ಸಂಸತ್ನಲ್ಲಿ 875 ಸಿಬ್ಬಂದಿಗೆ ಕೊರೊನಾ ಪಾಸಿಟಿವ್
ಬಜೆಟ್ ಅಧಿವೇಶನದ ಮೊದಲು ಸಂಸತ್ ಸಂಕೀರ್ಣದಲ್ಲಿ 2,847 ಪರೀಕ್ಷೆಗಳನ್ನು ನಡೆಸಲಾಯಿತು ಮತ್ತು 875 ಸಿಬ್ಬಂದಿ ಧನಾತ್ಮಕ ಪರೀಕ್ಷೆ ನಡೆಸಿದರು.
ದೆಹಲಿ: ಜನವರಿ 31 ರಂದು ಪ್ರಾರಂಭವಾಗುವ ಸಂಸತ್ ಬಜೆಟ್ ಅಧಿವೇಶನಕ್ಕೆ (Parliament’s Budget Session) ಮುಂಚಿತವಾಗಿ, ಸದನದ ಕನಿಷ್ಠ 875 ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಹಾಗೆಯೇ ರಾಜ್ಯಸಭಾ ಅಧ್ಯಕ್ಷ ಮತ್ತು ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು(M Venkaiah Naidu) ಅವರು ಕೊವಿಡ್ -19ಗೆ ಧನಾತ್ಮಕ ಪರೀಕ್ಷೆ ನಡೆಸಿದ್ದಾರೆ ಎಂದು ಸಂಸತ್ ನ ಕಾರ್ಯದರ್ಶಿ ತಿಳಿಸಿದೆ. ನಾಯ್ಡು ಹೈದರಾಬಾದ್‌ನಲ್ಲಿ ಒಂದು ವಾರ ಸೆಲ್ಫ್ ಇಸೋಲೇಷನ್ ನಲ್ಲಿದ್ದಾರೆ. ಹೈದರಾಬಾದ್‌ನಲ್ಲಿರುವ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರು ಇಂದು ಕೊವಿಡ್ ಪಾಸಿಟಿವ್ ಎಂದು ಪರೀಕ್ಷಿಸಿದ್ದಾರೆ. ಅವರು ಒಂದು ವಾರ ಸ್ವಯಂ-ಪ್ರತ್ಯೇಕತೆಯಲ್ಲಿರಲು ನಿರ್ಧರಿಸಿದ್ದಾರೆ. ತನ್ನ ಸಂಪರ್ಕಕ್ಕೆ ಬಂದವರಿಗೆಲ್ಲ ಪ್ರತ್ಯೇಕವಾಗಿರುವಂತೆ ಮತ್ತು ಪರೀಕ್ಷೆಗೆ ಒಳಪಡುವಂತೆ ಸೂಚಿಸಿದ್ದಾರೆ ಎಂದು ನಾಯ್ಜು ಅವರ ಕಾರ್ಯದರ್ಶಿ ಟ್ವೀಟ್ ಮಾಡಿದ್ದಾರೆ .ನಾಯ್ಡು ಅವರು ಎರಡನೇ ಬಾರಿ ಕೊರೊನಾವೈರಸ್‌ಗೆ ಧನಾತ್ಮಕ ಪರೀಕ್ಷೆ ಮಾಡಿದ್ದಾರೆ. ಬಜೆಟ್ ಅಧಿವೇಶನದ ಮೊದಲು ಸಂಸತ್ ಸಂಕೀರ್ಣದಲ್ಲಿ 2,847 ಪರೀಕ್ಷೆಗಳನ್ನು ನಡೆಸಲಾಯಿತು ಮತ್ತು 875 ಸಿಬ್ಬಂದಿ ಧನಾತ್ಮಕ ಪರೀಕ್ಷೆ ನಡೆಸಿದರು. ಕೊವಿಡ್ -19 ಪ್ರಕರಣಗಳ ಹೆಚ್ಚಳದ ದೃಷ್ಟಿಯಿಂದ ಸಂಸತ್ನ ಕೆಳ ಮತ್ತು ಮೇಲ್ಮನೆಗಳು ಏಕಕಾಲದಲ್ಲಿ ಅಥವಾ ವಿವಿಧ ಪಾಳಿಗಳಲ್ಲಿ ಕುಳಿತುಕೊಳ್ಳಬೇಕೇ ಎಂದು ನಿರ್ಧರಿಸುವ ನಿರೀಕ್ಷೆಯಿದೆ.
ಬಜೆಟ್ ಅಧಿವೇಶನವು ಜನವರಿ 31 ರಿಂದ ಏಪ್ರಿಲ್ 8 ರವರೆಗೆ ಮೊದಲಾರ್ಧದ ನಂತರ ಸುಮಾರು ತಿಂಗಳ ವಿರಾಮದೊಂದಿಗೆ ನಡೆಯಲಿದೆ. ಫೆಬ್ರವರಿ 1 ರಂದು ಕೇಂದ್ರ ಬಜೆಟ್ ಮಂಡಿಸಲಾಗುವುದು ಮತ್ತು ರಾಷ್ಟ್ರಪತಿಗಳು ಉಭಯ ಸದನಗಳ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 3,06,064 ಹೊಸ ಕೊವಿಡ್ 19 ಕೇಸ್ಗಳು ದಾಖಲಾಗಿವೆ. ಭಾನುವಾರ 3.33 ಲಕ್ಷ ಕೇಸ್ಗಳು ದಾಖಲಾಗಿದ್ದವು. ಅದಕ್ಕೆ ಹೋಲಿಸಿದರೆ ಇಂದು ಕಡಿಮೆಯಾಗಿದೆ. ಆದರೆ ದೈನಂದಿನ ಪಾಸಿಟಿವಿಟಿ ರೇಟ್ ಶೇ. 20.75ಕ್ಕೆ ಏರಿಕೆಯಾಗಿದ್ದು, ಚೇತರಿಕೆ ದರ ಶೇ. 93.07ಗೆ ಇಳಿದಿದೆ. ವಾರದ ಪಾಸಿಟಿವಿಟಿ ರೇಟ್ 17.03 ರಷ್ಟಿದೆ. ಹಾಗೇ, ಕಳೆದ 24ಗಂಟೆಯಲ್ಲಿ 439 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಭಾರತದಲ್ಲಿ ಕೊವಿಡ್ 19 ಸೋಂಕಿತರ ಸಂಖ್ಯೆ ಒಟ್ಟಾರೆ 3,95,43,328 ಕ್ಕೆ ತಲುಪಿದ್ದರೆ, ಸಕ್ರಿಯ ಪ್ರಕರಣಗಳ ಸಂಖ್ಯೆ 22,49,335ಕ್ಕೆ ಏರಿದೆ. ಕಳದೆ 241 ದಿನಗಳಲ್ಲೇ ಇದು ಅತ್ಯಂತ ಹೆಚ್ಚಿನ ಸಕ್ರಿಯ ಪ್ರಕರಣಗಳು ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
24ಗಂಟೆಯಲ್ಲಿ 493 ಮಂದಿ ಮೃತಪಡುವ ಮೂಲಕ ಒಟ್ಟಾರೆ ಸಾವಿನ ಸಂಖ್ಯೆ 4,89,848ಕ್ಕೇರಿದೆ.ಹಾಗೇ, ಒಂದೇ ದಿನ 2, 43,495 ಮಂದಿ ಚೇತರಿಸಿಕೊಂಡು ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 3,68,04,145ಕ್ಕೆ ತಲುಪಿದೆ. ಇನ್ನೊಂದೆಡೆ ದೇಶದಲ್ಲಿ ಕೊವಿಡ್ 19 ಲಸಿಕೆ ನೀಡಿಕೆ ಕೂಡ ವೇಗವಾಗಿ ಸಾಗುತ್ತಿದೆ. ಇದುವರೆಗೆ ದೇಶದಲ್ಲಿ 162.26 ಕೋಟಿ ಡೋಸ್ ಕೊವಿಡ್ 19 ಲಸಿಕೆ ನೀಡಲಾಗಿದೆ ಮತ್ತು ಕಳೆದ 24ಗಂಟೆಯಲ್ಲಿ 14,74,753 ಮಾದರಿಗಳನ್ನು ಕೊವಿಡ್ 19 ಟೆಸ್ಟ್ಗೆ ಒಳಪಡಿಸಲಾಗಿದೆ. ಅಲ್ಲಿಗೆ ಒಟ್ಟಾರೆ 71.69 ಕೋಟಿ ಜನರಿಗೆ ಇದುವರೆಗೂ ಕೊರೊನಾ ಟೆಸ್ಟ್ ಮಾಡಿದಂತಾಗಿದೆ.
ಇದನ್ನೂ ಓದಿ: Coronavirus Karantaka Update: ಕರ್ನಾಟಕದಲ್ಲಿ 50 ಸಾವಿರ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ, ಕೊವಿಡ್ನಿಂದ 19 ಜನರು ಸಾವು