Autobiography: ಆಧುನಿಕ ಶಕುಂತಲಾ ಕಥನ: ಪ್ರೌಢಶಾಲೆ ಹಾಗೂ ಕಾಲೇಜಿನ ನಡುವೆ ಕಂಡ ಪ್ರಮುಖ ವ್ಯತ್ಯಾಸವೆಂದರೆ ಭಾಷೆ

ಡಾ. ಶಕುಂತಲಾ ಶ್ರೀಧರ್ ಅವರ ಆಧುನಿಕ ಶಕುಂತಲಾ ಕಥನದ 9ನೇ ಕಥನ ಇಲ್ಲಿದೆ.

Autobiography: ಆಧುನಿಕ ಶಕುಂತಲಾ ಕಥನ: ಪ್ರೌಢಶಾಲೆ ಹಾಗೂ ಕಾಲೇಜಿನ ನಡುವೆ  ಕಂಡ ಪ್ರಮುಖ ವ್ಯತ್ಯಾಸವೆಂದರೆ ಭಾಷೆ
Adhunika Shakuntala Kathana
TV9kannada Web Team

| Edited By: Nayana Rajeev

Jul 17, 2022 | 12:26 PM

ಡಾ. ಶಕುಂತಲಾ ಶ್ರೀಧರ್, ಮೂಷಕ ತಜ್ಞೆ (Dr. Shakuntala Sridhara)

(ಕಥನ 9) ನನ್ನ ಶಿಕ್ಷಣದ ಕನಿಷ್ಠ ತೃಪ್ತಿಯ ಅವಧಿಯು ಪದವಿಪೂರ್ವ ಅಧ್ಯಯನದ ಸಮಯವಾಗಿತ್ತು. ನಾನು 1963 ರಲ್ಲಿ ಎಸ್‌ಎಸ್‌ಎಲ್‌ಸಿಯನ್ನು ಪೂರ್ಣಗೊಳಿಸಿ, ಕಾಲೇಜು ವ್ಯಾಸಂಗಕ್ಕಾಗಿ ಬೆಂಗಳೂರಿನ ಮಹಾರಾಣಿ ಕಾಲೇಜನ್ನು ಆರಿಸಿದೆ. ಆ ದಿನಗಳಲ್ಲಿ ಬೆಂಗಳೂರಿನಲ್ಲಿ ಹುಡುಗಿಯರಿಗೆ ವಿಜ್ಞಾನ ಬೇಕಾದರೆ ಮಹಾರಾಣಿ ಮತ್ತು Arts ಬೇಕಾದರೆ ಮೌಂಟ್ ಕಾರ್ಮೆಲ್ ಕಾಲೇಜುಗಳು ಮಾತ್ರ ಇದ್ದವು.

ಮೌಂಟ್ ಕಾರ್ಮೆಲ್ ನಮ್ಮಂಥ ಕೆಳ ಮಧ್ಯಮದವರಿಗೆ ನಿಲುಕದ ಸುಮವಾಗಿತ್ತು.ಏಕೆಂದರೆ ಆಂಗ್ಲೋ ಇಂಡಿಯನ್, ಕಾನ್ವೆಂಟ್ ಶಿಕ್ಷಣ ಪಡೆದ, ಉನ್ನತ ಮಧ್ಯಮ ವರ್ಗ, ಶ್ರೀಮಂತ ಮತ್ತು ಪ್ರಸಿದ್ಧ ಕುಟುಂಬಗಳಿಂದ ಬರುವ ಇಂಗ್ಲಿಷ್ ಮಾತನಾಡುವ ವಿದ್ಯಾರ್ಥಿಗಳಿಗೆ ಮೌಂಟ್ ಕಾರ್ಮೆಲ್ ನಲ್ಲಿ ಓದುವುದು ಪ್ರತಿಷ್ಟೆಯ ಸಂಗತಿಯಾಗಿತ್ತು.

ಅವರಲ್ಲಿ ಹೆಚ್ಚಿನವರಿಗೆ ಇದು ಕೇವಲ ಕಾಲೇಜು ಶಿಕ್ಷಣ ಮುಗಿಸಿ ಡಿಗ್ರಿ ಪಡೆಯುವ ತಾಣವಾಗಿತ್ತು.ಯಾರಿಗೂ ಕೆಲಸಕ್ಕೆ ಸೇರಿ ಹಣ ಸಂಪಾದಿಸುವ ಅವಶ್ಯಕತೆ ಇರಲಿಲ್ಲ.ಅಲ್ಲಿಯ ಹುಡುಗಿಯರ ರೂಪದ ಬಗ್ಗೆ, ಅವರು ಸ್ಟೈಲ್ ಮತ್ತು ಫ್ಯಾಷನ್ ಗಳ ಬಗ್ಗೆ, ಅವರ ಧೈರ್ಯದ ಬಗ್ಗೆ, ನಮ್ಮಲ್ಲಿ ಭಯಮಿಶ್ರಿತ, ಆಶ್ಚರ್ಯಭರಿತ ಉಹಾಪೋಹಗಳಿದ್ದವು.

ಇದನ್ನೂ ಓದಿ

ಬೆಂಗಳೂರಿನ ಮಹಾರಾಣಿಯ ಮಹಿಳಾ ವಿಜ್ಞಾನ ಮಹಾವಿದ್ಯಾಲಯವು ಹಿಂದಿನ ಮೈಸೂರಿನ ಮಹಾರಾಜರಾದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಹೆಣ್ಣುಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಧ್ಯೇಯದೊಂದಿಗೆ 1938 ರಲ್ಲಿ ಇದನ್ನು ಸ್ಥಾಪಿಸಿದ್ದರು. ಇದು ಬೆಂಗಳೂರಿನ ಒಂದು ಚಾರಿತ್ರಿಕ ವಾದ, ಪ್ರಮುಖ ಹೆಣ್ಣುಮಕ್ಕಳ ಕಾಲೇಜು ವಿದ್ಯಾಭ್ಯಾಸಕ್ಕೆ ಒಂದು ಪ್ರಮುಖ ಸಂಸ್ಥೆಯಾಗಿದ್ದು, ಕಳೆದ 80 ವರ್ಷಗಳಿಂದ ವಿದ್ಯಾರ್ಥಿನಿಯರಿಗೆ ಉನ್ನತ ಶಿಕ್ಷಣವನ್ನು ನೀಡುತ್ತಿದೆ.ಇದೀಗ ತಾನೇ ಸ್ವತಃ ಮಹಿಳೆಯರ ವಿಶ್ವವಿದ್ಯಾನಿಲಯವಾಗುವ ದಿಕ್ಕಿನಲ್ಲಿ ದಾಪುಗಾ ಲಾಕುತ್ತಿದೆ (2019). ಇದರ ಕಟ್ಟಡವು ಪಾರಂಪರಿಕ ಶೈಲಿಯಲ್ಲಿ ಕಲಾತ್ಮಕವಾಗಿ ವಿನ್ಯಾಸಗೊಳಿಸಲ್ಪಟ್ಟಿದೆ. ವಿಶಾಲವಾದ ಕಟ್ಟಡದಲ್ಲಿ ಉದ್ದವಾದ ಕಾರಿಡಾರ್‌ಗಳು, ಹಳೆಕಾಲದ ರೀತಿಯ ಶಕ್ತಿಯುತ ಕಂಬಗಳು, ದೊಡ್ಡ ಉಪನ್ಯಾಸ ಕೊಠಡಿಗಳು ಮತ್ತು ಸುಸಜ್ಜಿತ ಪ್ರಯೋಗಾಲಯಗಳನ್ನು ಹೊಂದಿದೆ.

ಬೆಂಗಳೂರು ನಗರದ ಮಧ್ಯಭಾಗದಲ್ಲಿ ರುವ ಕಾಲೇಜು ಕಟ್ಟಡದ ಸುತ್ತಲೂ ಹುಲ್ಲುಗವಾಲಿ ದ್ದು, ಅದರ ಮಧ್ಯೆ ಅಲ್ಲಲ್ಲಿ ಹಳೆಯದಾದ, ಅರಳಿ ಮರಗಳಿದ್ದು, ಕಾಲೇoಜೊ oದು ಸುಂದರ ಕನಸಿನತ್ತಿತ್ತು ಆ ಮರಗಳ ಅಡಿಯಲ್ಲಿ ತರಗತಿಗಳು ಇಲ್ಲದಿದ್ದಾಗ ಹುಡುಗಿಯರ ಗುಂಪುಗಳು ಹರಟೆ ಹೊಡೆಯಲು ಮತ್ತು ಊಟ ಮಾಡಲು ಕುಳಿತಿರುತಿದ್ದೆವು.. PUC ನಲ್ಲಿ ನಾನು, ನನ್ನ ಹೈ ಸ್ಕೂಲ್ ಗೆಳೆತಿಯರಾದ ಇಂದ್ರಾಣಿ, ನಳಿನ, ನಳಿನಿ ಒಂದು ಗುಂಪು. ಬಸ್ ಪಾಸ್ ಮಾಡಿಸಿಕೊಂಡು 31 ನೇ ನಂಬರಿನ ಬಿಟಿಸ್ ಬಸ್ಸಿನಲ್ಲಿ ಪ್ರಯಾಣ. ಹೋಗುವಾಗ ಕಾಲೇಜಿ ನ ಮೂಲಕ ಹೋಗುತಿದ್ದರೂ ಬರುವಾಗ, ನಾವು ಕಾಲೇಜಿನಿಂದ ಮೆಜೆಸ್ಟಿಕ್ಕಿನ ಹಿಂದೆ ಇದ್ದ ಸಂಗಮ್ ಟಾಕೀಸ ವರೆಗೆ, ಸೆಂಟ್ರಲ್ ಜೈಲ್ ಹಿಂಭಾಗ ದಾಟಿ ಬಸ್ಸು ಹತ್ತಲು ನಡೆದು ಬರುತ್ತಿದ್ದೆವು. ಮಾರ್ಕೆಟ್ಟಿನಿಂದ ಬರುತ್ತಿದ್ದ ಬಸ್ಸಿನ ತುಂಬಾ ಜನ. ಗಂಟೆಗಟ್ಟಲೆ ಕಾದು ಮನೆಗೆ ಬರುವಷ್ಟರಲ್ಲಿ ಕತ್ತಲಾಗುತ್ತಿತ್ತು.

ಪ್ರೌಢಶಾಲೆಗೂ ಕಾಲೇಜಿಗೂ ನಾನು ಕಂಡ ಪ್ರಮುಖ ವ್ಯತ್ಯಾಸವೆಂದರೆ ಭಾಷೆ. ಪಾಠಗಳೆಲ್ಲ ಒಂದಕ್ಷರ ಕನ್ನಡವೂ ಇಲ್ಲದೆ ಕೇವಲ ಇಂಗ್ಲಿಷ್ನಲ್ಲೆ ನಡೆಯುತ್ತಿತ್ತು. ಲೆಕ್ಚರರ್ ಗಳೆಲ್ಲ ಸಂಪೂರ್ಣವಾಗಿ ಇಂಗ್ಲಿಶಿನಲ್ಲೇ ಮಾತನಾಡುತಿದ್ದರು. ಇಡೀ ತರಗತಿ ಕೊಠಡಿಗಳಲ್ಲಿ ಇಂಗ್ಲಿಷ್ ವಾತಾವರಣವಿರುತಿತ್ತು. ನಮಗೆಲ್ಲರಿಗೂ ಇಂಗ್ಲಿಷ್ ಚೆನ್ನಾಗಿ ಗೊತ್ತಿದ್ದರೂ ಅದನ್ನು ಸಂಭಾಷಣೆಯಲ್ಲಿ ಬಳಸಲು ಹಿಂಜರಿಯುತ್ತಿದ್ದೆವು.

ಎಲ್ಲಿ ತಪ್ಪು ಮಾತನಾಡುತ್ತೇವೋ ಎಂಬ ಅಂಜಿಕೆ.ಹೈಸ್ಕೂಲಿನಲ್ಲಿ, ನಾನು ಮತ್ತು ನನ್ನ ಸ್ನೇಹಿತರು ಮ್ಯಾಚಿಂಗ್ ಬ್ಲೌಸ್‌ಗಳೊಂದಿಗೆ ಉದ್ದನೆಯ ಲಂಗಗಳನ್ನು ಧರಿಸುತ್ತಿದ್ದೆವು. ನಾವು ಪ್ರಿಯುನಿವರ್ಸಿಟಿಗೆ ಪ್ರವೇಶಿಸಿದಾಗ ಲಂಗ ದಾವಣಿ ಧರಿಸಲು ಪ್ರಾರಂಭಿಸಿದೆವು. ಮೊದಲ ವರ್ಷದ ಡಿಗ್ರಿಯಿಂದ ನಾವು ಕೇವಲ ಸೀರೆ ಮಾತ್ರ ಉಡುತ್ತಿದ್ದೆವು. ಯಾರೂ ಸಲ್ವಾರ್ ಕಮೀಜ್, ಜೀನ್ಸ್ ಮತ್ತು ಫಾರ್ಮಲ್ ಪ್ಯಾಂಟ್ ಧರಿಸುತ್ತಿರಲಿಲ್ಲ.

ಇದೀಗ ಮನೆಯಲ್ಲಿ ನಾನು ಕಾಲೇಜು ಓದುವ ಹುಡುಗಿಯಾದ ಕಾರಣ ನನ್ನ ಹಳೆ ಜವಾಬ್ದಾರಿಗಳಾದ ಮನೆಗೆಲಸ ಮತ್ತು ಅಂಗಡಿಗಳಿಗೆ ಹೋಗುವುದು ಸಂಪೂರ್ಣವಾಗಿ ನಿಂತು ಹೋಯಿತು. 1962-63 ರ ಚೀನಾ ಆಕ್ರಮಣದ ನೆನಪು ಮಾಸಲಾರಂಭಿಸಿತ್ತು. ಜೀವನ ಸಹಜ ಸ್ಥಿತಿಗೆ ಮರಳುತ್ತಿತ್ತು. ಬಾಯಲ್ಲಿ ಹೇಳದಿದ್ದರೂ ನನ್ನ ತಂದೆಗೆ ಮಗಳು ಕಾಲೇಜಿಗೆ ಹೋಗುತ್ತಿರುವುದರ ಬಗ್ಗೆ ಹೆಮ್ಮೆಯಿಂತ್ತು.

ನನ್ನನ್ನ Tata textiles ಗೆ ಕರೆದೊಯ್ದು ನಾಲ್ಕು, ಸುಂದರ, ಹಗುರವಾದ, ವಾಯಿಲ್ ಸೀರೆಗಳನ್ನ ಕೊಡಿಸಿದರು. ಆಗ ಪೋಷಕರಿಗೆ ತಿಂಗಳಿಗೆ ಇನ್ನೂರು ರೂಪಾಯಿಗಿಂತ ಕಡಿಮೆ ಸಂಬಳವಿದ್ದರೆ, ಕಾಲೇಜು ಶುಲ್ಕದ ರಿಯಾಯಿತಿ ಇತ್ತು. ನನ್ನ ತಂದೆಯ ಸಂಬಳ ಇದಕ್ಕಿಂತ ಹತ್ತೋ ಇಪ್ಪತೋ ಹೆಚ್ಚಿತ್ತು.

ನನ್ನ ಗೆಳತಿಯರ ತಂದೆಯರ ಸಂಬಳ ಇನ್ನೂರಕ್ಕೂ ಹೆಚ್ಚಿದ್ದರೂ ಅವರು ಸುಳ್ಳು ದಾಖಲೆ ಒದಗಿಸಿ ಫೀ ಮಾಫಿ ಪಡೆಯುತ್ತಿದ್ದರು. ಆದರೆ ಸತ್ಯ ನಿಷ್ಠರಾದ ನಮ್ಮಪ್ಪ ಸುಳ್ಳು ದಾಖಲೆ ಕೊಡಲು ಒಪ್ಪಲಿಲ್ಲ.ಕಷ್ಟ ಪಟ್ಟು ನನ್ನ ತಂಗಿಯರಿಗೂ, ತಮ್ಮನಿಗೂ (ನಾಲ್ವರು )ಫೀಸು ಹೊಂದಿಸುತ್ತಿದ್ದರು.

ನಾನು ನನ್ನ ಕುಟುಂಬದಲ್ಲಿ ಕಾಲೇಜಿಗೆ ಹೋಗುವ ಮೊದಲ ಹುಡುಗಿಯಾಗಿದ್ದೆ . ಆದರೆ ಅದನ್ನು ನಾವ್ಯಾರೂ ಸಂಭ್ರಮಿಸಲಿಲ್ಲ . ಹಾಗೆಯೇ ನನ್ನ ಕಾಲೇಜಿನ ಓದಿನ ಬಗ್ಗೆ ಯಾರ ಮಾರ್ಗದರ್ಶನವೂ ನನಗೆ ಸಿಗಲಿಲ್ಲ. ಚೆನ್ನಾಗಿ ಓದುತಿದ್ದ ಕಾರಣ ವೈದ್ಯಕೀಯ ಪದವಿಗೆ ಹೋಗಬಹುದೆ oಬ ಒಂದು ಆಸೆಯಿತ್ತು.

ಅದಕ್ಕಾಗಿ PUC ಯಲ್ಲಿ physics, chemistry ಮತ್ತು biology ಯನ್ನ ನಾನೂ, ನನ್ನ ಗೆಳತಿಯರೂ ಆರಿಸಿಕೊಂಡೆ ವು. ಹೊಸ ಬಾಳು, ಹೊಸ ಜಗತ್ತು . ಇದ್ದಕ್ಕಿಂದಂತೆ ಎಲ್ಲಾ ಇಂಗ್ಲಿಷ್ನಮಯ ವಾತಾವರಣ, SSLC ಗೆ ಹೋಲಿಸಿದರೆ ಸುದೀರ್ಘವಾದ ಪಠ್ಯ ಪುಸ್ತಕಗಳು. ಒಂದೇ ವರ್ಷದ PUC ಯಾದ್ದರಿಂದ (1963 batch) ಕಾಲೇಜಿಗೆ ಹೊಂದಿಕೊಳ್ಳುವ ಮೊದಲೇ ಪ್ರರೀಕ್ಷೆ, ಇವೆಲ್ಲ ಸೇರಿ ಓದಿನಲ್ಲಿ ನನ್ನನ್ನು ಸ್ವಲ್ಪ ಹಿಂಮ್ಮೆಟ್ಟಿಸಿದವು . ಅದರಲ್ಲೂ ಭೌತ ವಿಜ್ಞಾನ.

ನನಗೆ ಮೊದಲೇ maths ಅಂದರೆ ಅಷ್ಟಕ್ಕಷ್ಟೇ. ಇಲ್ಲಿ ನೋಡಿದರೆ gravitation, electrilcity, magnetism, ಮುಂತಾದ ಎಲ್ಲಾ ಅಧ್ಯಾಯಗಳೂ ಗಣಿತದ ಸಹಾಯವಿಲ್ಲದೆ ಅರ್ಥವಾಗುವಂತಿಲ್ಲ. ಕೆಲವು ಸೀನಿಯರ್ಗಳ ಅನುಭವವನ್ನು ಕೇಳಿ ನಾನೊಂದು ದೊಡ್ಡ ರಿಸ್ಕ್ ತೆಗೆದುಕೊಂಡೆ. ಅಂದರೆ ಹಿಂದಿನ ವರ್ಷ ಕೊಟ್ಟ ಪ್ರಶ್ನೆಗಳನ್ನ ಮತ್ತೇ ಮುಂದಿನ ವರ್ಷ ಸಾಮಾನ್ಯವಾಗಿ ಪುನರಾವರ್ತಿಸುವುದಿಲ್ಲ. ಎರಡನೆಯದಾಗಿ ಇರೋ syllabas ನಲ್ಲಿ ಎರಡೊ ಮೂ ರೋ ಅಧ್ಯಾಯ ಓಧದೆ ಬಿಟ್ಟರೂ , ಪ್ರಶೆಪತ್ರಿಕೆಯಲ್ಲಿ ಆಯ್ಕೆ ಇರುವುದರಿಂದ ಕಷ್ಟವಾದ ಭೌತ ವಿಜ್ಞಾನದ ಮೂರು ಆಧ್ಯಾಯಗಳನ್ನ ಪರೀಕ್ಷೆಗೆ ಓದದೇ ಬಿಡುವುದೆಂದು ನಿರ್ಧಾರ ಮಾಡಿದೆ.

ದುರದೃಷ್ಟವಶಾತ್ ನಾನು ಓದಲು ಕೈಬಿಟ್ಟ electricity, magnetism, sound ಅಧ್ಯಯಾಯ gaಳಿಂದಲೇ ಬಹು ಪಾಲು ಪ್ರಶ್ನೆಗಳು ಬಂದು ಬಿಟ್ಟವು . ನಾನು physics ನಲ್ಲಿ ಪಾಸಾಗುವುದೇ ಅನುಮಾನವಾ ಯಿತು . ಯಾರೋ ಪುಣ್ಯಾತ್ಮ evaluator ಹಾಗೂ ಹೀಗೂ ಮಾಡಿ physics ನಲ್ಲಿ ನನ್ನ ಅಂಕಗಳನ್ನ ನೂರಕ್ಕೆ ಮೂವತ್ತರವರೆಗೆ ತಂದು ನಿಲ್ಲಿಸಿದ್ದ . Chemisrtry ಮತ್ತು biology ಒಳ್ಳೆ ಅಂಕ ಪಡೆದಿದ್ದುದರಿಂದ ನನ್ನ ಸರಾಸರಿ ಅಂಕ ಪ್ರಥಮ ಶ್ರೇಣಿಗೆ ಬಂದು ನಿಂತಿತು , ಮೆಡಿಕಲ್ ಗೆ ಇಂಟರ್ವ್ಯೂ ಬಂತು . ಆದರೆ ದುರದೃಷ್ಟವಶಾ ತ್ ನನಗಿಂತ ಕಡಿಮೆ ಅಂಕದವರಿಗೆ ವೈದ್ಯಕಿಯ ಸೀಟು ಸಿಕ್ಕಿದರೂ ನನಗೆ ಸಿಗಲಿಲ್ಲ ನನ್ನ ಮೊದಲ ಆಸೆ ಮಣ್ಣುಗೂಡಿತು.

ನನ್ನ ತಂದೆ ನನಗೆ ವೈದ್ಯಕೀಯ ಸೀಟು ಸಿಗದ ಕಾರಣ, ನನ್ನ ಕಾಲೇಜು ಶಿಕ್ಷಣವನ್ನು ನಿಲ್ಲಿಸಿ, ಟೈಪಿಂಗ್ ಮತ್ತು ಶಾರ್ಟ್‌ಹ್ಯಾಂಡ್ ಕಲಿಯಲಿಕ್ಕೆ ಹೇಳಿದರು. ಇವೆರಡು ವಿದ್ಯೆಯಿದ್ದರೆ ಕೇಂದ್ರ ಅಥವಾ ರಾಜ್ಯ ಸರ್ಕಾರಗಳಲ್ಲಿ ಸರ್ಕಾರಿ ಉದ್ಯೋಗಕ್ಕೆ ಸುಲಭವಾಗುತ್ತದೆ ಎಂದು ಅವ ಅಭಿಪ್ರಾಯ. ಪದವಿಯನ್ನು ಪೂರ್ಣಗೊಳಿಸಲು ನನಗೆ ಅವಕಾಶ ನೀಡುವಂತೆ ನಾನು ಅವರನ್ನು ಬೇಡಿಕೊಂಡೆ ನನ್ನ ತಾಯಿ ನನ್ನನ್ನು ಬಲವಾಗಿ ಬೆಂಬಲಿಸಿದರು. . ನಾನು ಬಿಎಸ್ಸಿ ಮಾಡಲು ಬೆಂಗಳೂರಿನ ಮಹಾರಾಣಿ ಕಾಲೇಜಿಗೆ ಸೇರಿಕೊಂಡೆ. ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರವನ್ನು ಪ್ರಮುಖ ವಿಷಯಗಳಾಗಿ ಮತ್ತು ರಸಾಯನಶಾಸ್ತ್ರವನ್ನು minor ವಿಷಯವಾಗಿ, ಕನ್ನಡವು ದ್ವಿತೀಯ ಭಾಷೆಯಾಗಿ ಆರಿಸಿಕೊಂಡೆ. ಭಾಷೆಗಳು ನನಗೆ ಎಂದಿಗೂ ಸಮಸ್ಯೆಯಾಗಿರಲಿಲ್ಲ. ಸಸ್ಯಶಾಸ್ತ್ರ ಮತ್ತು ರಸಾಯನಶಾಸ್ತ್ರದಲ್ಲಿ ಸ್ಕೋರ್ ಮಾಡುವುದು ಸುಲಭ ಆದರೆ ಪ್ರಾಣಿಶಾಸ್ತ್ರವನ್ನು ಅರ್ಥಮಾಡಿಕೊಳ್ಳಲು ಮತ್ತು ಉತ್ತಮ ಅಂಕಗಳನ್ನು ಪಡೆಯಲು ಕಠಿಣವಾಗಿತ್ತು. ಥಿಯರಿ ಲೆಕ್ಚರರ್‌ಗಳು ತರಗತಿಗೆ ಬರುತ್ತಿದ್ದಂತೆ, ಅಗತ್ಯವಿದ್ದರೆ ಅವರು ಪ್ರಾಣಿಗಳ ವಿಸ್ತೃತ ರೇಖಾಚಿತ್ರಗಳನ್ನು, ಕಪ್ಪು ಹಲಗೆಯ ಮೇಲೆ ಬಣ್ಣದ ಚಾಕ್ ಪೀಸ್‌ಗಳನ್ನು ಬಳಸಿ ಅವುಗಳ ವಿಶಿಷ್ಟ ಲಕ್ಷಣಗಳನ್ನು ಬಿಡಿಸಿ ನಂತರ ಕುಳಿತು ಟಿಪ್ಪಣಿಗಳನ್ನು ಬರೆ ಸು ತ್ತಿದ್ದರು.

ಪ್ರಯೋಗ ತರಗತಿಗಳು ಇನ್ನೂ ಭಯಾನಕವಾಗಿದ್ದವು. ಇದು ಹೆಚ್ಚಾಗಿ ಅಂಗರಚನಾಶಾಸ್ತ್ರವನ್ನು ಅಧ್ಯಯನ ಮಾಡಲು ಸಮುದ್ರ ಮೀನುಗಳ ವಿಭಜನೆಯೊಂದಿಗೆ ಪ್ರಾರಂಭವಾಯಿತು. ತಾಜಾ ಮೀನನ್ನು ಎಂದಿಗೂ ಛೇದಿಸಲಾಗಿಲ್ಲ ಮೀನನ್ನು ಯಾವಾಗಲೂ ಫಾರ್ಮಾಲಿನ್‌ನಲ್ಲಿ ಸಂರಕ್ಷಿಸಲ್ಪಟ್ಟ kaarana ಗಂಟೆಗಟ್ಟಲೆ dissect ಮಾಡಿದಾಗ ವಾಕರಿಕೆ ಮಾತ್ರವಲ್ಲದೆ ನಮ್ಮ ಕಣ್ಣುಗಳು ತಡೆಯಲಾರದಷ್ಟು ಉರಿಯುತಿದ್ದವು.. ಇದಲ್ಲದೆ, ಸಂರಕ್ಷಿತ ಮೀನುಗಳು . ಅನೇಕ ಬಾರಿ ಕೊಳೆತುಹೋಗಿ ನಿರೀಕ್ಷಿತ ಫಲಿತಾಂಶಗಳನ್ನು ನೀಡುತ್ತಿರಲಿಲ್ಲ . ಆದರೆ ಅದೃಷ್ಟವಶಾತ್ ಮೀನುಗಳ ನಂತರ, ಕಪ್ಪೆ, ಜಿರಳೆ ಮತ್ತು ಎರೆಹುಳುಗ ಳನ್ನ ಉದಾಹರಣೆಯಾಗಿ ತೆಗೆದುಕೊಳ್ಳಲಾ ಯಿತು.

ಸಸ್ಯಶಾಸ್ತ್ರವು ತುಂಬಾ ಸುಲಭವಾಗಿದ್ದರೂ ಅದರ ಪ್ರಾಕ್ಟಿಕಲ್ಸ್‌ನಲ್ಲಿ ಕೆಲವು ಫಾರ್ಮಾಲಿನ್-ನೆನೆಸಿದ ಸೀ ಕಳೆಗಳು ಮೊದಲ ಕೆಲವು ತರಗತಿಗಳಲ್ಲಿ ನಮ್ಮ ಕಣ್ಣುಗಳನ್ನು ಸುಡುತ್ತಿದ್ದವು. ಮೀನುಗಳಂತೆ, ಅವು ಭೀಕರವಾದ ವಾಸನೆಯನ್ನು ಹೊಂದಿರಲಿಲ್ಲ. ನಾವು ಅಂತಿಮ ವರ್ಷಕ್ಕೆ ಹೋದಂತೆ, ಪರಾಗ ಸ್ಪರ್ಶಕ್ಕೆ ಅನುಕೂಲವಾಗುವಂತೆ ಹೂವಿನ ರಚನೆ, ಕೊಂಬೆಗಳ, ಎಲೆಗಳ ಜೋಡಣೆಯ ಮಾದರಿಗಳು, ದಳಗಳ ಜೋಡಣೆ, ಹಣ್ಣಿನೊಳಗಿನ ಬೀಜಗಳು ಇವೆಲ್ಲಾ ಅವು ಯಾವ ಕುಟುಂಬಕ್ಕೆ ಸೇರಿವೆ ಎಂಬುದನ್ನು ಸೂಚಿಸುವುdu ತುಂಬಾ ವಿಸ್ಮಯಕಾರಿಯಾಗಿತ್ತು, ನಾನು ಉದ್ಯಾನ ಅಥವಾ ಉದ್ಯಾನವನಕ್ಕೆ ಹೋದಗಲ್ಲೆಲ್ಲಾ ಅಥವಾ ರಸ್ತೆ ಬದಿಯ ಮರಗಿಡಗಳನ್ನು ನೋಡಿದಾಗ, ಎಲೆಗಳು, ಹೂವುಗಳು, ಕೊಂಬೆಗಳನ್ನು ಕಿತ್ತು ಅವುಗಳನ್ನು ವರ್ಗೀಕರಿಸಲು ಪ್ರಯತ್ನಿಸುತ್ತಿದ್ದೆ.

ನಾವು ಒಂದು ವಿಭಾಗದಲ್ಲಿ ಸುಮಾರು 80 ವಿದ್ಯಾರ್ಥಿಗಳಾಗಿದ್ದು, ಎ ವಿಭಾಗದಲ್ಲಿ ಕನ್ನಡವನ್ನು ಎರಡನೇ ಭಾಷೆಯಾಗಿ ತೆಗೆದುಕೊಳ್ಳುವ ವಿದ್ಯಾರ್ಥಿಗಳು ಮತ್ತು ವಿಭಾಗದಲ್ಲಿ ಬಿ ವಿಭಾಗದಲ್ಲಿ ಅಷ್ಟೇ ಸಂಖ್ಯೆಯ ವಿದ್ಯಾರ್ಥಿಗಳಿದ್ದರು ಆದರೆ ಅವರ ಎರಡನೇ ಭಾಷೆ ಉರ್ದು, ಸಂಸ್ಕೃತ ಇತ್ಯಾದಿ.ಅಂತಿಮ ವರ್ಷದ ಹೊತ್ತಿಗೆ ಹುಡುಗಿಯರು ಧೈರ್ಯಗೊಂಡರು. ಮತ್ತು ಉಪನ್ಯಾಸಕರನ್ನು ಪ್ರಶ್ನಿಸಲು, ಅವರ ಬಗ್ಗೆ ಗಾಸಿಪ್ ಮಾಡಲು, ಅವರನ್ನು ಅನುಕರಿಸಲು ಪ್ರಾರಂಭಿಸಿದರು. ಮೊದಲಿನ ಭಯ ಮತ್ತು ಆತಂಕ ದೂರವಾಯಿತು.. ಕೆಲವರು ತುಂಬಾ ತುಂಟಿಯರಿದ್ದರು.

ವಿಶ್ವನಾಥ್ ಎಂಬ ಹೆಸರಿನ ಪ್ರಾಣಿಶಾಸ್ತ್ರದಲ್ಲಿಕೇವಲ ಒಬ್ಬ ಪುರುಷ ಉಪನ್ಯಾಸಕರು ಮಾತ್ರ ಇದ್ದರು . ಅವರು ಭ್ರೂಣಶಾಸ್ತ್ರವನ್ನು ಕಲಿಸುತ್ತಿದ್ದರಿಂದ, ಹುಡುಗಿಯರು ಅವರನ್ನು ಅವರ ಹಿಂಭಾಗದಲ್ಲಿ ಭ್ರೂಣ (Embryo) ವಿಶ್ವನಾಥ್ ಎಂದು ಕರೆಯುತ್ತಿದ್ದರು.

ನಮ್ಮ ಥಿಯರಿ ತರಗತಿಗಳು ಮುಗಿಯುವ ಹೊತ್ತಿಗೆ ಕೆಲವು ಹುಡುಗಿಯರು ಚಾಕ್ ಪೀಸ್‌ನೊಂದಿಗೆ embryo ವಿಶ್ವನಾಥ್ ಎಂದು ಮೆಟ್ಟಿಲುಗಳ, ಗೋಡೆಯ ಮೇಲೆ ದಪ್ಪ ಅಕ್ಷರಗಳಲ್ಲಿ ಬರೆದು, ಅದರೊಟ್ಟಿಗೆ ಒಬ್ಬ ಮದುವೆಯಾಗದ ಮಹಿಳಾ ಉಪನ್ಯಾಸಕರ ಹೆಸರನ್ನು ಬರೆದುಬಿಟ್ಟರು ಇವರಿಬ್ಬರು ನಮ್ಮ ಪ್ರಾಕ್ಟಿಕಲ್ಸ್ ಅನ್ನು ಒಟ್ಟಿಗೆ ತೆಗೆದುಕೊಳ್ಳುತ್ತಿದ್ದರು. ಮತ್ತು ಮೂರು ಗಂಟೆಗಳ ಪ್ರಾಯೋಗಿಕಗಳಲ್ಲಿ ಎರಡು ಗಂಟೆಗಳಿಗೂ ಹೆಚ್ಚು ಕಾಲ ಪಿಸುಗುಟ್ಟುತ್ತಿದ್ದರು.

ವಿಚಾರಣೆ ನಡೆಯಿತು, ಮೌಖಿಕವಾಗಿ ವಿದ್ಯಾರ್ಥಿಗಳನ್ನು ತಪ್ಪೋಪ್ಪಿಕೊಂಡು ಕ್ಷಮೆಯಾಚಿಸಲು ಕೇಳಲಾಯಿತು. ಇದನ್ನು ಮಾಡಿದವರು ಹೆದರಿ ಸುಮ್ಮನಾದರು. ಯಾರೂ ಒಪ್ಪಿಕೊಳ್ಳಲಿಲ್ಲ. ಒಂದು ವಾರದ ಮೌನ. ನಮ್ಮ ವರ್ಗದ ವಿದಾಯ ಕೂಟ ವೇಗವಾಗಿ ಸಮೀಪಿಸುತ್ತಿತ್ತು.

ನಾಲ್ಕು ವರ್ಷಗಳ ವಿದ್ಯಾರ್ಥಿ ಜೀವನದ ಕೊನೆಯಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಸ್ಮರಣೀಯವಾದ ಒಂದು ಸಂದರ್ಭ ಅದು. ವಿಶ್ವನಾಥ್ ಮತ್ತು ಮಹಿಳಾ ಉಪನ್ಯಾಸಕರ ಹೆಸರನ್ನು ಬರೆದ ಹುಡುಗಿಯರು ಕ್ಷಮೆಯಾಚಿಸುವವರೆಗೆ ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ ವಿಭಾಗಗಳ ಸಿಬ್ಬಂದಿ ಈ ಸಮಾರಂಭವನ್ನ ಬಹಿಷ್ಕರಿಸುವುದಾಗಿ ಘೋಷಿಸಿದರು.

ವಿದ್ಯಾರ್ಥಿ ಮುಖಂಡರು ಮತ್ತು ಕಿಡಿಗೇಡಿಗಳು ಏನು ಮಾಡಬೇಕೆಂದು ಕೆಲವು ದಿನಗಳ ಕಾಲ ನೂಕಿದರು. ನಾವು ನಾವು ಇತರ ವಿದ್ಯಾರ್ಥಿನಿಯರು ಆತಂಕದಿಂದ ಕಾಯುತ್ತಿದ್ದೆವು. ಒಂದು ವಾರದ ಒತ್ತಡ ಮತ್ತು ಮೌನ ಯುದ್ಧ.

ಅಂತಿಮವಾಗಿ ಕ್ಷಮೆಯನ್ನು ಸಲ್ಲಿಸಲಾಯಿತು. ವಿದಾಯ ಸಮಾರಂಭವವು ವಿನೋದ ಮತ್ತು ಉಲ್ಲಾಸದಿಂದ ಸಾಗಿತು.

ಮಹಾರಾಣಿ ಕಾಲೇಜಿನಲ್ಲಿ ನಾನು ಅನಾಮಧೇಯಳಾಗಿ ಹೋಗಿದ್ದೆ. ಯಾವುದೇ ಗುರುತು ಇಲ್ಲ, ಯಾವುದೇ ಮನ್ನಣೆ ಇಲ್ಲ, ಸುಮಾರು 200 ವಿದ್ಯಾರ್ಥಿನಿಯರಲ್ಲಿ ತರಗತಿ ಪರೀಕ್ಷೆಗಳಲ್ಲಿನ ಅಂಕಗಳ ಆಧಾರದ ಮೇಲೆ ನಾನು ಸಂಭಾವ್ಯ ಪ್ರಥಮ ದರ್ಜೆ ವಿದ್ಯಾರ್ಥಿನಿ. ಆದರೆ ಚರ್ಚೆ ಸ್ಪರ್ಧೆಗಳಿಲ್ಲ, ಕ್ರೀಡಾ ಸಾಧನೆಗಳಿಲ್ಲ.

ಕ್ಲಾಸ್ ಲೀಡರ್ ಕೂಡ ಅಲ್ಲ. ಎನ್ ಸಿಸಿ ಮಾತ್ರ ಬೆಳ್ಳಿ ರೇಖೆ. ಮಾರ್ಚ್‌ pastನಲ್ಲಿ ನಾನು ಎಷ್ಟರವರೆಗೆ ಮಿಂಚಿದ್ದೇನೆಂ ದರೆ ನನ್ನ ಕಾಲೇಜಿನಿಂದ NCC ಯ ಕರ್ನಾಟಕ ತಂಡಕ್ಕಾಗಿ ಗಣರಾಜ್ಯೋತ್ಸವದ ಪರೇಡ್‌ಗೆ ಆಯ್ಕೆಯಾದೆ. ಆದರೆ ನನ್ನ ತಂದೆ ಹಳೆಯ-kaaladaವರಾಗಿದ್ದರು, ಅವರಿಗೆ ಮಿಲಿಟರಿ ಸಂಪರ್ಕಗಳನ್ನು ಹೊಂದಿರುವ ಎನ್‌ಸಿಸಿ ಮತ್ತು ನವದೆಹಲಿಯ ಬಗ್ಗೆ ಒಳ್ಳೆಯ ಅಭಿಪ್ರಾಯ ಇಲ್ಲದ ಕಾರಣ ನನ್ನನ್ನು ದೆಹಲಿಗೆ ಕಳುಹಿಸಲು ನಿರಾಕರಿಸಿದ ರು.

2018ರಲ್ಲಿ ಮಹಾರಾಣಿ ಕಾಲೇಜಿನಲ್ಲಿ ನಡೆದ ಕಾಲೇಜು ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಸ್ಮರಣಿಕೆ ನೀಡಿ ಸನ್ಮಾನಿಸಿದ್ದು ದೊಡ್ಡ ವಿಪರ್ಯಾಸ. ಇದು ನನ್ನ ಜೀವನದಲ್ಲಿ ಹೆಮ್ಮೆಯ ಮತ್ತು ಸಿಹಿಯಾದ ಕ್ಷಣಗಳಲ್ಲಿ ಒಂದಾಗಿದೆ. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಲು ಮತ್ತು ಪ್ರೇರಣೆಯ ಕೆಲವು ಪದಗಳನ್ನು ಹೇಳುವ ಉತ್ತಮ ಅವಕಾಶ ನನಗೆ ಸಿಕ್ಕಿತು.

ನಮಗೆಲ್ಲ ಆಗ ವಾರ್ಷಿಕ ಪರೀಕ್ಷೆ . ಹೆಚ್ಚು ಕಡಿಮೆ ಜನವರಿಯವರೆಗೆ ಆರಾಮವಾಗಿದ್ದುಕೊಂಡು, ಹರಟೆ ಕೊಚ್ಚಿಕೊಂಡು ಕಾಲ ಕಳೆದು , ಜನವರಿ ,ಫೆಬ್ರವರಿಯಲ್ಲಿ ಓದಿಕೊಳ್ಳುತ್ತಿದ್ದೆವು.ಇದರಿಂದ ನನಗೆ ಹಲವಾರು ವೃತ್ತ ಪತ್ರಿಗಳನ್ನ , ಇಂಗ್ಲಿಷ್ ಕಾದಂಬರಿಗಳನ್ನ ಓದಲು ಬೇಕಾದಷ್ಟು ಸಮಯ ಸಿಕ್ಕುತ್ತಿತ್ತು. ಈಗಾಗಲೇ ನಾನು ಗಾಂಧಿ , ಪ್ರೆಮಚಂದ್, ಬಹುತೇಕ ಎಲ್ಲಾ ಕನ್ನಡ ಕಾದಂಬರಿಗಳನ್ನ ಓದಿ ಮುಗಿಸಿದ್ದೆ.

ಈಗ ನನ್ನ ಗಮನ ಇಂಗ್ಲಿಷ್ ಕಾದಂಬರಿಗಳ ಕಡೆ ಹೊರಳಿತು. ಮೊದಲು ಕೆಲವು ಕ್ಲಾಸಿಕ್ ಗಳನ್ನ ಓದಿದೆ . ಆಮೇಲೆ ಹೆರೋಲ್ಡ್ ರೊಬ್ಬಿನ್ಸ್ , ಅಲ್ಲಿಸ್ಟರ್ ಮಕ್ಕ್ಲೇನ್ ಮುಂತಾದ ಜನಪ್ರಿಯ ಲೇಖಕರ ಕೃತಿಗಳನ್ನ ಓದಿದೆ. ಆದರೆ ನಾನು ಓದಿದ ಮರೆಯಲಾಗದ , ಉಕೃಷ್ಟ ಕಾದಂಬರಿ ಅಂದರೆ GONE WITH THE WIND. ಮಾರ್ಗರೆಟ್ ಮಿಚೆಲ ಳ ಈ ಕಾದಂಬರಿ, ಹಾಗೂ ಅದನ್ನು ಆಧರಿಸಿ ಮಾಡಲಾದ ಅದೇ ಹೆಸರಿನ ಸಿನಿಮಾ ಇಂಗ್ಲಿಷ್ ಭಾಷೆಯ ಸರ್ವಶ್ರೇಷ್ಠ ಕಾದಂಬರಿ ಹಾಗೂ ಚಾಲನಚಿತ್ರಗಳೆಂದು ಪರಿಗಣಿಸಲ್ಪಟ್ಟಿವೆ. ಮೊದಲು ಓದಿದಾಗ ಅರ್ಧಕ್ಕಿಂತ ಕಡಿಮೆ ಅರ್ಥ ಆಯಿತು.

ಆಮೇಲೆ ಎರಡು ಮೂರು ಸಲ ಓದಿದ ಮೇಲೆ ಚೆನ್ನಾಗಿ ಅರ್ಥ ವಾಯಿತು. ಇಂದಿಗೂ ಅದರ ನಾಯಕಿ ಸ್ಕಾರ್ಲೆಟ್ ಒ ಹಾರ ನನ್ನ all time favourite. ಎಷ್ಟೇ ಕಷ್ಟಗಳು ಬಂದರೂ “tomorow is another day” ಅಂಥ ಕಣ್ಣೋರಿಸಿಕೊಂಡು ಜೀವನವನ್ನ ಎದುರಿಸಿ ಗೆದ್ದು ಬಂದಾಕೆ. ಅದರಂತೆಯೇ ಅದರ ನಾಯಕ ರೆಟ್ ಬಟ್ಲರ್.ಒಂದು ರೀತಿಯಲ್ಲಿ ನಾಯಕನೂ ಹೌದು, ಖಳ ನಾಯಕನೂ ಹೌದು. ಕಾದಂಬರಿ ಓದಿದಾಗಲೇ ಅವನನ್ನು ಬಹುವಾಗಿ ಮೆಚ್ಚಿಕೊಂಡಿದ್ದ ನಾನು, ಸಿನಿಮಾ ದಲ್ಲಿ ಆ ಪಾತ್ರ ವಹಿಸಿದ್ದ ಕ್ಲಾರ್ಕ್ ಗೆಬಲ್ ನ ನೋಡಿದ ಮೇಲೆ ಹುಚ್ಚೇದ್ದು ಹೋಗಿದ್ದೆ . ಅಂದಿನಿಂದ ಇಂದಿನರೆಗೂ , ಅದೂ TITANIC ನಾಯಕ ಲಿಯೋನಾಂರ್ದೋ ಡಿಕೆಪ್ರಿಯೋ ತೆರೆ ಮೇಲೆ ಬರುವವರೆಗೆ.

ನಾನೀಗ ದೇಶದ ರಾಜಕೀಯದಲ್ಲಿ ನಡೆಯುವ ಪ್ರಕ್ರಿಯೆಗಳಿಗೆ ಸ್ಪಂದಿಸುತಿದ್ದೆ. ನಿರಂತರವಾಗಿ ಬೇರೆ ಬೇರೆ ಪತ್ರಿಕ್ರಿಗಳನ್ನು ಓದುತ್ತಿದ್ದ ಕಾರಣ ನನ್ನ ರಾಜಕೀಯ ತಗ್ರಹಿಕೆ ಕ ಚೆನ್ನಾಗಿತ್ತು. ಕೆಲವು ಚರಿತ್ರಾ ರ್ಹ ಘಟನೆಗಳು ನನ್ನ ಪದವಿ ಶಿಕ್ಷಣದ ವೇಳೆಯಲ್ಲಿ ನಡೆದುಹೋದವು. ಮೊದಲಿಗೆ ದೇಶದ ಕಣ್ಮಣಿಯಾ ಗಿದ್ದ ಪ್ರಧಾನ ಮಂತ್ರಿ ಜವಹಾರ ನೆಹರು 1964ರ ಮೇ ತಿಂಗಳಲ್ಲಿ ನಿಧನಹೊಂದಿದರು.

ದೇಶಕ್ಕೆ ದೇಶವೇ ದಿನಗಟ್ಟಲೆ ಕಣ್ಣೀರಿಟ್ಟಿತು. ಮಾರನೇ ತಿಂಗಳು , ನಮ್ಮ ದೇಶ ಕಂಡ ಅತ್ಯಾoಥ ದಕ್ಷ , ಪ್ರಾಮಾಣಿಕ ಧುರೀಣ, ಲಾಲ್ ಬಹದ್ದೂರ್ ಶಾಸ್ತ್ರೀ ದೇಶದ ಪ್ರಧಾನಿಯಾದರು. ಅದರ ಮುಂದಿನ ವರ್ಷ ಆಗಸ್ಟ್ ತಿಂಗಳಲ್ಲಿ ಪಾಕಿಸ್ತಾನ ಭಾರತದ ಮೇಲೆ ರಾಜಸ್ಥಾನ ಮತ್ತು ಕಾಶ್ಮೀರ ಗಡಿಗಳ ಹಳ್ಳಿಗಳ ಮೇಲೆ ದಾಳಿ ಮಾಡಿತು. ಅದರಲ್ಲೂ ಸಾವಿರಾರು ಪಾಕಿಸ್ತಾನಿ ಸೈನಿಕರು ಕಾಶ್ಮೀರದೊಳಗೆ ಮಾರುವೇಶದಲ್ಲಿ ನುಸುಳಿ, ಕಾಶ್ಮೀರದ ಮುಸಲ್ಮಾನರ ಸಹಾಯದೊಂದಿಗೆ ಕಾಶ್ಮೀರವನ್ನು ಕಬಾಳಿಸಲು ಯತ್ನಿಸಿದರ. ಆದರೆ ಈ ಬಾರಿ ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ಥಾನಿ ಸೈನ್ಯವನ್ನು ಹಿಮ್ಮೆಟ್ಟಿಸುವುದಲ್ಲದೆ, ನಮ್ಮ ಸೈನ್ಯ ಲಾಹೋರನ್ನು ವಶ ಪಡಿಸಿಕೊಳ್ಳು ವುದರಲ್ಲಿತ್ತು . ಆದರೆ ಅಮೇರಿಕ, ರಷ್ಯ ಯುದ್ಧ ನಿಲ್ಲಿಸಿ ಶಾಂತಿ ಒಪ್ಪಂದ ಮಾಡಿಸಿದವು. ಆದರೆ ಈ ಒಪ್ಪಂದಕ್ಕೆ ಸಹಿ ಹಾಕುವುದಕ್ಕೆ ತಾಶ್ಕೆಂಟಿಗೆ ಹೋಗಿದ್ದ ನೆಚ್ಚಿನ ಪ್ರಧಾನಿ ಶಾಸ್ತ್ರೀಯವರು ಹೃದಯಾಘಾ ತದಿಂದ ಅಲ್ಲೇ ಅಸು ನೀಗಿದರು.

ತೆರವಾದ ಪ್ರಧಾನಿ ಕುರ್ಚಿಗೆ ಶ್ರೀಮತಿ ಇಂದಿರಾ ಗಾಂಧಿಯನ್ನ ಸರ್ವಾನುನಮತದಿಂದ ಆರಿಸಿಲಾ ಯಿತು. ಶಾಸ್ತ್ರೀ ಸಂಪುಟದಲ್ಲಿ ಮಾತೇ ಆಡದೆ , ಮೌನಿಯಾಗಿದ್ದ ಸಂಕೋಚದ ಮುದ್ದೆಯಾಗಿ ದ್ದ , ರಾಮ್ ಮನೋಹರ್ ಲೋಹಿಯ ಅವರಿಂದ GUNGI ಗುಡಿಯ (ಮೂಕ ಬೊಂಬೆ )ಅನ್ನಿಸಿಕೊಂಡಿದ್ದ ಇಂದಿರಾ ಗಾಂಧಿ ರಾಜಕೀಯವಾಗಿ ಬೃಹದಾಕಾರ ವಾಗಿ ಬೆಳೆದು ದೇಶ ಕಂಡ ಅತ್ಯುತ್ತಮ ಪ್ರಧಾನಿಗಳ ಸಾಲಿಗೆ ಸೇರಿದರು.

ಮೊದಲ ವರ್ಷದ ಪದವಿಗೆ ಯಾವುದೇ ಪರೀಕ್ಷೆಗಳಿraliಲ್ಲ. ಎರಡನೇ ವರ್ಷ ನಮಗೆ ನಾಲ್ಕು ಪರೀಕ್ಷೆಗಳಿದ್ದವು; ಭಾಷೆಗಳಲ್ಲಿ ಎರಡು, ರಸಾಯನಶಾಸ್ತ್ರ ಮತ್ತು ಸಮಾಜ ವಿಜ್ಞಾನಗಳಲ್ಲಿ ತಲಾ ಒಂದು,. ಮೂರನೇ ವರ್ಷವು ಕಠಿಣ ಪರೀಕ್ಷೆಯಾಗಿತ್ತು. ನಾವು ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ ಎಂಬ ಎರಡು ಪ್ರಮುಖ ವಿಷಯಗಳ ಪರೀಕ್ಷೆಗೆ ಹಾಜರಾಗಬೇಕಾಗಿತ್ತು ಮೊದಲ, ಎರಡನೇ ಮತ್ತು ಮೂರನೇ ವರ್ಷಗಳ ಪಠ್ಯಕ್ರಮದ ಪ್ರಶ್ನೆಗಳಿಗೆ ಉತ್ತರಿಸಬೇಕಾಗಿತ್ತು.

ಬೃಹತ್ ಭಾಗಗಳು, ಎಂದಿನಂತೆ ನಾನು ರಸಾಯನಶಾಸ್ತ್ರದಲ್ಲಿ ಉತ್ತಮ ಅಂಕಗಳನ್ನು ಗಳಿಸಿದ್ದೇ, 70% ಕ್ಕಿಂತ ಹೆಚ್ಚು ಮತ್ತು ಸಸ್ಯಶಾಸ್ತ್ರದಲ್ಲಿ ಪ್ರಥಮ ದರ್ಜೆ ಆದರೆ ಇತರ ವಿಷಯಗಳಿಗೆ ಹೋಲಿಸಿದರೆ ಪ್ರಾಣಿಶಾಸ್ತ್ರದಲ್ಲಿ ಕಡಿಮೆ ಅಂಕಗಳನ್ನು ಗಳಿಸಿದೆ ಆದರೆ ಪ್ರಾಣಿಶಾಸ್ತ್ರದಲ್ಲಿ ಎರಡನೇ shreni ಎಂ.ಎಸ್ಸಿಗೆ ಸಾಕಾಗಿತ್ತು. ಇಂಗ್ಲಿಷ್ ಪತ್ರಿಕೆಗಳನ್ನು ಓದುವ ನನ್ನ ಅಭ್ಯಾಸದಿಂದಾಗಿ ನಾನು ಸಮಾಜ ವಿಜ್ಞಾನದಲ್ಲಿ rank holder ಎಂಬ ಹೆಗ್ಗಳಿಕೆಗೆ ಪಾತ್ರ. ಲಾಲ್ ಬಾಗಿನ ಗಾಜಿನ ಮನೆಯಲ್ಲಿ ಮರೆಯಲಾಗದ ಪದವಿ ವಿತರಣೆಯ ಘಟಿಕೋತ್ಸವದೊಂದಿಗೆ ನಾನು ಪದವೀಧರಳಾದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada