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಎಚ್​​​ಕೆ ಪಾಟೀಲ್ ರಾಜೀನಾಮೆ ಎಚ್ಚರಿಕೆಗೆ ಡಿಕೆಶಿ ಪ್ರತಿಕ್ರಿಯೆ ಇಲ್ಲಿದೆ
ಎಚ್​​​ಕೆ ಪಾಟೀಲ್ ರಾಜೀನಾಮೆ ಎಚ್ಚರಿಕೆಗೆ ಡಿಕೆಶಿ ಪ್ರತಿಕ್ರಿಯೆ ಇಲ್ಲಿದೆ
ಧಾರವಾಡದಲ್ಲಿ ಶಾಲಾ ಕಟ್ಟಡ ಧ್ವಂಸ: ವಿದ್ಯಾರ್ಥಿಗಳಿಗೆ ಪೆಂಡಾಲ್ ಅಡಿ ಪಾಠ
ಧಾರವಾಡದಲ್ಲಿ ಶಾಲಾ ಕಟ್ಟಡ ಧ್ವಂಸ: ವಿದ್ಯಾರ್ಥಿಗಳಿಗೆ ಪೆಂಡಾಲ್ ಅಡಿ ಪಾಠ
ಟಾಸ್ಕ್ ವೇಳೆ ಚುಚ್ಚು ಮಾತು, ಕಣ್ಣೀರು ಹಾಕಿದ ಆಸಿಯಾ
ಟಾಸ್ಕ್ ವೇಳೆ ಚುಚ್ಚು ಮಾತು, ಕಣ್ಣೀರು ಹಾಕಿದ ಆಸಿಯಾ
ಅಡಿಕೆ ಹಾಳೆಯಿಂದ ಎಥೆನಾಲ್ ಉತ್ಪಾದಿಸುವ ಸಂಶೋಧನೆ ಯಶಸ್ವಿ
ಅಡಿಕೆ ಹಾಳೆಯಿಂದ ಎಥೆನಾಲ್ ಉತ್ಪಾದಿಸುವ ಸಂಶೋಧನೆ ಯಶಸ್ವಿ
ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪಿಗಳ ಕಾಲಿಗೆ ಗುಂಡೇಟು
ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪಿಗಳ ಕಾಲಿಗೆ ಗುಂಡೇಟು
72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ: LIVE ಇಲ್ಲಿ ನೋಡಿ
72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ: LIVE ಇಲ್ಲಿ ನೋಡಿ
ಕಾರು ತೆಗೆಸಿದ್ದಕ್ಕೆ ಡಿಸಿಪಿ ಯೋಗೇಶ್ ವಿರುದ್ಧ ಸಿದ್ಧರಾಮಯ್ಯ ಗರಂ
ಕಾರು ತೆಗೆಸಿದ್ದಕ್ಕೆ ಡಿಸಿಪಿ ಯೋಗೇಶ್ ವಿರುದ್ಧ ಸಿದ್ಧರಾಮಯ್ಯ ಗರಂ
ಕೆಪಿಎಸ್​ಸಿಯನ್ನೆ ಮುಚ್ಚಿದರೆ ಹೇಗೆಂದು ಚಿಂತನೆ ಮಾಡುತ್ತಿದ್ದೇವೆ: ಸಿಎಂ
ಕೆಪಿಎಸ್​ಸಿಯನ್ನೆ ಮುಚ್ಚಿದರೆ ಹೇಗೆಂದು ಚಿಂತನೆ ಮಾಡುತ್ತಿದ್ದೇವೆ: ಸಿಎಂ
ಇನ್ಸ್‌ಪೆಕ್ಟರ್ ಧನಂಜಯ್​ಗೆ ಮತ್ತೊಂದು ಪ್ರಕರಣದಲ್ಲಿ ಸಂಕಷ್ಟ
ಇನ್ಸ್‌ಪೆಕ್ಟರ್ ಧನಂಜಯ್​ಗೆ ಮತ್ತೊಂದು ಪ್ರಕರಣದಲ್ಲಿ ಸಂಕಷ್ಟ
ಕೆಪಿಎಸ್​ಸಿ ಅಕ್ರಮ ನೇಮಕಾತಿ ಕೇಸ್ ತನಿಖೆ ಎಸ್​ಐಟಿ ಹೆಗಲಿಗೆ!
ಕೆಪಿಎಸ್​ಸಿ ಅಕ್ರಮ ನೇಮಕಾತಿ ಕೇಸ್ ತನಿಖೆ ಎಸ್​ಐಟಿ ಹೆಗಲಿಗೆ!