
ವ್ಯಾಲೆಂಟೈನ್ ವೀಕ್‌ನ ಐದನೇ ದಿನ ಅಂದರೆ ಫೆಬ್ರವರಿ 11 ರಂದು ಪ್ರಾಮಿಸ್ ಡೇ (Promise Day) ಆಚರಿಸಲಾಗುತ್ತದೆ. ಈ ದಿನದಂದು, ಸಂಗಾತಿಗಳು ತಮ್ಮ ಸಂಬಂಧದಲ್ಲಿ ನಂಬಿಕೆಯ ಬಂಧಗಳನ್ನು ಬಲಪಡಿಸಲು ಪರಸ್ಪರ ಅನೇಕ ಭರವಸೆಗಳನ್ನು ನೀಡುತ್ತಾರೆ. ಹೌದು ಟೆಡ್ಡಿ ಡೇಯ ನಂತರ ಬರುವ ಈ ದಿನದಂದು, ಜನರು ಪರಸ್ಪರ ವಾಗ್ದಾನ ಮಾಡುವ ಮೂಲಕ ತಮ್ಮ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುತ್ತಾರೆ. ಸಂಬಂಧವನ್ನು ಬಲಪಡಿಸಲು, ನಂಬಿಕೆಯನ್ನು ಗಟ್ಟಿಗೊಳಿಸಲು ಇರುವಂತಹ ಈ ವಿಶೇಷ ದಿನದ ಆಚರಣೆಯ ಹಿನ್ನೆಲೆಯೇನು ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿಯಿರಿ.
ಪ್ರೇಮಿಗಳ ವಾರದಲ್ಲಿ ಆಚರಿಸಲಾಗುವಂತಹ ಪ್ರಾಮಿಸ್ ಡೇ ತುಂಬಾನೇ ವಿಶೇಷವಾಗಿದ್ದು, ಇದು ಇಬ್ಬರು ಜನರ ನಡುವಿನ ಬಾಂಧವ್ಯ ಮತ್ತು ಪ್ರೀತಿಯನ್ನು ಬಲಪಡಿಸುವ ದಿನವಾಗಿದೆ. ಪ್ರಾಮಿಸ್ ಡೇ ಬಗ್ಗೆ ಯಾವುದೇ ಲಿಖಿತ ಇತಿಹಾಸವಿಲ್ಲದಿದ್ದರೂ, ಪ್ರಾಮಿಸ್ ಡೇ ಅನ್ನು ಏಕೆ ಆಚರಿಸಲಾಗುತ್ತದೆ ಎಂಬುದಕ್ಕೆ ಸ್ಪಷ್ಟ ವಿವರಣೆ ಇಲ್ಲದಿದ್ದರೂ ಪ್ರಾಮಿಸ್ ಡೇ ಆಚರಿಸುವ ಸಂಪ್ರದಾಯವು ಪ್ರಾಚೀನ ರೋಮ್‌ನಲ್ಲಿ ಪ್ರಾರಂಭವಾಯಿತು ಎಂದು ಹೇಳಾಗುತ್ತದೆ.
ಪ್ರಾಮಿಸ್ ಡೇಗೆ ಸಂಬಂಧಿಸಿದ ಒಂದು ಕಥೆಯ ಪ್ರಕಾರ, 1816 ರಲ್ಲಿ, ರಾಜಕುಮಾರಿ ಷಾರ್ಲೆಟ್ ತನ್ನ ಭಾವಿ ಪತಿಗೆ ಪ್ರಪೋಸ್ ಮಾಡಿದಳು. ನಂತರ ಅವರಿಬ್ಬರು ತಮ್ಮ ಸಂಬಂಧವನ್ನು ಬಲಪಡಿಸಲು ಪರಸ್ಪರ ಭರವಸೆ ನೀಡಿದರು. ಅದರ ನಂತರ, ಈ ಸಂಪ್ರದಾಯವು ಕ್ರಮೇಣ ಮುಂದುವರೆಯಿತು ಮತ್ತು ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಈ ಪ್ರಾಮಿಸ್ ಡೇ ಆಚರಿಸುವ ಸಂಪ್ರದಾಯ ಬಂತು ಎಂದು ಹೇಳಲಾಗುತ್ತದೆ. ಈ ದಿನದಂದು, ಪ್ರೇಮಿಗಳು ತಮ್ಮ ಜೀವನದುದ್ದಕ್ಕೂ ತಮ್ಮ ಪ್ರೀತಿಯ ಸಂಬಂಧವನ್ನು ಬಲವಾಗಿಡಲು ಅನೇಕ ಭರವಸೆಗಳನ್ನು ನೀಡುತ್ತಾರೆ. ಪ್ರತಿಯೊಂದು ಕ್ಷಣವೂ ಜೊತೆಯಾಗಿರುತ್ತೇವೆ ಎಂದು ಪ್ರತಿಜ್ಞೆಯನ್ನೂ ಮಾಡುತ್ತಾರೆ.
ಇದನ್ನೂ ಓದಿ: ಟೆಡ್ಡಿ ಡೇ ವ್ಯಾಲೆಂಟೈನ್ ವೀಕ್‌ನ ಭಾಗವಾಗಿದ್ದು ಹೇಗೆ? ಈ ದಿನದ ಹಿನ್ನೆಲೆಯ ಬಗ್ಗೆ ತಿಳಿಯಿರಿ
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ