Speech Disorder: ಮಕ್ಕಳಲ್ಲಿನ ಭಾಷಾ ಅಭಿವೃದ್ಧಿಗೆ ಏನು ಮಾಡಬೇಕು? ತಜ್ಞರ ಸಲಹೆ ಇಲ್ಲಿದೆ
ಮಕ್ಕಳಲ್ಲಿ ಮಾತಿನ ಅಸಮರ್ಥತೆಯು ಮಗುವಿಗೆ ಮತ್ತು ಕುಟುಂಬಕ್ಕೆ ದೊಡ್ಡ ಸವಾಲಾಗಿದೆ. ಆದಾಗಿಯೂ ಮಕ್ಕಳಿಗೆ ಸರಿಯಾದ ಬೆಂಬಲ ನೀಡಿದಲ್ಲಿ ಅನೇಕ ಮಕ್ಕಳು ತಮ್ಮ ಮಾತಿನ ಅಸಮರ್ಥತೆಯನ್ನು ನಿವಾರಿಸಿಕೊಳ್ಳಬಹುದು.
ವಾಕ್ಯ ರಚಿಸುವಲ್ಲಿ ಮಕ್ಕಳಿಗೆ ಮಾತನಾಡಲು ಕಷ್ಟವಾಗುವುದು. ಹೀಗಾಗಿ ಇತರರೊಂದಿಗೆ ಸಂವಹನ ಮಾಡಲು ಕಷ್ಟವಾಗುತ್ತದೆ. ಇದರಲ್ಲಿ ಉಚ್ಚಾರಣೆ ಅಸ್ವಸ್ಥತೆಗಳು, ಫೋನಾಲಾಜಿಕಲ್ ಅಸ್ವಸ್ಥತೆಗಳು, ಅಸ್ಪಷ್ಟತೆ ಮತ್ತು ಧ್ವನಿ ಅಸ್ವಸ್ಥತೆಗಳು ಸೇರಿದಂತೆ ಹಲವಾರು ರೀತಿಯ ಮಾತಿನ ಅಸಮರ್ಥತೆಗಳಿವೆ. ಈ ಸಮಸ್ಯೆಗಳಿಂದ ಮಗುವಾಡುವ ಮಾತುಗಳನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗಬಹುದು. ಭಾಷೆಯ ವಿಳಂಬವಿರುವ ಮಗು ಪದಗಳನ್ನು ಚೆನ್ನಾಗಿ ಹೇಳಬಹುದು ಆದರೆ ಎರಡು ಪದಗಳನ್ನು ಒಟ್ಟಿಗೆ ಸೇರಿಸಿ ಹೇಳುವಾಗ ಕಷ್ಟವಾಗಬಹುದು. ಅಥವಾ ಆ ಮಗು ಸರಿಯಾದ ಪದಗಳನ್ನು ಜೋಡಿಸಿ ಹೇಳಿದರೂ ಕೂಡ ನಮಗೆ ಅದು ಅರ್ಥವಾಗದೇ ಇರಬಬಹುದು. ಈ ರೀತಿಯ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ.
ಡಾ. ಹಿಮಾನಿ ನರುಲಾ, ಡೆವಲಪ್‌ಮೆಂಟಲ್ ಮತ್ತು ಬಿಹೇವಿಯರಲ್ ಪೀಡಿಯಾಟ್ರಿಶಿಯನ್ ಅವರ ಪ್ರಕಾರ, ಮಕ್ಕಳಲ್ಲಿ ಮಾತಿನ ಅಸಮರ್ಥತೆಯು ಮಗುವಿಗೆ ಮತ್ತು ಕುಟುಂಬಕ್ಕೆ ದೊಡ್ಡ ಸವಾಲಾಗಿದೆ. ಆದಾಗಿಯೂ ಮಕ್ಕಳಿಗೆ ಸರಿಯಾದ ಬೆಂಬಲ ನೀಡಿದಲ್ಲಿ ಅನೇಕ ಮಕ್ಕಳು ತಮ್ಮ ಮಾತಿನ ಅಸಮರ್ಥತೆಯನ್ನು ನಿವಾರಿಸಿಕೊಳ್ಳಬಹುದು ಮತ್ತು ಅವರ ಸಂವಹನ ಕೌಶಲ್ಯವನ್ನು ಸುಧಾರಿಸಬಹುದು ಎಂದು ಅವರು ಹೇಳಿದ್ದಾರೆ.
ಧ್ವನಿ ಅಥವಾ ಧ್ವನಿಗೆ ಪ್ರತಿಕ್ರಿಯಿಸದ ಮಗುವನ್ನು ತಕ್ಷಣವೇ ವೈದ್ಯರಿಂದ ಪರೀಕ್ಷಿಸಬೇಕು. ಆದರೆ ಮೊದಲು ಆಗಾಗ ಮಗು ಮಾತನಾಡಲು ಅಥವಾ ವಾಕ್ಯ ರಚಿಸಲು ಎಡವುತ್ತಿದ್ದರೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತಿದೆಯೇ ಅಥವಾ ನಿಜವಾದ ಸಮಸ್ಯೆ ಇದೆಯೇ ಎಂದು ಮೊದಲು ಪರೀಕ್ಷಿಸಿ ಬಳಿಕ ವೈದ್ಯರ ಬಳಿ ಕರೆದುಕೊಂಡು ಹೋಗಬೇಕು ಇದನ್ನು ತಿಳಿಯಲು ಪೋಷಕರಿಗೆ ಕಷ್ಟವಾಗಬಹುದು ಆದರೆ ಅನಿವಾರ್ಯ ಹಾಗಾಗಿ ಮಗುವಿನ ಮಾತುಗಳನ್ನು ಪ್ರತಿ ದಿನ ಆಲಿಸಿ ಪರೀಕ್ಷಿಸಬೇಕು.
ಸಂವಹನಕ್ಕೆ ಪ್ರೋತ್ಸಾಹ ಅತೀ ಮುಖ್ಯ:
ಸಾಧ್ಯವಾದಷ್ಟು ನಿಮ್ಮೊಂದಿಗೆ ಮತ್ತು ಇತರರೊಂದಿಗೆ ಸಂವಹನ ನಡೆಸಲು ಮಗುವನ್ನು ಪ್ರೋತ್ಸಾಹಿಸಬೇಕು. ತಪ್ಪಾದಲ್ಲಿ ತಿದ್ದಿ, ನಗಾಡದೆ ಮಕ್ಕಳಿಗೆ ಧೈರ್ಯ ತುಂಬಬೇಕು. ಅವರಿಗೆ ಮುಕ್ತ ಅವಕಾಶ ನೀಡಿ, ಮಗು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡಬೇಕು. ಅಲ್ಲದೆ ಅವರ ಆಲೋಚನೆಗಳು ಮತ್ತು ಭಾವನೆಗಳನ್ನು ಹಂಚಿಕೊಳ್ಳಲು ಅವಕಾಶ ನೀಡಿ ಪ್ರೋತ್ಸಾಹಿಸಬೇಕು. ಮುಖ್ಯವಾಗಿ ಮಗುವಿನೊಂದಿಗೆ ಭಾಷಾ ಕಲಿಕೆಗೆ ಅಗತ್ಯವಿರುವ ಚಟುವಟಿಕೆಗಳಲ್ಲಿ ತೊಡಗಿಸಿ. ಮಾತು ಮತ್ತು ಭಾಷಾ ಕೌಶಲ್ಯಗಳನ್ನು ಸುಧಾರಿಸಲು ನಿರಂತರ ಅಭ್ಯಾಸವು ಮುಖ್ಯವಾಗಿದೆ. ನಿಮ್ಮ ಮಗುವಿನೊಂದಿಗೆ ಅವರ ಚಟುವಟಿಕೆಗಳಲ್ಲಿ ನೀವು ಪಾಲ್ಗೊಳ್ಳಿ. ನಿಯಮಿತವಾಗಿ ನೀವು ಅವರಿಗೆ ಹೇಳಿ ಕೊಡಿ. ಹೀಗೆ ಮಾಡಿದಲ್ಲಿ ಧನಾತ್ಮಕ ಪ್ರತಿಕ್ರಿಯೆಯೇ ದೊರೆಯುತ್ತದೆ.
ಇದನ್ನೂ ಓದಿ: ಬೇಸಿಗೆಯಲ್ಲಿ ಸಾಮಾನ್ಯವಾಗಿ ಮಕ್ಕಳು ಎದುರಿಸುವ ಕಾಯಿಲೆಗಳು ಮತ್ತು ಅವುಗಳನ್ನು ನಿರ್ವಹಿಸಲು ಸಲಹೆಗಳು ಇಲ್ಲಿವೆ
ನಿಮ್ಮ ಮಗುವಿಗೆ ಮಾತನಾಡುವ ಕೌಶಲ್ಯಗಳನ್ನು ಅಭ್ಯಾಸ ಮಾಡಲು ಬೆಂಬಲ ವಾತಾವರಣವನ್ನು ಸೃಷ್ಟಿಸುವುದು ಕೂಡ ಮುಖ್ಯವಾಗಿದೆ. ಇದು ಗೊಂದಲವನ್ನು ಕಡಿಮೆ ಮಾಡುವುದರ ಜೊತೆಗೆ ನಿಧಾನವಾಗಿ ಸ್ಪಷ್ಟವಾಗಿ ಮಾತನಾಡಲು ಹೆಚ್ಚು ಧೈರ್ಯ ನೀಡುತ್ತದೆ. ಅಲ್ಲದೆ ಮಾತನಾಡಲು ಕಷ್ಟವಾಗುವ ವಿಕಲಾಂಗ ಮಕ್ಕಳಿಗೆ ಸಹಾಯ ಮಾಡುವ ವಿವಿಧ ಸಹಾಯಕ ತಂತ್ರಜ್ಞಾನಗಳು ಲಭ್ಯವಿದೆ. ನಿಮ್ಮ ಮಗುವಿಗೆ ಯಾವ ಸಹಾಯಕ ತಂತ್ರಜ್ಞಾನವು ಹೆಚ್ಚು ಸಹಾಯಕವಾಗಬಹುದು ಎಂಬುದನ್ನು ನಿರ್ಧರಿಸಿ ವೈದ್ಯರ ಸಲಹೆ ಪಡೆದುಮಕ್ಕಳಿಗೆ ನೀಡಿ. ಮಾತಿನ ಅಸಮರ್ಥತೆಯು ಇಡೀ ಕುಟುಂಬದ ಮೇಲೆ ಪರಿಣಾಮ ಬೀರಬಹುದು, ಆದ್ದರಿಂದ ಅವುಗಳನ್ನು ನಿವಾರಿಸಲು ಮನೆಯ ಪ್ರತಿಯೊಬ್ಬರನ್ನು ತೊಡಗಿಸಿಕೊಳ್ಳಿ. ಸದಸ್ಯರೆಲ್ಲರೂ ಅವರನ್ನು ಪ್ರೋತ್ಸಾಹಿಸಿ ಅವರಿಗೆ ಬೆಂಬಲ ನೀಡಬೇಕು.
ನೆನಪಿಡಿ, ಪ್ರತಿ ಮಗುವೂ ವಿಶಿಷ್ಟವಾಗಿರುವುದರಿಂದ ಬೇರೆ ಮಗು ಇದ್ದ ಹಾಗೆಯೇ ನಮ್ಮ ಮಗು ಇರಬೇಕು ಎಂದು ಯೋಚನೆ ಮಾಡಬೇಡಿ. ಅವರವರ ಸಾಮರ್ಥ್ಯಗಳಿಗೆ ತಕ್ಕಂತೆ ಮಕ್ಕಳು ಬೆಳೆಯುತ್ತಾರೆ. ಅವರಿಗೆ ಸರಿಯಾದ ಮಾರ್ಗದರ್ಶನ ನೀಡಿ. ಹೆಚ್ಚಿನ ಲಕ್ಷಣ ಕಂಡು ಬಂದಲ್ಲಿ ವೈದ್ಯರನ್ನು ಸಂಪರ್ಕಿಸಿ.
ಲೇಖನ: ಪ್ರೀತಿ ಭಟ್, ಗುಣವಂತೆ
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 7:00 am, Mon, 3 April 23