ರಾಮ ಮಂದಿರ ಉದ್ಘಾಟನೆಯಂದು ಮನೆಯಲ್ಲಿ ಹಾಲು ಪಾಯಸ ಮಾಡಿ ಸವಿಯಿರಿ!
ಹಲವು ದಿನಗಳಿಂದ ಕಾತುರದಿಂದ ಕಾಯುತ್ತಿರುವ ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆಗೆ ಇನ್ನೇನು ಒಂದೆರಡು ದಿನಗಳಷ್ಟೆ ಬಾಕಿಯಿವೆ. ಜನವರಿ 22ರಂದು ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ನಡೆಯಲಿದ್ದು, ಸಿದ್ಧತೆಗಳು ಜೋರಾಗಿಯೇ ನಡೆಯುತ್ತಿವೆ. ಕೆಲವರು ತಮ್ಮ ತಮ್ಮ ಮನೆಯಲ್ಲಿ ಆ ದಿನ ಹಬ್ಬದಂತೆ ಆಚರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಹಬ್ಬದ ಅಡುಗೆ ಮಾಡಲು ಪ್ಲಾನ್ ಮಾಡಿಕೊಂಡಿದ್ದರೆ, ಆ ಲಿಸ್ಟ್ ನಲ್ಲಿ ಹಾಲು ಪಾಯಸವನ್ನು ಸೇರಿಸಿಕೊಳ್ಳಬಹುದು.
ಹಬ್ಬವೆಂದರೆ ಎಲ್ಲರಿಗೂ ಕೂಡ ಸಂಭ್ರಮವೇ. ಇದೀಗ ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನೆಯಂದು ಎಲ್ಲರ ಮನೆ ಮನೆಯಲ್ಲಿ ಹಬ್ಬದ ಸಂಭ್ರಮವು ಮನೆ ಮಾಡುವಂತಿದೆ. ಮನೆಯನ್ನು ಸಿಂಗರಿಸಿ, ಹಬ್ಬದಡುಗೆ ಮಾಡಿ ಸವಿಯಬೇಕು ಎಂದು ಕೊಂಡವರು ಹಲವರಿದ್ದಾರೆ. ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲು ಹಾಲು ಪಾಯಸ ಮಾಡಿ ಸವಿಯಬಹುದಾಗಿದೆ. ಹಾಲು ಪಾಯಸದ ಮಾಡುವ ವಿಧಾನದ ಬಗ್ಗೆ ತಿಳಿಯೋಣ ಬನ್ನಿ.
ಹಾಲು ಪಾಯಸ ಮಾಡಲು ಬೇಕಾಗುವ ಸಾಮಗ್ರಿಗಳು:
ಹಾಲು-4 ಕಪ್, ಅಕ್ಕಿ-2 ಟೇಬಲ್ ಸ್ಪೂನ್, ತುಪ್ಪ-1 ಟೀ ಸ್ಪೂನ್, ಸಕ್ಕರೆ-1/4 ಕಪ್, ಕೇಸರಿದಳ-5 ಎಸಳು, ಏಲಕ್ಕಿ ಪುಡಿ-ಚಿಟಿಕೆ.
ಇದನ್ನೂ ಓದಿ: ರವೆ ಬರ್ಫಿ ಮಾಡುವ ಮೂಲಕ ರಾಮ ಮಂದಿರ ಉದ್ಘಾಟನೆಯನ್ನು ಸಂಭ್ರಮಿಸಿ
ಹಾಲು ಪಾಯಸ ಮಾಡುವ ವಿಧಾನ:
- ಮೊದಲಿಗೆ ಗ್ಯಾಸ್ ಸ್ಟವ್ ಮೇಲೆ ಒಂದು ಪ್ಯಾನ್ ಇಟ್ಟು ತುಪ್ಪ ಹಾಕಿ, ಬಿಸಿಯಾಗುತ್ತಿದ್ದಂತೆ ಬಾಸುಮತಿ ಅಕ್ಕಿ ಸೇರಿಸಿ ಕೆಂಪಗಾಗುವವರೆಗೆ ಹುರಿದುಕೊಳ್ಳಿ.
- ಹುರಿದುಕೊಂಡ ಬಾಸುಮತಿ ಅಕ್ಕಿಯನ್ನು ತಣ್ಣಗಾದ ಬಳಿಕ ನೀರು ಹಾಕದೇನೇ ಮಿಕ್ಸಿ ಜಾರಿನಲ್ಲಿ ತರಿ ತರಿಯಾಗಿ ರುಬ್ಬಿಕೊಳ್ಳಿ.
- ನಂತರ ಒಂದು ಕುಕ್ಕರ್ ಗೆ ಎರಡು ಚಮಚ ತುಪ್ಪ ಹಾಕಿ, ಹಾಲು ಹಾಕಿ ಕುದಿಸಿಕೊಳ್ಳಿ. ಕುದಿಸ ಬಳಿಕ ಈಗಾಗಲೇ ರುಬ್ಬಿದ ಅಕ್ಕಿ ಸೇರಿಸಿ ಕುದಿಸಿ.
- ಕುದಿಯುತ್ತಿದ್ದಂತೆ ಕುಕ್ಕರ್ ಮುಚ್ಚಳ ಮುಚ್ಚಿ. ಆದರೆ ಕುಕ್ಕರ್ ಸೀಟಿ ಹೊಡೆಯುತ್ತಿದ್ದಂತೆ ಮುಂಚೆಯೇ ಮುಚ್ಚಳ ತೆಗೆದು ಹಾಲು ದಪ್ಪಗಾಗುವವರೆಗೆ ಕುದಿಸಿ ಸಕ್ಕರೆ ಹಾಕಿ ಬೇಯಿಸಿಕೊಳ್ಳಿ.
- ಕೊನೆಗೆ ಕೇಸರಿ ದಳ, ಏಲ್ಕಕಿ ಪುಡಿ ಸೇರಿಸಿ ಒಮ್ಮೆ ಕಲಸಿಕೊಂಡು, ಬಿಸಿಬಿಸಿಯಾದ ಹಾಲು ಪಾಯಸ ಸವಿಯಿರಿ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 2:52 pm, Sun, 21 January 24