Meeting Point : ಅಲ್ಲಿ ನೋಡ್ರೋ ‘ಮ್ಯಾಳಿಗಿ’ ಮ್ಯಾಲ ಹೊಂಟಾದ

Unethical Behaviour : ‘ಆ ಪೋಸ್ಟ್​ಮ್ಯಾನ್ ಸುತ್ತಲೂ ನಾಲ್ಕು ಜನರು ಗುಂಪುಗೂಡಿ ಜೋರಾಗಿ ನಗುತ್ತಾ ಮಾತನಾಡುತ್ತಿದ್ದರು. ನಾನು ಮೆಲ್ಲನೆ ಹೋಗಿ ಅವರ ಬೆನ್ನ ಹಿಂದೆ ಹಣಕಿ ಹಾಕಿದೆ. ಒಂದು ಇನ್‌ಲ್ಯಾಂಡ್‌ ಕಾರ್ಡ್‌ ಕೈಯಲ್ಲಿ ಹಿಡಿದ ಆ ಪೋಸ್ಟ್​ಮ್ಯಾನ್, ಒಬ್ಬ ಹುಡುಗಿ ತನ್ನ ಪ್ರಿಯತಮನಿಗೆ ಬರೆದ ಕಾಗದವನ್ನು ರಸವತ್ತಾಗಿ ಓದುತ್ತಾ, ನನ್ನಂತೆ ಆಧಾರ್ ಕಾರ್ಡ್ ಮಾಡಿಸಲು ಬಂದ ಉಳಿದವರಿಗೂ ಉಚಿತವಾಗಿ ಮನರಂಜನೆ ನೀಡುತ್ತಿದ್ದ.’ ಮುದಿರಾಜ ಬಾಣದ

Meeting Point : ಅಲ್ಲಿ ನೋಡ್ರೋ ‘ಮ್ಯಾಳಿಗಿ’ ಮ್ಯಾಲ ಹೊಂಟಾದ
ಲೇಖಕ ಮುದಿರಾಜ ಬಾಣದ
Follow us
ಶ್ರೀದೇವಿ ಕಳಸದ
|

Updated on:Sep 09, 2021 | 10:47 AM

Meeting Point : ಮೈಸೂರಿನ ಅತ್ಯಾಚಾರ ದುರ್ಘಟನೆಯ ನಂತರ ಆ ಹುಡುಗರು ಅಲ್ಲಿಗೆ ಹೋಗಬಾರದಿತ್ತು ಅಥವಾ ಆ ಹುಡುಗಿ ಯಾಕೆ ಅಲ್ಲಿಗೆ ಹೋದಳು ಎಂಬ ಪ್ರಶ್ನೆಗಳು ಕೇಳಿಬಂದವು. ಈ ಪ್ರಶ್ನೆಗಳು ಈಗಷ್ಟೇ ಅಲ್ಲ ಇದಕ್ಕೆ ಶತಮಾನಕ್ಕೂ ಮೀರಿದ ಇತಿಹಾಸವಿದೆ. ಪಟ್ಟಭದ್ರ ಹಿತಾಸಕ್ತಿಗಳ ಕೈಚಳಕವಿದೆ. ಆದರೆ ಹರೆಯಕ್ಕೆ ಬಂದ ಹುಡುಗ-ಹುಡುಗಿಯರಲ್ಲಿ ಸ್ನೇಹವಿರಬಹು, ಪ್ರೇಮವಿರಬಹುದು ಅದು ಅವರವರ ವಯೋಸಹಜ ಮನೋಸಹಜ ಬಯಕೆಗಳು. ಹಾಗೆಯೇ ಲಿಂಗಸಮಾನತೆಯಲ್ಲಿ ನೋಡಿದಾಗ ಇದಕ್ಕೆ ಮತ್ತೊಂದು ಆಯಾಮವಿದೆ. ಒಟ್ಟಾರೆಯಾಗಿ ಇಬ್ಬರು ವ್ಯಕ್ತಿಗಳ ಭೇಟಿಯನ್ನು ಕೀಳಾಗಿ ನೋಡುವುದು, ಅವರ ಬಗ್ಗೆ ಹಗುರವಾಗಿ ಮಾತನಾಡುವುದು ಒಂದೆಡೆಯಾದರೆ, ಆ ಜೋಡಿಗಳ ಮೇಲೆ ಕೈ ಮಾಡುವುದು ಮತ್ತು ಪೈಶಾಚಿಕ ಕೃತ್ಯಕ್ಕಿಳಿಯುವುದು ಇನ್ನೊಂದೆಡೆ ತಾಂಡವವಾಡುತ್ತಲೇ ಇದೆ. ಇಂಥ ಕಾರಣಗಳಿಂದಾಗಿ ಇಬ್ಬರು ವ್ಯಕ್ತಿಗಳ ಸಹಜ, ಆಪ್ತಭೇಟಿಗೆ ಅವಕಾಶವಿರಲಾರದಷ್ಟು ಸಾಮಾಜಿಕ ಸ್ಥಿತಿ ಹದಗೆಟ್ಟಿದೆ. ಈ ಹಿನ್ನೆಲೆಯಲ್ಲಿ ರೂಪಿಸಿರುವ ಸರಣಿ ‘ಟಿವಿ9 ಕನ್ನಡ ಡಿಜಿಟಲ್ – ಮೀಟಿಂಗ್ ಪಾಯಿಂಟ್​’

ಅಹಿತವಾಗಿದ್ದೆಲ್ಲ ಕ್ಷಣಮಾತ್ರದಲ್ಲಿ ಜರುಗಿಬಿಡುತ್ತದೆ. ಆದರೆ ಹಿತವಾಗಿದ್ದು? ಜೀವಸಹಜವಾದ ಈ ಹಾದಿಯಲ್ಲಿ ನಿಲ್ದಾಣಗಳನ್ನು ಕಂಡುಕೊಳ್ಳುವುದು ಜಟಿಲವೆ? ಇಂಥ ಸಂದರ್ಭದಲ್ಲಿ ನಿಮ್ಮೂರಿನ ಮೀಟಿಂಗ್ ಪಾಯಿಂಟ್​ಗಳನ್ನೊಮ್ಮೆ ಹಿಂದಿರುಗಿ ನೋಡಬಹುದಾ ಎಂದು ವಿವಿಧ ಹಿನ್ನೆಲೆ, ಆಸಕ್ತಿ, ವೃತ್ತಿ, ಪ್ರವೃತ್ತಿಗಳಲ್ಲಿ ಆಸ್ಥೆಯಿಂದ ತೊಡಗಿಕೊಂಡಿರುವವರಿಗೆ ಕೇಳಲಾಗಿ, ತಮ್ಮ ಅನುಭವ-ವಿಚಾರಗಳನ್ನು ಹಂಚಿಕೊಳ್ಳುತ್ತಲಿದ್ಧಾರೆ. ಒಳಧ್ವನಿಗಳನ್ನು ಮುಕ್ತವಾಗಿ ವ್ಯಕ್ತಪಡಿಸಿದಲ್ಲಿ ಪರಸ್ಪರರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಲ್ಲವೆ? ಓದುತ್ತಿರುವ ನೀವೂ ಈ ಸಂವಾದದಲ್ಲಿ ಪ್ರತಿಕ್ರಿಯಾತ್ಮಕ ಬರಹಗಳ ಮೂಲಕ ತೊಡಗಿಕೊಳ್ಳಬಹುದು; tv9kannadadigital@gmail.com

ಮುದಿರಾಜ್ ಬಾಣದ್ ರಾಯಚೂರಿನ ಅಂಚೆ ಕಚೇರಿಯಲ್ಲಿ ಮಾರುಕಟ್ಟೆ ಅಧಿಕಾರಿಯಾಗಿದ್ದಾರೆ. 2019ರಲ್ಲಿ  ಚಾನ್ನೆ ಎಂಬ ಕಥಾಸಂಕಲನ ಪ್ರಕಟವಾಗಿದೆ. 2011 ರಲ್ಲಿ ಆಸರೆ ಮತ್ತು 2019 ರಲ್ಲಿ ಹೇನು ಎಂಬ ಕತೆಗೆ ಗುಲ್ಬರ್ಗಾ ವಿಶ್ವವಿದ್ಯಾಲಯ ಕೊಡಮಾಡುವ ರಾಜ್ಯಮಟ್ಟದ ದಿ. ಜಯತೀರ್ಥ ರಾಜಾಪುರೋಹಿತ ಪ್ರಶಸ್ತಿ, 2020 ರಲ್ಲಿ ಸಂದಿದೆ. ಬಾಗಲಕೋಟೆಯ ಗ್ರಾಮೀಣ ಸಾಹಿತ್ಯ ವೇದಿಕೆಯಿಂದ ರಾಜ್ಯಮಟ್ಟದ ಅಬ್ಬಾಸ್‌ ಮೇಲಿನಮನಿ ಕಥಾಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದಿದ್ದಾರೆ. 

ಮುದಿರಾಜ್ ಅವರ ಬರಹ ನಿಮ್ಮ ಓದಿಗೆ :

ನಾನು ಹೈಸ್ಕೂಲ್‌ನಲ್ಲಿ ಇದ್ದಾಗ ನನ್ನ ಗೆಳೆಯ ಹಂಚಿಕೊಂಡ ಒಂದು ವಿಷಯ ಇವತ್ತಿಗೂ ನನ್ನ ಮನಸ್ಸಿನಲ್ಲಿ ಹಾಗೇ ಹಸಿಹಸಿಯಾಗಿದೆ. ನಾನು ಅವನು ಮತ್ತು ನಮ್ಮ ಇಬ್ಬರು ಗೆಳತಿಯರು ಪರಸ್ಪರ ಆಪ್ತರಾಗಿದ್ದೆವು. ನನ್ನ ಗೆಳೆಯ ಮತ್ತು ಒಬ್ಬ ಗೆಳತಿ ಒಂದೇ ಊರಿನ ಅಕ್ಕಪಕ್ಕದ ಮನೆಯವರು. ಶಾಲೆ ಮುಗಿದ ಮೇಲೆ ಮನೆಯಲ್ಲಿನ ಚೂರುಪಾರು ಕೆಲಸ ಮುಗಿಸಿಕೊಂಡು ದಿನಾ ಮ್ಯಾಳಿಗೆ ಮೇಲೆ ಹೋಗಿ ಅವತ್ತಿನ ಹೋಂವರ್ಕ್‌ ಮಾಡಿ ತಮ್ಮ ತಮ್ಮ ಮನೆಯ ಕಷ್ಟಸುಖ ಹಂಚಿಕೊಳ್ಳುತ್ತಿದ್ದರು. ಹೀಗಿರುವ ಒಮ್ಮೆ ನಮ್ಮದೇ ತರಗತಿಯ ಹುಡುಗನೊಬ್ಬ ಇವರಿಬ್ಬರನ್ನು ನೋಡಿ ಕಿಸಕ್ಕೆಂದು ನಕ್ಕು ಸಿಳ್ಳೆ ಹಾಕಿದ್ದಾನೆ.

ಮಾರನೆy ಮುಂಜಾನೆ ಇವರಿಬ್ಬರೂ ಶಾಲೆಗೆ ನಡೆದುಕೊಂಡು ಬರುವಾಗ ಇತರ ಹುಡುಗರ ಜೊತೆ ಸೇರಿ “ಅಲ್ಲಿ ನೋಡ್ರೋ ಮ್ಯಾಳಿಗೆ ಹೊಂಟಾದ’’ ಅಂತ ಹಿಂದಿನಿಂದ ನಗುತ್ತಾ ಗೇಲಿ ಮಾಡಿದಾಗ ಇಬ್ಬರು ತುಂಬಾ ದುಃಖವಾಗಿ ಅವನನ್ನು ಸಿಟ್ಟಿನಿಂದ ನೋಡಿ ಏನೂ ಹೇಳದೆ ಹಾಗೆ ಬಂದು ಕುಳಿತಿದ್ದಾರೆ. ಅದನ್ನು ಹೇಗೆ ತೆಗೆದುಕೊಳ್ಳಬೇಕು ಮತ್ತು ಅದನ್ನು ಗಟ್ಟಿಯಾಗಿ ಹೇಗೆ ಏದುರಿಸಬೇಕೆಂದು ಗೊತ್ತಿಲ್ಲದೆ ಅವರಿಬ್ಬರ ಮನಸ್ಸಿನಲ್ಲಿ, ಲೋಕದ ಕಣ್ಣಲ್ಲಿ ತಪ್ಪಿತಸ್ಥ ಭಾವನೆ. ಅದು ಅವರ ಮನಸ್ಸಿನ ಮೇಲೆ ಅದೆಷ್ಟು ಬೇರೂರಿದೆ ಅಂದರೆ ಮತ್ಯಾವತ್ತೂ ಅವರು ಮ್ಯಾಳಿಗೆ ಮೇಲೆ ಹೋಗಿ ಹೊಂವರ್ಕ್‌, ಮಾತುಕತೆ ಮಾಡಲೇ ಇಲ್ಲ.

ಇನ್ನೊಂದು ಘಟನೆ, ನಾನು ಆಧಾರ್‌ ಕಾರ್ಡ್‌ ಮಾಡಿಸಲು ಪೋಸ್ಟ್‌ ಆಫೀಸ್‌ಗೆ ಹೋದಾಗ ಅಲ್ಲಿನ ಪೋಸ್ಟ್​ಮ್ಯಾನ್ ಸುತ್ತಲೂ ನಾಲ್ಕು ಜನರು ಗುಂಪುಗೂಡಿ ಜೋರಾಗಿ ನಗುತ್ತಾ ಮಾತನಾಡುತ್ತಿದ್ದರು. ನಾನು ಮೆಲ್ಲನೆ ಹೋಗಿ ಅವರ ಬೆನ್ನ ಹಿಂದೆ ಹಣಕಿ ಹಾಕಿದೆ. ಒಂದು ಇನ್‌ಲ್ಯಾಂಡ್‌ ಕಾರ್ಡ್‌ ಕೈಯಲ್ಲಿ ಹಿಡಿದ ಆ ಪೋಸ್ಟ್​ಮ್ಯಾನ್, ಒಬ್ಬ ಹುಡುಗಿ ತನ್ನ ಪ್ರಿಯತಮನಿಗೆ ಬರೆದ ಕಾಗದವನ್ನು ರಸವತ್ತಾಗಿ ಓದುತ್ತಾ, ನನ್ನಂತೆ ಆಧಾರ್ ಕಾರ್ಡ್ ಮಾಡಿಸಲು ಬಂದ ಉಳಿದವರಿಗೂ ಉಚಿತವಾಗಿ ಮನರಂಜನೆ ನೀಡುತ್ತಿದ್ದ. ನಾನು ಮೆಲ್ಲಗೆ ಹೇಳಿದೆ. “ಸರ್‌ ಇದು ನಿಮಗೆ ಸರಿ ಅನಿಸುತ್ತಾ? ನೀವೂ ಒಬ್ಬ ಪೋಸ್ಟ್‌ ಆಫೀಸ್‌ನ ಜವಬ್ದಾರಿಯುತ ಸ್ಥಾನದಲ್ಲಿದ್ದು ಬೇರೆಯವರಿಗೆ ಬರೆದ ಪತ್ರವನ್ನು ಹೀಗೆ ಖುಲ್ಲಂಖುಲ್ಲಾ ಓದುತ್ತಿದ್ದೀರಲ್ಲ… ಅಂದಾಗ ಅದನ್ನು ಮಡಸಿ ಜೇಬಲ್ಲಿ ಇಟ್ಟುಕೊಂಡು, “ಹೋಗ್‌ ಹೋಗ್ರಿ ಬಂದುಬಿಟ್ಟ ನನಗೆ ಹೇಳೋಕೆ” ಅಂತ ನನ್ನನ್ನೇ ದಬಾಯಿಸುವುದಕ್ಕೆ ನೋಡಿದ. ಪಾಪ, ಆ ಪ್ರೇಮಿಗಳಿಬ್ಬರು ಮಾತಿನಲ್ಲಿ ಹೇಳಲಾಗದ ಭಾವನೆಗಳು ನೋವುಗಳೆಲ್ಲಾ ಹೀಗೆ ಸೋರಿ ಅವರಿವರ ಬಾಯಲ್ಲಿ ತುತ್ತಾಗಿ ಅದು ಕೊನೆಗೆ ಅವರಿಗೇ ಗೊತ್ತಾದಾಗ ಅದನ್ನು ಸ್ವೀಕರಿಸುವ ಬಗೆ ಹೇಗೆಂದು ಗೊತ್ತಾಗದೆ ಅನುಭವಿಸುವ ತಳಮಳ ಸಂಕಟವಿದೆಯಲ್ಲ ಆ ಯಾತನೆ ನಿಜಕ್ಕೂ ದುರಂತಮಯ.

Meeting Point Mudiraj Banad

ಸೌಜನ್ಯ : ಅಂತರ್ಜಾಲ

ಈ ಜನರು ಯಾಕೆ ಬೇರೆಯವರ ವೈಯಕ್ತಿಕ ವಿಷಯಗಳ ಮೇಲೆ ಅವರ ಸಂಬಂಧಗಳ ಮೇಲೆ ಅತಿಯಾದ ಕಾಳಜಿ ಮುತುವರ್ಜಿ ತೋರಿಸಿ ತಮ್ಮ ಬೇಳೆ ಬೇಯಿಸಿಕೊಂಡು ಅವರ ಮನಸ್ಸಿಗೆ ಘಾಸಿ ಮಾಡುತ್ತೇವೆಂಬ ಎಳ್ಳಷ್ಟೂ ಪರಿವಿಲ್ಲದೆ ಅವರ ಖಾಸಗಿ ಬದುಕನ್ನು ಹೊಕ್ಕು ನೋಡುವುದು? ಆ ಮೂಲಕ ಅವರ ಮನಸ್ಸಿನ ಭಾವನೆಗಳ ಮೇಲೆ ಚೆಲ್ಲಾಟವಾಡುವುದು? ಇವರುಗಳಿಗೆ ತಮಗೂ ಒಂದು ವೈಯಕ್ತಿಕ ಬದುಕು ಇದೆ, ತಮ್ಮ ಮನೆಯಲ್ಲೂ ಅಕ್ಕ ಅಮ್ಮ ಮಗಳು ಹೆಂಡತಿ ಇದ್ದಾರೆಂಬುದನ್ನು ಮರೆತು ಮನಸ್ಸೋ ಇಚ್ಛೆ ಮಾತಾಡಿ ಮುಗ್ದ ಮನಸ್ಸಿನ ಮೇಲೆ ತಮಗೆ ಗೊತ್ತಿಲ್ಲದೆಯೆ ದಾಳಿ ಮಾಡುವುದು ಸರಿಯೇ?

ಮೊನ್ನೆ ಹೀಗೆ ಗೆಳೆಯರೆಲ್ಲ ಮಾತನಾಡುತ್ತಿರಬೇಕಾದರೆ ಈ ಅತ್ಯಾಚಾರ, ಅದರಲ್ಲಿಯೂ ಪುಟ್ಟ ಮಕ್ಕಳ ಮೇಲೆ ನಡೆಯುವುದಕ್ಕೆ ಕಾರಣ… ಅವರ ಆಧುನಿಕ ಉಡುಗೆ ತೊಡುಗೆಗಳು ಅಂತೊಬ್ಬ ವಾದಿಸುತ್ತಿದ್ದ. ಒಂದು ಮುದ್ದಾದ ಮಗುವಿನ ಮೈಮೇಲಿನ ಬಟ್ಟೆನೂ ಸಹ ಇವರಿಗೆ ಕಾಮಪ್ರಚೋದನೆಯಾಗಿ ಕಾಣುತ್ತೆ ಅಂದರೆ ಇವರು ಇನ್ನೆಂಥ ಮತಿಗಟ್ಟೆವರಿರಬೇಕು ?

ಇಂದಿನ ಟಿವಿ ಮಾಧ್ಯಮಗಳು, ದಿನಪತ್ರಿಕೆಗಳಲ್ಲಿ ಅತ್ಯಚಾರದ ಪ್ರಕರಣಗಳನ್ನು ಅಬ್ಬರದಿಂದ ಪದೇಪದೆ ತೋರಿಸುತ್ತಾ ಜನರಲ್ಲಿ ನೇತ್ಯಾತ್ಮಕ ಭಾವನೆಗಳೇ ಸುಳಿಯುವಂತೆ ಮತ್ತು ಇದರ ಪ್ರಭಾವದಿಂದ ಕೆಲವರು ಇಂತಹ ಪ್ರಕರಣಗಳಲ್ಲಿ ಭಾಗಿಯಾಗಲೂ ಪರೋಕ್ಷವಾಗಿ ದಾರಿಮಾಡಿಕೊಟ್ಟಂತಿದೆ. ಈ ಮಾತು ಯಾಕೆ ಹೇಳುತ್ತಿದ್ದೇನೆಂದರೆ ನಮ್ಮದು ಗ್ರಾಮೀಣ ಪ್ರದೇಶ. ಸುಮಾರು ಆರುನೂರು ಮನೆಗಳಿರಬಹುದು. ನಮ್ಮ ಊರಲ್ಲಿನ ಕೆಲವೊಂದು ಮನೆಗಳಲ್ಲಿ ಇಂದಿಗೂ ಶೌಚಾಲಯಗಳು ಇಲ್ಲ. ಶೌಚಕ್ಕೆಂದು ಬಯಲಿಗೆ ಹೋಗಿ ಬರತ್ತಿದ್ದ ಒಂದು ಹುಡುಗಿಯನ್ನು ಕತ್ತಲಲ್ಲಿ ಎಳೆದುಕೊಂಡು ಹೋಗಿ ಅತ್ಯಚಾರ ಮಾಡಿ ಅವಳ ಕೈ ಕಾಲುಗಳಿಗೆ ಬಟ್ಟೆಕಟ್ಟಿ ಬಾಯಿಗೂ ಬಟ್ಟೆ ತುರುಕಿ ಅಲ್ಲೇ ಬಿಟ್ಟು ಬಂದಿದ್ದಾರೆ. ಮನೆಯವರು ಗಾಬರಿಯಾಗಿ ಹುಡುಕಾಡುವುದಕ್ಕೆ ಶುರುಮಾಡಿದ್ದಾರೆ, ಎಲ್ಲೂ ಸಿಕ್ಕಿಲ್ಲ. ಹೀಗೆ ಒಬ್ಬ ಮಹಿಳೆ ಶೌಚಕ್ಕೆ ಬಯಲಿಗೆ ಬಂದಾಗ ಆ ಹುಡುಗಿಯ ನರಳಾಟ ಕೇಳಿ, ನೋಡಿ ಬೆಚ್ಚಿಬಿದ್ದಿದ್ದಾಳೆ.

ಅತ್ಯಾಚಾರ ನಡೆಸಿದ ಎಳೆ ಹುಡುಗರನ್ನು ಪೊಲೀಸ್ ಸ್ಟೇಷನ್‌ನಲ್ಲಿ ವಿಚಾರಿಸಿದರೆ ಅವರಿಂದ ಉತ್ತರ ಇಲ್ಲ. ಚಿಗುರು ಮೀಸೆಯ ಆ ಹಳ್ಳಿಹುಡುಗರ ಮನಸ್ಸಲ್ಲಿ ಇಂಥಹದೊಂದು ಕೆಟ್ಟ ಆಲೋಚನೆ ಬರುವುದಕ್ಕೆ ಕಾರಣ ಏನು ಅಂತ ಹುಡುಕಿದರೆ ಉತ್ತರ ಶೂನ್ಯವೇ. ಜೀವನ ನೀರ ಮೇಲಿನ ಗುಳ್ಳೆ, ನಾಲ್ಕು ದಿನದ ಸಂತೆ ಅಂತ ಗೊತ್ತಿದ್ದೂ ಮನುಷ್ಯ ಆಸ್ತಿ ಅಂತಸ್ತು ಮೋಜು ಮಸ್ತಿ ದೊಡ್ಡಸ್ತಿಕೆಯ ಸೋಗಿನಲ್ಲಿ ಮಾಡುವ ಇಂಥ ತಪ್ಪುಗಳು ಒಳ್ಳೆಯ, ಮುಗ್ಧ ಜನರ ಮನಸ್ಸಿನ ಮೇಲೆ ಬೀರುವ ಪರಿಣಾಮವನ್ನು ಊಹಿಸಲು ಸಾಧ್ಯವೆ?

ಇದನ್ನೂ ಓದಿ : Meeting Point : ಹಾಕಿದ ನಿಯಮ ಮುರಿಯುವುದು ಹೋಗಲಿ ಅತ್ತಿತ್ತ ದೂಡಾಡುವ ಪ್ರಯತ್ನ ಮಾಡದಿದ್ದರೆ ಅದೆಂಥಾ ಹರೆಯ?

Published On - 4:35 pm, Sun, 5 September 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ