ಮನುಷ್ಯರು ಮಾತ್ರವಲ್ಲ ಹಾವುಗಳು ಹನಿಮೂನ್​​​​ಗೆ ಹೋಗುತ್ತೆ! ಈ ತಿಂಗಳಿನಲ್ಲಿ ಮಾತ್ರ ಯಾಕೆ?

ಮನುಷ್ಯ ಹನಿಮೂನ್​​​ಗೆ ಹೋಗುವುದು ಸಹಜ, ದಂಪತಿಗಳು ಹನಿಮೂನ್​​ ಭಾವನೆಗಳಿಗೆ, ದೈಹಿಕವಾಗಿ ಅರ್ಥ ಮಾಡಿಕೊಳ್ಳಲು ಹನಿಮೂನ್​​​ಗೆ ಹೋಗುತ್ತಾರೆ. ಆದರೆ ಹಾವುಗಳು ಕೂಡ ಹನಿಮೂನ್​​​ಗೆ ಹೋಗುತ್ತದೆ. ಇದನು ನಂಬ ಸಾಧ್ಯವಿಲ್ಲದಿದ್ದರು. ಇದು ನಿಜ. ಹಾವುಗಳು ಹನಿಮೂನ್​​​ಗೆ ಯಾಕೆ ಹೋಗುತ್ತದೆ. ಇದರ ಉದ್ದೇಶಗಳೇನು? ಕೆನಡಾದ ಮ್ಯಾನಿಟೋಬಾದಲ್ಲಿರುವ ನಾರ್ಸಿಸ್ಸೆಯಲ್ಲಿ ಹಾವುಗಳು ಹನಿಮೂನ್​​​ಗೆ ಹೋಗುತ್ತದೆ.

ಮನುಷ್ಯರು ಮಾತ್ರವಲ್ಲ ಹಾವುಗಳು ಹನಿಮೂನ್​​​​ಗೆ ಹೋಗುತ್ತೆ! ಈ ತಿಂಗಳಿನಲ್ಲಿ ಮಾತ್ರ ಯಾಕೆ?
ಸಾಂದರ್ಭಿಕ ಚಿತ್ರ
Image Credit source: Getty Images
Updated By: ಅಕ್ಷಯ್​ ಪಲ್ಲಮಜಲು​​

Updated on: Apr 26, 2025 | 4:24 PM

ಮನುಷ್ಯರು ಮಾತ್ರ ಹನಿಮೂನ್​​​ (honeymoon) ಹೋಗುವುದನ್ನು ಕೇಳಿರಬಹುದು. ಆದರೆ ಇಲ್ಲಿ ಹಾವುಗಳು ಕೂಡ ಹನಿಮೂನ್​​​ಗೆ ಹೋಗುತ್ತದೆ. ಹನಿಮೂನ್​​​ ಎನ್ನುವುದು ಕೇವಲ ದೈಹಿಕ ಸಂಪರ್ಕಕ್ಕೆ ಮಾತ್ರವಲ್ಲ, ಎರಡು ಮನಸ್ಸುಗಳು ತಮ್ಮ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ಹೋಗುತ್ತಾರೆ. ಆದರೆ ಹಾವುಗಳು (snake) ಹನಿಮೂನ್​​​ಗೆ ಯಾಕೆ ಹೋಗುತ್ತದೆ. ಇದರ ಉದ್ದೇಶಗಳೇನು? ಕೆನಡಾದ ಮ್ಯಾನಿಟೋಬಾದಲ್ಲಿರುವ ನಾರ್ಸಿಸ್ಸೆಯಲ್ಲಿ ಪ್ರತಿ ವಸಂತಕಾಲದಲ್ಲಿ, ಸಾವಿರಾರು ಹಾವುಗಳು ಗುಹೆಗಳಿಂದ ಹೊರಬರುತ್ತವೆ. ಇದು ಭೂಮಿಯ ಮೇಲಿನ ಅತ್ಯಂತ ಅಸಾಧಾರಣ “ಮಧುಚಂದ್ರ” ಕೂಟವಾಗಿರುತ್ತದೆ. ಇಲ್ಲಿ ಕಂಡು ಬರುವ ಹಾವುಗಳು ಕೆಂಪು-ಬದಿಯ ಗಾರ್ಟರ್ ಹಾವು.

ವಿಶ್ವದಲ್ಲೇ ನಾರ್ಸಿಸ್ ಸ್ನೇಕ್ ಡೆನ್ಸ್ ಎಂದು ಕರೆಯಲ್ಪಡುವ ಹಾವುಗಳ ಅತಿದೊಡ್ಡ ಸಂಯೋಗ ಸಭೆಯಾಗಿದೆ . ಹಲವು ತಿಂಗಳ ಕಾಲ ಶಿಶಿರ ನಿದ್ರೆಯಲ್ಲಿರುವ ಈ ಹಾವುಗಳು ಸುಣ್ಣದ ಕಲ್ಲಿನ ಸಿಂಕ್‌ಹೋಲ್‌ಗಳಿಂದ ಹೊರಬಂದು ಮಧುಚಂದ್ರಕ್ಕೆ ಹೋಗುತ್ತದೆ. ಈ ಬಗ್ಗೆ ವಿಜ್ಞಾನಿಗಳು ಕೂಡ ಅಚ್ಚರಿಯನ್ನು ಪಟ್ಟಿದ್ದಾರೆ. ಹವಾಮಾನವು ಬೆಚ್ಚಗಾಗಲು ಪ್ರಾರಂಭಿಸಿದಾಗ ಅಂದರೆ ಏಪ್ರಿಲ್ ಅಂತ್ಯದಿಂದ ಮೇ ಆರಂಭದಲ್ಲಿ ಗಂಡು ಹಾವುಗಳು ಹೊರಕ್ಕೆ ಬಂದು, ಹೆಣ್ಣು ಹಾವುಗಳಿಗಾಗಿ ಕಾಯುತ್ತಿರುತ್ತದೆ.

ಹೆಣ್ಣು ಹಾವುಗಳು ಹೊರ ಬಂದ ನಂತರ ಅವುಗಳು ಒಟ್ಟು ಸೇರಿ ಒಂದು ಕಡೆ ಸೇರುತ್ತದೆ. ಇದೊಂದು ರೀತಿ ಹನಿಮೂನ್​​​​​ನಂತಿರುತ್ತದೆ. ಅದು ವಾರ ಅಥವಾ ತಿಂಗಳುಗಳ ಕಾಲ ಅಲ್ಲಿಯೇ ಕಾಲ ಕಳೆಯುತ್ತದೆ. ಹೀಗೆ ಬಂದ ಹಾವುಗಳಲ್ಲಿ ಪೈಪೋಟಿ ಪ್ರಾರಂಭವಾಗುತ್ತದೆ. ಹೆಣ್ಣು ಹಾವಿಗಾಗಿ ಗಂಡು ಹಾವುಗಳಲ್ಲಿ ಸ್ಪರ್ಧೆ ಉಂಟಾಗುತ್ತದೆ. ಇದು ಹೆಣ್ಣು ಹಾವುಗಳನ್ನು ಗೊಂದಲಕ್ಕೆ ಒಳಗಾಗಿಸಲು ಈ ರೀತಿ ಮಾಡುತ್ತದೆ ಎನ್ನುವುದು ವಿಜ್ಞಾನಿಗಳ ಮಾತು.

ಇದನ್ನೂ ಓದಿ
ಹಿರಿ ಜೀವಗಳಿಗೆ  ಮರುಮದುವೆ ಮಾಡಿಸಿದ ಮೊಮ್ಮಕ್ಕಳು
ರಾತ್ರಿಯ ರೊಮ್ಯಾ‌ನ್ಸ್ ವಿಡಿಯೋ ಶೇರ್‌ ಮಾಡಿದ ನವಜೋಡಿ
ಕೋಪದಲ್ಲಿ ಗಂಡನ ನಾಲಿಗೆ ಕಚ್ಚಿ ತುಂಡರಿಸಿದ ಹೆಂಡತಿ
ಯಾವ ಲಾಭದಾಯಕ ಉದ್ದಿಮೆಗೂ ಕಮ್ಮಿಯಿಲ್ಲ ಈ ಚೇಳು ಸಾಕಾಣಿಕೆ

ನಾರ್ಸಿಸ್​​ದಲ್ಲಿ ಯಾಕೆ ಹಾವುಗಳು ಹನಿಮೂನ್​​ ಹೋಗುವುದು?

ಮ್ಯಾನಿಟೋಬಾದ ಇಂಟರ್‌ಲೇಕ್ ಪ್ರದೇಶದ ವಿಶಿಷ್ಟ ಭೌಗೋಳಿಕ ಲಕ್ಷಣಗಳು ಈ ಹಾವುಗಳಿಗೆ ಮಿಲನಕ್ಕೆ ಸೂಕ್ತವಾದ ಪರಿಸ್ಥಿತಿಗಳನ್ನು ಒದಗಿಸುತ್ತವೆ. ಈ ಪ್ರದೇಶವು ಸುಣ್ಣದ ಕಲ್ಲಿನಿಂದ ಕೂಡಿದ್ದು ಸಿಂಕ್‌ಹೋಲ್‌ಗಳನ್ನು ಹೊಂದಿದೆ. ಜತೆಗೆ ಸುತ್ತಮುತ್ತಲಿನ ಜೌಗು ಪ್ರದೇಶಗಳಲ್ಲಿ ಕಪ್ಪೆಗಳು ಮತ್ತು ಸಣ್ಣ ಸಸ್ತನಿಗಳಂತಹ ಸಾಕಷ್ಟು ಆಹಾರ ಮೂಲಗಳನ್ನು ಪೂರೈಸುತ್ತವೆ.

ಇದನ್ನೂ ಓದಿ: ಬಾಯಿ ತೆರೆದು ಮಲಗುತ್ತೀರಾ? ಇದು ಅಪಾಯದ ಸೂಚನೆ

ಜನರಿಗೂ ಈ ಕ್ಷಣ ನೋಡಬಹುದು:

ವಿಜ್ಞಾನಿಗಳು ಮಾತ್ರ, ಅಲ್ಲಿಗೆ ಬರುವ ಪ್ರವಾಸಿಗರು ನೋಡಬಹುದು. ಇದು ಆಕರ್ಷಣೆ ತಾಣವಾಗಿದೆ. ಏಪ್ರಿಲ್ ಅಂತ್ಯದಲ್ಲಿ ಬಿಸಿಲಿನ ದಿನಗಳಲ್ಲಿ ಮತ್ತು ಮೇ ತಿಂಗಳ ಮೊದಲ ಮೂರು ವಾರಗಳಲ್ಲಿ ಇದನ್ನು ನೋಡಬಹುದು. ಆದರೆ 3 ಕಿ.ಲೋ ಮೀಟರ್​​ ದೂರದಲ್ಲಿ ಇವುಗಳು ಕಾಣಲು ಸಿಗುತ್ತದೆ.

ಇನ್ನು ಇವುಗಳ ರಕ್ಷಣೆಗೆ ವಿಶೇಷ ತಂಡ ಕೂಡ ಇದೆ. ಹಾವುಗಳ ಜೀವನ ಉಳಿಸಲು ಕೂಡ ಅನೇಕ ಕ್ರಮಗಳನ್ನು ಅಲ್ಲಿನ ಸರ್ಕಾರ ತಂದಿದೆ. ನಾರ್ಸಿಸ್ಸೆಯ ಕೆಂಪು-ಬದಿಯ ಗಾರ್ಟರ್ ಹಾವುಗಳು ಈ ಹನಿಮೂನ್​​​ ಮಾಡಿಕೊಳ್ಳುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ