ಭಾರತದಲ್ಲಿ ಬಾವಲಿಗಳ ಅಧ್ಯಯನ ನಡೆಸಿಹೋದ ಚೀನಾ​ ವಿಜ್ಞಾನಿಗಳು.. ಅಮೆರಿಕದಿಂದ ಧನ ಸಹಾಯ! ತನಿಖೆಗೆ ಆದೇಶಿಸಿದ ಕೇಂದ್ರ

ಪ್ರತಿ ಹೊಸ ರೋಗಗಳು ಬಾವಲಿಯಿಂದ ಹುಟ್ಟಿಕೊಳ್ಳುತ್ತವೆ. ಎಬೋಲಾ, ರೇಬಿಸ್​, ಸಾರ್ಸ್​ ಕೊರೊನಾ ವೈರಸ್​ ಬಾವಲಿಯಿಂದಲೇ ಹುಟ್ಟಿದೆ. ಪ್ರತಿ ಬಾರಿ ಹುಟ್ಟುವ ಹೊಸ ಸಾಂಕ್ರಾಮಿಕಗಳ ಜನಕ ಬಾವಲಿಯೇ.

ಭಾರತದಲ್ಲಿ ಬಾವಲಿಗಳ ಅಧ್ಯಯನ ನಡೆಸಿಹೋದ ಚೀನಾ​ ವಿಜ್ಞಾನಿಗಳು.. ಅಮೆರಿಕದಿಂದ ಧನ ಸಹಾಯ! ತನಿಖೆಗೆ ಆದೇಶಿಸಿದ ಕೇಂದ್ರ
ಸಾಂದರ್ಭಿಕ ಚಿತ್ರ
Follow us
ರಾಜೇಶ್ ದುಗ್ಗುಮನೆ
| Updated By: ಸಾಧು ಶ್ರೀನಾಥ್​

Updated on: Feb 18, 2021 | 3:51 PM

ನವದೆಹಲಿ: ಎಬೊಲಾದಂತಹ ಮಾರಕ ವೈರಸ್‌ಗಳಿಗೆ ಬಾವಲಿ ಮತ್ತು ಮಾನವರಲ್ಲಿರುವ ಪ್ರತಿಕಾಯ ಹೇಗೆ ವರ್ತಿಸುತ್ತದೆ ಎನ್ನುವ ಬಗ್ಗೆ ಅಮೆರಿಕ, ಚೀನಾ ಮತ್ತು ಭಾರತದ ಸಂಶೋಧಕರು ನಾಗಾಲ್ಯಾಂಡ್‌ನಲ್ಲಿ ಜಂಟಿಯಾಗಿ ಅಧ್ಯಯನ ನಡೆಸಿದ್ದರು. ಈ ಅಧ್ಯಯನ ಸರ್ಕಾರದ ಗಮನಕ್ಕೆ ತರದೇ ನಡೆದಿದೆ. ಹೀಗಾಗಿ, ಈ ಬಗ್ಗೆ ಸರ್ಕಾರ ತನಿಖೆಗೆ ಆದೇಶಿಸಿದೆ. 12 ಸಂಶೋಧಕರಲ್ಲಿ ಇಬ್ಬರು ವುಹಾನ್ ಇನ್‌ಸ್ಟಿಟ್ಯೂಟ್​​​ನ ಸಾಂಕ್ರಾಮಿಕ ರೋಗಗಳ ವಿಭಾಗಕ್ಕೆ ಸೇರಿದವರಾಗಿದ್ದಾರೆ. ಬೇರೆ ದೇಶದಿಂದ ಬಂದು ಭಾರತದಲ್ಲಿ ಅಧ್ಯಯನ ನಡೆಸುತ್ತಾರೆ ಎಂದಾದರೆ ಅವರು ವಿಶೇಷ ಅನುಮತಿ ಪಡೆದುಕೊಳ್ಳಬೇಕಾಗುತ್ತದೆ. ಆದರೆ, ಆ ರೀತಿ ಮಾಡದೇ ಈ ಅಧ್ಯಯನ ನಡೆದಿದೆ. ಶಾಕಿಂಗ್​ ವಿಚಾರ ಎಂದರೆ ಈ ಅಧ್ಯಯನಕ್ಕೆ ಅಮೆರಿಕ ಧನಸಹಾಯ ಮಾಡಿದೆ!

ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್, ನ್ಯಾಷನಲ್ ಸೆಂಟರ್ ಫಾರ್ ಬಯೋಲಾಜಿಕಲ್ ಸೈನ್ಸಸ್ (ಎನ್‌ಸಿಬಿಎಸ್), ವುಹಾನ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ, ಅಮೆರಿಕದ ಏಕರೂಪ ಸೇವೆಗಳ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಮತ್ತು ಸಿಂಗಾಪುರದ ಡ್ಯೂಕ್-ರಾಷ್ಟ್ರೀಯ ವಿಶ್ವವಿದ್ಯಾಲಯ ವಿಜ್ಞಾನಿಗಳು ಈ ಅಧ್ಯಯನದಲ್ಲಿ ಪಾಲ್ಗೊಂಡಿದ್ದರು. ಯಾವುದೆ ಅನುಮತಿಯಿಲ್ಲದೆ ಬಾವಲಿಗಳು ಮತ್ತು ಬಾವಲಿಯನ್ನು ಬೇಟೆ ಮಾಡುವವರ ರಕ್ತದ ಮಾದರಿಗಳನ್ನು ಸಂಗ್ರಹಿಸಲು ಹೇಗೆ ಅವಕಾಶ ಸಿಕ್ಕಿತು ಎಂಬುದರ ಕುರಿತು ಈಗ ತನಿಖೆ ನಡೆಸಲಾಗುತ್ತಿದೆ.

ಈ ಬಗ್ಗೆ ಅಧ್ಯಯನ ನಡೆಸುವುದಕ್ಕೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ನಾಗಾಲ್ಯಾಂಡ್​ಗೆ ಐದು ಸದಸ್ಯರ ಸಮಿತಿಯನ್ನು ಕಳುಹಿಸಿದೆ. ಈಗಾಗಲೇ ಅಧ್ಯಯನ ಪೂರ್ಣಗೊಂಡಿದ್ದು, ವರದಿಯನ್ನು ಆರೋಗ್ಯ ಇಲಾಖೆಗೆ ಸಲ್ಲಿಕೆ ಮಾಡಲಾಗಿದೆ.

ಪ್ರತಿ ಹೊಸ ರೋಗಗಳು ಬಾವಲಿಯಿಂದ ಹುಟ್ಟಿಕೊಳ್ಳುತ್ತವೆ. ಎಬೋಲಾ, ರೇಬಿಸ್​, ಸಾರ್ಸ್​ ಕೊರೊನಾ ವೈರಸ್​ ಬಾವಲಿಯಿಂದಲೇ ಹುಟ್ಟಿದೆ. ಪ್ರತಿ ಬಾರಿ ಹುಟ್ಟುವ ಹೊಸ ಸಾಂಕ್ರಾಮಿಕಗಳ ಜನಕ ಬಾವಲಿಯೇ. ಎಬೋಲಾ ಕಾಣಿಸಿಕೊಂಡರೆ ಮೈ ಸುಡುವ ಜ್ವರ ಹಾಗೂ ವಾಂತಿ ಮತ್ತಿತ್ಯಾದಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಎಬೋಲಾ ಕಾಣಿಸಿಕೊಂಡವರಲ್ಲಿ ಶೇ. 50 ಮಂದಿ ಮೃತಪಟ್ಟಿದ್ದಾರೆ. ಎಬೋಲಾ 2013-16 ಅವಧಿಯಲ್ಲಿ ಆಫ್ರಿಕಾವನ್ನು ಕಾಡಿತ್ತು.

ಇನ್ನು, ಈ ಬೆಳವಣಿಗೆ ಬಗ್ಗೆ ರಾಜ್ಯಸಭಾ ಸಂಸದ ಸುಬ್ರಮಣಿಯನ್​ ಸ್ವಾಮಿ, ವುಹಾನ್ ಸಾಂಕ್ರಾಮಿಕ ರೋಗಗಳ ಘಟಕ ಮತ್ತು ಟಾಟಾ ಇನ್​​ಸ್ಟಿಟ್ಯೂಟ್ ಫಾರ್ ಫಂಡಮೆಂಟಲ್ ರಿಸರ್ಚ್​​​ ತಂಡ ನಾಗಾಲ್ಯಾಂಡ್​​ನ ಮಿಮಿ ಗ್ರಾಮದಲ್ಲಿ ಬಾವಲಿ ವೈರಸ್ ಕುರಿತ ಜಂಟಿ ಸಂಶೋಧನೆಗೆ ಸರ್ಕಾರದ ಸರಿಯಾದ ಪೂರ್ವಾನುಮತಿ ಸಿಕ್ಕಿಲ್ಲ ಎನ್ನುವುದು ದೃಢವಾಗಿದೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಕೊರೊನಾ ವೈರಾಣು ಮೂಲ ಪತ್ತೆಗೆ ಚೀನಾದ ವುಹಾನ್​ ಪ್ರಯೋಗಾಲಯಕ್ಕೆ ಕಾಲಿಟ್ಟ WHO ತಂಡ