AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅದಾನಿ ಗ್ರೂಪ್ ಜೊತೆ 5,000 ಮೆಗಾವ್ಯಾಟ್ ಜಲವಿದ್ಯುತ್ ಯೋಜನೆಗಳ ಒಪ್ಪಂದಕ್ಕೆ ಭೂತಾನ್ ಸಹಿ

ಭೂತಾನ್‌ನಲ್ಲಿ 5,000 ಮೆಗಾವ್ಯಾಟ್ ಜಲವಿದ್ಯುತ್ ಯೋಜನೆಗಳನ್ನು ಅಭಿವೃದ್ಧಿಪಡಿಸಲು ಡ್ರಕ್ ಗ್ರೀನ್ ಪವರ್ ಕಾರ್ಪೊರೇಷನ್ (ಡಿಜಿಪಿಸಿ) ಜೊತೆಗೆ ಅದಾನಿ ಗ್ರೂಪ್ ಇಂದು ಎಂಒಯುಗೆ ಸಹಿ ಹಾಕಿದೆ ಎಂದು ಘೋಷಿಸಿದೆ. ಭೂತಾನ್‌ನ ಪ್ರಧಾನಿ ದಶೋ ತ್ಸೆರಿಂಗ್ ಟೋಬ್ಗೇ ಇಂಧನ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸಚಿವ ಲಿಯಾನ್ಪೊ ಜೆಮ್ ತ್ಸೆರಿಂಗ್ ಮತ್ತು ಇತರ ಹಿರಿಯ ಗಣ್ಯರ ಸಮ್ಮುಖದಲ್ಲಿ ಡಿಜಿಪಿಸಿಯ ಎಂಡಿ ದಾಶೋ ಚೆವಾಂಗ್ ರಿಂಜಿನ್ ಮತ್ತು ಅದಾನಿ ಗ್ರೀನ್ ಹೈಡ್ರೋ ಲಿಮಿಟೆಡ್‌ನ ಸಿಒಒ (ಪಿಎಸ್‌ಪಿ ಮತ್ತು ಹೈಡ್ರೋ) ನರೇಶ್ ತೆಲ್ಗು ಅವರು ಥಿಂಫುವಿನಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಿದರು.

ಅದಾನಿ ಗ್ರೂಪ್ ಜೊತೆ 5,000 ಮೆಗಾವ್ಯಾಟ್ ಜಲವಿದ್ಯುತ್ ಯೋಜನೆಗಳ ಒಪ್ಪಂದಕ್ಕೆ ಭೂತಾನ್ ಸಹಿ
ಅದಾನಿ ಗ್ರೂಪ್ ಜೊತೆ 5,000 ಮೆಗಾವ್ಯಾಟ್ ಜಲವಿದ್ಯುತ್ ಯೋಜನೆಗಳ ಒಪ್ಪಂದಕ್ಕೆ ಭೂತಾನ್ ಸಹಿ
ಸುಷ್ಮಾ ಚಕ್ರೆ
|

Updated on: May 08, 2025 | 8:40 PM

Share

ಅಹಮದಾಬಾದ್, ಮೇ 8: ಭೂತಾನ್‌ನ ಡ್ರಕ್ ಗ್ರೀನ್ ಪವರ್ ಕಾರ್ಪೊರೇಷನ್ (ಡಿಜಿಪಿಸಿ) ಮತ್ತು ಅದಾನಿ ಗ್ರೂಪ್ 5,000 ಮೆಗಾವ್ಯಾಟ್‌ಗಳಷ್ಟು ಜಲವಿದ್ಯುತ್ ಯೋಜನೆಗಳನ್ನು ಜಂಟಿಯಾಗಿ ಅಭಿವೃದ್ಧಿಪಡಿಸಲು ಥಿಂಪುವಿನಲ್ಲಿ ತಿಳುವಳಿಕೆ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಿವೆ. ಭೂತಾನ್ ಪ್ರಧಾನಿ ದಾಶೋ ಚೆವಾಂಗ್ ರಿಂಜಿನ್ ಮತ್ತು ಅದಾನಿ ಗ್ರೀನ್ ಹೈಡ್ರೋ ಲಿಮಿಟೆಡ್‌ನ ಮುಖ್ಯ ಕಾರ್ಯಾಚರಣಾ ಅಧಿಕಾರಿ (ಪಿಎಸ್‌ಪಿ ಮತ್ತು ಹೈಡ್ರೋ) ನರೇಶ್ ತೆಲ್ಗು ಅವರು ಭೂತಾನ್ ಪ್ರಧಾನಿ ದಾಶೋ ತ್ಸೆರಿಂಗ್ ಟೋಬ್ಗೇ, ಇಂಧನ ಸಚಿವ ಲಿಯಾನ್ಪೊ ಜೆಮ್ ತ್ಸೆರಿಂಗ್ ಅವರ ಸಮ್ಮುಖದಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ಕಂಪನಿ ಹೇಳಿದೆ.

ಈ ಒಪ್ಪಂದವು 570/900 ಮೆಗಾವ್ಯಾಟ್ ವಾಂಗ್ಚು ಜಲವಿದ್ಯುತ್ ಯೋಜನೆಗೆ ನಡೆಯುತ್ತಿರುವ ಪಾಲುದಾರಿಕೆಯ ಮೇಲೆ ನಿರ್ಮಿಸಲ್ಪಟ್ಟಿದೆ. ಇದರಲ್ಲಿ ಡಿಜಿಪಿಸಿ ಬಹುಪಾಲು 51% ಪಾಲನ್ನು ಹೊಂದಿರುತ್ತದೆ ಮತ್ತು ಅದಾನಿ ಗ್ರೂಪ್ 49% ಪಾಲನ್ನು ಹೊಂದಿರುತ್ತದೆ. 5,000 ಮೆಗಾವ್ಯಾಟ್ ಉಪಕ್ರಮವು ಹೆಚ್ಚುವರಿ ಜಲವಿದ್ಯುತ್ ಮತ್ತು ಪಂಪ್ಡ್ ಸ್ಟೋರೇಜ್ ಯೋಜನೆಗಳನ್ನು ಗುರುತಿಸಲಾಗುವುದು. ವಿವರವಾದ ಯೋಜನಾ ವರದಿಗಳನ್ನು (ಡಿಪಿಆರ್‌ಗಳು) ಸಿದ್ಧಪಡಿಸಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಪಾಕಿಸ್ತಾನ ದಾಳಿಯನ್ನು ನಿಲ್ಲಿಸದಿದ್ದರೆ ಭಾರತ ಉತ್ತರ ಕೊಡುತ್ತಲೇ ಇರುತ್ತದೆ; ವಿದೇಶಾಂಗ ಸಚಿವಾಲಯ

“ಡಿಜಿಪಿಸಿಯೊಂದಿಗೆ ನಾವು ಭೂತಾನ್ ತನ್ನ ಜಲವಿದ್ಯುತ್ ಸಾಮರ್ಥ್ಯವನ್ನು ಬಳಸಿಕೊಳ್ಳಲು ಮತ್ತು ಭಾರತಕ್ಕೆ ವಿಶ್ವಾಸಾರ್ಹ ಹಸಿರು ಶಕ್ತಿಯನ್ನು ರಫ್ತು ಮಾಡಲು ಅನುವು ಮಾಡಿಕೊಡುತ್ತಿದ್ದೇವೆ. ಇದು ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಅನುಸರಿಸುವಲ್ಲಿ ಗಡಿಯಾಚೆಗಿನ ಸಹಯೋಗದ ಒಂದು ಉದಾಹರಣೆಯಾಗಿದೆ” ಎಂದು ನರೇಶ್ ತೆಲ್ಗು ಹೇಳಿದರು.

ಭೂತಾನ್‌ನ ಪ್ರಮುಖ ಜಲವಿದ್ಯುತ್ ಅಭಿವೃದ್ಧಿ ಸಂಸ್ಥೆಯಾದ ಡಿಜಿಪಿಸಿ, ದೇಶದ ನವೀಕರಿಸಬಹುದಾದ ಇಂಧನ ಸಂಪನ್ಮೂಲಗಳನ್ನು ನಿರ್ವಹಿಸುವಲ್ಲಿ ದಶಕಗಳ ಅನುಭವವನ್ನು ಹೊಂದಿದೆ. ಇದು ಭೂತಾನ್‌ನ ಶುದ್ಧ ಇಂಧನ ಪ್ರಯಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ದೇಶೀಯ ಇಂಧನ ಭದ್ರತೆ ಮತ್ತು ಸುಸ್ಥಿರ ಅಭಿವೃದ್ಧಿ ಎರಡಕ್ಕೂ ಕೊಡುಗೆ ನೀಡುತ್ತದೆ. ಹಾಗೇ, ಪ್ರಾದೇಶಿಕ ಇಂಧನ ಸಹಕಾರದಲ್ಲಿ ಭೂತಾನ್‌ನ ಸ್ಥಾನವನ್ನು ಬಲಪಡಿಸಲು ಡಿಜಿಪಿಸಿ ಸಹಾಯ ಮಾಡುತ್ತಿದೆ.

ಇದನ್ನೂ ಓದಿ: ಮೋದಿಗೆ ಭೂತಾನ್​ ಅತ್ಯುನ್ನತ ನಾಗರಿಕ ಗೌರವ, ಭಾರತದ 140 ಕೋಟಿ ಜನರಿಗೆ ಅರ್ಪಿಸಿದ ನಮೋ

ಅದಾನಿ ಗ್ರೂಪ್ ತನ್ನ ಜಲವಿದ್ಯುತ್ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ಭಾರತೀಯ ಇಂಧನ ಮಾರುಕಟ್ಟೆಗಳಿಗೆ ಪ್ರವೇಶವನ್ನು ಸುಗಮಗೊಳಿಸಲು ಭೂತಾನ್‌ಗೆ ಬೆಂಬಲ ನೀಡುವುದಾಗಿ ಹೇಳಿದೆ. ಈ ಸಹಯೋಗದ ಭಾಗವಾಗಿ ಅದಾನಿ ಗ್ರೂಪ್ ಭಾರತದ ವಾಣಿಜ್ಯ ವಿದ್ಯುತ್ ಮಾರುಕಟ್ಟೆಗಳೊಂದಿಗೆ ವಿಶ್ವಾಸಾರ್ಹ ವಿದ್ಯುತ್ ಬಳಕೆಯನ್ನು ಖಚಿತಪಡಿಸುತ್ತದೆ. ಇದು ಪ್ರಾದೇಶಿಕ ಇಂಧನ ವ್ಯಾಪಾರದಲ್ಲಿ ಭೂತಾನ್‌ನ ಪಾತ್ರವನ್ನು ಮತ್ತಷ್ಟು ಬಲಪಡಿಸುತ್ತದೆ. ಈ ಪಾಲುದಾರಿಕೆಯನ್ನು ಭೂತಾನ್‌ನ ರಾಯಲ್ ಸರ್ಕಾರ ಮತ್ತು ಭಾರತ ಸರ್ಕಾರ ಬೆಂಬಲಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ