Wedding Styling: ಮದುವೆ ದಿನ ನೀವು ಸುಂದರವಾಗಿ ಕಾಣಲು ಈ 5 ಹ್ಯಾಕ್ಸ್ ಬಗ್ಗೆ ಇಲ್ಲಿದೆ ಮಾಹಿತಿ

ನಿಮ್ಮ ವಿವಾಹದ ದಿನ ಸಹಾಯವಾಗುವಂತ ಕೆಲವು ಹ್ಯಾಕ್ಸ್ ತಿಳಿದುಕೊಳ್ಳಲು ಬಯಸುವಿರಾ? ಮದುವೆಗೆ ಸುಂದರವಾಗಿ ರೆಡಿ ಆಗಲು ಇಲ್ಲಿವೆ ಕೆಲವು ಸಲಹೆಗಳು.

Wedding Styling: ಮದುವೆ ದಿನ ನೀವು ಸುಂದರವಾಗಿ ಕಾಣಲು ಈ 5 ಹ್ಯಾಕ್ಸ್ ಬಗ್ಗೆ ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on:Jun 06, 2023 | 1:18 PM

ಮದುವೆ ದಿನ ವಧು, ವರರಿಗೆ ಒತ್ತಡ ಎನ್ನುವುದು ಸಾಮಾನ್ಯ. ಅದರಲ್ಲಿಯೂ ಹುಡುಗಿಯರಿಗೆ ಒಂದು ಪಟ್ಟು ಜಾಸ್ತಿ ಎಂದರೆ ತಪ್ಪಾಗಲಿಕ್ಕಿಲ್ಲ. ಬಂದ ಅತಿಥಿಗಳು ಊಟ ಮಾಡಿದ್ರಾ? ಹೈ ಹೀಲ್ಸ್ ಮತ್ತು ಭಾರವಾದ ಗೌನ್ ಅನ್ನು ಹೇಗೆ ನಿಭಾಯಿಸುವುದು? ಮೇಕಪ್ ಸರಿಯಾಗಿದೆಯಾ? ಹೀಗೆಲ್ಲಾ ಹಲವಾರು ಯೋಚನೆಗಳು ತಲೆಯಲ್ಲಿ ಓಡಾಡುತ್ತಿರುತ್ತವೆ. ಅದೆಲ್ಲದರ ಜೊತೆಗೆ ತಮ್ಮ ಮದುವೆಯಲ್ಲಿ ಎಲ್ಲರಿಗಿಂತ ಅಂದವಾಗಿ ಕಾಣಬೇಕು ಎಂಬಲ ಹಲವರದ್ದು. ಅದಕ್ಕಾಗಿಯೇ ತಿಂಗಳ ಹಿಂದಿನಿಂದಲೇ ತಯಾರಿ ನಡೆಸಿಕೊಳ್ಳುತ್ತಾರೆ. ಆದರೆ ಚಿಕ್ಕ ಚಿಕ್ಕ ವಿಷಯಗಳನ್ನು ಮರೆತು ಬಿಡುತ್ತಾರೆ. ಇಂತಹ ಒತ್ತಡ ಕಡಿಮೆ ಮಾಡಲು ಮತ್ತು ವೆಚ್ಚ, ಸಮಯವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಕೆಲವು ಸುಲಭ ಸ್ಟೈಲಿಂಗ್ ಹ್ಯಾಕ್ ಗಳ ಬಗ್ಗೆ ಇಲ್ಲಿದೆ ಮಾಹಿತಿ.

ನಿಮ್ಮ ಬೈತಲೆ ಚೈನ್ ಅಥವಾ ಬಿಂದಿ (ಮಾಂಗ್ ಟಿಕಾ) ಸರಿಯಾಗಿ ಅಂಟಿಸಿಕೊಳ್ಳಿ: ಬೈತಲೆ ಚೈನ್ ಪದೇ ಪದೇ ಬಿಳುವುದು, ಬೈತಲೆಯಲ್ಲಿ ನಿಲ್ಲದೆ ಅಲುಗಾಡುವುದು ನಿಜವಾಗಿಯೂ ಕಿರಿಕಿರಿ ಉಂಟು ಮಾಡುತ್ತದೆ ಮತ್ತು ಫೋಟೋಗಳಲ್ಲಿ ನಿಮ್ಮ ಸಂಪೂರ್ಣ ಲುಕ್ ಅನ್ನು ಹಾಳು ಮಾಡುತ್ತದೆ. ಇದಕ್ಕಾಗಿಯೂ ಸೂಪರ್ ಹ್ಯಾಕ್ ಇದ್ದು ನೀವು ಈ ವಿಷಯದ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಬೇಡವೇ ಬೇಡ. ನಿಮ್ಮ ಕಣ್ಣಿಗೆ ಅಂಟಿಸುವ ಕೃತಕ ರೆಪ್ಪೆಗಿರುವ ಗಮ್ ತೆಗೆದುಕೊಂಡು ಅದನ್ನು ನಿಮ್ಮ ಹಣೆಯ ಮೇಲೆ ಮತ್ತು ಬೈತಲೆ ಚೈನ್ ಒಳಭಾಗಕ್ಕೆ ಹಚ್ಚಿ! ಅಷ್ಟೇ. ನಿಮ್ಮ ಮಾಂಗ್ ಟಿಕಾ ಅಥವಾ ಬೈತಲೆ ಬಿಂದಿ ಎಲ್ಲಿಯೂ ಅಲುಗಾಡದೇ ಅಂಟಿಕೊಂಡಿರುತ್ತದೆ.

ಭಾರವಾದ ಜುಮ್ಕಿ ಅಥವಾ ಕಿವಿಯೋಲೆಗಳು: ಭಾರವಾದ ಜುಮ್ಕಿ ಅಥವಾ ಕಿವಿಯೋಲೆ ಖಂಡಿತವಾಗಿಯೂ ಕಣ್ಣುಗಳಿಗೆ ಆಹ್ಲಾದಕರವಾಗಿರುತ್ತವೆ ಆದರೆ ಕಿವಿಯ ವಿಷಯಕ್ಕೆ ಬಂದಾಗ, ಅವು ಸಾಕಷ್ಟು ಕಿರಿಕಿರಿ ಯಾಗಬಹುದು ಜೊತೆಗೆ ಕಿವಿಗೆ ಭಾರವಾಗಿ ನೋವುಂಟಾಗಬಹುದು. ನಿಮ್ಮ ಉಡುಪಿಗೆ ಸುಂದರವಾದ ಆಭರಣಗಳನ್ನು ತೊಟ್ಟುಕೊಳ್ಳಲು, ನಿಮಗೆ ಸುಲಭವಾದ ಸಲಹೆ ಇದೆ. ನಿಮ್ಮ ಲೋಬ್ ಗಳ ಮೇಲೆ ಮರಗಟ್ಟಿಸುವ ಕ್ರೀಮ್ ಅಥವಾ ಕಿವಿ ಲೋಬ್ ಸ್ಟಿಕ್ಕರ್ ಅನ್ನು ಹಚ್ಚಿ ಬಳಿಕ ಎಷ್ಟೇ ಗಾತ್ರದ ಕಿವಿಯೋಲೆಗಳನ್ನು ದೀರ್ಘ ಸಮಯದವರೆಗೆ ಆರಾಮಾಗಿ ಧರಿಸಬಹುದು.

ಶೂ ಕಡಿತ: ಶಾಪಿಂಗ್ ಮಾಡಲು ಯಾರು ತಾನೇ ಇಷ್ಟಪಡುವುದಿಲ್ಲ? ನಮ್ಮಲ್ಲಿ ಹೆಚ್ಚಿನವರು ಪಾದರಕ್ಷೆ ಗಳಂತಹ ಅಲಂಕಾರಿಕ ವಸ್ತುಗಳಿಗೆ, ವಿಶೇಷವಾಗಿ ಮದುವೆಗಳಲ್ಲಿ ಭಾರಿ ಮೊತ್ತವನ್ನು ಖರ್ಚು ಮಾಡುತ್ತಾರೆ. ಅಂತಿಮವಾಗಿ ದೀರ್ಘ ಕಾಲದಿಂದ ಬಯಸಿದ ಪಾದರಕ್ಷೆಗಳನ್ನು ಖರೀದಿಸಿದ ನಂತರ, ಅದು ಸಾಮಾನ್ಯವಾಗಿ ಕಡಿತ ಆರಂಭವಾಗುತ್ತದೆ. ಆದರೆ ಚಿಂತೆ ಬೇಡ. ಇದಕ್ಕಾಗಿಯೂ ಸಿಂಪಲ್ ಹ್ಯಾಕ್ ಇದೆ. ಫುಟ್ ಕೇರ್ ಸ್ಟಿಕ್ಕರ್ ಬ್ಯಾಂಡೇಜ್ ತೆಗೆದುಕೊಳ್ಳಿ ಇದು ಸಾಮಾನ್ಯವಾಗಿ ಫ್ಯಾನ್ಸಿ ಅಂಗಡಿಗಲ್ಲಿ ಸಿಗುತ್ತದೆ. ಅದನ್ನು ಮರೆ ಯಾಗುವ ಸ್ಥಳಗಳ ಮೇಲೆ ಅಥವಾ ತುಂಬಾ ಕಿಚಿಕಿಚಿ ಯಾಗುವ ಸ್ಥಳದಲ್ಲಿ ಹಚ್ಚಿ. ಆಗ ನೀವು ಅತ್ಯಂತ ಆರಾಮವಾಗಿ ನಡೆಯಬಹುದು. ಅಥವಾ ಅದೆಷ್ಟು ಹೊತ್ತು ನಿಂತರೂ ಏನು ಅನ್ನಿಸುವುದಿಲ್ಲ.

ಬೀಳುತ್ತಿರುವ ದುಪಟ್ಟಾ, ಸಡಿಲವಾಗಿ ಅಳವಡಿಸಿದ ರವಿಕೆ: ಮದುವೆಯ ನೂಕುನುಗ್ಗಲು ಕೆಲವೊಮ್ಮೆ ನಿಮ್ಮ ಉಡುಗೆಗಳನ್ನು ಹೊಂದಿಸಲು ನಿಮಗೆ ಸಮಯವನ್ನು ನೀಡುವುದಿಲ್ಲ. ಬೀಳುವ ದುಪಟ್ಟಾ, ಸರಿಯಾಗಿ ಹೊಂದಿಕೊಳ್ಳದ ರವಿಕೆಗಳು ಇತ್ಯಾದಿಗಳು ಈವೆಂಟ್ ಸಮಯದಲ್ಲಿ ಕೆಲವು ಸಾಮಾನ್ಯ ತಪ್ಪುಗಳಾಗಿರಬಹುದು. ಅಂತಹ ಸಮಯದಲ್ಲಿ ಪಾರದರ್ಶಕ ಫ್ಯಾಷನ್ ಟೇಪ್ ನಿಮ್ಮ ದುಪಟ್ಟಾವನ್ನು ಎಲ್ಲಿಯೂ ಬೀಳದಂತೆ ಅಥವಾ ಅಲ್ಲಲ್ಲಿ ಜರಿದು ಹೋಗದಂತೆ ಸುರಕ್ಷಿತವಾಗಿಡುತ್ತದೆ. ರವಿಕೆಗೂ ಇದನ್ನು ಬಳಸಿಕೊಳ್ಳಬಹುದು.

ಇದನ್ನೂ ಓದಿ:Summer Fashion: ಈ ಬೇಸಿಗೆಯಲ್ಲಿ ಹಾಟ್ ಆಗಿ ಕಾಣಲು ಇಲ್ಲಿವೆ ಕೆಲವು ಫ್ಯಾಷನ್ ಟಿಪ್ಸ್

ಮದುವೆಗೆ ಮುಂಚಿತವಾಗಿ ಹೇರ್ ಕಲರ್ ಮಾಡಿಕೊಳ್ಳುವುದು: ಮದುವೆಗೆ ಮುಂಚಿತವಾಗಿ ಹೇರ್ ಕಲರ್ ನೊಂದಿಗೆ ಪ್ರಯೋಗ ಮಾಡುವುದು ನಿಮ್ಮ ಟೋನ್ ಗೆ ಸರಿಹೊಂದದಿದ್ದರೆ ಅದು ಕೆಟ್ಟದಾಗಿ ಕಾಣಬಹುದು. ಈ ಜೂಜಾಟ ಆಡುವ ಬದಲು, ನಕಲಿ ಬಣ್ಣದ ಕೂದಲು ವಿಸ್ತರಣೆಗಳನ್ನು ಪ್ರಯತ್ನಿಸುವುದು ಉತ್ತಮ. ಇದು ವೆಚ್ಚದಾಯಕವಾಗಬಹುದು ಆದರೆ ನಿಮ್ಮ ಕೂದಲಿಗೆ ಹಾನಿ ಮಾಡುವುದಿಲ್ಲ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 10:41 am, Tue, 6 June 23

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್