World Animal Welfare Day 2024 : ಸ್ವಾರ್ಥ ಬಿಟ್ಟು ಮೂಕ ಜೀವಿಗಳಿಗೂ ಬದುಕಲು ಅವಕಾಶ ಕೊಡಿ

ನಮ್ಮ ಪರಿಸರ ವ್ಯವಸ್ಥೆಯನ್ನು ಸಮತೋಲನದಲ್ಲಿರಿಸುವಲ್ಲಿ ಈ ಪ್ರಾಣಿಗಳ ಕೊಡುಗೆ ಅಪಾರವಾಗಿದೆ. ಹೀಗಾಗಿ ಈ ಪ್ರಾಣಿಗಳ ಸಂರಕ್ಷಣೆಯ ಕುರಿತಾಗಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಅಕ್ಟೋಬರ್ 4 ರಂದು ವಿಶ್ವ ಪ್ರಾಣಿ ಕಲ್ಯಾಣ ದಿನವನ್ನು ಆಚರಿಸಲಾಗುತ್ತದೆ. ಈ ಬಗ್ಗೆ ನಾವು ಗಳು ಸಮಾನ ಮನಸ್ಥಿತಿಯಿಂದಾಗಿ ಪ್ರಾಣಿ ಪ್ರಬೇಧಗಳ ರಕ್ಷಣೆಗೆ ಕೈ ಜೋಡಿಸಬೇಕು. ಹಾಗಾದ್ರೆ ವಿಶ್ವ ಪ್ರಾಣಿ ಕಲ್ಯಾಣ ದಿನದ ಆಚರಣೆಯು ಆರಂಭವಾದದ್ದು ಹೇಗೆ ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

World Animal Welfare Day 2024 : ಸ್ವಾರ್ಥ ಬಿಟ್ಟು ಮೂಕ ಜೀವಿಗಳಿಗೂ ಬದುಕಲು ಅವಕಾಶ ಕೊಡಿ
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Oct 04, 2024 | 9:29 AM

ಈ ಭೂಮಿಯ ಮೇಲೆ ಮನುಷ್ಯನಿಗೆ ಎಷ್ಟು ಬದುಕುವ ಹಕ್ಕಿದೆಯೋ ಅಷ್ಟೇ ಹಕ್ಕು ಪ್ರಾಣಿಗಳು ಸೇರಿದಂತೆ ಇತರ ಜೀವಿಗಳಿಗೂ ಇದೆ. ಆದರೆ ಇಂದು ಮನುಷ್ಯನ ಸ್ವಾರ್ಥದಿಂದಾಗಿ ಇಂದು ಪ್ರಾಣಿಗಳ ಆವಸಸ್ಥಾನವಾದ ಕಾಡುಗಳ ನಾಶ, ಕಳ್ಳಬೇಟೆ, ನಗರೀಕರಣದಿಂದಾಗಿ ಅದೆಷ್ಟೋ ಪ್ರಾಣಿ ಪ್ರಭೇಧಗಳು ಅಳಿವಿನಂಚಿಗೆ ತಲುಪಿದೆ. ನಮ್ಮ ಈ ಪರಿಸರ ವ್ಯವಸ್ಥೆಯ ಸಮತೋಲನವನ್ನು ಕಾಪಾಡುವಲ್ಲಿ ಈ ಪ್ರಾಣಿಗಳ ಪಾತ್ರ ಅಗಾಧವಾಗಿದ್ದು, ಪ್ರಾಣಿಗಳ ಸಂತತಿಯನ್ನು ರಕ್ಷಿಸುವ ಬಗ್ಗೆ ಜಾಗೃತಿ ಮೂಡಿಸಲು ಪ್ರತಿವರ್ಷ ಅಕ್ಟೋಬರ್ 4 ರಂದು ವಿಶ್ವ ಪ್ರಾಣಿ ಕಲ್ಯಾಣ ದಿನವನ್ನು ಆಚರಿಸಲಾಗುತ್ತದೆ.

ವಿಶ್ವ ಪ್ರಾಣಿ ಕಲ್ಯಾಣ ದಿನದ ಇತಿಹಾಸ

ವಿಶ್ವ ಪ್ರಾಣಿ ಕಲ್ಯಾಣ ದಿನವನ್ನು 24 ನೇ ಮಾರ್ಚ್ 1925 ರಂದು ಜರ್ಮನಿಯ ಸೈನಾಜಿಸ್ಟ್ ಹೆನ್ರಿಕ್ ಝಿಮ್ಮರ್ ಮ್ಯಾನ್ ಬರ್ಲಿನ್ನಲ್ಲಿರುವ ಸ್ಪೋರ್ಟ್ಸ್ ಪ್ಯಾಲೇಸ್ ನಲ್ಲಿ ಆಯೋಜಿಸಿದರು. ಈ ಕಾರ್ಯಕ್ರಮದಲ್ಲಿ 5000 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ತದನಂತರದಲ್ಲಿ 1931 ರಲ್ಲಿ ಇಟಲಿಯ ಫ್ಲಾರೆನ್ಸ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಪ್ರಾಣಿ ಸಂರಕ್ಷಣಾ ಸಮ್ಮೇಳನವು ಅಕ್ಟೋಬರ್ 4 ನ್ನು ಅಂತಾರಾಷ್ಟ್ರೀಯ ಪ್ರಾಣಿ ಕಲ್ಯಾಣ ದಿನವನ್ನಾಗಿ ಆಚರಿಸಲು ನಿರ್ಣಯವನ್ನು ಅಂಗೀಕರಿಸಿತು. ಅಂದಿನಿಂದ ಪ್ರತಿವರ್ಷ ಜಗತ್ತಿನಾದ್ಯಂತ ಅಕ್ಟೋಬರ್ 4 ರಂದು ಪ್ರಾಣಿ ಕಲ್ಯಾಣ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ. ಈ ವಿಶೇಷ ದಿನವನ್ನು “ಪ್ರಾಣಿ ಪ್ರೇಮಿಗಳ ದಿನ” ಎಂದು ಕೂಡ ಕರೆಯಲಾಗುತ್ತದೆ. ಪ್ರಾಣಿಗಳ ಮೇಲಿನ ಕ್ರೌರ್ಯವನ್ನು ನಿಲ್ಲಿಸಿ, ಅವುಗಳನ್ನು ರಕ್ಷಿಸುವ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶವನ್ನು ಈ ದಿನವು ಹೊಂದಿದೆ.

ವಿಶ್ವ ಪ್ರಾಣಿ ಕಲ್ಯಾಣ ದಿನದ ಮಹತ್ವ ಹಾಗೂ ಥೀಮ್

ಮಾನವನ ಸ್ವಾರ್ಥದಿಂದಾಗಿ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನು ರಕ್ಷಿಸುವುದು ಮತ್ತು ಮಾನವರೊಂದಿಗೆ ಅವುಗಳ ಸಂಬಂಧವನ್ನು ಬಲಪಡಿಸುವುದು. ಪ್ರಾಣಿಗಳ ಹಕ್ಕುಗಳು, ಕಲ್ಯಾಣ ಮತ್ತು ಅವುಗಳ ರಕ್ಷಣೆಯ ತುರ್ತು ಅಗತ್ಯತೆಯ ಬಗ್ಗೆ ತಿಳಿಸುವ ಉದ್ದೇಶದಿಂದ ಈ ದಿನವು ಮಹತ್ವದ್ದಾಗಿದೆ. ಈ ಬಾರಿ ಪ್ರಾಣಿ ಚಿಕ್ಕದೋ, ದೊಡ್ಡದೋ ಯಾವುದೇ ಇರಲಿ ಎಲ್ಲವನ್ನೂ ಸಮನಾಗಿ ಪ್ರೀತಿಸಿ ಎಂಬ ಥೀಮ್ ನಲ್ಲಿ ವಿಶ್ವ ಪ್ರಾಣಿ ಕಲ್ಯಾಣ ದಿನವನ್ನು ಆಚರಣೆ ಮಾಡಲಾಗುತ್ತಿದೆ.

ಇದನ್ನೂ ಓದಿ: ಮನಸಾರೆ ನಕ್ಕು ಬಿಡಿ, ಆರೋಗ್ಯದಲ್ಲಾಗುತ್ತೆ ಈ ಬದಲಾವಣೆ

ವಿಶ್ವ ಪ್ರಾಣಿ ಕಲ್ಯಾಣ ದಿನದ ಆಚರಣೆ ಹಾಗೂ ಸಂರಕ್ಷಣೆ ಹೇಗೆ?

ಯುಕೆ ಮೂಲದ ನೇಚರ್‌ವಾಚ್ ಫೌಂಡೇಶನ್ ಎಂಬ ಸಂಸ್ಥೆ ಯು ವಿವಿಧ ಕಾರ್ಯಕ್ರಮಗಳನ್ನು ಪ್ರಾಯೋಜಿಸುತ್ತದೆ. ನೇಚರ್‌ವಾಚ್ ಫೌಂಡೇಶನ್ ಒಂದು ನಿಧಿಸಂಗ್ರಹಣೆ ಸಂಸ್ಥೆಯಾಗಿದ್ದು, ಅದು ಪ್ರಾಣಿಗಳ ಕಲ್ಯಾಣ ಕಾರ್ಯಕ್ರಮಗಳಿಗೆ ಹಣವನ್ನು ಸಂಗ್ರಹಿಸುತ್ತದೆ. ವಿಶ್ವ ಪ್ರಾಣಿ ದಿನದ ಅಂಗವಾಗಿ ಪ್ರಾಣಿಗಳ ಸಂರಕ್ಷಣೆ ಸಂಬಂಧಪಟ್ಟ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ ಮಾಹಿತಿ ನೀಡುವ ಕೆಲಸ ಮಾಡುತ್ತದೆ. ಕೆಲವೊಮ್ಮೆ ಮಾನವರು ಮನೆಯಲ್ಲಿ ಸಾಕುವ ಪ್ರಾಣಿಗಳ ಮೇಲೂ ಕ್ರೂರವಾಗಿ ವರ್ತಿಸುತ್ತಾರೆ, ಹೀಗಾಗಿ ಈ ಪ್ರಾಣಿಗಳನ್ನು ಕೂಡ ಜೀವಿಗಳಂತೆ ಪರಿಗಣಿಸಬೇಕು. ಅವುಗಳನ್ನು ಆಹಾರ ಉತ್ಪನ್ನವಾಗಿ ನೋಡದೇ ಅವುಗಳಿಗೆ ಆಹಾರ ನೀಡುವುದು ಮುಖ್ಯ. ಪ್ರಾಣಿಗಳ ಆರೋಗ್ಯವು ಹದಗೆಟ್ಟ ಸಂದರ್ಭದಲ್ಲಿ ಅವುಗಳಿಗೆ ವೈದ್ಯಕೀಯ ಚಿಕಿತ್ಸೆ ಕೊಡಿಸುವುದು. ಸಾಕು ಪ್ರಾಣಿಗಳನ್ನು ನಮ್ಮ ಮನೆಯ ಸದಸ್ಯರಂತೆ ಕಾಣುವ ಮೂಲಕ ಜೀವಿಸಲು ಸಾಕಷ್ಟು ಸ್ಥಳಾವಕಾಶ ಕೊಡುವುದರೊಂದಿಗೆರೊಂದಿಗೆ ಪ್ರೀತಿಯಿಂದ ಸಾಕಿ ಸಲಹಬೇಕು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ