ಟೊಮೆಟೊದಲ್ಲಿ ಈ ಎರಡು ವಸ್ತುಗಳನ್ನು ಬೆರೆಸಿ ಮನೆಯ ಮೂಲೆಗಳಲ್ಲಿಟ್ಟರೆ ಜಿರಳೆಗಳ ಕಾಟವೇ ಇರೋದಿಲ್ಲ
ಬಹುತೇಕ ಹೆಚ್ಚಿನವರ ಮನೆಯಲ್ಲಿ ಜಿರಳೆಗಳ ಕಾಟ ಇದ್ದೇ ಇರುತ್ತದೆ. ಕಿಚನ್‌ನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಇವು ಆಹಾರ, ಪಾತ್ರೆಗಳನ್ನು ಸ್ಪರ್ಷಿಸುವ ಮೂಲಕ ರೋಗವನ್ನು ಉಂಟು ಮಾಡುತ್ತವೆ. ಹಾಗಾಗಿ ಇವುಗಳ ಕಾಟದಿಂದ ಮುಕ್ತಿ ಪಡೆಯಲು ಅನೇಕರು ರಾಸಾಯನಿಕಯುಕ್ತ ಉತ್ಪನ್ನಗಳನ್ನು ಬಳಸುತ್ತಾರೆ. ನಮ್ಮ ಆರೋಗ್ಯದ ದೃಷ್ಟಿಯಿಂದ ಇದು ಒಳ್ಳೆಯ ಆಯ್ಕೆಯಲ್ಲ. ಹೀಗಿರುವಾಗ ಟೊಮೆಟೊದಲ್ಲಿ ಈ ಎರಡು ವಸ್ತುಗಳನ್ನು ಬೆರೆಸಿ ಮೂಲೆ ಮೂಲೆಗಳಲ್ಲಿ ಇಡುವುದರಿಂದ ಜಿರಳೆಗಳ ಹಾವಳಿಯಿಂದ ಮುಕ್ತಿ ಪಡೆಯಬಹುದು.

ಮನೆಯನ್ನು ಎಷ್ಟೇ ಸ್ವಚ್ಛವಾಗಿ ಇಟ್ಟುಕೊಂಡರೂ ಜಿರಳೆಗಳ (cockroach) ಹಾವಳಿ ಇದ್ದೇ ಇರುತ್ತದೆ. ಅದರಲ್ಲೂ ಅಡುಗೆ ಮನೆಯಲ್ಲಿ ಇವುಗಳ ಕಾಟ ತುಸು ಹೆಚ್ಚೇ ಇರುತ್ತದೆ. ಆಹಾರ ಪದಾರ್ಥಗಳನ್ನಿಟ್ಟಿರುವ ಸ್ಥಳ, ಸಿಂಕ್, ಕಸದ ಬುಟ್ಟಿ ಇತ್ಯಾದಿ ಸ್ಥಳಗಳಲ್ಲಿ ಜಿರಳೆಗಳು ಹೆಚ್ಚಾಗಿ ಓಡಾಡುತ್ತಿರುತ್ತವೆ. ಹೀಗೆ ಸುಳಿದಾಡುವ ಇವು ಪಾತ್ರೆಗಳು, ಆಹಾರ ಪದಾರ್ಥಗಳನ್ನು ಸ್ಪರ್ಶಿಸುವ ಮೂಲಕ ನಮಗೆ ರೋಗಗಳನ್ನು ಹರಡುತ್ತವೆ. ಇದು ಅಲರ್ಜಿ, ಕೆಂಪು, ತುರಿಕೆ ಮತ್ತು ಉಸಿರಾಟದ ಸಮಸ್ಯೆಗಳು ಸೇರಿದಂತೆ ಹಲವು ಕಾಯಿಲೆಗಳನ್ನು ಉಂಟು ಮಾಡಬಹುದು. ಹಾಗಾಗಿ ಇವುಗಳ ಹಾವಳಿಯಿಂದ ಮುಕ್ತಿ ಪಡೆಯಲು ಬಹುತೇಕರು ರಾಸಯನಿಕಯುಕ್ತ ಸ್ಪ್ರೇ ಇತ್ಯಾದಿ ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ ಇದು ಆರೋಗ್ಯದ ದೃಷ್ಟಿಯಿಂದ ಅಷ್ಟೇನೂ ಒಳ್ಳೆಯದಲ್ಲ. ಹೀಗಿರುವಾಗ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದರ ಜೊತೆಗೆ ಟೊಮೆಟೋದಲ್ಲಿ ಈ ಎರಡು ವಸ್ತುಗಳನ್ನು ಬೆರೆಸಿ ಜಿರಳೆಗಳು ಓಡಾಡುವ ಸ್ಥಳದಲ್ಲಿ ಇರುವ ಮೂಲಕ ಇವುಗಳ ಹಾವಳಿಯಿಂದ ಮುಕ್ತಿ ಪಡೆಯಬಹುದು.
ಜಿರಳೆಗಳ ಹಾವಳಿಯಿಂದ ಮುಕ್ತಿ ಪಡೆಯಲು ಇಲ್ಲಿದೆ ಸುಲಭ ಉಪಾಯ:
ನಿಮ್ಮ ಅಡುಗೆಮನೆಯಲ್ಲಿ ಮತ್ತು ನಿಮ್ಮ ಕೋಣೆಗಳಲ್ಲಿ ಜಿರಳೆಗಳು ಓಡಾಡುವುದನ್ನು ನೀವು ನೋಡಿದರೆ, ಅವುಗಳು ಎಲ್ಲಿ ಓಡಾಡುತ್ತದೆಯೋ ಅಲ್ಲಿ ಟೊಮೆಟೊದಲ್ಲಿ ಅಡುಗೆ ಸೋಡಾ ಮತ್ತು ಸಕ್ಕರೆಯನ್ನು ಮಿಶ್ರಣ ಮಾಡಿ ಇಟ್ಟುಬಿಡಿ. ಈ ಪರಿಣಾಮಕಾರಿ ಮನೆಮದ್ದು ಜಿರಳೆಗಳನ್ನು ಪರಿಣಾಮಕಾರಿಯಾಗಿ ತೊಡೆದು ಹಾಕುತ್ತವೆ. ಇದಕ್ಕಾಗಿ ಟೊಮೆಟೊವನ್ನು ಕತ್ತರಿಸಿ, ಅದರ ಬೀಜಗಳು ಮತ್ತು ತಿರುಳನ್ನು ತೆಗೆದುಹಾಕಿ ಬಳಿಕ ಅದಕ್ಕೆ ಅರ್ಧ ಟೀಚಮಚ ಅಡಿಗೆ ಸೋಡಾ ಮತ್ತು ಒಂದು ಟೀಚಮಚ ಸಕ್ಕರೆಯನ್ನು ಹಾಕಿ ಮಿಶ್ರಣ ಮಾಡಿ, ಜಿರಳೆಗಳು ಹೆಚ್ಚಾಗಿ ಇರುವ ಪ್ರದೇಶಗಳಲ್ಲಿ ಇರಿಸಿ. ಸಕ್ಕರೆ ಮತ್ತು ಟೊಮೆಟೊದ ವಾಸನೆಗೆ ಈ ಮಿಶ್ರಣದತ್ತ ಬರುವ ಜಿರಳೆಗಳು ಈ ಮಿಶ್ರಣವನ್ನು ತಿಂದು ಸಾಯುತ್ತವೆ.
ಇದನ್ನೂ ಓದಿ: ಬೇಸಿಗೆಯಲ್ಲಿ ಹಾವುಗಳು ಪದೇ ಪದೇ ಮನೆ ಬಳಿ ಕಾಣಿಸಿಕೊಳ್ಳಲು ಈ ಮರ ಗಿಡಗಳೇ ಮುಖ್ಯ ಕಾರಣ
ಜಿರಳೆಗಳನ್ನು ಓಡಿಸುವ ಇತರೆ ಪರಿಣಾಮಕಾರಿ ಮನೆಮದ್ದುಗಳು:
- ನಿಮ್ಮ ಅಡುಗೆಮನೆಯ ಸಿಂಕ್, ಕಪಾಟು ಅಥವಾ ಡ್ರಾಯರ್‌ನಲ್ಲಿ ಕೆಲವು ಪಲಾವ್ ಎಲೆಗಳನ್ನು ಇರಿಸಿ. ಅವುಗಳ ವಾಸನೆಯು ಜಿರಳೆಗಳನ್ನು ಓಡಿಸುತ್ತವೆ.
- 1-2 ಚಮಚ ಬೇವಿನ ಎಣ್ಣೆಯನ್ನು ನೀರಿನೊಂದಿಗೆ ಬೆರೆಸಿ. ಅದನ್ನು ಸ್ಪ್ರೇ ಬಾಟಲಿಯಲ್ಲಿ ಹಾಕಿ ಜಿರಳೆಗಳು ಓಡಾಡಸುವ ಸ್ಥಳದಲ್ಲಿ ಸಿಂಪಡಿಸಿ.
- ನಿಮ್ಮ ಅಡುಗೆಮನೆ ಮತ್ತು ಸ್ನಾನಗೃಹದಲ್ಲಿ ಎಲ್ಲೆಡೆ ಕರ್ಪೂರದ ತುಂಡುಗಳನ್ನು ಇರಿಸಿ. ಇದರ ವಾಸನೆಗೆ ಜಿರಳೆಗಳು ಓಡಿ ಹೋಗುತ್ತವೆ.
- ನೆಲ ಒರೆಸುವ ನೀರಿಗೆ ಬಿಳಿ ವಿನೆಗರ್ ಮತ್ತು ನಿಂಬೆ ರಸವನ್ನು ಸೇರಿಸಿ, ಆ ನೀರಿನಲ್ಲಿ ನೆಲ ಒರೆಸಿ, ಇದು ಜಿರಳೆಗಳು ಮತ್ತು ಇರುವೆಗಳನ್ನು ಓಡಿಸುತ್ತವೆ. ನೆಲದ ಮೇಲೆ ಅಂಟಿರುವ ಇದು ಬ್ಯಾಕ್ಟೀರಿಯಾಗಳನ್ನು ಸಹ ಕೊಲ್ಲುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:12 pm, Sat, 16 May 26





