Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Pic: ಸರಪಳಿಗಳಿಂದ ಕಟ್ಟಲಾಗಿತ್ತು, ಎನ್​ಐಎಗೆ ಹಸ್ತಾಂತರಗೊಂಡ ಉಗ್ರ ತಹವ್ವುರ್ ಫೋಟೊ ವೈರಲ್

ತಹವ್ವುರ್ ರಾಣಾ(Tahawwur Rana)ನನ್ನು ಅಮೆರಿಕದ ಮಾರ್ಷಲ್​ಗಳು ಗುರುವಾರ ಎನ್​ಐಗೆ ಹಸ್ತಾಂತರಿಸಿವೆ. ಆ ಸಂದರ್ಭದಲ್ಲಿ ಫೋಟೊಗಳು ವೈರಲ್ ಆಗಿವೆ. ಆತನನ್ನು ಸರಪಳಿಗಳಿಂದ ಕಟ್ಟಿಹಾಕಲಾಗಿತ್ತು.ಭಯೋತ್ಪಾಕನನ್ನು ಸರಪಳಿಯಲ್ಲಿ ಬಂಧಿಸಿ, ಸೇನಾ ವಾಯುನೆಲೆಯಂತೆ ಕಾಣುವ ಸ್ಥಳದಲ್ಲಿ ಅಮೆರಿಕದ ಮಾರ್ಷಲ್‌ಗಳು ಕರೆದೊಯ್ಯುತ್ತಿರುವುದನ್ನು ದೃಶ್ಯಗಳು ತೋರಿಸುತ್ತವೆ.ಪಾಕಿಸ್ತಾನಿ ಮೂಲದ ಕೆನಡಾ ಪ್ರಜೆ ರಾಣಾ, ಅಮೆರಿಕದಿಂದ ಗಡಿಪಾರು ಮಾಡಲ್ಪಟ್ಟ ನಂತರ ಗುರುವಾರ ದೆಹಲಿಗೆ ಬಂದಿದ್ದಾನೆ. ಕೂಡಲೇ ಎನ್‌ಐಎ ಆತನನ್ನು ಬಂಧಿಸಿತ್ತು

Viral Pic: ಸರಪಳಿಗಳಿಂದ ಕಟ್ಟಲಾಗಿತ್ತು, ಎನ್​ಐಎಗೆ ಹಸ್ತಾಂತರಗೊಂಡ ಉಗ್ರ ತಹವ್ವುರ್ ಫೋಟೊ ವೈರಲ್
ತಹವ್ವುರ್
Follow us
ನಯನಾ ರಾಜೀವ್
|

Updated on:Apr 11, 2025 | 10:40 AM

ನವದೆಹಲಿ, ಏಪ್ರಿಲ್ 11: ಮುಂಬೈನ ತಾಜ್ ಹೋಟೆಲ್ ಮೇಲೆ 2008ರಲ್ಲಿ ನಡೆದ ಉಗ್ರ ದಾಳಿಯ ಮಾಸ್ಟರ್​ಮೈಂಡ್ ತಹವ್ವುರ್ ರಾಣಾ(Tahawwur Rana)ನನ್ನು ಅಮೆರಿಕದ ಮಾರ್ಷಲ್​ಗಳು ಗುರುವಾರ ಎನ್​ಐಗೆ ಹಸ್ತಾಂತರಿಸಿವೆ. ಆ ಸಂದರ್ಭದಲ್ಲಿನ ಫೋಟೊಗಳು ವೈರಲ್ ಆಗಿವೆ. ಆತನನ್ನು ಸರಪಳಿಗಳಿಂದ ಕಟ್ಟಿಹಾಕಲಾಗಿತ್ತು.ಭಯೋತ್ಪಾಕನನ್ನು ಸರಪಳಿಯಲ್ಲಿ ಬಂಧಿಸಿ, ಸೇನಾ ವಾಯುನೆಲೆಯಂತೆ ಕಾಣುವ ಸ್ಥಳದಲ್ಲಿ ಅಮೆರಿಕದ ಮಾರ್ಷಲ್‌ಗಳು ಕರೆದೊಯ್ಯುತ್ತಿರುವುದನ್ನು ದೃಶ್ಯಗಳು ತೋರಿಸುತ್ತವೆ.

ಪಾಕಿಸ್ತಾನಿ ಮೂಲದ ಕೆನಡಾ ಪ್ರಜೆ ರಾಣಾ, ಅಮೆರಿಕದಿಂದ ಗಡಿಪಾರು ಮಾಡಲ್ಪಟ್ಟ ನಂತರ ಗುರುವಾರ ದೆಹಲಿಗೆ ಬಂದಿದ್ದಾನೆ. ಕೂಡಲೇ ಎನ್‌ಐಎ ಆತನನ್ನು ಬಂಧಿಸಿತ್ತು ಮತ್ತು ವಿಶೇಷ ನ್ಯಾಯಾಲಯವು ಆತನನ್ನು 18 ದಿನಗಳ ಕಾಲ ಏಜೆನ್ಸಿಯ ಕಸ್ಟಡಿಗೆ ಕಳುಹಿಸಿತು. ಪಾಲಂ ವಿಮಾನ ನಿಲ್ದಾಣದಿಂದ ಬಂದ ದೃಶ್ಯಗಳಲ್ಲಿ ರಾಣಾ ಬಿಳಿ ಕೂದಲು ಮತ್ತು ಸಡಿಲವಾದ ಗಡ್ಡದೊಂದಿಗೆ ಕಂದು ಬಣ್ಣದ ಮೇಲುಡುಪುಗಳನ್ನು ಧರಿಸಿರುವುದು ಕಂಡುಬಂದಿದೆ.

2008 ರ ಮುಂಬೈ ಭಯೋತ್ಪಾದಕ ದಾಳಿಯನ್ನು ಡೇವಿಡ್ ಕೋಲ್ಮನ್ ಹೆಡ್ಲಿ, ಲಷ್ಕರ್-ಎ-ತೈಬಾ (ಎಲ್‌ಇಟಿ), ಹರ್ಕತ್-ಉಲ್-ಜಿಹಾದಿ ಇಸ್ಲಾಮಿ (ಹುಜಿ) ಮತ್ತು ಇತರ ಪಾಕಿಸ್ತಾನಿ ಭಯೋತ್ಪಾದಕರೊಂದಿಗೆ ತಹವ್ವುರ್ ರಾಣಾ ಸಂಚು ರೂಪಿಸಿದ ಆರೋಪ ಹೊರಿಸಲಾಗಿದೆ.

ಇದನ್ನೂ ಓದಿ
Image
ರಾಜ್ಯಸಭೆಯಲ್ಲಿ ಅಸಂಸದೀಯ ಹೇಳಿಕೆಗೆ ಮಲ್ಲಿಕಾರ್ಜುನ ಖರ್ಗೆ ಕ್ಷಮೆಯಾಚನೆ
Image
ಬಸ್‌ ತಡೆದು ನಡು ರಸ್ತೆಯಲ್ಲಿ ಪಾನಮತ್ತ ಮಹಿಳೆಯ ಕಿರಿಕ್; ವಿಡಿಯೋ ವೈರಲ್‌
Image
ಛತ್ತೀಸ್​ಗಢ ಮಾಜಿ ಸಿಎಂ ಭೂಪೇಶ್ ಬಘೇಲ್ ಮನೆ ಸೇರಿ ಹಲವೆಡೆ ಇಡಿ ದಾಳಿ
Image
ಮೊಬೈಲ್​ನಲ್ಲಿ ಮಾತನಾಡುತ್ತಾ ಬಾವಿಗೆ ಬಿದ್ದು ವಿದ್ಯಾರ್ಥಿ ಸಾವು

ಮತ್ತಷ್ಟು ಓದಿ: ಭಯೋತ್ಪಾದನೆ ವಿರುದ್ಧ ನಮ್ಮ ಸರ್ಕಾರದ ದೊಡ್ಡ ಹೆಜ್ಜೆ; ರಾಣಾ ಹಸ್ತಾಂತರಕ್ಕೆ ಪ್ರಲ್ಹಾದ್ ಜೋಶಿ ಪ್ರತಿಕ್ರಿಯೆ

ಮುಂಬೈ ಭಯೋತ್ಪಾದಕ ದಾಳಿಯ ಆರೋಪಿ ತಹವ್ವುರ್ ರಾಣಾ ಜೊತೆ ಪಾಕಿಸ್ತಾನ ಯಾವುದೇ ಸಂಬಂಧ ಹೊಂದಿಲ್ಲ ಎಂದು ಗುರುವಾರ ಹೇಳಿದೆ. ತಹವ್ವುರ್ ರಾಣಾ ಕೆನಡಾದ ಪ್ರಜೆಯಾಗಿದ್ದು, ಸುಮಾರು ಎರಡು ದಶಕಗಳಿಂದ ತನ್ನ ಪಾಕಿಸ್ತಾನಿ ದಾಖಲೆಗಳನ್ನು ನವೀಕರಿಸಿಲ್ಲ ಎಂದು ಪಾಕಿಸ್ತಾನ ಹೇಳಿದೆ.

ತಹವ್ವುರ್ ರಾಣಾ (64) 2008 ರ ಮುಂಬೈ ಭಯೋತ್ಪಾದಕ ದಾಳಿಯ ಪ್ರಮುಖ ಸಂಚುಕೋರರಲ್ಲಿ ಒಬ್ಬನಾದ ಅಮೆರಿಕದ ನಾಗರಿಕ ಡೇವಿಡ್ ಕೋಲ್ಮನ್ ಹೆಡ್ಲಿ ಅಲಿಯಾಸ್ ದಾವೂದ್ ಗಿಲಾನಿಯ ಆಪ್ತ ಸಹಚರ.

Tahawwur (5)

ಭಾರತಕ್ಕೆ ರಾಣಾ ಆಗಮನ ಹಿನ್ನೆಲೆಯಲ್ಲಿ ಹೆಚ್ಚುತ್ತಿರುವ ಭದ್ರತಾ ಕಳವಳಗಳ ನಡುವೆ, ಕೇಂದ್ರ ಗೃಹ ಸಚಿವ ಅಮಿತ್ ಶಾ, ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸೇರಿದಂತೆ ಉನ್ನತ ಸರ್ಕಾರಿ ಅಧಿಕಾರಿಗಳು ನಿನ್ನೆ ಪರಿಶೀಲನಾ ಸಭೆ ನಡೆಸಿ ವ್ಯವಸ್ಥೆಗಳ ಕುರಿತು ಚರ್ಚಿಸಿದರು. ರಾಣಾನ ನ್ಯಾಯಾಲಯದ ವಿಚಾರಣೆಗಳನ್ನು ರಹಸ್ಯವಾಗಿ ನಡೆಸಬಹುದು ಎಂದು ಮೂಲಗಳು ತಿಳಿಸಿವೆ.

ತನಿಖಾ ತಂಡದ ಆಪ್ತ ಮೂಲಗಳು ರಾಣಾನ ವಿಚಾರಣೆಯು 26/11 ದಾಳಿಯಲ್ಲಿ ಪಾಕಿಸ್ತಾನ ಪಾಲ್ಗೊಳ್ಳುವಿಕೆ, ಐಎಸ್ಐ ಜಾಲದ ರಚನೆ ಮತ್ತು ಕಾರ್ಯಾಚರಣೆಗಳು ಹಾಗೂ ಭಾರತದಲ್ಲಿ ಲಷ್ಕರ್-ಎ-ತೈಬಾದ ಸಹಯೋಗಿಗಳು ಮತ್ತು ಅದರ ಹಣಕಾಸು ಮಾರ್ಗಗಳ ಮೇಲೆ ಕೇಂದ್ರೀಕರಿಸುವ ನಿರೀಕ್ಷೆಯಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:39 am, Fri, 11 April 25