D. R. Bendre : “ಹುಣ್ಣಿಮಿ ಚಂದಿರನ ಹೆಣ ಬಂತು ಮುಗಿಲಾಗ ತೇಲತಾ ಹಗಲ”

Poems on Moon : ‘ಚಂದಿರನೆಂದರೆ ಅದುವರೆಗೂ 'ಚಂದಿರನೇತಕೆ ಓಡುವನಮ್ಮ ಮೋಡದ ನಾಡಿನ ಬಾಗಿಲಿಗೆ ' ಅಂತಹಾ ಕವಿತೆಯನ್ನು ಶಾಲೆಯಲ್ಲಿ ಪಠ್ಯವಾಗಿ ಓದಿ ಚಂದಿರನ ಕುರಿತು ಮನದಲ್ಲಿ ಅಚ್ಚಾದ ಪ್ರತಿಮೆಗಳನ್ನು ಮರೆತು ಹೆಣದ ಹಾಗೆ ಹೇಗೆ ನೋಡುವುದು?’ ನೂತನ ದೋಶೆಟ್ಟಿ

D. R. Bendre : ಹುಣ್ಣಿಮಿ ಚಂದಿರನ ಹೆಣ ಬಂತು ಮುಗಿಲಾಗ ತೇಲತಾ ಹಗಲ
ಲೇಖಕಿ ನೂತನ ದೋಶೆಟ್ಟಿ
Follow us
ಶ್ರೀದೇವಿ ಕಳಸದ
|

Updated on: Feb 01, 2022 | 12:49 PM

ದ.ರಾ. ಬೇಂದ್ರೆ | D. R. Bendre : ಮೊಟ್ಟಮೊದಲ ಬಾರಿಗೆ “ಹುಣ್ಣಿಮಿ ಚಂದಿರನ ಹೆಣ ಬಂತು ಮುಗಿಲಾಗ ತೇಲತಾ ಹಗಲ” ಸಾಲುಗಳನ್ನು ಕೇಳಿದಾಗ ಹೇಳಲಾರದ ತೊಳಲಾಟವಾಗಿತ್ತು. ಚಂದಿರನೆಂದರೆ ಅದುವರೆಗೂ ‘ಚಂದಿರನೇತಕೆ ಓಡುವನಮ್ಮ ಮೋಡದ ನಾಡಿನ ಬಾಗಿಲಿಗೆ ‘ ಅಂತಹಾ ಕವಿತೆಯನ್ನು ಶಾಲೆಯಲ್ಲಿ ಪಠ್ಯವಾಗಿ ಓದಿ ಚಂದಿರನ ಕುರಿತು ಮನದಲ್ಲಿ ಅಚ್ಚಾದ ಪ್ರತಿಮೆಗಳನ್ನು ಮರೆತು ಹೆಣದ ಹಾಗೆ ಹೇಗೆ ನೋಡುವುದು? ಆದರೆ ಆ ಗೀತೆಯ ಹಿನ್ನೆಲೆಯ ಅರಿವಾದಾಗ ಅದಮ್ಯ ನೋವು, ಸಂಕಟದಲ್ಲೂ ಕವಿ ತಂದೆಯಾಗಿ ತಂದೆ ಕವಿಯಾಗಿ ಒಬ್ಬರನ್ನೊಬ್ಬರು ಪರಸ್ಪರ ಸಂತೈಸಿಕೊಳ್ಳುವ ಅತ್ಯಂತ ಮನಮಿಡಿಯುವ ಸನ್ನಿವೇಶವನ್ನು ಸೃಷ್ಟಿಸಿಕೊಟ್ಟ ಕವಿತೆ ಕನ್ನಡದಲ್ಲಿ ಇನ್ನೊಂದಿರಲಾರದು ಎನ್ನಬಹುದಾದಷ್ಟು ಆವರಿಸಿಕೊಳ್ಳುವ ಕವಿತೆ ಇದು ಎನ್ನಿಸಿತು; ಶಬ್ದ ಜಟಿಲತೆಯೇ ಕವಿತೆಯ ಶ್ರೇಷ್ಠತೆ ಎಂದು ರಚಿಸಲ್ಪಡುವ ಕವನಗಳಿಗೆ ಇವರ ಕವಿತೆಗಳು ದಾರಿದೀಪದಂತಿವೆ. ಆಡಂಬರರಹಿತ ಶಬ್ದ ಸರಳತೆ, ಲಾಲಿತ್ಯ, ಭಾವಸ್ಫುರಣದಿಂದ ಕಿರಿದರಲ್ಲಿ ಹಿರಿದರ್ಥ ಹೇಳುತ್ತವೆ‌. ಇವರು ಕನ್ನಡ ನಾಡಿಗೆ ವರವೋ, ಕವಿತೆಗಳಿಗೆ ವರವೋ, ಭಾಷೆಗೆ ವರವೋ!

ನೂತನ ದೋಶೆಟ್ಟಿ, ಲೇಖಕಿ 

*

ಬೇಂದ್ರೆಯವರ ಎಲ್ಲ ಕವಿತೆಗಳೂ ಹೀಗೇ… ಪಾತರಗಿತ್ತಿ ಪಕ್ಕಾ, ನೋಡಿದ್ಯೇನ ಅಕ್ಕಾ … ಎಂದು ಹಾಡಿಕೊಂಡಾಗ ಅಥವಾ ಹಾಡನ್ನು ಕೇಳಿದಾಗ ಬಾಲ್ಯದಲ್ಲಿ ಪಾತರಗಿತ್ತಿ ಹಿಡಿಯಲು ಎರಡು ಬೆರಳನ್ನು ಜೋಡಿಸಿಕೊಂಡು ಅದರ ಹಿಂದೆ ಸುತ್ತಿದ ನೆನಪು ಕಟ್ಟಿ ಹಾಕುತ್ತದೆ‌. ಈ ಕವಿತೆಯಲ್ಲಿ ಪ್ರಾಸಗಳ ಸೊಗಸಂತೂ ಏನು ಬಣ್ಣ ಬಣ್ಣ.. ನಡುವೆ ನವಿಲು ಕಣ್ಣ.. ಅನ್ನುವಂತೆ ಇದೆ.

ಬಾರೋ ಸಾಧನಕೇರಿಗೆ ಮರಳಿ ನಿನ್ನೀ ಊರಿಗೆ… ಎಂದು ಅವರು ಕರೆದರೆ ಸಾಧನಕೇರಿ ಅವರ ಮನೆಯ ಜಾಗವಾಗಿರದೇ ಪ್ರಕೃತಿಯ ನಡುವೆ ಅನಿಕೇತನವೇ ಆಗಿಬಿಡುತ್ತದೆ.

ಶ್ರಾವಣಾ ಬಂತು ನಾಡಿಗೆ.. ಬಂತು ಬೀದಿಗೆ… ಎಂದು ಅವರು ಹಾಡಿದರೆ ಶ್ರಾವಣದ ಹೊಚ್ಚ ನಳನಳಿಸುವ ಹಸಿರು, ಮಳೆ ಬಿಟ್ಟ ನಂತರದ ನಿರ್ಮಲ ಬೆಳಕು… ಇವೆಲ್ಲ ಸುತ್ತ ನಲಿಯುತ್ತವೆ. ಈ ಕವಿಗೆ ಕವಿತೆ ಪದಗಳ ಜೋಡಣೆಯಲ್ಲ. ಅದು ಭೂಮ್ಯಾಕಾಶಕ್ಕೆ ವಿಸ್ತರಿಸಬಲ್ಲಂತೆ ಮೀರಿಯೂ ನಿಲ್ಲಬಲ್ಲ ಹೊಸ ಹೊಳಹು, ಅಲ್ಲಿ ಅಚ್ಚರಿ, ಸಂತಸ, ನೋವು, ನಲಿವು, ಸಂಭ್ರಮ, ವಿನಯ, ಹಾಸ್ಯ, ಪ್ರೇಮ, ಗೆಳೆತನ.. ಏನೆಲ್ಲ ಭಾವಗಳ ಸ್ಫುರಣವಿದೆ.

ಈ ಅಪ್ರತಿಮರದು ಭಾವಗಳ ಮೆರವಣೆಗೆಯಲ್ಲ. ಅವರ ಸಂಖ್ಯಾಶಾಸ್ತ್ರದ ಬಗೆಗಿನ ಮಾತುಗಳು ಅಚ್ಚರಿ ಹುಟ್ಟಿಸುತ್ತವೆ. ಸಂಖ್ಯೆಗಳ ಮಹತ್ವವನ್ನು ಅವರು ಎಲ್ಲೆಲ್ಲೂ ಕಾಣುತ್ತಿದ್ದರು ಹಾಗೂ ಹುಡುಕುತ್ತಿದ್ದರು.

1970ರ ಆಸುಪಾಸಿನಲ್ಲಿ ಉಡುಪಿಯ (ಪೂರ್ಣಪ್ರಜ್ಞ ಕಾಲೇಜು ಎಂಬ ನೆನಪು) ಕಾಲೇಜಿನ ವಾರ್ಷಿಕೋತ್ಸವದ ಸಂದರ್ಭದಲ್ಲಿ ಅವರು ಮಾಡಿದ ಭಾಷಣದ ಪುಸ್ತಕ ರೂಪವನ್ನು ಓದಿ ನಾನು ಮಂತ್ರಮುಗ್ಧಳಾಗಿದ್ದೆ. ಅವರು ವಿದ್ಯಾರ್ಥಿಗಳನ್ನು ಕುರಿತು ಹೇಳಿದ ಮಾತುಗಳು ಎಲ್ಲಾ ಕಾಲಕ್ಕೂ, ಎಲ್ಲರಿಗೂ ಅನ್ವಯಿಸುವಂಥವು.

ಬೆಂದಾಂವ ಬೇಂದ್ರೆ ಆಗ್ತಾನ… ಎಂಬ ಅವರ ಮಾತು ಬದುಕನ್ನು ವಾಸ್ತವತೆಯ ಒರೆಗಲ್ಲಿಗೆ ಹಚ್ಚಿ ತಿದ್ದಿ ತೀಡುವ ಪಾಡು ಹಾಡಾಗುವ ಹಾಡೇ ಪಾಡಾಗುವ ಸತ್ಯವನ್ನು ಕಾಣಿಸುತ್ತದೆ. ಅವರೊಳಗಿದ್ದ ದಾರ್ಶನಿಕ ಆಗಾಗ ಕವಿತೆಗಳ ಮೂಲಕ ಮಾತಾಡುತ್ತಾನೆ‌. ಅವರ ನಾಕುತಂತಿ ಕವಿತೆಯಲ್ಲಿ ಆವು ನೀವಿಗೆ… ಆನು ತಾನಾದ ತನನನ… ಎನ್ನುವಾಗ ವಿಶ್ವತ್ವವನ್ನು, ಐಕ್ಯತೆಯನ್ನು ಹೇಳುತ್ತಾರೆ. ಅವರ ಅಂತರಂಗದಲ್ಲಿ ಹುಟ್ಟುವ ಸೋಜಿಗ ನಮ್ಮದೂ ಆಗುವಷ್ಟು ತೀವೃವಾಗಿ ಹೇಳಬಲ್ಲ ಶಬ್ದ ಗಾರುಡಿಗ ಅವರು.

ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು ಎನ್ನುತ್ತ ಅತಿ ನಾಜೂಕಿನ ಪ್ರೇಮ ಸಂಬಂಧದ ನೇಯ್ಗೆ ಮಾಡಿದ್ದಾರೆ. ತಾಯಿಯನ್ನು, ಪತ್ನಿಯನ್ನು ಗೌರವಿಸುವುದರ ಮೂಲಕ ಸ್ತ್ರೀ ಸಂಕುಲಕ್ಕೆ ಗೌರವ ತೋರಿದ್ದಾರೆ.

ಕವಿತೆಯನ್ನು ಚೆಂದವಾಗಿ ಓದಬೇಕು ಎಂದು ಅವರು ಹೇಳುತ್ತಿದ್ದರು. ಅವರು ಕವಿತೆ ಓದಿದರೆ ಅಲ್ಲಿ ಜಲಲ ಧಾರೆ ಹರಿಯುತ್ತಿತ್ತು. ಗಂಗಾವತರಣವಾಗುತ್ತಿತ್ತು. ಕವಿತೆಯ ಅಂತರಂಗಕ್ಕೆ ಎಲ್ಲರನ್ನೂ ಸಾರಿಸಿಕೊಂಡು ಸಾಗುವ ಕಲೆ ಅವರ ಕವಿತಾ ವಾಚನದಲ್ಲಿತ್ತು. ಅದನ್ನು ಕವಿತೆ ಬರೆಯುವವರೆಲ್ಲರೂ ರೂಢಿಸಿಕೊಳ್ಳಬೇಕು. ಅವಸರದ ಓದು, ನಿರ್ಭಾವುಕ ಓದಿನ ಇಂದಿನ ಕವಿಗೋಷ್ಠಿಗಳಲ್ಲಿ ಕವಿತಾ ರಸ, ಅಂದರೆ ಅದರ ಹೃದಯ, ಹರಿಯುವುದಕ್ಕಿಂತ ಸೋರಿ ಹೋಗುವುದೇ ಹೆಚ್ಚು. ಉತ್ತಮ ಕವಿತೆಗಳು ಕೆಟ್ಟ ಓದಿನಿಂದಾಗಿ ಸೋಲುತ್ತವೆ. ಬೇಂದ್ರೆಯವರ ಕವಿತಾ ವಾಚನ ಒಂದು ಶ್ರೇಷ್ಠ ಮಾದರಿ.

ಶಬ್ದ ಜಟಿಲತೆಯೇ ಕವಿತೆಯ ಶ್ರೇಷ್ಠತೆ ಎಂದು ರಚಿಸಲ್ಪಡುವ ಕವನಗಳಿಗೆ ಇವರ ಕವಿತೆಗಳು ದಾರಿದೀಪದಂತಿವೆ. ಆಡಂಬರರಹಿತ ಶಬ್ದ ಸರಳತೆ, ಲಾಲಿತ್ಯ, ಭಾವಸ್ಫುರಣದಿಂದ ಕಿರಿದರಲ್ಲಿ ಹಿರಿದರ್ಥ ಹೇಳುತ್ತವೆ‌. ಇವರು ಕನ್ನಡ ನಾಡಿಗೆ ವರವೋ, ಕವಿತೆಗಳಿಗೆ ವರವೋ, ಭಾಷೆಗೆ ವರವೋ! ಇವರ ಹೆಸರನ್ನೂ ಬಾರಿಬಾರಿ ಹೇಳಲಾರದಷ್ಟು ವಿನೀತಭಾವ ಇವರ ಕವಿತೆಯನ್ನು ಓದಿದ ಯಾರದ್ದಾದರೂ ಆಗುತ್ತದೆ. ಆ ನಮೃತೆಯಿಂದಲೇ ಇಷ್ಟನ್ನು ಬರೆದಿದ್ದೇನೆ. ಮೇರು ಸದೃಶರಿಗೆ ನಮನ.

ಇದನ್ನೂ ಓದಿ : D. R. bendre birthday ಹತ್ತರೀ ಸಾಧನಕೇರಿ ಬಸ್ : ಸಿಕ್ಕಲ್ಲಿ ಅಲ್ಲ ಸಿಕ್ಕಲ್ಲೆ ಮಾತ್ರ ಒಡೆಯುವದು ಇದರ ಸೆಲೆಯು 

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್