ಒಳ್ಳೊಳ್ಳೇ ಪುಸ್ತಕ ಖರೀದಿಗೆ ಇದು ಸಕಾಲ: ಸಾಹಿತ್ಯ ಅಕಾಡೆಮಿ, ಪುಸ್ತಕ ಪ್ರಾಧಿಕಾರ, ಭಾಷಾ ಪ್ರಾಧಿಕಾರದ ಪುಸ್ತಕಗಳ ಬೆಲೆ ಅರ್ಧಕ್ಕರ್ಧ ಕಡಿತ

Kannada Books: ಗಣರಾಜ್ಯೋತ್ಸವದ ಅಂಗವಾಗಿ 2022ರ ಜನವರಿ ತಿಂಗಳು ಪೂರ್ತಿ ಕನ್ನಡ ಪುಸ್ತಕ ಪ್ರಾಧಿಕಾರದ ಎಲ್ಲಾ ಪುಸ್ತಕಗಳನ್ನು ಶೇಕಡಾ 50ರ ರಿಯಾಯಿತಿ ದರಗಳಲ್ಲಿ ಮಾರಾಟ ಮಾಡಲಾಗುವುದು ಎಂದು ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.

ಒಳ್ಳೊಳ್ಳೇ ಪುಸ್ತಕ ಖರೀದಿಗೆ ಇದು ಸಕಾಲ: ಸಾಹಿತ್ಯ ಅಕಾಡೆಮಿ, ಪುಸ್ತಕ ಪ್ರಾಧಿಕಾರ, ಭಾಷಾ ಪ್ರಾಧಿಕಾರದ ಪುಸ್ತಕಗಳ ಬೆಲೆ ಅರ್ಧಕ್ಕರ್ಧ ಕಡಿತ
ಕನ್ನಡ ಪುಸ್ತಕ ಪ್ರಾಧಿಕಾರದ ಜನಪ್ರಿಯ ಪ್ರಕಟಣೆಗಳು
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on: Jan 22, 2022 | 8:00 AM

ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಸಾಹಿತ್ಯ ಅಕಾಡೆಮಿ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಪುಸ್ತಕಗಳಿಗೆ ಗಣರಾಜ್ಯೋತ್ಸವ ಪ್ರಯುಕ್ತ ರಾಜ್ಯ ಸರ್ಕಾರವು ವಿಶೇಷ ರಿಯಾಯ್ತಿ ಘೋಷಿಸಿದೆ. ಈ ಸಂಸ್ಥೆಗಳ ಸಾಕಷ್ಟು ಪ್ರಕಟಣೆಗಳು ಇದೀಗ ಅರ್ಧದಷ್ಟು ಬೆಲೆಯಲ್ಲಿ ಅಂದರೆ ಶೇ 50ರ ರಿಯಾಯ್ತಿಯಲ್ಲಿ ಸಿಗುತ್ತಿದೆ. ‘ಗಣರಾಜ್ಯೋತ್ಸವದ ಅಂಗವಾಗಿ 2022ರ ಜನವರಿ ತಿಂಗಳು ಪೂರ್ತಿ ಕನ್ನಡ ಪುಸ್ತಕ ಪ್ರಾಧಿಕಾರದ ಎಲ್ಲಾ ಪುಸ್ತಕಗಳನ್ನು ಶೇಕಡಾ 50ರ ರಿಯಾಯಿತಿ ದರಗಳಲ್ಲಿ ಮಾರಾಟ ಮಾಡಲಾಗುವುದು. ಪುಸ್ತಕ ಪ್ರಿಯರು ಈ ಅವಕಾಶ ಬಳಸಿಕೊಳ್ಳಬೇಕು. ಬೆಂಗಳೂರಿನ ಕನ್ನಡ ಭವನದ ಸಿರಿಗನ್ನಡ ಪುಸ್ತಕ ಮಳಿಗೆಯಲ್ಲಿ ಹಾಗೂ ಎಲ್ಲಾ ಜಿಲ್ಲೆಗಳ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದಿಂದ ತೆರೆಯಲಾದ ಎಲ್ಲಾ ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆಗಳಲ್ಲಿ ಈ ರಿಯಾಯಿತಿ ಸೌಲಭ್ಯ ದೊರೆಯಲಿದೆ’ ಎಂದು ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಕೆ.ಬಿ.ಕಿರಣ್ ಸಿಂಗ್ ಪ್ರಾಧಿಕಾರದ ಫೇಸ್​ಬುಕ್ ಪುಟದಲ್ಲಿ ಬರೆದಿದ್ದಾರೆ.

ಕನ್ನಡ ಪುಸ್ತಕ ಪ್ರಾಧಿಕಾರದ ಪುಸ್ತಕಗಳ ಆನ್​ಲೈನ್ ಖರೀದಿಗೂ ಪ್ರಾಧಿಕಾರವು ಅವಕಾಶ ಕಲ್ಪಿಸಿದೆ. ಪ್ರಾಧಿಕಾರದ ವೆಬ್​ಸೈಟ್​ www.kannadapustakapradhikara.com ಮೂಲಕ ಪುಸ್ತಕಗಳನ್ನು ಆಯ್ಕೆ ಮಾಡಿ, ಆನ್​ಲೈನ್ ಮೂಲಕ ಹಣ ಪಾವತಿಸಿ ಪುಸ್ತಕಗಳನ್ನು ಅಂಚೆ ಮೂಲಕ ಪಡೆಯಬಹುದಾಗಿದೆ. ಆದರೆ ಈ ಸೌಲಭ್ಯ ಬಳಸಿಕೊಂಡಿರುವ ಸಾಕಷ್ಟು ಓದುಗರು ಪ್ರಾಧಿಕಾರದ ಆನ್​ಲೈನ್ ಸೇವೆ ತೃಪ್ತಿಕರವಾಗಿಲ್ಲ ಎಂದು ಆಕ್ಷೇಪಿಸಿದ್ದಾರೆ. ಕೊವಿಡ್ ಕಾರಣದಿಂದ ಪುಸ್ತಕಗಳನ್ನು ಕಳಿಸುವುದು ತಡವಾಗುತ್ತಿದೆ ಎಂದು ಪ್ರಾಧಿಕಾರವು ತನ್ನ ವೆಬ್​ಸೈಟ್​ನಲ್ಲಿ ಸ್ಪಷ್ಟನೆ ಕೊಟ್ಟಿದೆ.

‘ಕನ್ನಡ ಪುಸ್ತಕ ಪ್ರಾಧಿಕಾರವು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ, ಎಲ್ಲಾ ಪ್ರಕಾರದ ಸಾಹಿತ್ಯ ಕೃತಿಗಳನ್ನು ಈವರೆಗೆ ಪ್ರಕಟಿಸುತ್ತಾ ಬಂದಿದೆ. ಇವುಗಳಲ್ಲಿ ವ್ಯಕ್ತಿ ಚಿತ್ರಗಳು, ನಾಟಕಗಳು, ಅಲೆಮಾರಿ ಸಮುದಾಯ, ವೈದ್ಯಕೀಯ, ಪ್ರಾಚೀನ ಕನ್ನಡ ಸಾಹಿತ್ಯ, ಜಾನಪದ, ಪರಿಸರ, ಕೃಷಿ ಹೀಗೆ ಹಲವು ಹತ್ತು ಪ್ರಕಾರಗಳಲ್ಲಿ ಸುಮಾರು 458 ಶೀರ್ಷಿಕೆಗಳನ್ನು ಮುದ್ರಿಸಿ ಪ್ರಕಟಿಸಿದೆ’ ಎಂದು ಕಿರಣ್ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ: ‘ಇಂಥದೊಂದು ಪುಸ್ತಕ ಕನ್ನಡಕ್ಕೆ ಬೇಕು’ ಎಚ್ಎಸ್​ ರಾಘವೇಂದ್ರ ರಾವ್ ‘ಓದಿನಂಗಳ’ದೊಳಗೆ ಹೇಳುತ್ತಿದ್ದಾರೆ

Satyakama-Books

ಸತ್ಯಕಾಮರ ಪುಸ್ತಕಗಳ ಬಗ್ಗೆ ಫೇಸ್​ಬುಕ್​ನಲ್ಲಿ ಓದುಗರೊಬ್ಬರ ಅಭಿಪ್ರಾಯ

ಪ್ರಾಧಿಕಾರವು ಇತ್ತೀಚೆಗಷ್ಟೇ ಬಿಡುಗಡೆ ಮಾಡಿದ ಸತ್ಯಕಾಮರ ಸಮಗ್ರ ಸಂಪುಟ, ಗೋಪಾಲಕೃಷ್ಣ ಅಡಿಗರ ವೈಚಾರಿಕ ಲೇಖನ ವಾಚಿಕೆ, ಸೋಸಲೆ ಸಿದ್ದಪ್ಪ ಸಮಗ್ರ ಸಾಹಿತ್ಯ ಸಂಪುಟ, ಹೊಸಗನ್ನಡ ಅರುಣೋದಯ ಕೃತಿಗಳು ಸಹ ಶೇ 50ರ ರಿಯಾಯ್ತಿಯಲ್ಲಿ ಲಭ್ಯವಿದ್ದು ಸಾಹಿತ್ಯಾಸಕ್ತರಲ್ಲಿ ಆಸಕ್ತಿ ಮೂಡಿಸಿದೆ. ಸತ್ಯಕಾಮರ ಸಂಪುಟಗಳನ್ನು ಖರೀದಿಸಿದ ಹಲವರು ಸಾಮಾಜಿಕ ಮಾಧ್ಯಮಗಳಲ್ಲಿ ಚಿತ್ರಗಳನ್ನು ಹಂಚಿಕೊಂಡಿದ್ದು, ಇದು ಸಂಗ್ರಹಯೋಗ್ಯ ಕೃತಿ ಎಂದು ಶ್ಲಾಘಿಸಿದ್ದಾರೆ.

ಉಳಿದಂತೆ ವೈದ್ಯಕೀಯ ಸಾಹಿತ್ಯ ಮಾಲೆ ಹಲವರ ಗಮನ ಸೆಳೆದ ಸರಣಿ ಎನಿಸಿದೆ. ಈ ಸರಣಿಯಲ್ಲಿ ದೈನಂದಿನ ಬದುಕಿನಲ್ಲಿ ಬಹುಜನರನ್ನು ಬಾಧಿಸುವ ದೈಹಿಕ-ಮಾನಸಿಕ ಕಾಯಿಲೆಗಳ ವಿವರ, ಪರಿಹಾರ ಕ್ರಮಗಳ ಬಗ್ಗೆ ಸಾಕಷ್ಟು ಮಾಹಿತಿಯಿದೆ.

ಪ್ರಾಧಿಕಾರದ ಜನಪ್ರಿಯ ಪ್ರಕಟಣೆ ಸಮಗ್ರ ವಚನ ಸಂಪುಟಗಳು ಮಾರಾಟಕ್ಕೆ ಲಭ್ಯವಿವೆಯಾದರೂ ರಿಯಾಯ್ತಿ ಸಿಗುವುದಿಲ್ಲ. ಸಮಗ್ರ ವಚನಗಳ 15 ಸಂಪುಟಗಳಿಗೆ ₹ 2000 ನಿಗದಿಪಡಿಸಲಾಗಿದೆ. ಈ ಸಂಪುಟಗಳಿಗೆ ಆನ್​ಲೈನ್ ಖರೀದಿ ಸೌಲಭ್ಯವನ್ನೂ ಪ್ರಾಧಿಕಾರ ಕೊಟ್ಟಿಲ್ಲ. ‘ವಚನ ಸಂಪುಟಗಳು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ದೊರೆಯುವಂತೆ ಆಗಬೇಕು’ ಎಂದು ಓದುಗರು ಒತ್ತಾಯಿಸಿದ್ದಾರೆ.

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಎಲ್ಲ ಪ್ರಕಟಣೆಗಳೂ ಶೇ 50ರ ರಿಯಾಯ್ತಿಯಲ್ಲಿ ಲಭ್ಯವಿದೆ. ಸಾಹಿತ್ಯ ಅಕಾಡೆಮಿಯಲ್ಲಿ ಲಭ್ಯವಿರುವ ಎಲ್ಲ 236 ಕೃತಿಗಳ ಒಟ್ಟು ಮೊತ್ತ ₹ 25,105 ಆಗುತ್ತದೆ. ಇದೀಗ ಶೇ 50ರ ರಿಯಾಯ್ತಿ ಸಿಗುವುದರಿಂದ ₹ 12,553ಕ್ಕೆ ಸಿಗುತ್ತದೆ. ಸಾಹಿತ್ಯ ಅಕಾಡೆಮಿಯೂ ಇದೀಗ ಆನ್​ಲೈನ್ ಸೇವೆ ಒದಗಿಸಲು ಮುಂದಾಗಿದೆ.

ಸಾಹಿತ್ಯ ಅಕಾಡೆಮಿಯ ವೆಬ್​ಸೈಟ್​ನಲ್ಲಿ ಪುಸ್ತಕಗಳ ಮಾಹಿತಿ ಲಭ್ಯವಿದೆ. ಇದನ್ನು ಗಮನಿಸಿ ಬೇಕಿರುವ ಪುಸ್ತಕಗಳ ಪಟ್ಟಿಯನ್ನು ಆಸಕ್ತರು 080 22211730 / 2210 6460 ಸಂಖ್ಯೆಗೆ ಕರೆ ಮಾಡಿ ತಿಳಿಸಿದರೆ ಅಥವಾ 94499 35103 ಸಂಖ್ಯೆಗೆ ವಾಟ್ಸ್​ಆ್ಯಪ್ ಮಾಡಿದರೆ ಬೆಲೆ ಮತ್ತು ಹಣ ಕಳಿಸಬೇಕಾದ ಅಕೌಂಟ್ ವಿವರವನ್ನು ಅಲ್ಲಿನ ಸಿಬ್ಬಂದಿ ಕೊಡುತ್ತಾರೆ. ಆನ್​ಲೈನ್ ಮೂಲಕ ಹಣ ಪಾವತಿಸಿದರೆ ಪುಸ್ತಕಗಳನ್ನು ಕೊರಿಯರ್ ಮೂಲಕ ಕಳಿಸಿಕೊಡುವ ವ್ಯವಸ್ಥೆ ಮಾಡಲಾಗಿದೆ.

ಸಾಹಿತ್ಯ ಅಕಾಡೆಮಿಯ ಪ್ರಕಟಣೆಗಳಲ್ಲಿ ಪಾರಿಭಾಷಿಕ ಮಾಲೆಯ ಕೃತಿಗಳು, ಕರ್ನಾಟಕ ಸಬಾಲ್ಟ್ರನ್ ಓದು, ಉಪಸಂಸ್ಕೃತಿ ಅಧ್ಯಯನ ಮಾಲೆ ಸರಣಿಯಲ್ಲಿ ಪ್ರಕಟವಾಗಿರುವ ಕೃತಿಗಳು ಜನರ ಮೆಚ್ಚುಗೆ ಗಳಿಸಿವೆ. ಕನ್ನಡ ಸಬಾಲ್ಟ್ರನ್ ಓದು ಮಾಲಿಕೆಯಲ್ಲಿ ಪ್ರಕಟವಾಗಿರುವ ಕೃತಿಗಳಾದ ತಾತ್ವಿಕತೆ, ದಲಿತನೋಟ, ಹೆಣ್ಣುನೋಟ, ರೈತ ಕಾರ್ಮಿಕ ಓದು, ಬುಡಕಟ್ಟು ಮತ್ತು ಅಲೆಮಾರಿ ಸಮುದಾಯಗಳು ಕೃತಿಗಳು ಸಂಗ್ರಹಯೋಗ್ಯ ಎನಿಸಿವೆ. ಸಾಹಿತ್ಯ ಅಕಾಡೆಮಿಯಲ್ಲಿ ಲಭ್ಯವಿರುವ ಕೃತಿಗಳ ಮಾಹಿತಿಗೆ ವೆಬ್​ಸೈಟ್ https://sahithyaacademy.karnataka.gov.in ಲಿಂಕ್ ಕ್ಲಿಕ್ ಮಾಡಿ.

ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಪುಸ್ತಕಗಳಿಗೂ ಶೇ 50ರ ರಿಯಾಯ್ತಿ ಲಭ್ಯವಿದೆ. ದಕ್ಷಿಣ ಭಾರತದ ಜಾತಿ ಮತ್ತು ಬುಡಕಟ್ಟುಗಳು, ಅಂತ್ಯವಿಲ್ಲದ ಹಾದಿ, ರವೀಂದ್ರನಾಥ ಟಾಗೋರ್ – ಆಯ್ದ ಬರೆಹಗಳು, ಸಂಸ್ಕೃತ ನಾಟಕಗಳ ಕನ್ನಡ ಅನುವಾದ, ಭಾರತೀಯ ತತ್ವಶಾಸ್ತ್ರದಲ್ಲಿ ಕಾಳು ಮತ್ತು ಜೊಳ್ಳು ಸೇರಿದಂತೆ ಸಾಕ್ಟು ಮೌಲಿಕ ಪುಸ್ತಕಗಳು ಶೇ 50ರ ರಿಯಾಯ್ತಿ ದರದಲ್ಲಿ ಲಭ್ಯವಿದೆ. ಭಾಷಾ ಭಾರತಿ ಪ್ರಾಧಿಕಾರದ ಪ್ರಕಟಣೆಗಳ ಮಾಹಿತಿಗೆ ಪ್ರಾಧಿಕಾರದ ವೆಬ್​ಸೈಟ್ https://www.kuvempubhashabharathi.org/books/ ಲಿಂಕ್ ನೋಡಬಹುದು.

ಇದನ್ನೂ ಓದಿ: Folklore : ಅಭಿಜ್ಞಾನ ; ಮಣ್ಣುಹೊರುವ ಜೀತದಾಳಾಗಿದ್ದ ರಾಮಣ್ಣನವರ ಜೀವನದಲ್ಲಿ ನಡೆದ ಕೋಲ್ಮಿಂಚಿನಂಥ ಪ್ರಸಂಗ ಇದನ್ನೂ ಓದಿ: ಕಥೆಗಾರ ಜೋಗಿ ‘ಕಥೆಪುಸ್ತಕ’ ಮತ್ತು ‘ಸು ಬಿಟ್ರೆ ಬಣ್ಣ, ಬ ಬಿಟ್ರೆ ಸುಣ್ಣ’ ಲೋಕಾರ್ಪಣೆ

ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ