AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ugadi 2025 : ಹೊಸತನ್ನು ಹೊತ್ತು ಮತ್ತೆ ಯುಗಾದಿ ಬಂದಿದೆ, ನಿಮ್ಮ ಆತ್ಮೀಯರಿಗೆ ಈ ರೀತಿ ಶುಭಾಶಯ ಕೋರಿ

ಯುಗಾದಿ ಹಬ್ಬವು ಭಾರತೀಯರ ಪಾಲಿಗೆ ವಿಶೇಷ ಹಬ್ಬ. ಇದು ಹೊಸ ವರ್ಷದ ಆರಂಭ ಕೂಡ ಹೌದು. ಚೈತ್ರ ಮಾಸ ಮೊದಲ ದಿನ ಆಚರಿಸುವ ಯುಗಾದಿ ಈ ವರ್ಷ ಮಾರ್ಚ್‌ 30 ರಂದು ಆಚರಿಸಲಾಗುತ್ತಿದೆ. ಯಾವುದೇ ಹಬ್ಬವಾದರೂ ಬಂಧು, ಬಾಂಧವರು- ಸ್ನೇಹಿತರಿಗೆ ಶುಭಾಶಯ ಕೋರದೆ ಇದ್ದರೆ ಹೇಗೆ ಅಲ್ಲವೇ..ಈ ದಿನ ನಿಮ್ಮ ಪ್ರೀತಿಪಾತ್ರರೊಂದಿಗೆ ಫೇಸ್ಬುಕ್, ವಾಟ್ಸಾಪ್ ಇತ್ಯಾದಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲು ಯುಗಾದಿಯ ಶುಭಾಶಯಗಳು ಮತ್ತು ಸಂದೇಶಗಳು ಇಲ್ಲಿವೆ.

Ugadi 2025 : ಹೊಸತನ್ನು ಹೊತ್ತು ಮತ್ತೆ ಯುಗಾದಿ ಬಂದಿದೆ, ನಿಮ್ಮ ಆತ್ಮೀಯರಿಗೆ ಈ ರೀತಿ ಶುಭಾಶಯ ಕೋರಿ
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 29, 2025 | 4:30 PM

ನಾಳೆ ಯುಗಾದಿ ಹಬ್ಬ (Ugadi festival), ಹಿಂದೂ ಕ್ಯಾಲೆಂಡರ್ ಪ್ರಕಾರ ಯುಗಾದಿಯಿಂದ ಹೊಸ ವರ್ಷ ಪ್ರಾರಂಭವಾಗುವುದು, ಹೊಸತನ್ನು ಹೊತ್ತು ಯುಗಾದಿ ಬರುತ್ತಿದೆ. ಈ ಯುಗಾದಿಯನ್ನು ಬೇವು ಬೆಲ್ಲ ಹಾಗೂ ಸಿಹಿಯೊಂದಿಗೆ ಆಚರಿಸುತ್ತಾರೆ. ಈಗಾಗಲೇ ಹಬ್ಬಕ್ಕೆ ವಿವಿಧ ಸಿಹಿತಿಂಡಿಗಳು (sweets) ತಯಾರಿ ಸೇರಿದಂತೆ ಇನ್ನಿತ್ತರ ತಯಾರಿ ನಡೆಯುತ್ತಿದೆ. ಬದುಕಿನಲ್ಲಿ ಸಿಹಿ ಕಹಿ ಎರಡೂ ಇರುತ್ತದೆ, ಸಮನಾಗಿ ಸ್ವೀಕರಿಸಬೇಕು ಎನ್ನುವ ಸಂದೇಶ ಸಾರುವ ಯುಗಾದಿ ಹಬ್ಬಕ್ಕೆ ನಿಮ್ಮ ಸ್ನೇಹಿತರು, ಆತ್ಮೀಯರು ಹಾಗೂ ಪ್ರೀತಿಪಾತ್ರರಿಗೆ ಈ ಕೆಲವು ಅರ್ಥಪೂರ್ಣ ಸಂದೇಶ (message) ಗಳನ್ನು ಕಳುಹಿಸುವ ಮೂಲಕ ಶುಭಾಶಯ (wishes) ಗಳನ್ನು ಕೋರಬಹುದು.

ಯುಗಾದಿ ಹಬ್ಬಕ್ಕೆ ಶುಭಾಶಯ ಕೋರಲು ಇಲ್ಲಿದೆ ಸಂದೇಶಗಳು

  1. ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ.. ಮತ್ತೆ ಯುಗಾದಿ ಬಂದಿದೆ. ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು.
  2. ಬದುಕೆಂದ ಮೇಲೆ ಸಿಹಿ, ಕಹಿಗಳು ಸಾಮಾನ್ಯ. ಬೇವು, ಬೆಲ್ಲದ ಸಮ್ಮಿಲನವೇ ನಮ್ಮ ಜೀವನ. ಹೀಗಾಗಿ ನೀವು ನಿಮ್ಮ ಜೀವನದಲ್ಲಿ ಸಿಹಿಗೆ ಹಿಗ್ಗದೆ, ಕಹಿಗೆ ಜಗ್ಗದೆ ಬದುಕನ್ನು ಖುಷಿಯಿಂದ ಮುನ್ನಡೆಸಿ. ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು.
  3. ದೇವರು ನಿಮಗೆ ಆಯುರಾರೋಗ್ಯ, ಸಂಪತ್ತು, ಶಾಂತಿ, ಸಮೃದ್ಧಿ ಕರುಣಿಸಲಿ. ಈ ವರ್ಷ ಸಂತೋಷದ ಹೊನಲಾಗಲಿ, ಯುಗಾದಿ ಹಬ್ಬದ ಹಾರ್ಥಿಕ ಶುಭಾಶಯಗಳು.
  4. ನಿಮ್ಮ ಬಾಳಲ್ಲಿ ಬೇವಿನ ಕಹಿಗಿಂತ ಬೆಲ್ಲದ ಸಿಹಿಯೇ ಹೆಚ್ಚಿರಲಿ..ಸುಖ, ಸಮೃದ್ಧಿ, ಶಾಂತಿ, ಸೌಹಾರ್ದತೆ ನಿಮ್ಮ ಜೀವನದಲ್ಲಿ ಹಾಲಿನಂತೆ ಉಕ್ಕಲಿ. ಯುಗಾದಿ ಹಬ್ಬದ ಶುಭಾಶಯಗಳು.
  5. ಯುಗಾದಿಯು ನಿಮಗೂ ನಿಮ್ಮ ಕುಟುಂಬಕ್ಕೆ ಮಂಗಳಕರವಾಗಿರಲಿ. ಹೊಸ ಸಂವತ್ಸರ ನಿಮ್ಮ ಜೀವನದಲ್ಲಿ ಹೊಸ ಹುರುಪು, ಹೊಸ ಭರವಸೆ, ಹೊಸ ಸಾಧನೆಯ ಕನಸು, ಯಶಸ್ಸನ್ನು ತರಲಿ. ಯುಗಾದಿ ಹಬ್ಬದ ಶುಭಾಶಯಗಳು.
  6. ಈ ಹೊಸ ವರ್ಷವು ನಿಮ್ಮ ಜೀವನದ ಎಷ್ಟೇ ಕಷ್ಟಗಳನ್ನು ದೂರ ಮಾಡಲಿ. ಸವಾಲುಗಳು ಹಾಗೂ ಕಷ್ಟಗಳನ್ನು ಮೆಟ್ಟಿ ನಿಲ್ಲುವ ಧೈರ್ಯ ನಿಮಗೆ ಸಿಗಲಿ. ಬೇವು ಬೆಲ್ಲವನ್ನು ಸವಿದು ಸಿಹಿ ಮಾತಾಡಿ ಯುಗಾದಿ ಹಬ್ಬದ ಶುಭಾಶಯಗಳು.
  7. ಯುಗಾದಿಯು ನಿಮಗೆ ಸಕಾರಾತ್ಮಕ ಮತ್ತು ಯಶಸ್ಸಿನಿಂದ ತುಂಬಿದ ಹೊಸ ಅಧ್ಯಾಯದ ಆರಂಭವಾಗಲಿ. ಯುಗಾದಿ ಹಬ್ಬದ ಶುಭಾಶಯಗಳು.
  8. ಬೇವು – ಬೆಲ್ಲದಂತೆ ಸಿಹಿ – ಕಹಿಗಳು ಬೆರೆತಾಗಲೇ ಬದುಕು ಸುಂದರವಾಗಲು ಸಾಧ್ಯ. ನೋವು ನಲಿವು ಎರಡನ್ನು ಸಮಾನವಾಗಿ ಸ್ವೀಕರಿಸಿ ಯಶಸ್ಸನ್ನು ಕಾಣುವಂತಾಗಲಿ. ಯುಗಾದಿ ಹಬ್ಬದ ಶುಭಾಶಯಗಳು.
  9. ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಯುಗಾದಿಯ ಶುಭಾಶಯಗಳು. ಹೊಸ ವರ್ಷವು ನಿಮಗೆ ವಿಫುಲ ಅವಕಾಶಗಳನ್ನು ಮತ್ತು ಸಂತೋಷವನ್ನು ತರಲಿ.
  10. ಯುಗಾದಿಯ ವಿಶಿಷ್ಟ ಬಣ್ಣಗಳು ನಿಮ್ಮ ಜೀವನವನ್ನು ಹೊಳಪು ಮತ್ತು ಸಕಾರಾತ್ಮಕತೆಯಿಂದ ತುಂಬಲಿ. ಯುಗಾದಿಯ ಶುಭಾಶಯಗಳು.
  11. ಹೊಸತನ್ನು ಹೊತ್ತು ಮತ್ತೆ ಯುಗಾದಿ ಬಂದಿದೆ.. ಈ ಯುಗಾದಿ ನಿಮ್ಮೆಲ್ಲರ ಬಾಳಲ್ಲಿ ಹೊಸ ಹರುಷ ತರಲಿ. ಬದುಕಿನಲ್ಲಿ ನೆಮ್ಮದಿ ತುಂಬಿರಲಿ. ವಿಕ್ರಮ ಸಂವತ್ಸರದ ಶುಭಾಶಯಗಳು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ