ತೂಕ ಇಳಿಸಲು ಮನೆಯೊಳಗೇ ಮಾಡಬಹುದಾದ ವ್ಯಾಯಾಮಗಳಿವು

ಚಳಿಯಲ್ಲಿ ಮತ್ತು ಒತ್ತಡದ ಕೆಲಸದಿಂದ ಮನೆಯಿಂದ ಹೊರಹೋಗಿ ಜಾಗಿಂಗ್ ಮಾಡಲು ಸಾಧ್ಯವಾಗದಿದ್ದರೆ, ಜಿಮ್​ಗೆ ಹೋಗಲು ಆಗದಿದ್ದರೆ ಮನೆಯೊಳಗೇ ಕೆಲವು ವ್ಯಾಯಾಮಗಳನ್ನು ಮಾಡಬಹುದು. ಈ ಒಳಾಂಗಣ ವ್ಯಾಯಾಮಗಳನ್ನು ಅಳವಡಿಸಿಕೊಳ್ಳುವ ಮೂಲಕ, ನಿಮ್ಮ ಮನೆಯಲ್ಲೇ ಫಿಟ್‌ನೆಸ್ ದಿನಚರಿಯನ್ನು ರಚಿಸಬಹುದು.

ತೂಕ ಇಳಿಸಲು ಮನೆಯೊಳಗೇ ಮಾಡಬಹುದಾದ ವ್ಯಾಯಾಮಗಳಿವು
ಸಾಂದರ್ಭಿಕ ಚಿತ್ರ
Follow us
|

Updated on: Dec 21, 2023 | 7:08 PM

ತೂಕ ಇಳಿಸಲು ನಿಮ್ಮ ದಿನಚರಿಯಲ್ಲಿ ಒಳಾಂಗಣ ವ್ಯಾಯಾಮಗಳನ್ನು ಅಳವಡಿಸಿಕೊಳ್ಳುವುದು ಅನುಕೂಲಕರವಾಗಿರುತ್ತದೆ. ಚಳಿಯಲ್ಲಿ ಮತ್ತು ಒತ್ತಡದ ಕೆಲಸದಿಂದ ಮನೆಯಿಂದ ಹೊರಹೋಗಿ ಜಾಗಿಂಗ್ ಮಾಡಲು ಸಾಧ್ಯವಾಗದಿದ್ದರೆ, ಜಿಮ್​ಗೆ ಹೋಗಲು ಆಗದಿದ್ದರೆ ಮನೆಯೊಳಗೇ ಕೆಲವು ವ್ಯಾಯಾಮಗಳನ್ನು ಮಾಡಬಹುದು. ಈ ಒಳಾಂಗಣ ವ್ಯಾಯಾಮಗಳನ್ನು ಅಳವಡಿಸಿಕೊಳ್ಳುವ ಮೂಲಕ, ನಿಮ್ಮ ಮನೆಯಲ್ಲೇ ಫಿಟ್‌ನೆಸ್ ದಿನಚರಿಯನ್ನು ರಚಿಸಬಹುದು.

ಹೈ-ಇಂಟೆನ್ಸಿಟಿ ಇಂಟರ್ವಲ್ ಟ್ರೈನಿಂಗ್ (HIIT):

HIIT ವರ್ಕ್‌ಔಟ್‌ಗಳ ಶಕ್ತಿಯನ್ನು ಅಳವಡಿಸಿಕೊಳ್ಳಿ. ಇದು ಅತ್ಯುತ್ತಮವಾದ ಕ್ಯಾಲೋರಿ ಬರ್ನಿಂಗ್​ನಿಂದಾಗಿ ನಿಮ್ಮ ಹೃದಯ ಬಡಿತವನ್ನು ಹೆಚ್ಚಿಸುವುದಲ್ಲದೆ, ನಿಮ್ಮ ಚಯಾಪಚಯವನ್ನು ಹೆಚ್ಚಿಸುತ್ತದೆ. ಇದು ತೂಕ ಇಳಿಸಲು ಸಹಕಾರಿಯಾಗಿದೆ.

ಜಂಪಿಂಗ್ ರೋಪ್:

ಜಂಪಿಂಗ್ ರೋಪ್ ಅತ್ಯುತ್ತಮವಾದ ವ್ಯಾಯಾಮವಾಗಿದ್ದು, ಇದು ಹೃದಯರಕ್ತನಾಳಕ್ಕೆ ವ್ಯಾಯಾಮವನ್ನು ಒದಗಿಸುತ್ತದೆ. ಕೇವಲ 1 ಹಗ್ಗ ಮತ್ತು ಸಾಕಷ್ಟು ಸ್ಥಳಾವಕಾಶದೊಂದಿಗೆ ನೀವು ಈ ವ್ಯಾಯಾಮ ಮಾಡಬಹುದು, ಕ್ಯಾಲೊರಿಗಳನ್ನು ಬರ್ನ್ ಮಾಡಬಹುದು.

ಇದನ್ನೂ ಓದಿ: ಕಣ್ಣಿನ ಕ್ಯಾನ್ಸರ್​ ಲಕ್ಷಣಗಳೇನು? ಅದನ್ನು ತಡೆಗಟ್ಟುವುದು ಹೇಗೆ?

ದೇಹದ ತೂಕದ ವ್ಯಾಯಾಮಗಳು:

ಸ್ಕ್ವಾಟ್‌ಗಳು, ಲಂಗ್ಸ್, ಪುಷ್-ಅಪ್‌ಗಳು ಮುಂತಾದ ವ್ಯಾಯಾಮಗಳು ದೇಹದ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.ಇದನ್ನು ಯಾರು ಬೇಕಾದರೂ ಮಾಡಬಹುದು.

ಡ್ಯಾನ್ಸ್​ ವರ್ಕ್​ಔಟ್:

ಡ್ಯಾನ್ಸ್ ವರ್ಕ್‌ಔಟ್‌ಗಳೊಂದಿಗೆ ನಿಮ್ಮ ವ್ಯಾಯಾಮದ ದಿನಚರಿಯನ್ನು ಆರಂಭಿಸಿ. ಇದು ನಿಮಗೆ ಖುಷಿಯನ್ನೂ ನೀಡುತ್ತದೆ, ದೇಹಕ್ಕೆ ವ್ಯಾಯಾಮವನ್ನೂ ನೀಡುತ್ತದೆ. ಇದು ತೂಕ ಇಳಿಸಲು ಕೊಡುಗೆ ನೀಡುತ್ತದೆ. ಜುಂಬಾದಿಂದ ಹಿಪ್-ಹಾಪ್ ವರೆಗೆ ವಿವಿಧ ನೃತ್ಯ ಶೈಲಿಗಳನ್ನು ಮಾಡಬಹುದು. ಬೇಕಿದ್ದರೆ ಆನ್​ಲೈನ್ ಡ್ಯಾನ್ಸ್ ಕ್ಲಾಸ್​ಗೂ ಸೇರಿಕೊಳ್ಳಿ.

ಇದನ್ನೂ ಓದಿ: ಚಳಿಗಾಲದಲ್ಲಿ ತೂಕ ಇಳಿಸಬೇಕಾ? ಈ 7 ಹಣ್ಣುಗಳನ್ನು ಮಿಸ್ ಮಾಡಬೇಡಿ

ಒಳಾಂಗಣ ಸೈಕ್ಲಿಂಗ್:

ಮನೆಯೊಳಗೇ ಸೈಕ್ಲಿಂಗ್ ಮಾಡುವುದರಿಂದ ನಿಮ್ಮ ಕ್ಯಾಲೋರಿಯನ್ನು ಬರ್ನ್ ಮಾಡಬಹುದು. ಇದು ಹೃದಯರಕ್ತನಾಳದ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ನಿಮ್ಮ ದೇಹದ ಕೆಳಗಿನ ಭಾಗವನ್ನು ಬಲಪಡಿಸುತ್ತದೆ.

ಆದರೆ, ಯಾವುದೇ ಹೊಸ ವ್ಯಾಯಾಮಗಳನ್ನು ಪ್ರಾರಂಭಿಸುವ ಮೊದಲು ಫಿಟ್‌ನೆಸ್ ವೃತ್ತಿಪರರ ಅಥವಾ ವೈದ್ಯರ ಜೊತೆ ಚರ್ಚಿಸಲು ಮರೆಯದಿರಿ. ಅದರಲ್ಲೂ ನಿಮಗೆ ಯಾವುದಾದರೂ ಆರೋಗ್ಯ ಸಮಸ್ಯೆ ಇದ್ದರೆ ವೈದ್ಯರ ಒಪ್ಪಿಗೆ ಪಡೆದು ವ್ಯಾಯಾಮ ಮಾಡಿ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ