ಫೋನ್‌ ವ್ಯಸನದಿಂದ ಮುಕ್ತರಾಗಲು ಈ ಸರಳ ಡಿಜಿಟಲ್‌ ಡಿಟಾಕ್ಸ್‌ ತಂತ್ರಗಳನ್ನು ಪಾಲಿಸಿ

ಇಂದಿನ ಈ ಡಿಜಿಟಲ್‌ ಯುಗದಲ್ಲಿ ಮೊಬೈಲ್‌ ಫೋನ್‌ ನಮ್ಮ ಜೀವನದ ಭಾಗವಾಗಿಬಿಟ್ಟಿದೆ. ಅನೇಕಾರು ಜನ ತಮ್ಮ ದಿನದ ಹೆಚ್ಚಿನ ಸಮಯವನ್ನು ಮೊಬೈಲ್‌ ನೋಡುತ್ತಾ ಸೋಷಿಯಲ್‌ ಮೀಡಿಯಾದಲ್ಲೇ ಕಳೆಯುತ್ತಿದ್ದಾರೆ. ಸಾಮಾನ್ಯದಂತೆ ಕಾಣುವ ಈ ಅಭ್ಯಾಸ ಕ್ರಮೇಣ ನಮ್ಮ ಮನಸ್ಸಿನ ಶಾಂತಿಯನ್ನು ಕಸಿದುಕೊಳ್ಳಬಹುದು. ಹಾಗಾಗಿ ಬದುಕಿನಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಲು ಈ ಕೆಲವೊಂದು ಡಿಜಿಟಲ್‌ ಡಿಟಾಕ್ಸ್‌ ತಂತ್ರವನ್ನು ಪಾಲಿಸುವುದು ಅತ್ಯಗತ್ಯ.

ಫೋನ್‌ ವ್ಯಸನದಿಂದ ಮುಕ್ತರಾಗಲು ಈ ಸರಳ ಡಿಜಿಟಲ್‌ ಡಿಟಾಕ್ಸ್‌ ತಂತ್ರಗಳನ್ನು ಪಾಲಿಸಿ
ಸಾಂದರ್ಭಿಕ ಚಿತ್ರ
Image Credit source: Getty Images

Updated on: Jul 02, 2026 | 6:55 PM

ಮುಖ್ಯಾಂಶಗಳು

  • ಅತಿಯಾದ ಮೊಬೈಲ್‌ ಬಳಕೆ ಮಾನಸಿಕ ಒತ್ತಡವನ್ನು ತ್ವರಿತವಾಗಿ ಹೆಚ್ಚಿಸುತ್ತದೆ
  • ಪ್ರತಿದಿನ ಸ್ವಲ್ಪ ಸಮಯದವರೆಗೆ ಸ್ಮಾರ್ಟ್‌ಫೋನ್‌ನಿಂದ ವಿರಾಮ ತೆಗೆದುಕೊಳ್ಳುವುದರಿಂದ ಒತ್ತಡ ನಿವಾರಣೆಯಾಗುತ್ತದೆ
  • ಡಿಜಿಟಲ್‌ ಡಿಟಾಕ್ಸ್‌ ಮೊಬೈಲ್‌ ವ್ಯಸನವನ್ನು ತೊಡೆದುಹಾಕುತ್ತದೆ

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ಗಳು ನಮ್ಮ ಜೀವನದ ನಿರ್ಣಾಯಕ ಭಾಗವಾಗಿಬಿಟ್ಟಿದೆ. ಅನೇಕ ಜನ ಬೆಳಗ್ಗೆ ಎದ್ದ ತಕ್ಷಣವೇ ಮೊಬೈಲ್‌ ನೋಡಲು ಆರಂಭಿಸುತ್ತಾರೆ. ಸೋಷಿಯಲ್‌ ಮೀಡಿಯಾದಲ್ಲಿ ರೀಲ್ಸ್‌, ವಿಡಿಯೋಗಳನ್ನು ಸ್ಕ್ರೋಲ್‌ ಮಾಡುತ್ತಾ ಕುಳಿತುಬಿಡುತ್ತಾರೆ. ಹೀಗೆ ಹೆಚ್ಚು ಹೊತ್ತು ಆನ್‌ಲೈನ್‌ನಲ್ಲಿರುವುದು ನಮ್ಮ ಮಾನಸಿಕ ಒತ್ತಡವನ್ನು ತ್ವರಿತವಾಗಿ ಹೆಚ್ಚಿಸುತ್ತದೆ. ಇದು ಕಿರಿಕಿರಿ ಉಂಟಾಗಲು, ಅನಗತ್ಯ ಕೋಪ ಬರಲು ಕಾರಣವಾಗುತ್ತದೆ. ನಿಮಗೂ ಕೂಡ ಇದೇ ರೀತಿಯ ಅನುಭವ ಆಗ್ತಿದ್ರೆ, ಡಿಜಿಟಲ್‌ ಡಿಟಾಕ್ಸ್‌ (digital detox) ಅಥವಾ ಸ್ವಲ್ಪ ಸಮಯದವರೆಗೆ ಸ್ಮಾರ್ಟ್‌ ಫೋನ್‌ನಿಂದ ವಿರಾಮ ತೆಗೆದುಕೊಳ್ಳುವುದು ಅತ್ಯಗತ್ಯ. ಪ್ರತಿದಿನ ಸ್ವಲ್ಪ ಸಮಯದವರೆಗೆ ನಿಮ್ಮ ಸ್ಮಾರ್ಟ್‌ಫೋನ್‌ನಿಂದ ವಿರಾಮ ತೆಗೆದುಕೊಳ್ಳುವುದು ಮಾನಸಿಕ ಆರೋಗ್ಯದ ಮೇಲೆ ಗಮನಾರ್ಹ ಧನಾತ್ಮಕ ಪರಿಣಾಮ ಬೀರುತ್ತದೆ.

ಡಿಜಿಟಲ್ ಡಿಟಾಕ್ಸ್ ನಿಜವಾಗಿಯೂ ಒತ್ತಡವನ್ನು ಕಡಿಮೆ ಮಾಡಬಹುದೇ?

ನಾವು ನಿರಂತರವಾಗಿ ಫೋನ್‌ ನೋಡುತ್ತಾ ಕುಳಿತರೆ ಮನಸ್ಸಿಗೆ ವಿಶ್ರಾಂತಿ ಪಡೆಯಲು ಸಮಯ ಸಿಗುವುದಿಲ್ಲ. ರೀಲ್ಸ್‌, ವಿಡಿಯೋಗಳು, ಮೆಸೇಜ್‌ಗಳ ನಿರಂತರ ಹರಿವು ಮನಸ್ಸನ್ನು ಕಾರ್ಯನಿರತವಾಗಿರಿಸುತ್ತದೆ. ಇದು ಕ್ರಮೇಣ ಒತ್ತಡವನ್ನು ಹೆಚ್ಚಿಸುತ್ತದೆ. ಹೀಗಿರುವಾಗ ಸ್ವಲ್ಪ ಹೊತ್ತು ಫೋನ್‌ನಿಂದ ಬ್ರೇಕ್‌ ತೆಗೆದುಕೊಂಡಾಗ ಒತ್ತಡ ಕಡಿಮೆಯಾಗುತ್ತದೆ, ಮನಸ್ಥಿತಿಯೂ ಸುಧಾರಿಸುತ್ತದೆ.  ‌

ಫೋನ್‌ ಬಳಕೆ, ಒತ್ತಡವನ್ನು ಕಡಿಮೆ ಮಾಡುವ ಡಿಜಿಟಲ್‌ ಡಿಟಾಕ್ಸ್‌ ತಂತ್ರಗಳಿವು:

ಎದ್ದ ತಕ್ಷಣ ಫೋನ್ ನೋಡುವ ಅಭ್ಯಾಸ ಬಿಡಿ:  ಬಹುತೇಕ ಹೆಚ್ಚಿನವರು ಬೆಳಗ್ಗೆ ಎದ್ದ ತಕ್ಷಣವೇ ಮೊಬೈಲ್‌ ನೋಡುತ್ತಾ ಕುಳಿತು ಬಿಡುತ್ತಾರೆ. ಹೌದು ಮೆಸೇಜ್‌, ವಿಡಿಯೋಗಳನ್ನು ನೋಡುತ್ತಾರೆ. ಈ ಸರಳ ಅಭ್ಯಾಸವು  ದಿನದ ಆರಂಭವನ್ನು ಒತ್ತಡ ಮುಕ್ತಗೊಳಿಸುತ್ತದೆ. ಹಾಗಾಗಿ ಬೆಳಬೆಳಗ್ಗೆ ಫೋನ್‌ ನೋಡುವ ಬದಲು, ವ್ಯಾಯಾಮ, ಧ್ಯಾನ ಮಾಡಿ. ಕುಟುಂಬದೊಂದಿಗೆ ಒಂದೊಳ್ಳೆ ಸಮಯವನ್ನು ಕಳೆಯಿರಿ. ಈ ಸಣ್ಣ ಅಭ್ಯಾಸ ಆರೋಗ್ಯವನ್ನು ಸುಧಾರಿಸುತ್ತದೆ ಜೊತೆಗೆ ಇದು ನಿಮ್ಮ ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ನಿಮ್ಮ ದಿನಕ್ಕೆ ಉತ್ತಮ ಆರಂಭವನ್ನು ನೀಡುತ್ತದೆ. 

ನೋಟಿಫಿಕೇಶನ್‌ಗಳನ್ನು ನಿಯಂತ್ರಿಸಿ: ನೋಟಿಫಿಕೇಶನ್‌ ಆನ್‌ನಲ್ಲಿದ್ದರೆ ಪದೇ ಪದೇ ಮೊಬೈಲ್‌ ನೋಡುತ್ತೇವೆ. ಹಾಗಾಗಿ ನೋಟಿಫಿಕೇಶನ್‌ ಆಫ್‌ ಮಾಡಿ ಮೊಬೈಲ್‌ ಅನ್ನು ಸ್ವಲ್ಪ ಅತ್ತ ಕಡೆ ಇಟ್ಟು ಬಿಡಿ. ಇದು ನೀವು ಕೆಲಸದ ಮೇಲೆ ಗಮನಹರಿಸಲು ಸಹಾಯ ಮಾಡುತ್ತದೆ, ಮಾನಸಿಕ ಒತ್ತಡವನ್ನೂ ನಿವಾರಿಸುತ್ತದೆ.

ಇದನ್ನೂ ಓದಿ: ಮೊಬೈಲ್‌ ನೋಡುತ್ತಾ ಆಹಾರ ಸೇವನೆ ಮಾಡುವ ಅಭ್ಯಾಸದಿಂದ ಉಂಟಾಗುವ ತೊಂದರೆಗಳೇನು?

ಮಲಗುವ ಮುನ್ನ ಫೋನ್‌ನಿಂದ ದೂರವಿರಿ: ತಡರಾತ್ರಿಯವರೆಗೆ ಫೋನ್‌ ನೋಡುತ್ತಾ ಕುಳಿತರೆ ನಿದ್ರೆಯ ಗುಣಮಟ್ಟ ಕಡಿಮೆಯಾಗುತ್ತದೆ. ಹೌದು ಮೊಬೈಲ್‌ ಪರದೆಯಿಂದ ಹೊರಸೂಸುವ ನೀಲಿ ಬೆಳಕು ರಾತ್ರಿಯಿಡೀ ನಿಮ್ಮ ಮೆದುಳನ್ನು ಸಕ್ರಿಯವಾಗಿರಿಸುತ್ತದೆ, ಇದರಿಂದಾಗಿ ನಿದ್ರಿಸುವುದು ಕಷ್ಟವಾಗುತ್ತದೆ. ಹಾಗಾಗಿ ಮಲಗುವ  ಕನಿಷ್ಠ ಒಂದು ಗಂಟೆ ಮೊದಲು  ಸ್ಮಾರ್ಟ್‌ಫೋನ್ ಬಳಸುವುದನ್ನು ನಿಲ್ಲಿಸಿ. ಬದಲಾಗಿ ಪುಸ್ತಕ ಓದುವುದು ಅಥವಾ ಲಘು ಸಂಗೀತವನ್ನು ಕೇಳುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದು ಒತ್ತಡವನ್ನು ಕಡಿಮೆ ಮಾಡುತ್ತದೆ, ನಿದ್ರೆಯ ಗುಣಮಟ್ಟವನ್ನೂ ಸುಧಾರಿಸುತ್ತದೆ.

ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಮಯ ಕಳೆಯಿರಿ: ಡಿಜಿಟಲ್ ಡಿಟಾಕ್ಸ್‌ಗೆ ಉತ್ತಮ ಮತ್ತು ಸುಲಭವಾದ ಮಾರ್ಗವೆಂದರೆ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಮಯ ಕಳೆಯುವುದು. ಕುಟುಂಬದೊಂದಿಗೆ ಕುಳಿತು ಮನಬಿಚ್ಚಿ ಮಾತನಾಡಿ, ಸ್ನೇಹಿತರನ್ನು ಭೇಟಿ ಮಾಡಿ ಅಥವಾ ಮೊಬೈಲ್‌ ಮನೆಯಲ್ಲೇ ಇಟ್ಟು ವಾಕಿಂಗ್‌ ಹೋಗಿ. ಇದು ನಿಮ್ಮನ್ನು ಫೋನ್‌ನಿಂದ ದೂರವಿರುವಂತೆ ಮಾಡುತ್ತದೆ, ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us