ಆರೋಗ್ಯವೇ ಭಾಗ್ಯ ಎನ್ನುವ ಮಾತಿದೆ. ಇತ್ತೀಚೆಗಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ವಹಿಸಿದರೂ ಸಾಲದು. ಸ್ವಲ್ಪ ಯಾಮಾರಿದ್ರು ಬೇಡದ ಕಾಯಿಲೆಗಳು ದೇಹವನ್ನು ಒಕ್ಕರಿಸಿಕೊಂಡು ಬಿಡುತ್ತದೆ. ಹೀಗಾಗಿ ಆಹಾರ ತಯಾರಿಸುವ ಮೊದಲು, ಆಹಾರ ತಯಾರಿಸಿದ ನಂತರದಲ್ಲಿ ಸುರಕ್ಷತೆ ಹಾಗೂ ಸ್ವಚ್ಛತೆಯ ಕಡೆಗೆ ಗಮನ ಕೊಡುವುದು ಅಗತ್ಯ. ಅದಲ್ಲದೇ ಕಳಪೆ ಗುಣಮಟ್ಟದ ಆಹಾರ ಸೇವನೆಯಿಂದ ದೂರವಿರುವುದು ಆರೋಗ್ಯ ದೃಷ್ಟಿಯಿಂದ ಒಳ್ಳೆಯದು. ಈ ಮೂಲಕ ಆಹಾರದಿಂದ ಹರಡುವ ರೋಗಗಳನ್ನು ತಡೆಯಬಹುದು. ಅದಲ್ಲದೆ, ಆಹಾರ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಜೂನ್ 7 ರಂದು ವಿಶ್ವ ಆಹಾರ ಸುರಕ್ಷತಾ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ವಿಶ್ವ ಆರೋಗ್ಯ ಸಂಸ್ಥೆಯು 2018ರಲ್ಲಿ ವಿಶ್ವ ಆಹಾರ ಸುರಕ್ಷತಾ ದಿನವನ್ನು ಘೋಷಿಸಿತು. ಆಹಾರ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವವ ಉದ್ದೇಶದಿಂದ ಈ ದಿನವನ್ನು ಘೋಷಿಸಲಾಯಿತು.
ಆಹಾರ ಸುರಕ್ಷತೆಯೆನ್ನುವುದು ವಿವಿಧ ವಿಧಾನಗಳಲ್ಲಿ ಆಹಾರವನ್ನು ನಿರ್ವಹಿಸುವುದು, ತಯಾರಿಸುವುದು ಹಾಗೂ ಸಂಗ್ರಹಿಸುವುದಾಗಿದೆ. ಈ ಮೂಲಕ ಜಾಗತಿಕವಾಗಿ ಆಹಾರದಿಂದ ಹರಡುವ ರೋಗಗಳ ಕಡಿಮೆ ಮಾಡುವ ಉದ್ದೇಶವನ್ನು ಹೊಂದಿದೆ. ನೈರ್ಮಲ್ಯದ ಕೊರತೆಯಿಂದ ಆಹಾರದಿಂದ ಹರಡುವ ರೋಗಗಳ ಕುರಿತು ಜಾಗೃತಿ ಮೂಡಿಸಿ, ಕಾಯಿಲೆಯಿಂದ ರಕ್ಷಿಸುವುದು ಉದ್ದೇಶವಾಗಿದೆ.
ಇದನ್ನೂ ಓದಿ: ಎಲ್ಲವನ್ನು ನಿಭಾಯಿಸುವ ಮುದ್ದಿನ ಸೊಸೆ ಆಗುವುದು ಹೇಗೆ ? ಇಲ್ಲಿದೆ ಸಿಂಪಲ್ ಟಿಪ್ಸ್
* ಆಹಾರ ತಯಾರಿಸುವ ಪಾತ್ರೆಗಳು ಹಾಗೂ ಅಡುಗೆ ಮನೆಯನ್ನು ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳಿ.
* ಅಡುಗೆ ಮಾಡುವ ಮೊದಲು ಅಥವಾ ಆಹಾರವನ್ನು ಮುಟ್ಟುವ ಮೊದಲು ನಿಮ್ಮ ಕೈಗಳನ್ನು ಚೆನ್ನಾಗಿ ತೊಳೆಯಿರಿ.
* ಗ್ರೀನ್ಸ್, ತರಕಾರಿಗಳು ಮತ್ತು ಮಾಂಸವನ್ನು ಪ್ರತ್ಯೇಕವಾಗಿ ಶೇಖರಿಸಿಡಿ.
* ಕಚ್ಚಾ ಮತ್ತು ಬೇಯಿಸಿದ ಆಹಾರವನ್ನು ಪ್ರತ್ಯೇಕವಾಗಿ ಇರಿಸುವ ಮೂಲಕ ಆರೋಗ್ಯದ ಮೇಲಾಗುವ ಅಡ್ಡಪರಿಣಾಮಗಳನ್ನು ತಡೆಯಿರಿ.
* ಕಚ್ಚಾ ಮತ್ತು ಬೇಯಿಸಿದ ವಸ್ತುಗಳಿಗೆ ಪ್ರತ್ಯೇಕ ಕಟಿಂಗ್ ಬೋರ್ಡ್‌ಗಳು, ಪಾತ್ರೆಗಳು ಮತ್ತು ಪ್ಲೇಟ್‌ಗಳನ್ನು ಬಳಸುವುದು ಉತ್ತಮ.
* ಹಾನಿಕಾರಕ ಬ್ಯಾಕ್ಟೀರಿಯಾವನ್ನು ಕೊಲ್ಲಲು ಆಹಾರವನ್ನು ಸಂಪೂರ್ಣವಾಗಿ ಬೇಯಿಸುವುದನ್ನು ಮರೆಯಬೇಡಿ.
* ತಾಜಾತನವನ್ನು ಕಾಪಾಡಿಕೊಳ್ಳಲು ಮತ್ತು ಹಾನಿಕಾರಕ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ತಡೆಯಲು ಬೇಗನೇ ಹಾಳಾಗುವ ಆಹಾರವನ್ನು ಸರಿಯಾದ ವಿಧಾನದ ಮೂಲಕ ಸಂಗ್ರಹಿಸಿಡಿ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: