Best Time to Eat Dinner: ರಾತ್ರಿ ಯಾವ ಸಮಯದಲ್ಲಿ ಊಟ ಮಾಡಬೇಕು?

ಸಮತೋಲಿತ ಆಹಾರದ ಜೊತೆಗೆ, ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಮಾಡೋದು ಕೂಡ ತುಂಬಾನೇ ಮುಖ್ಯ. ಆದರೆ ಇಂದಿನ ಈ ಬ್ಯುಸಿ ಜೀವನದಲ್ಲಿ ಅನೇಕರು ಮುಖ್ಯವಾಗಿ ರಾತ್ರಿಯ ಊಟವನ್ನು ತಡವಾಗಿ ಸೇವನೆ ಮಾಡುತ್ತಾರೆ. ಈ ಅಭ್ಯಾಸ ಸಾಮಾನ್ಯವಾಗಿ ಕಂಡರೂ ಇದು ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಹಾಗಾಗಿ ರಾತ್ರಿ ಯಾವ ಸಮಯದಲ್ಲಿ ಊಟ ಮಾಡಬೇಕು, ತಡವಾಗಿ ಊಟ ಮಾಡುವ ಅಭ್ಯಾಸದಿಂದ ಉಂಟಾಗುವ ತೊಂದರೆಗಳೇನು ಎಂಬುದನ್ನು ತಿಳಿಯಿರಿ.

Best Time to Eat Dinner: ರಾತ್ರಿ ಯಾವ ಸಮಯದಲ್ಲಿ ಊಟ ಮಾಡಬೇಕು?
ಸಾಂದರ್ಭಿಕ ಚಿತ್ರ
Image Credit source: Getty Images

Updated on: Nov 23, 2026 | 6:44 PM

ಇಂದಿನ ಈ ಬ್ಯುಸಿ ಜೀವನದಲ್ಲಿ ಬಹಳಷ್ಟು ಮಂದಿಗೆ ಸಮಯಕ್ಕೆ ಸರಿಯಾಗಿ ಆಹಾರ ಸೇವನೆ  ಮಾಡಲು ಕೂಡ ಸಾಧ್ಯವಾಗುದಿಲ್ಲ. ಸಮಯವಲ್ಲದ ಸಮಯಕ್ಕೆ ತಿನ್ನುತ್ತಾರೆ. ಅದರಲ್ಲೂ ರಾತ್ರಿಯ ಊಟವನ್ನು (dinner) ತಡರಾತ್ರಿ ಸೇವನೆ ಮಾಡುತ್ತಾರೆ. ಸಾಮಾನ್ಯದಂತೆ ಕಾಣುವ ಈ ಅಭ್ಯಾಸ ಜೀರ್ಣಕ್ರಿಯೆ, ನಿದ್ರೆ, ತೂಕ ಮತ್ತು ಒಟ್ಟಾರೆ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಆದ್ದರಿಂದ ಸಮಯಕ್ಕೆ ಸರಿಯಾಗಿ ಊಟ ಮಾಡಿ ಮುಗಿಸುವುದು ತುಂಬಾನೇ ಮುಖ್ಯ. ರಾತ್ರಿ ಯಾವ ಸಮಯದಲ್ಲಿ ಊಟ ಮಾಡಬೇಕು, ತಡವಾಗಿ ಊಟ ಸೇವಿಸುವ ಅಭ್ಯಾಸದಿಂದ ಆಗುವ ತೊಂದರೆಗಳೇನು ಎಂಬುದರ ಪೂರ್ಣ ವಿವರವನ್ನು ತಿಳಿದುಕೊಳ್ಳಿ.

ರಾತ್ರಿ ಯಾವ ಸಮಯದಲ್ಲಿ ಊಟ ಮಾಡಬೇಕು?

ಮಲಗುವ ಮುನ್ನ ಕನಿಷ್ಠ 2-3 ಗಂಟೆಗಳ ಮೊದಲು ಊಟ ಮಾಡುವುದು ಉತ್ತಮ. ಇದಲ್ಲದೆ, ರಾತ್ರಿ ಊಟ ಹಗುರವಾಗಿ, ಸಮತೋಲಿತವಾಗಿ ಮತ್ತು ಸುಲಭವಾಗಿ ಜೀರ್ಣವಾಗುವಂತೆ ಇರಬೇಕು. ಊಟ ಮಾಡಿದ ತಕ್ಷಣ ನಿದ್ರಿಸುವ ಬದಲು, 10-15 ನಿಮಿಷಗಳ ಕಾಲ ನಿಧಾನವಾಗಿ ವಾಕಿಂಗ್‌ ಮಾಡ್ಬೇಕು ಮತ್ತು ಪ್ರತಿದಿನ ನಿಗದಿತ ಸಮಯದಲ್ಲಿ ಊಟ ಮಾಡಬೇಕು.

Loading...

ಇದಲ್ಲದೆ ರಾತ್ರಿ 7 ರಿಂದ 8 ಗಂಟೆಯ ನಡುವೆ ಭೋಜನವನ್ನು ಸೂಕ್ತವೆಂದು ಪರಿಗಣಿಸಲಾಗುತ್ತದೆ. ಇದು ದೇಹಕ್ಕೆ ಆಹಾರವನ್ನು ಜೀರ್ಣಿಸಿಕೊಳ್ಳಲು ಸಾಕಷ್ಟು ಸಮಯವನ್ನು ನೀಡುತ್ತದೆ ಮತ್ತು ನಿದ್ರೆಯನ್ನು ಸುಧಾರಿಸುತ್ತದೆ. ನೀವು ರಾತ್ರಿ 10 ಅಥವಾ 11 ಗಂಟೆಗೆ ಮಲಗುತ್ತೀರಿ ಎಂದಾದರೆ ರಾತ್ರಿ 7 ರಿಂದ 8 ಗಂಟೆಯ ನಡುವೆ ಭೋಜನವನ್ನು ಮಾಡಲು ಪ್ರಯತ್ನಿಸಿ.

ರಾತ್ರಿ ತಡವಾಗಿ ಊಟ ಮಾಡುವುದರಿಂದಾಗುವ ತೊಂದರೆಗಳು:

ಜೀರ್ಣಾಂಗ ವ್ಯವಸ್ಥೆಯ ಮೇಲೆ ಒತ್ತಡ ಹೆಚ್ಚಾಗುತ್ತದೆ:

ದೇಹವು ರಾತ್ರಿಯಲ್ಲಿ ವಿಶ್ರಾಂತಿಗೆ ಸಿದ್ಧವಾಗುತ್ತದೆ. ತಡವಾಗಿ ಭಾರೀ ಊಟ ಮಾಡುವುದರಿಂದ ಜೀರ್ಣಕ್ರಿಯೆ ನಿಧಾನವಾಗುತ್ತದೆ, ಇದು ಗ್ಯಾಸ್‌, ಅಜೀರ್ಣ, ಹೊಟ್ಟೆಯುಬ್ಬರ, ಆಮ್ಲೀಯತೆಯಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ತೂಕ ಹೆಚ್ಚಾಗಬಹುದು:

ಹೆಚ್ಚಿನ ಜನರು  ರಾತ್ರಿ ತಡವಾಗಿ  ಊಟ ಮಾಡಿದ ತಕ್ಷಣ ನಿದ್ರೆಗೆ ಜಾರುತ್ತಾರೆ, ಇದು ದೇಹಕ್ಕೆ ಸೇವಿಸಿದ ಕ್ಯಾಲೊರಿಗಳನ್ನು ಸುಡಲು ಸಾಕಷ್ಟು ಸಮಯವನ್ನು ನೀಡುವುದಿಲ್ಲ. ಇದು ಹೆಚ್ಚುವರಿ ಕ್ಯಾಲೊರಿಗಳನ್ನು ಕೊಬ್ಬಿನಂತೆ ಸಂಗ್ರಹಿಸಲು ಕಾರಣವಾಗುತ್ತದೆ. ಇದು ಕ್ರಮೇಣ ತೂಕ ಹೆಚ್ಚಾಗಲು ಕಾರಣವಾಗುತ್ತದೆ.

ನಿದ್ರೆಯ ಗುಣಮಟ್ಟವು ಪರಿಣಾಮ ಬೀರುತ್ತದೆ:

ರಾತ್ರಿ ತಡವಾಗಿ ಊಟ ಮಾಡುವುದರಿಂದ ಹೊಟ್ಟೆಯು ಆಹಾರವನ್ನು ಜೀರ್ಣಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಇದು ದೇಹವು ಸಂಪೂರ್ಣವಾಗಿ ವಿಶ್ರಾಂತಿ ಪಡೆಯುವುದನ್ನು ತಡೆಯುತ್ತದೆ, ಇದು ಆಗಾಗ್ಗೆ ಎಚ್ಚರಗೊಳ್ಳಲು ಕಾರಣವಾಗುತ್ತದೆ. ಇದರಿಂದ ಸರಿಯಾಗಿ ನಿದ್ರೆ ಮಾಡಲು ಸಾಧ್ಯವಾಗುವುದಿಲ್ಲ. ಈ ನಿದ್ರೆಯ ಕೊರತೆಯು ಮರುದಿನ ಆಯಾಸ, ಕಿರಿಕಿರಿ ಮತ್ತು ಗಮನದ ಕೊರತೆಗೆ ಕಾರಣವಾಗಬಹುದು .

ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೆ ಪರಿಣಾಮ ಬೀರಬಹುದು:

ತಡರಾತ್ರಿಯಲ್ಲಿ ತಿನ್ನುವುದು ದೇಹದ ಇನ್ಸುಲಿನ್ ಪ್ರತಿಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ವಿಶೇಷವಾಗಿ ಆಹಾರವು ಸಕ್ಕರೆ ಅಥವಾ ಕಾರ್ಬೋಹೈಡ್ರೇಟ್‌ಗಳಲ್ಲಿ ಅಧಿಕವಾಗಿದ್ದರೆ, ರಕ್ತದಲ್ಲಿನ ಸಕ್ಕರೆ ಮಟ್ಟವು ದೀರ್ಘಕಾಲದವರೆಗೆ ಹೆಚ್ಚಾಗಬಹುದು. ಈ ಸ್ಥಿತಿಯು ಕಾಲಾನಂತರದಲ್ಲಿ ಚಯಾಪಚಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ.

ಹೃದಯದ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು:

ಆಗಾಗ್ಗೆ ತಡರಾತ್ರಿ ಊಟ ಮಾಡುವುದರಿಂದ ಬೊಜ್ಜು, ಹೆಚ್ಚಿನ ಟ್ರೈಗ್ಲಿಸರೈಡ್‌ಗಳು ಮತ್ತು ಕೆಟ್ಟ ಕೊಲೆಸ್ಟ್ರಾಲ್‌ನಂತಹ ಸಮಸ್ಯೆಗಳು ಉಂಟಾಗುತ್ತವೆ. ಈ ಎಲ್ಲಾ ಅಂಶಗಳು ಹೃದಯದ ಆರೋಗ್ಯದ ಅಪಾಯವನ್ನು ಹೆಚ್ಚಿಸುತ್ತವೆ ಎಂದು ಪರಿಗಣಿಸಲಾಗಿದೆ.

ಇದನ್ನೂ ಓದಿ: ಚಳಿಗಾಲದಲ್ಲಿ ನಿತ್ಯ ಎಳ್ಳು ಸೇವನೆ ಮಾಡಿದರೆ ಏನಾಗುತ್ತದೆ?

ದೇಹದ ಜೈವಿಕ ಗಡಿಯಾರದ ಮೇಲೆ ಪರಿಣಾಮ ಬೀರಬಹುದು:

ನಮ್ಮ ದೇಹವು ಜೈವಿಕ ಗಡಿಯಾರದ ಪ್ರಕಾರ ಕಾರ್ಯನಿರ್ವಹಿಸುತ್ತದೆ. ತಡರಾತ್ರಿಯಲ್ಲಿ ಊಟ ಮಾಡುವುದರಿಂದ ಈ ಸಮತೋಲನವು ಅಡ್ಡಿಪಡಿಸುತ್ತದೆ, ಚಯಾಪಚಯ, ಹಾರ್ಮೋನುಗಳ ಸಮತೋಲನ ಮತ್ತು ಶಕ್ತಿಯ ಮಟ್ಟಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

ಊಟ ಮಾಡುವಾಗ ಈ ವಿಷಯಗಳ ಬಗ್ಗೆಯೂ ಗಮನವಿರಲಿ:

  •  ಟಿವಿ ಅಥವಾ ಮೊಬೈಲ್ ನೋಡುತ್ತಾ ಊಟ ಮಾಡುವುದನ್ನು ತಪ್ಪಿಸಿ.
  •  ಆಹಾರವನ್ನು ನಿಧಾನವಾಗಿ ಸೇವಿಸಿ ಮತ್ತು ಅದನ್ನು ಚೆನ್ನಾಗಿ ಅಗಿಯಿರಿ.
  • ಊಟದ ನಂತರ ಸ್ವಲ್ಪ ವಾಕಿಂಗ್‌ ಮಾಡುವುದು ಪ್ರಯೋಜನಕಾರಿಯಾಗಿದೆ.
  • ಪ್ರತಿದಿನ ನಿಮ್ಮ ಊಟದ ಸಮಯವನ್ನು ಸರಿಸುಮಾರು ಒಂದೇ ರೀತಿ ಇರಿಸಿಕೊಳ್ಳಲು ಪ್ರಯತ್ನಿಸಿ.
  •  ರಾತ್ರಿಯಲ್ಲಿ ಸಿಹಿತಿಂಡಿಗಳು ಮತ್ತು ಜಂಕ್ ಫುಡ್ ಸೇವನೆಯನ್ನು ಕಡಿಮೆ ಮಾಡಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us