
ಮಕ್ಕಳು ದೊಡ್ಡರಾಗುತ್ತಲೇ, ಅವರ ದೇಹದಲ್ಲಿ ಒಂದು ರೀತಿ ಬದಲಾವಣೆಗಳು ಶುರುವಾಗುತ್ತದೆ.ವಿಶೇಷವಾಗಿ 8 ರಿಂದ 16 ವರ್ಷ ವಯಸ್ಸಿನ ಮಕ್ಕಳು ಹದಿಹರೆಯದತ್ತ ಹೋಗುತ್ತಿರುವಾಗ, ಅವರ ಮುಖದಲ್ಲಿ ಮೊಡವೆಗಳು (Pimples) ಬರಲು ಪ್ರಾರಂಭಿಸುತ್ತವೆ. ಕೆಲವೊಮ್ಮೆ ಮಗುವಿನ ಇಡೀ ಮುಖವು ಮೊಡವೆಗಳಿಂದ (acne causing foods) ತುಂಬಿದಂತೆ ಕಾಣುತ್ತದೆ. ಮಕ್ಕಳು ಮುಖದ ಮೇಲೆ ಮೊಡವೆಗಳ ಜೊತೆಗೆ ತಲೆಹೊಟ್ಟು ಸಮಸ್ಯೆ ಕೂಡ ಕಾಡುತ್ತದೆ. ಇದಕ್ಕೆ ಕಾರಣ ಹಾರ್ಮೋನುಗಳ ಅಸಮತೋಲನ. ಈ ಅಸಮತೋಲನ ಕಾಣಲು ಮುಖದಲ್ಲಿ ಎಣ್ಣೆ ಅಂಶಗಳು, ಮುಖದ ರಂಧ್ರದಲ್ಲಿ ಬಿರುಕು ಕಾರಣವಾಗಿರುತ್ತದೆ. ಆಹಾರ ತಜ್ಞ ಮನ್ಪ್ರೀತ್ ಕಲ್ರಾ ಈ ಬಗ್ಗೆ ಒಂದು ಪ್ರಮುಖ ಅಂಶವನ್ನು ಹೇಳಿದ್ದಾರೆ. ಮಕ್ಕಳಲ್ಲಿ ಮೊಡವೆಗಳು ಹೆಚ್ಚಾಗದಂತೆ ಯಾವ ಆಹಾರವನ್ನು ನೀಡಬಾರದು ಎಂದು ಸಲಹೆಗಳನ್ನು ನೀಡಿದ್ದಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ