ಆಹಾ.. ಚಾಕಲೇಟ್ ಅಂದ್ರೆ ಯಾರಿಗೆ ತಾನೆ ಇಷ್ಟ ಆಗಲ್ಲ ಹೇಳಿ! ಮಕ್ಕಳಿಂದ ವಯಸ್ಕರವರೆಗೂ ಚಾಕಲೇಟ್ ಎಲ್ಲರಿಗೆ ಪ್ರಿಯ. ಇಂದು ಚಾಕಲೇಟ್ ಪ್ರಿಯರ ದಿನವೆಂದೇ ಹೇಳಬಹುದು. ವಿಶೇಷವಾಗಿ ಚಾಕಲೇಟ್ ಪ್ರಿಯರಂತೂ ಅದ್ದೂರಿಯಾಗಿ ಈ ದಿನವನ್ನು ಆಚರಿಸುತ್ತಾರೆ. ವಿವಿಧ ಚಾಕಲೇಟ್ಗಳ ಸಿಹಿ ಹಂಚುವುದೇ ಈ ದಿನದ ವಿಶೇಷ. ಪ್ರತಿ ವರ್ಷ ಜುಲೈ 7 ನೇ ತಾರೀಕಿನಂದು ವಿಶ್ವ ಚಾಕೊಲೇಟ್ ದಿನವನ್ನು ಆಚರಿಸಲಾಗುತ್ತದೆ. ಕೇವಲ ರುಚಿಗಷ್ಟೇ ಅಲ್ಲದೇ ಆರೋಗ್ಯಕ್ಕೂ ಕೂಡಾ ಅನೇಕ ಪ್ರಯೋಜನಗಳಿವೆ.
ಚಾಕೊಲೇಟ್ ಹಂಚುವ ಮೂಲಕ ಸಂಬಂಧಗಳನ್ನು ಸಿಹಿಗೊಳಿಸುವ ದಿನವಿದು. ವಿವಿಧ ರೀತಿಯ ಚಾಕೊಲೇಟ್‌ಗಳ ರುಚಿಯನ್ನು ಬಹುತೇಕ ಎಲ್ಲಾ ವಯಸ್ಸಿನ ಜನರು ಆನಂದಿಸುತ್ತಾರೆ. ಚಾಕಲೇಟ್ನಲ್ಲಿ ಅದೆಷ್ಟೆಲ್ಲಾ ವಿಧಗಳಿವೆ! ಕೆಲವರಿಗೆ ಮಿಲ್ಕ್ ಚಾಕಲೇಟ್ ಇಷ್ಟವಾದರೆ ಇನ್ನು ಕೆಲವರಿಗೆ ಕಾಫಿ ಫ್ಲೆವರ್ ಚಾಕಲೇಟ್ ಇಷ್ಟ. ಕೆಲವರು ಹಣ್ಣುಗಳಿಂದ ತಯಾರಿಸಿದ ಚಾಕಲೇಟ್ ಸವಿಯಬಹುದು. ಒಟ್ಟಿನಲ್ಲಿ ಸಿಹಿ ಹಂಚುವ ಮೂಲಕ ಸಂಬಂಧವನ್ನು ಗಟ್ಟಿಯಾಗಿಸುವ ದಿನವಿದು. ನಿಮ್ಮ ಮನೆಯವರಿಗೆ, ಸ್ನೇಹಿತರಿಗೆ ಇಷ್ಟವಾದ ಚಾಕಲೇಟ್ ಹಂಚುವ ಮೂಲಕ ಇಂದಿನ ದಿನವನ್ನು ಆಚರಿಸಿ.
ವಿಶ್ವ ಚಾಕಲೇಟ್ ದಿನದ ಇತಿಹಾಸ
ಪ್ರತೀ ವರ್ಷ ಜುಲೈ 7 ನೇ ತಾರೀಕಿನಂದು ವಿಶ್ವ ಚಾಕಲೇಟ್ ದಿನವನ್ನು ಆಚರಿಸುತ್ತಾ ಬಂದಿದ್ದಾರೆ. 1550 ರಲ್ಲಿ ಮೊದಲ ಚಾಕಲೇಟ್ ಯುರೋಪಿನಲ್ಲಿ ತಯಾರಿಸಲಾಯಿತು. ಬಳಿಕ ಮೊದಲ ವಿಶ್ವ ಚಾಕೊಲೇಟ್ ದಿನವನ್ನು 2009 ರಲ್ಲಿ ಆಚರಿಸಲಾಯಿತು. ಈ ದಿನದಂದು ಪ್ರಪಂಚದಾದ್ಯಂತ ಸಿಹಿ ತಿಂಡಿ ಅಂಗಡಿಗಳು, ಅದರಲ್ಲಿಯೂ ಮುಖ್ಯವಾಗಿ ಚಾಕಲೇಟ್ ಅಂಗಡಿಗಳಿಗೆ ಭರ್ಜರಿ ವ್ಯಾಪಾರ. ಗ್ರಾಹರಿಗೆ ಒಳ್ಳೆಯ ಚಾಕಲೇಟ್ ನೀಡುವ ಮೂಲಕ ಈ ದಿನವನ್ನು ಆಚರಿಸುತ್ತಾರೆ.
ಆರೋಗ್ಯಕ್ಕೆ ಒಳ್ಳೆಯದು
ಈ ಸವಿಯಾದ ಚಾಕೊಲೇಟ್‌ಗಳು ಆಂಟಿಆಕ್ಸಿಡೆಂಟ್‌ಗಳನ್ನು ಹೊಂದಿರುತ್ತವೆ. ಜತೆಗೆ ಫೈಟೊನ್ಯೂಟ್ರಿಯಂಟ್‌ಗಳಿಂದ ಸಮೃದ್ಧವಾಗಿವೆ. ಇದು ಜೀವಕೋಶಗಳನ್ನು ಸ್ವತಂತ್ರ ರಾಡಿಕಲ್ ಗಳಿಂದ ರಕ್ಷಿಸುವ ಪ್ರತಿರಕ್ಷೆಯಾಗಿ ಕಾರ್ಯನಿರ್ವಹಿಸುತ್ತದೆ. ಇತ್ತೀಚೆಗೆ, ಕೋವಿಡ್ -19 ಸಾಂಕ್ರಾಮಿಕ ರೋಗ ಸಮಯದಲ್ಲಿ ಜನರು ಹೆಚ್ಚು ಒತ್ತಡಕ್ಕೆ ಸಿಲುಕಿದ್ದಾರೆ. ಜತೆಗೆ ಮಾನಸಿಕವಾಗಿಯೂ ಕುಂಠಿತಗೊಂಡಿದ್ದಾರೆ. ಈ ಸಮಯದಲ್ಲಿ ದೇಹದ ಒತ್ತಡವನ್ನು ನಿಯಂತ್ರಿಸಲು ಡಾರ್ಕ್ ಚಾಕೊಲೇಟ್ ಅನ್ನು ಪ್ರಚಾರ ಮಾಡಲಾಗುತ್ತಿದೆ ಎಂಬ ಸುದ್ದಿ ಹೊರಬಂದಿದೆ.
ಚಾಕೊಲೇಟ್ನಲ್ಲಿರು ಪೋಷಕಾಂಶಗಳು ಅಧಿಕ ರಕ್ತದೊತ್ತಡವನ್ನು ನಿವಾರಿಸುತ್ತದೆ. ಹಾಗೆಯೇ ಉರಿಯೂತದಂತಹ ಸಮಸ್ಯೆಯ ನಿವಾರಣೆಗೆ ಸಹಾಯಕವಾಗಿದೆ. ಜತೆಗೆ ಬ್ಯಾಕ್ಟೀರಿಯಾ ವಿರೋಧಿ ಗುಣವನ್ಇನೂ ಹೊಂದಿದೆ. ಇದು ಚಯಾಪಚಯವನ್ನು ಹೆಚ್ಚಿಸುತ್ತದೆ ಮತ್ತು ಕರುಳಿನಲ್ಲಿನ ಸೂಕ್ಷ್ಮಜೀವಿಯ ಚಟುವಟಿಕೆಯನ್ನು ಸುಧಾರಿಸುತ್ತದೆ. ಈ ಹಿಂದೆ ಚಾಕೊಲೇಟ್‌ಗಳಲ್ಲಿ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ ಎಂದು ಅಧಯಯನಗಳು ತಿಳಿಸಿವೆ. ಇಂದಿನ ದಿನವನ್ನು ಚಾಕಲೇಟ್ ಸವಿಯುವುದರ ಮೂಲಕ ಖುಷಿಯಿಂದ ಆಚರಿಸಿ.
ಇದನ್ನೂ ಓದಿ:
ಬೆಳಗ್ಗೆ ಚಾಕಲೇಟ್ ಸೇವಿಸುವುದರಿಂದ ತೂಕ ಮತ್ತು ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆ ಮಾಡಿಕೊಳ್ಳಬಹುದು: ಅಧ್ಯಯನ
World Chocolate Day 2021 : ಸುಪ್ರಿಯಾ ‘ಫೆರೆರೋಧಾರೆ’ಯೊಂದಿಗೆ ‘ಪಿಂಕಿ’ಯ ಟ್ಯಾಂಗೋ ಜುಗಲಬಂದಿ