ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ: ವಿವಾದದ ತೀರ್ಪು ನೀಡಿದ್ದ ನ್ಯಾಯಾಧೀಶೆಗೆ 150 ಕಾಂಡೋಮ್ ಪಾರ್ಸೆಲ್​ ಬಂತು!

Justice Pushpa V Ganediwala ತೀರ್ಪಿನ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟೆ ಚರ್ಚೆ ಆಗಿತ್ತು. ಇದೀಗ ಅಹ್ಮದಾಬಾದ್​ನ ಮಹಿಳೆ ಒಂದು ಹೆಜ್ಜೆ ಮುಂದುವರಿದು 150 ಕಾಂಡೋಮ್​ ಕಳಿಸಿದ್ದಾರೆ.

ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ: ವಿವಾದದ ತೀರ್ಪು ನೀಡಿದ್ದ ನ್ಯಾಯಾಧೀಶೆಗೆ 150 ಕಾಂಡೋಮ್ ಪಾರ್ಸೆಲ್​ ಬಂತು!
ಬಾಂಬೆ ಹೈಕೋರ್ಟ್​
Follow us
Lakshmi Hegde
|

Updated on:Feb 18, 2021 | 4:19 PM

ದೆಹಲಿ: ಬಾಂಬೆ ಹೈಕೋರ್ಟ್​ನ ನಾಗ್ಪುರ ಪೀಠದ ಹೆಚ್ಚುವರಿ ನ್ಯಾಯಾಧೀಶೆ ಪುಷ್ಪಾ ವಿ ಗನೇಡಿವಾಲಾಗೆ ಅಹ್ಮದಾಬಾದ್​ನ ಮಹಿಳೆಯೊಬ್ಬರು 150 ಕಾಂಡೋಮ್​ಗಳನ್ನು ಕಳಿಸುವ ಮೂಲಕ, ಅವರ ತೀರ್ಪುಗಳಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಕೆಲವು ದಿನಗಳ ಹಿಂದೆ ನ್ಯಾಯಾಧೀಶೆ ಪುಷ್ಪಾ ನೀಡಿದ್ದ ಎರಡು ತೀರ್ಪುಗಳು ವಿವಾದಕ್ಕೆ ಕಾರಣವಾಗಿದ್ದವು. ಈ ತೀರ್ಪುಗಳ ಕಾರಣದಿಂದಾಗಿ ಅವರ ವೃತ್ತಿಯಲ್ಲೂ ಹಿನ್ನಡೆಯಾಗಿತ್ತು. ಪುಷ್ಪಾ ಅವರನ್ನು ನ್ಯಾಯಾಲಯದ ಖಾಯಂ ನ್ಯಾಯಾಧೀಶರನ್ನಾಗಿ ನೇಮಕ ಮಾಡುವ ಪ್ರಸ್ತಾಪವನ್ನು ಸುಪ್ರೀಂಕೋರ್ಟ್​ನ ಕೊಲಿಜಿಯಂ ಹಿಂಪಡೆದಿತ್ತು. ಈಗ ಮಹಿಳೆಯರೊಬ್ಬರು ಕಾಂಡೋಮ್​ ಕಳಿಸುವ ಮೂಲಕ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಪ್ರಾಪ್ತ ವಯಸ್ಸಿನ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯದ ಎರಡು ಪ್ರಕರಣದ ತೀರ್ಪು ನೀಡಿದ್ದ ಪುಷ್ಪಾ ಗನೇಡಿವಾಲಾ, ಒಂದು ಕೇಸ್​​ನಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯ  ಬಟ್ಟೆಯ ಮೇಲಿಂದ ಖಾಸಗಿ ಅಂಗ ಸ್ಪರ್ಶಿಸುವುದು ಲೈಂಗಿಕ ದೌರ್ಜನ್ಯ ಎನ್ನಿಸಿಕೊಳ್ಳುವುದಿಲ್ಲ ಎಂದಿದ್ದರು. ಹಾಗೇ ಇನ್ನೊಂದು ಪ್ರಕರಣದಲ್ಲಿ, ಬಾಲಕಿಯ ಕೈ ಹಿಡಿದುಕೊಂಡು, ಪ್ಯಾಂಟ್​ ಜಿಪ್​​ ತೆರೆಯುವುದು POCSO ಕಾಯ್ದೆಯಡಿ ಲೈಂಗಿಕ ದೌರ್ಜನ್ಯ ಎನ್ನಿಸಿಕೊಳ್ಳುವುದಿಲ್ಲ ಎಂದು ತೀರ್ಪು ನೀಡಿದ್ದರು. ಈ ಎರಡೂ ಪ್ರಕರಣಗಳಲ್ಲಿ ಆರೋಪಿಗಳ ಶಿಕ್ಷೆಯನ್ನು ಕಡಿಮೆ ಮಾಡಿದ್ದರು. ಆದರೆ ಮೊದಲ ಕೇಸ್​ ತೀರ್ಪಿಗೆ ಸುಪ್ರೀಂಕೋರ್ಟ್​ ತಡೆ ನೀಡಿತ್ತು.

ಪುಷ್ಪಾ ಅವರ ಈ ತೀರ್ಪನ್ನು ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಅಪಾರವಾಗಿ ಖಂಡಿಸಿದ್ದರು. ಇದೆಂಥಾ ತೀರ್ಪು ಎಂದು ಪ್ರಶ್ನಿಸಿದ್ದರು. ಈಗ ಅಹ್ಮದಾಬಾದ್​ನ ದೇವಶ್ರೀ ತ್ರಿವೇದಿ 150 ಕಾಂಡೋಮ್​ನ್ನು ಜಡ್ಜ್​​ಗಾಗಿ ಕಳಿಸಿದ್ದಾಗಿ ತಿಳಿಸಿದ್ದಾರೆ. ರಾಜಕೀಯ ವಿಶ್ಲೇಷಕರಾಗಿರುವ ದೇವಶ್ರೀ ತ್ರಿವೇದಿ, ಪುಷ್ಪಾ ಗನೇಡಿವಾಲಾ ಅವರ ಛೇಂಬರ್​, ನಾಗ್ಪುರ ಪೀಠದ ನೋಂದಣಿ ಮತ್ತು ಮುಂಬೈನ ಪ್ರಧಾನ ಪೀಠ ಸೇರಿ ಒಟ್ಟು 12 ಕಡೆಗೆ ಕಾಂಡೋಮ್​ ಕಳಿಸಿದ್ದಾಗಿ ತಿಳಿಸಿದ್ದಾರೆ.

ಪುಷ್ಪಾ ಗನೇಡಿವಾಲಾ ನೀಡಿದ ತೀರ್ಪನ್ನು ನನಗಂತೂ ಸಹಿಸಿಕೊಳ್ಳಲು ಸಾಧ್ಯವಿಲ್ಲ. ದೌರ್ಜನ್ಯಕ್ಕೆ ಒಳಗಾದ ಅಪ್ರಾಪ್ತ ವಯಸ್ಸಿನ ಬಾಲಕಿಯ ಈ ತೀರ್ಪುಗಳಿಂದ ನ್ಯಾಯ ಪಡೆಯಲು ಸಾಧ್ಯವಿಲ್ಲ. ಇಂತಹ ತೀರ್ಪು ನೀಡಿದ ಜಡ್ಜ್​​ನ್ನು ಅಮಾನತು ಮಾಡಬೇಕು ಎಂಬುದು ನನ್ನ ಆಗ್ರಹ ಎಂದು ತ್ರಿವೇದಿ ತಿಳಿಸಿದ್ದಾರೆ. ನಾನು ಫೆ. 9ರಂದು 12 ಕಡೆಗಳಿಗೆ ಕಾಂಡೋಮ್ ಕಳಿಸಿದ್ದೇನೆ. ಕೆಲವು ಕಡೆ ಅದು ತಲುಪಿದೆ. ನನಗೆ ಡೆಲಿವರಿ ಮೆಸೇಜ್​ ಬಂದಿದೆ ಎಂದೂ ದೇವಶ್ರೀ ತ್ರಿವೇದಿ ಹೇಳಿದ್ದಾರೆ.

ಬಡ್ತಿ ಹಿಂಪಡೆತ ಪುಷ್ಪಾ ಗನೇಡಿವಾಲಾ 2019ರ ಫೆಬ್ರವರಿಯಲ್ಲಿ ಬಾಂಬೆ ಹೈಕೋರ್ಟ್​ ನಾಗ್ಪುರ ಪೀಠಕ್ಕೆ ಹೆಚ್ಚುವರಿ ಜಡ್ಜ್​ ಆಗಿ ನೇಮಕಗೊಂಡಿದ್ದಾರೆ. ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿ ಎಸ್​.ಎ.ಬಾಬ್ಡೆ ನೇತೃತ್ವದ ಕೊಲಿಜಿಯಂ ತನ್ನ ಶಿಫಾರಸ್ಸನ್ನು ಹಿಂಪಡೆದ ಕಾರಣ ಸದ್ಯ ಅವರು ಕಾಯಂ ನ್ಯಾಯಾಧೀಶರಾಗಲು ಸಾಧ್ಯವಿಲ್ಲ. ಇನ್ನೂ ಒಂದು ವರ್ಷ ಹೆಚ್ಚುವರಿ ಜಡ್ಜ್​ ಆಗಿಯೇ ಮುಂದುವರಿಯಲಿ ಎಂದು ಸರ್ಕಾರ ಹೇಳಿದೆ.

ಇದನ್ನೂ ಓದಿ: ಬಟ್ಟೆ ಹಾಕಿದ್ದಾಗ ಸ್ಪರ್ಶಿಸುವುದು ಲೈಂಗಿಕ ದೌರ್ಜನ್ಯವಲ್ಲ ಎಂಬ ಬಾಂಬೇ ಹೈ ಕೋರ್ಟ್​ ಆದೇಶಕ್ಕೆ ಸುಪ್ರೀಂ ತಡೆ

ಲೈಂಗಿಕ ದೌರ್ಜನ್ಯದ ಬಗ್ಗೆ ವಿವಾದಾತ್ಮಕ ತೀರ್ಪು ನೀಡಿದ್ದ ಜಡ್ಜ್ ಬಡ್ತಿಗೆ ಬ್ರೇಕ್​​.. ಕೊಲಿಜಿಯಂ ನೀಡಿದ ಕಾರಣವೇನು ಗೊತ್ತಾ?

Published On - 4:15 pm, Thu, 18 February 21

ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು