ಮೋದಿಯನ್ನು ಭೇಟಿಯಾದ ಅಕ್ಕಿನೇನಿ ಕುಟುಂಬ; ಟಾಲಿವುಡ್ ದಂತಕತೆ ನಾಗೇಶ್ವರ್ ರಾವ್ ಕುರಿತ ಪುಸ್ತಕ ನೀಡಿದ ನಾಗಾರ್ಜುನ
ತೆಲುಗು ಚಿತ್ರರಂಗದ ನಟ ನಾಗಾರ್ಜುನ ಅಕ್ಕಿನೇನಿ ತಮ್ಮ ಕುಟುಂಬಸ್ಥರೊಂದಿಗೆ ದೆಹಲಿಯ ಸಂಸತ್ ಭವನದಲ್ಲಿ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದಾರೆ. ಈ ವೇಳೆ ಪತ್ನಿ ಅಮಲಾ, ಮಗ ನಾಗಚೈತನ್ಯ ಅಕ್ಕಿನೇನಿ, ಸೊಸೆ ಶೋಭಿತಾ ಧೂಳಿಪಾಲ ಮುಂತಾದವರು ಇದ್ದರು. ಪ್ರಧಾನಿ ಮೋದಿಯವರಿಗೆ ಅಕ್ಕಿನೇನಿ ಕುಟುಂಬ ಟಾಲಿವುಡ್ನ ಲೆಜೆಂಡರಿ ನಟರಾದ ಅಕ್ಕಿನೇನಿ ನಾಗೇಶ್ವರ್ ರಾವ್ ಕುರಿತಾದ ಪುಸ್ತಕವೊಂದನ್ನು ಉಡುಗೊರೆಯಾಗಿ ನೀಡಿದೆ.

ನವದೆಹಲಿ: ಟಾಲಿವುಡ್ ನಟ ನಾಗಾರ್ಜುನ ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ತಮ್ಮ ಕುಟುಂಬದ ಜೊತೆ ದೆಹಲಿಯ ಸಂಸತ್ ಭವನದಲ್ಲಿ ಭೇಟಿಯಾಗಿದ್ದಾರೆ. ಈ ವೇಳೆ ಟಾಲಿವುಡ್ ದಂತಕಥೆ ಅಕ್ಕಿನೇನಿ ನಾಗೇಶ್ವರ ರಾವ್ (ಎಎನ್‌ಆರ್) ಅವರ ಕುರಿತಾದ ಪುಸ್ತಕವನ್ನು ಉಡುಗೊರೆಯಾಗಿ ನೀಡಿದ್ದಾರೆ. ನಟ ನಾಗಾರ್ಜುನ ಅಕ್ಕಿನೇನಿ ಮೋದಿಯವರಿಗೆ ತಮ್ಮ ತಂದೆಯ ಕುರಿತು ಬರೆಯಲಾದ ‘ಮಹಾನ್ ಅಭಿನೇತ ಅಕ್ಕಿನೇನಿ ಕಾ ವಿರಾಟ್ ವ್ಯಕ್ತಿತ್ವ’ ಎಂಬ ಪುಸ್ತಕವನ್ನು ಉಡುಗೊರೆಯಾಗಿ ನೀಡಿದರು. ಈ ಪುಸ್ತಕವನ್ನು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಮತ್ತು ಮಾಜಿ ಸಂಸತ್ ಸದಸ್ಯ ಪ್ರೊಫೆಸರ್ ಯರ್ಲಗಡ್ಡ ಲಕ್ಷ್ಮಿ ಪ್ರಸಾದ್ ಬರೆದಿದ್ದಾರೆ.
ಅಕ್ಕಿನೇನಿ ನಾಗೇಶ್ವರ್ ರಾವ್ ಅವರ 100ನೇ ಜನ್ಮದಿನೋತ್ಸವದ ಪ್ರಯುಕ್ತ ಈ ಪುಸ್ತಕ ಬರೆಯಲಾಗಿದೆ. ಈ ಪುಸ್ತಕವು ನಾಗೇಶ್ವರ್ ರಾವ್ ಅವರ ಸಿನಿಮಾ ಪ್ರಯಾಣವನ್ನು ಒಳಗೊಂಡಿದೆ. ಇದು ಅವರ ಸಿನಿಮಾಗಳ ಶ್ರೇಷ್ಠತೆ, ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ವಿವರಿಸುತ್ತದೆ.
ಇದನ್ನೂ ಓದಿ: ಅಕ್ಕಿನೇನಿ ಕುಟುಂಬದಲ್ಲಿ ಮತ್ತೊಂದು ನಿಶ್ಚಿತಾರ್ಥ, ಅಣ್ಣನಿಗೆ 2ನೇ ಮದುವೆ, ತಮ್ಮನಿಗೆ 2ನೇ ನಿಶ್ಚಿತಾರ್ಥ
Profoundly thankful to Hon’ble Prime Minister @narendramodi ji for today’s meeting at Parliament House. It was an honor to present ‘Akkineni Ka Virat Vyaktitva’ by Padma Bhushan awardee Dr. Yarlagadda Lakshmi Prasad, a tribute to my grandfather ANR garu’s cinematic heritage.… pic.twitter.com/tCVTQEr5mK
— chaitanya akkineni (@chay_akkineni) February 7, 2025
ಮನ್ ಕಿ ಬಾತ್‌ನ 117ನೇ ಸಂಚಿಕೆಯಲ್ಲಿ ಅಕ್ಕಿನೇನಿ ನಾಗೇಶ್ವರ್ ರಾವ್ ಮತ್ತು ಇತರ ಸಿನಿಮಾ ದಿಗ್ಗಜರಾದ ತಪನ್ ಸಿನ್ಹಾ, ರಾಜ್ ಕಪೂರ್ ಮತ್ತು ಮೊಹಮ್ಮದ್ ರಫಿ ಅವರಿಗೆ ಗೌರವ ಸಲ್ಲಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಇಂದಿನ ಭೇಟಿ ವೇಳೆ ರಾಷ್ಟ್ರೀಯ ವೇದಿಕೆಯಲ್ಲಿ ತಮ್ಮ ತಂದೆಯ ಪರಂಪರೆಯನ್ನು ಗುರುತಿಸಿದ್ದಕ್ಕಾಗಿ ನಾಗಾರ್ಜುನ ಅಕ್ಕಿನೇನಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
It was overwhelming to hear Hon’ble Prime Minister @narendramodi ji’s commendations for ANR gaaru’s philanthropic legacy and his high regard for both @AnnapurnaStdios and Annapurna College of Film and Media as a pivotal institution for aspiring filmmakers. This esteemed… pic.twitter.com/1ieuGIcycl
— Nagarjuna Akkineni (@iamnagarjuna) February 7, 2025
ಸಿನಿಮಾ ಮತ್ತು ಸಮಾಜಕ್ಕೆ ಅಕ್ಕಿನೇನಿ ನಾಗೇಶ್ವರ್ ರಾವ್ ಅವರ ಕೊಡುಗೆಗಳನ್ನು ಯಾವಾಗಲೂ ಸ್ಮರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ನಾಗಾರ್ಜುನ ಅವರಿಗೆ ಹೇಳಿದ್ದಾರೆ. ಹಾಗೇ, ತೆಲುಗು ಚಿತ್ರರಂಗ, ಸಂಸ್ಕೃತಿಗೆ ನಾಗೇಶ್ವರ್ ರಾವ್ ನೀಡಿದ ಕೊಡುಗೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Profoundly thankful to Hon’ble Prime Minister @narendramodi ji for today’s meeting at Parliament House. It was an honor to present ‘Akkineni Ka Virat Vyaktitva’ by Padma Bhushan awardee Dr. Yarlagadda Lakshmi Prasad, a tribute to my father ANR garu’s cinematic heritage. Your… pic.twitter.com/FLXUIDQGYA
— Nagarjuna Akkineni (@iamnagarjuna) February 7, 2025
ಇದನ್ನೂ ಓದಿ: ಪ್ರಧಾನಿ ಮೋದಿ ಪರೀಕ್ಷಾ ಪೇ ಚರ್ಚಾಗೆ 3.5 ಕೋಟಿ ಜನರ ನೋಂದಣಿ; ಸಚಿವ ಧರ್ಮೇಂದ್ರ ಪ್ರಧಾನ್
ಎಎನ್‌ಆರ್ ಅವರ 7 ದಶಕಗಳ ಸುದೀರ್ಘ ವೃತ್ತಿಜೀವನವನ್ನು ನೆನಪಿಸಿಕೊಂಡ ಪ್ರಧಾನಿ ಮೋದಿ, ಭಾರತೀಯ ಸಂಪ್ರದಾಯಗಳು, ಮೌಲ್ಯಗಳು ಮತ್ತು ಭಾವನೆಗಳನ್ನು ಪ್ರದರ್ಶಿಸುವ ಹಿರಿಯ ನಟರಾದ ಎಎನ್‌ಆರ್ ಅವರ ಸಾಮರ್ಥ್ಯವನ್ನು ಸ್ಮರಿಸಿದ್ದಾರೆ. ತೆಲುಗು ಚಲನಚಿತ್ರೋದ್ಯಮವನ್ನು ಚೆನ್ನೈನಿಂದ ಹೈದರಾಬಾದ್‌ಗೆ ಸ್ಥಳಾಂತರಿಸುವಲ್ಲಿ ಲೆಜೆಂಡರಿ ನಟ ನಾಗೇಶ್ವರ್ ರಾವ್ ಅವರ ಪಾತ್ರವನ್ನು ಮೋದಿ ಶ್ಲಾಘಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




