AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Women Health: ಗರ್ಭಿಣಿಯಾಗಿರುವ ಮಹಿಳೆಯರಿಗೆ ಉಳಿದವರಿಗಿಂತ ವೇಗವಾಗಿ ವಯಸ್ಸಾಗುತ್ತಾ?

ಗರ್ಭಧಾರಣೆಯು ದೇಹದ ಮೇಲೆ ದೀರ್ಘಕಾಲೀನ ಪರಿಣಾಮಗಳನ್ನು ಬೀರುತ್ತದೆ ಎಂಬುದು ನಮಗೆ ಗೊತ್ತಿರುವ ಸಂಗತಿ. ಆ ಪರಿಣಾಮಗಳೆಲ್ಲವೂ ಕೆಟ್ಟದ್ದಲ್ಲ. ಆದರೆ ಕೆಲವೊಮ್ಮೆ ಇದು ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ ಮತ್ತು ಮರಣಕ್ಕೂ ಕಾರಣವಾಗುತ್ತದೆ. ಇದರ ಜೊತೆಗೆ ಗರ್ಭಿಣಿಯರಿಗೆ ಸಂಬಂಧಿಸಿದಂತೆ ಹೊಸ ಸಂಗತಿಯೊಂದು ಬೆಳಕಿಗೆ ಬಂದಿದೆ.

Women Health: ಗರ್ಭಿಣಿಯಾಗಿರುವ ಮಹಿಳೆಯರಿಗೆ ಉಳಿದವರಿಗಿಂತ ವೇಗವಾಗಿ ವಯಸ್ಸಾಗುತ್ತಾ?
ಗರ್ಭಿಣಿ
ಸುಷ್ಮಾ ಚಕ್ರೆ
|

Updated on: Apr 24, 2024 | 11:18 AM

Share

ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್‌ನ ಪ್ರೊಸೀಡಿಂಗ್ಸ್‌ನಲ್ಲಿ ಪ್ರಕಟವಾದ ಅಧ್ಯಯನವು ಗರ್ಭ ಧರಿಸದವರಿಗೆ (Pregnant) ಹೋಲಿಸಿದರೆ ಗರ್ಭಿಣಿಯಾಗಿರುವ ಮಹಿಳೆಯರಲ್ಲಿ ಜೈವಿಕವಾಗಿ ಬೇಗ ವಯಸ್ಸಾಗುವಿಕೆಯ ಲಕ್ಷಣಗಳನ್ನು ಗೋಚರಿಸುತ್ತವೆ ಎಂದು ಹೇಳಿದೆ. ಕುತೂಹಲಕಾರಿ ಸಂಗತಿಯೆಂದರೆ, ಮಹಿಳೆಯು ಒಂದಕ್ಕಿಂತ ಹೆಚ್ಚು ಬಾರಿ ಗರ್ಭ ಧರಿಸಿದಾಗ ಆಕೆಯ ಜೈವಿಕ ವಯಸ್ಸಾಗುವಿಕೆಯ ಪ್ರಕ್ರಿಯೆಯು ವೇಗಗೊಳ್ಳುತ್ತದೆ ಎಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ.

ಈ ಅಧ್ಯಯನಕ್ಕಾಗಿ 2005ರಲ್ಲಿ 20 ಮತ್ತು 22ರ ನಡುವಿನ ವಯಸ್ಸಿನ ಫಿಲಿಪೈನ್ಸ್‌ನ 1,735 ವ್ಯಕ್ತಿಗಳಿಂದ ರಕ್ತದ ಮಾದರಿಗಳನ್ನು ಸಂಗ್ರಹಿಸಲಾಗಿತ್ತು. ಇದನ್ನು ಪುರುಷರು ಮತ್ತು ಮಹಿಳೆಯರ ಇಬ್ಬರ ಮೇಲೆ ನಡೆಸಲಾಗಿದ್ದರೂ, ಗರ್ಭಧಾರಣೆಯು 825 ಯುವತಿಯರ ಮೇಲೆ ಬೀರಿದ ಪರಿಣಾಮವನ್ನು ಅರ್ಥಮಾಡಿಕೊಳ್ಳುವುದರ ಮೇಲೆ ಅಧ್ಯಯನ ಕೇಂದ್ರೀಕರಿಸಿದೆ. ಸಂಶೋಧಕರು ಇದರಲ್ಲಿ ಭಾಗವಹಿಸುವವರ ಸಂತಾನೋತ್ಪತ್ತಿ ಮತ್ತು ಲೈಂಗಿಕ ಹಿನ್ನೆಲೆಗಳನ್ನು ಅವರ ಗರ್ಭಧಾರಣೆಯ ಇತಿಹಾಸದೊಂದಿಗೆ ಪರಿಶೀಲಿಸಿದರು.

ಇದನ್ನೂ ಓದಿ: Pregnancy: ದಪ್ಪ ಇರುವ ಮಹಿಳೆಯರು ಗರ್ಭಿಣಿಯಾಗಲು ಸಾಧ್ಯವಿಲ್ಲವೇ?

ಪುರುಷರಿಗಿಂತಲೂ ಮಹಿಳೆಯರು ಹೆಚ್ಚಾಗಿ 2ರಿಂದ 3 ತಿಂಗಳ ಜೈವಿಕವಾಗಿ ವಯಸ್ಸಾದ ಲಕ್ಷಣಗಳನ್ನು ಹೊಂದಿದ್ದಾರೆ ಎಂದು ಅಧ್ಯಯನದಲ್ಲಿ ಪತ್ತೆಯಾಗಿದೆ. ಎಪಿಜೆನೆಟಿಕ್ ಮಾರ್ಪಾಡುಗಳು ಎಂದು ಕರೆಯಲ್ಪಡುವ ಡಿಎನ್‌ಎಯಲ್ಲಿನ ಬದಲಾವಣೆಗಳು ಸೇರಿದಂತೆ ವಯಸ್ಸಿಗೆ ಸಂಬಂಧಿಸಿದ ವಿವಿಧ ಜೈವಿಕ ಸೂಚಕಗಳನ್ನು ಪರೀಕ್ಷಿಸಲು ರಕ್ತದ ಮಾದರಿಗಳನ್ನು ವಿಶ್ಲೇಷಣೆಗೆ ಒಳಪಡಿಸಲಾಯಿತು.

ಅಧ್ಯಯನದ ಸಂಶೋಧನೆಗಳು:

ಗರ್ಭಿಣಿಯಾಗದ ಅದೇ ವಯಸ್ಸಿನ ಮಹಿಳೆಯರಿಗೆ ಹೋಲಿಸಿದರೆ ಗರ್ಭಾವಸ್ಥೆಯನ್ನು ಅನುಭವಿಸಿದ ಮಹಿಳೆಯರು ವೇಗವಾಗಿ ಜೈವಿಕ ವಯಸ್ಸಾದ ಲಕ್ಷಣಗಳನ್ನು ಹೊಂದಿದ್ದಾರೆ. ಗರ್ಭಾವಸ್ಥೆಯು ಎಂದಿಗೂ ಗರ್ಭಿಣಿಯಾಗದ ಮಹಿಳೆಯರಿಗೆ ಹೋಲಿಸಿದರೆ ವರ್ಷಕ್ಕೆ ಸರಿಸುಮಾರು ಶೇ. 3ರಷ್ಟು ವಯಸ್ಸಾದ ವೇಗವನ್ನು ತೋರುತ್ತಿದೆ. ಇದರ ಪರಿಣಾಮವಾಗಿ ಜೈವಿಕ ವಯಸ್ಸಿನಲ್ಲಿ 4 ತಿಂಗಳಿಂದ 1 ವರ್ಷಕ್ಕಿಂತ ಹೆಚ್ಚು ವೇಗವಾಗಿ ಬದಲಾವಣೆಯಾಗುತ್ತಿದೆ.

ಇದನ್ನೂ ಓದಿ: Pregnant Health: ಗರ್ಭಿಣಿಯರು ಏಕೆ ಹೆಚ್ಚು ನಿದ್ರೆ ಮಾಡಬೇಕು?

ವಯಸ್ಸಾದ ಮೇಲೆ ಬಹು ಗರ್ಭಧಾರಣೆಯ ಪರಿಣಾಮವನ್ನು ಅಧ್ಯಯನವು ಮತ್ತಷ್ಟು ಪರಿಶೀಲಿಸಿತು. ಹೆಚ್ಚು ಗರ್ಭಧಾರಣೆ ಹೊಂದಿರುವ ಮಹಿಳೆಯರು ಕಡಿಮೆ ಗರ್ಭಧಾರಣೆ ಹೊಂದಿರುವವರಿಗಿಂತ ವೇಗವಾಗಿ ವಯಸ್ಸಾಗುವಿಕೆಯ ಲಕ್ಷಣವನ್ನು ತೋರುತ್ತಿದ್ದಾರೆ ಎಂದು ಪತ್ತೆಯಾಯಿತು. ಗರ್ಭಾವಸ್ಥೆಯ ಪರಿಣಾಮಗಳನ್ನು ಆಳವಾಗಿ ಅಧ್ಯಯನ ಮಾಡಲು ಸಂಶೋಧಕರು 9 ವರ್ಷಗಳ ಅವಧಿಯಲ್ಲಿ ಮಹಿಳೆಯರ ಸಣ್ಣ ಉಪವಿಭಾಗವನ್ನು ವಿಶ್ಲೇಷಿಸಿದ್ದಾರೆ. ಇದರಲ್ಲಿ ಅವರು ಮಿಶ್ರ ಫಲಿತಾಂಶಗಳನ್ನು ಕಂಡುಕೊಂಡರು.

ವಯಸ್ಸಾಗುವಿಕೆಯು ಕಾಲಾನಂತರದಲ್ಲಿ ಸೆಲ್ಯುಲಾರ್ ಕಾರ್ಯ ಮತ್ತು ಶಾರೀರಿಕ ಪ್ರಕ್ರಿಯೆಗಳಲ್ಲಿ ಕ್ರಮೇಣ ಕ್ಷೀಣತೆಯನ್ನು ಒಳಗೊಂಡಿರುತ್ತದೆ. ಇದು ರೋಗಗಳಿಗೆ ಹೆಚ್ಚಿದ ಸಂವೇದನೆ ಮತ್ತು ಆರೋಗ್ಯದಲ್ಲಿ ಒಟ್ಟಾರೆ ಸಮಸ್ಯೆಗೆ ಕಾರಣವಾಗಬಹುದು. ಗರ್ಭಾವಸ್ಥೆಯಲ್ಲಿ ಭ್ರೂಣದ ಬೆಳವಣಿಗೆಯನ್ನು ಹೆಚ್ಚಿಸಲು ಮಹಿಳೆಯ ದೇಹವು ಗಮನಾರ್ಹವಾದ ಶಾರೀರಿಕ ಬದಲಾವಣೆಗಳಿಗೆ ಒಳಗಾಗುತ್ತದೆ. ಈ ಬದಲಾವಣೆಗಳಲ್ಲಿ ಹಾರ್ಮೋನ್ ಮಟ್ಟಗಳಲ್ಲಿನ ಬದಲಾವಣೆಗಳು, ಹೆಚ್ಚಿದ ಚಯಾಪಚಯ ಕ್ರಿಯೆ ಮತ್ತು ಪ್ರತಿರಕ್ಷಣಾ ಕಾರ್ಯದಲ್ಲಿನ ಬದಲಾವಣೆಗಳು ಕೂಡ ಸೇರಿವೆ. ಆರೋಗ್ಯಕರ ಗರ್ಭಧಾರಣೆಗೆ ಈ ಬದಲಾವಣೆಗಳು ಅತ್ಯಗತ್ಯವಾಗಿದ್ದರೂ, ಅವು ಸೆಲ್ಯುಲಾರ್ ಪ್ರಕ್ರಿಯೆಗಳ ಮೇಲೆ ಪರಿಣಾಮ ಬೀರಬಹುದು.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ